ನಮಸ್ಕಾರ ಪ್ರಿಯ ವೀಕ್ಷಕರೇ ಮಕ್ಕಳಿದ್ದ ಮನೆ ನಂದ ಗೋಕುಲ ಅಂತ ಹೇಳ್ತಾರೆ, ಹಾಗೆ ಮಕ್ಕಳಿದ್ದ ಮನೆಯೂ ಅಷ್ಟೇ ಸ್ವಚ್ಛವಾಗಿರಬೇಕು ಶುಭ್ರವಾಗಿ ಇರಬೇಕು ಯಾಕೆ ಅಂದರೆ ಮಕ್ಕಳಿದ್ದ ಮನೆಯಲ್ಲಿ ಮಕ್ಕಳು ನೆಲದ ಮೇಲೆ ಓಡಾಡುತ್ತಿರುತ್ತಾರೆ,ಆದ ಕಾರಣ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ, ಅದರಲ್ಲಿಯೂ ಮಕ್ಕಳಿದ್ದ ಮನೆ ಅಂತೂ ತುಂಬಾನೇ ಸ್ವಚ್ಛವಾಗಿ ದ್ದಷ್ಟು ಆರೋಗ್ಯಕ್ಕೂ ಉತ್ತಮ ಮತ್ತು ಮಕ್ಕಳಿಗೂ ಕೂಡ ಒಳ್ಳೆಯದು.
ಮನೆಯಲ್ಲಿ ಚಿಕ್ಕ ಪುಟ್ಟ ಕ್ರಿಮಿ ಕೀಟಗಳ ಕಾಟ ಇರುವೆಗಳ ಕಾಟ ಸಾಮಾನ್ಯವಾದದ್ದು ಇದನ್ನು ಹೇಗೋ ಪರಿಹರಿಸಿಕೊಂಡು ಬಿಡಬಹುದು, ಆದರೆ ಈ ಹಲ್ಲಿಗಳ ವಿಚಾರದಲ್ಲಿ ಹಾಗೆ ತಿಳಿಯುವುದು ತುಂಬಾನೇ ಕಷ್ಟ, ಬೇರೆ ಚಿಕ್ಕಪುಟ್ಟ ಜೀವಿಗಳನ್ನು ಮನೆಯಿಂದ ಓಡಿಸುವುದು ಸುಲಭ ಆದರೆ ಈ ಹಲ್ಲಿಗಳನ್ನು ಮನೆಯಿಂದ ಆಚೆ ಹಾಕುವುದು ಅಂದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ.ಹಾಗಾದರೆ ಹೇಗೆ ಸುಲಭವಾಗಿ ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಈ ಹಲ್ಲಿಗಳ ಸಮಸ್ಯೆಗೆ ಫುಲ್ ಸ್ಟಾಪ್ ಹಾಕುವುದು ಅಂತ ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು ಮಾರನೇ ದಿವಸವೇ ನೀವು ಕೂಡ ಈ ಒಂದು ಪರಿಹಾರವನ್ನು ಮಾಡಿ ಇದರಿಂದ ಹಲ್ಲಿಗಳು ಕೇವಲ ಎರಡು ಮೂರು ದಿನಗಳಲ್ಲಿಯೇ ನಿಮ್ಮ ಮನೆ ಬಿಟ್ಟು ಹೋಗುವುದು ಖಚಿತ.
ಈ ಹಲ್ಲಿಗಳು ಇದ್ದಾಗ ಮನೆಯ ಕಿಟಕಿ ಬಾಗಿಲುಗಳನ್ನು ತೆಗೆಯುವುದಕ್ಕೂ ಕೂಡ ಭಯ ಆಗುತ್ತಾ ಇರುತ್ತದೆ ಯಾಕೆ ಎಂದರೆ ಈ ಹಲ್ಲಿಗಳು ಇಂತಹ ಮೂಲೆಗಳಲ್ಲಿ ಹೆಚ್ಚಾಗಿ ಇರುತ್ತವೆ, ಇದೀಗ ಮನೆಯಲ್ಲಿಯೇ ಮಾಡಬಹುದಾದ ಈ ಪರಿಹಾರಕ್ಕೆ ಬೇಕಾಗಿರುವಂತಹದ್ದು ಕೇವಲ ಮೂರೆ ಮೂರು ಪದಾರ್ಥ, ಬೆಳ್ಳುಳ್ಳಿ ಲವಂಗ ಮತ್ತು ಮೆಣಸಿನ ಕಾಳು ಅಷ್ಟೇ.ಮೊದಲಿಗೆ ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆದುಕೊಂಡು ಇದರ ಎಸಳುಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ ನಂತರ ಐದರಿಂದ ಆರು ಬೆಳ್ಳುಳ್ಳಿ ಎಸಳು ,ಏಳರಿಂದ ಎಂಟು ಲವಂಗ ಮತ್ತು ಏಳರಿಂದ ಎಂಟು ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಿ.
ಇದೀಗ ಬೆಳ್ಳುಳ್ಳಿಯನ್ನು ಮೆಣಸಿನ ಕಾಳು ಮತ್ತು ಲವಂಗ ದೊಂದಿಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ, ಇದೀಗ ಇದನ್ನು ಶೋಧಿಸಿ ಇದರ ರಸವನ್ನು ಬೇರ್ಪಡಿಸಿಕೊಳ್ಳಿ.ನಿಮ್ಮ ಮನೆಯಲ್ಲಿ ಒಂದು ಸ್ಪ್ರೇ ಬಾಟಲ್ ಇದ್ದರೆ ಆ ಸ್ಪ್ರೇ ಬಾಟಲ್ ಒಳಗೆ ಈ ಬೆಳ್ಳುಳ್ಳಿ ರಸವನ್ನು ಹಾಕಿ ಇದಕ್ಕೆ ಸ್ವಲ್ಪವೇ ಸ್ವಲ್ಪ ನೀರನ್ನು ಬೆರೆಸಬೇಕು, ಜಾಸ್ತಿ ನೀರನ್ನು ಹಾಕದಿರಿ ಈ ಬೆಳ್ಳುಳ್ಳಿಯ ವಾಸನೆ ಕಡಿಮೆಯಾಗಿ ಬಿಡುತ್ತದೆ, ಆಗ ಈ ಬೆಳ್ಳುಳ್ಳಿಯ ಘಾಟ ಕಡಿಮೆಯಾದರೆ ಹಲ್ಲಿಗಳು ಅಷ್ಟು ಬೇಗ ಮನೆ ಬಿಟ್ಟು ಹೋಗುವುದಿಲ್ಲ.
ಈ ಒಂದು ಪರಿಹಾರ ನಿಮಗೆ ಒಂದು ಉತ್ತಮವಾದ ಫಲಿತಾಂಶವನ್ನು ನೀಡುತ್ತದೆ ಹಾಗೆ ಕಡಿಮೆ ಖರ್ಚಿನಲ್ಲಿ ಸಮಯ ಉಳಿಸಿಕೊಂಡು ಹಳ್ಳಿಗಳ ಮನೆಯಿಂದ ಆಚೆ ಕಳಿಸಬಹುದು ಈ ಒಂದು ವಿಧಾನದಿಂದ ನಿಮಗೆ ಈ ಒಂದು ಮಾಹಿತಿ ಉಪಯುಕ್ತ ಆಗಿದೆ ಅಂದಲ್ಲಿ, ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ.ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮಿಸ್ ಮಾಡದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭ ದಿನ ಧನ್ಯವಾದ.