Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಮನೆಯ ಅಭಿವೃದ್ಧಿಗಾಗಿ ಈ ದಿಕ್ಕಿನಲ್ಲಿ ಗಿಡವನ್ನು ಇಟ್ಟು ಇದನ್ನು ಹಾಕಿ ಮನಿಪ್ಲಾಂಟ್ ಬೆಳೆಸಿ!!!!

ನಾವು ಇಂದಿನ ಮಾಹಿತಿಯಲ್ಲಿ ತಿಳಿಯೋಣ ಮನೆಯ ಏಳಿಗೆಯನ್ನು ವೃದ್ಧಿಸುವಂತಹ ಮನಿ ಪ್ಲಾಂಟ್ ಅನ್ನು ಹೇಗೆ ಬೆಳೆಸುವುದು ಎಂದು. ಹೌದು ನಮ್ಮಲ್ಲಿ ಜನ ನಂಬಿರುವ ಹಾಗೆ ಮನಿ ಪ್ಲಾಂಟ್ ಮನೆಯೊಳಗೆ ಚೆನ್ನಾಗಿ ಬೆಳೆದರೆ ಇದು ಮನೆಯಲ್ಲಿ ಏಳಿಗೆಯಾಗುತ್ತದೆ,

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳ್ತಾರೆ, ಹಾಗಾದರೆ ಈ ಮನಿ ಪ್ಲಾಂಟ್ ಅನ್ನು ಮನೆಯೊಳಗೆ ಹೇಗೆ ಚೆನ್ನಾಗಿ ಬೆಳೆಸುವುದು ಯಾವ ರೀತಿ ಬೆಳೆಸಿದರೆ, ಮನಿ ಪ್ಲಾಂಟ್ ಅನ್ನು ಮನೆಯೊಳಗೆ ಚೆನ್ನಾಗಿ ಹೇಗೆ ಬೆಳೆಸುವುದು ಎಂದು ತಿಳಿಯೋಣ ಈ ಮಾಹಿತಿಯಲ್ಲಿ.

ಇದರ ಜೊತೆಗೆ ಮನಿಪ್ಲಾಂಟ್ ಅನ್ನು ಮನೆಯೊಳಗೆ ಇಟ್ಟು ಬೆಳೆಸುವುದರಿಂದ ಇದು ಮನೆಗೆ ಅಂದವನ್ನು ಕೂಡ ನೀಡುತ್ತದೆ ಜೊತೆಗೆ ಮನಿ ಪ್ಲಾಂಟ್ ಅನ್ನು ಡೆಕೋರೇಷನ್ ಗಾಗಿಯೂ ಕೂಡ ಮನೆಯಲ್ಲಿ ಬೆಳೆಸಬಹುದು.

ಸಾಮಾನ್ಯವಾಗಿ ಮನೆಯೊಳಗೆ ಮನಿ ಪ್ಲಾಂಟ್ ಅನ್ನು ಬಾಟಲ್ ಒಳಗೆ ಅಂದರೆ ಒಂದು ಪ್ಲಾಸ್ಟಿಕ್ ಬಾಟಲ್ ಅಥವಾ ಗಾಜಿನ ಬಾಟಲ್ ನೊಳಗೆ ನೀರನ್ನು ಹಾಕಿ ಅದರೊಳಗೆ ಈ ಮನಿ ಪ್ಲಾಂಟ್ ಅನ್ನು ಬೆಳೆಸುತ್ತಾರೆ.

ಹಾಗಾದರೆ ಮನಿ ಪ್ಲಾಂಟ್ ಅನ್ನು ಹೇಗೆ ಕತ್ತರಿಸಬೇಕು ಯಾವ ಭಾಗದಲ್ಲಿ ಕತ್ತರಿಸಿ ಈ ಗಿಡವನ್ನು ಬೆಳೆಸಬೇಕು ಎಂಬುದನ್ನು ತಿಳಿಯೋಣ, ಈ ಮನಿ ಪ್ಲಾಂಟ್ ಬಳ್ಳಿಯನ್ನು ತೆಗೆದುಕೊಂಡು ಇದರ ಎಲೆಯ ಕೆಳಭಾಗದಲ್ಲಿ ಅಂದರೆ ಸ್ವಲ್ಪ ಕೆಳಭಾಗದಲ್ಲಿ ಕಟ್ ಮಾಡಿಕೊಳ್ಳಬೇಕು, ನಂತರ ಇದನ್ನು ಬಾಟಲ್ನೊಳಗೆ ಆದರೂ ಇಟ್ಟು ಬೆಳೆಸಬಹುದು ಅಥವಾ ಮಣ್ಣಿನೊಳಗೆ ಆದರೂ ಈ ಒಂದು ಚಿಗುರನ್ನು ಇಟ್ಟು ಬೆಳೆಸಬಹುದು.

ಸಾಮಾನ್ಯವಾಗಿ ಎಲ್ಲ ಗಿಡವನ್ನು ಬೆಳೆಸುವುದು ಹೇಗೆ ಎಂದು ಸಾಕಷ್ಟು ಮಾಹಿತಿಯಲ್ಲಿ ನಿಮಗೆ ತಿಳಿಸಿದ್ದೇವೆ ಒಂದು ಪಾಟ್ ಅನ್ನು ತೆಗೆದುಕೊಂಡು ಮೊದಲಿಗೆ ಪಾಟ್ನಾ ತೆಗೆದುಕೊಂಡು ಪಾಟ್ನಾ ಕೆಳಭಾಗದಲ್ಲಿ ನೀರು ಹೋಗುವುದಕ್ಕೆ ಸ್ವಲ್ಪ ತೋಟವನ್ನು ಮಾಡಬೇಕು.

ನಂತರ ಈ ಪಾಟ್ನಾ ಮೇಲ್ಭಾಗದಲ್ಲಿ ಮೊದಲಿಗೆ ಮೂರ್ನಾಲ್ಕು ಕಲ್ಲುಗಳನ್ನು ಇಡಬೇಕು ನಂತರ ಈ ಕಲ್ಲಿನ ಮೇಲೆ ತೆಂಗಿನ ಕಾಯಿಯ ಸಿಪ್ಪೆಯನ್ನು ಅಂದರೆ ಮೃದುವಾದ ಸಿಪ್ಪೆಗಳನ್ನು ಕತ್ತರಿಸಿ ಹಾಕಬೇಕು .

ಇದರ ಮೇಲೆ ಮಣ್ಣನ್ನು ಹಾಕಬೇಕು ಮತ್ತೆ ಮಣ್ಣಿನ ಮೇಲೆ ಈ ತೆಂಗಿನ ಕಾಯಿಯ ಸಿಪ್ಪೆಯನ್ನು ಸಣ್ಣದಾಗಿ ಪುಡಿ ಮಾಡಿ ಹಾಕುವುದರಿಂದ ಇದು ಮಣ್ಣಿನೊಳಗೆ ಗೊಬ್ಬರದ ರೀತಿ ಸಹಾಯ ಮಾಡಿ, ಗಿಡ ಚೆನ್ನಾಗಿ ಬೆಳೆಯಲು ಸಹಕರಿಸುತ್ತದೆ ಮತ್ತು ಒಂದು ದಿನ ನೀರನ್ನು ಹಾಕದೆ ಇದ್ದರೂ ಕೂಡ ಗಿಡ ಒಣಗುವ ಸಮಸ್ಯೆಯಲ್ಲ ಆಗುವುದಿಲ್ಲ.

ಮನಿ ಪ್ಲಾಂಟ್ ಅನ್ನು ಮನೆಯೊಳಗೆ ಇಡುವುದಾದರೆ ಇದನ್ನು ಚೆನ್ನಾಗಿ ಬಿಸಿಲು ಇರುವ ಕಡೆ ಇಟ್ಟು ಬೆಳೆಸಿ ಹಾಗೆ ಗಿಡವನ್ನು ಮಣ್ಣಿನೊಳಗೆ ನೆಟ್ಟ ಮೂರ್ನಾಲ್ಕು ದಿನ ಸ್ವಲ್ಪ ನೀರನ್ನು ಹಾಕಿದರೆ ಸಾಕು .

ಅಂದರೆ ದಿನಕ್ಕೆ ಒಂದು ಬಾರಿ ನೀರನ್ನು ಹಾಕಿದರೆ ಸಾಕು ನಂತರದ ದಿನಗಳಲ್ಲಿ ಈ ಗಿಡಗಳಿಗೆ ಎರಡು ಬಾರಿ ನೀರನ್ನು ಹಾಕಿದರೆ ಉತ್ತಮ ಆದರೆ ಹೆಚ್ಚು ನೀರನ್ನು ಹಾಕಬಾರದು ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿದರೆ ಒಳ್ಳೆಯದು.

ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯುವುದಕ್ಕಾಗಿ ನೀವು ಮತ್ತೊಂದು ಉಪಾಯವನ್ನು ಕೂಡ ಮಾಡಬಹುದು ಅದೇನೆಂದರೆ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ತೆಗೆದುಕೊಂಡು ಇದರೊಳಗೆ ಒಂದು ಉದ್ದನೆ ಲೋಳೆಸರದ ಗಿಡವನ್ನು ಕತ್ತರಿಸಿ ಹಾಕಬೇಕು,

ನಂತರ ಇದರೊಳಗೆ ಲೋಳೆರಸದ ರಸವನ್ನು ಚೆನ್ನಾಗಿ ಹಿಚುಕಿ ರಸ ನೀರಿನೊಳಗೆ ಬಿಟ್ಟುಕೊಳ್ಳುವ ಹಾಗೆ ಮಾಡಬೇಕು. ಈ ನೀರನ್ನು ಒಂದು ಸ್ಪ್ರೇ ಬಾಟಲ್ಗೆ ತೆಗೆದುಕೊಂಡು ಮನಿ ಪ್ಲಾಂಟ್ಗೆ ಆಗಾಗ ಸ್ಪ್ರೇ ಮಾಡುವುದರಿಂದ ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯುತ್ತದೆ.

Leave a Reply

Your email address will not be published. Required fields are marked *