Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಮನೆಯಲ್ಲಿ ವಿಪರೀತವಾದ ಹಣಕಾಸಿನ ತೊಂದರೆ ಇದ್ದರೆ ಎಷ್ಟು ದುಡಿದರೂ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಎನ್ನುವವರು ಈ ರೀತಿಯಾಗಿ ಹತ್ತು ರೂಪಾಯಿ ನೋಟಿನಿಂದ ಹೀಗೆ ಮಾಡಿದರೆ ಸಾಕು ಲಕ್ಷ್ಮಿ ನಿಮ್ಮ ಮನೆಯಲ್ಲಿ ಸ್ಥಿರ ವಾಸ ಮಾಡಲು ಪ್ರಾರಂಭ ಮಾಡುತ್ತಾಳೆ !!!!

ನಮಸ್ಕಾರ ಸ್ನೇಹಿತರೆ. ಇಂದು ನಾವು ಹೇಳುತ್ತಿರುವ ವಿಷಯ ವಿಷಯ ಏನೆಂದರೆ, ಎಲ್ಲರಿಗೂ ಕೂಡ ಹಣಕಾಸಿನ ತೊಂದರೆ ಇರುತ್ತದೆ. ಕೆಲವರಿಗಂತೂ ಹಣಕಾಸಿನ ತೊಂದರೆ ತುಂಬಾನೇ ವಿಪರೀತವಾಗಿರುತ್ತದೆ.

ಹೀಗೆ ಮನೆಯಲ್ಲಿ ಹಣಕಾಸಿನ ತೊಂದರೆ ಇದೆ ಎಂದು ಅವರು ತುಂಬಾನೇ ಕಷ್ಟಪಡುತ್ತಿರುತ್ತಾರೆ. ಅಂದಹಾಗೆ ಅವರು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನವನ್ನು ಕೂಡ ಮಾಡುವುದಿಲ್ಲ.

ಹೌದು ಸ್ನೇಹಿತರೆ ನಾವು ದುಡಿದಂತಹ ದುಡ್ಡು ನಮ್ಮ ಕೈಯಲ್ಲಿ ಇರಬೇಕೆಂದರೆ ಇವತ್ತು ನಾವು ಹೇಳುವ ಈ ಒಂದು ಮಾಹಿತಿಯನ್ನು ನೀವು ಚಾಚೂತಪ್ಪದೆ ಅನುಸರಿಸಿದರೆ ನಿಮ್ಮ ಕೈಯಲ್ಲಿ ಇರುವಂತಹ ದುಡ್ಡನ್ನು ಉಳಿಸಬಹುದು.

ಹೌದು ಕೆಲವರಿಗೆ ದುಡಿಮೆಗಿಂತ ಖರ್ಚುಗಳು ಹೆಚ್ಚಾಗಿರುತ್ತವೆ. ಹಾಗೆಯೇ ದುಡಿದ ದುಡ್ಡು ಕೈಯಲ್ಲಿ ಉಳಿಯುವುದಿಲ್ಲ.ಕೆಲವರು ಎಷ್ಟು ದುಡಿದರೂ ಕೂಡ ನನ್ನ ಕೈಯಲ್ಲಿ ದುಡ್ಡಿಲ್ಲ ಎಂದು ಯಾವಾಗಲೂ ಹೇಳುತ್ತಿರುತ್ತಾರೆ.

ಅಂತವರು ಇಂದು ನಾವು ಹೇಳುವ ರೀತಿಯಲ್ಲಿ ಮಾಡಿದರೆ ನಿಮ್ಮ ಕೈಯಲ್ಲಿ ಮಹಾಲಕ್ಷ್ಮಿ ಯಾವಾಗಲೂ ನೆಲೆ ನಿಲ್ಲುತ್ತಾಳೆ.ಹೌದು ಸ್ನೇಹಿತರೆ ಇಂದು ನಾವು ಹೇಳುವ ಈ ಮಾಹಿತಿಯಲ್ಲಿ ನೀವು ಒಂದೇ ಒಂದು ನೋಟನ್ನು ತೆಗೆದುಕೊಂಡು ನಾವು ಹೇಳುವ ರೀತಿಯಲ್ಲಿ ಮಾಡಿದರೆ ನಿಮ್ಮಲ್ಲಿ ಇರುವಂತಹ ಹಣಕಾಸಿನ ತೊಂದರೆಯನ್ನು ಪರಿಹಾರ ಮಾಡಿಕೊಳ್ಳಬಹುದು.

ನಾವುಗಳು ಹೇಳಹೊರಟಿರುವ ಈ ತಂತ್ರವನ್ನು ನೀವು ಯಾವಾಗಲೂ ಶನಿವಾರದ ದಿನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಸಂಕಷ್ಟಗಳು ಹಾಗೂ ಆರ್ಥಿಕ ಸಮಸ್ಯೆಯನ್ನು ಕೂಡ ನಿವಾರಣೆಯಾಗುತ್ತವೆ.

ಮೊದಲಿಗೆ ನೀವು ಒಂದು ಹತ್ತು ರೂಪಾಯಿಯ ನೋಟನ್ನು ತೆಗೆದುಕೊಳ್ಳಬೇಕು. ಅದನ್ನು ತೆಗೆದುಕೊಂಡ ನಂತರ ಅದಕ್ಕೆ ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವಂತಹ 2 ಪಚ್ಚೆ ಕರ್ಪೂರವನ್ನು ತೆಗೆದುಕೊಳ್ಳಬೇಕು.

ಹೀಗೆ ತೆಗೆದುಕೊಂಡ ನಂತರ 2 ಪಚ್ಚೆ ಕರ್ಪೂರವನ್ನು ಹತ್ತು ರೂಪಾಯಿ ನೋಟಿನ ಮೇಲೆ ಇಡಬೇಕು. ಸ್ನೇಹಿತರೆ ಈ ಪಚ್ಚೆ ಕರ್ಪೂರ ವಿಷ್ಣುವಿಗೆ ಪ್ರಿಯವಾದ ಅಂತಹ ಒಂದು ವಸ್ತು. ಈ ವಸ್ತುವನ್ನು ಬಳಸಿದರೆ ನಿಮ್ಮಲ್ಲಿ ಇರುವಂತಹ ಎಂತಹ ಹಣಕಾಸಿನ ಸಮಸ್ಯೆಯನ್ನು ಆದರೂ ಕೂಡ ಪರಿಹಾರ ಮಾಡಿಕೊಳ್ಳಬಹುದು.

ಹತ್ತು ರೂಪಾಯಿ ನೋಟಿಗೆ 2 ಪಚ್ಚೆ ಕರ್ಪೂರವನ್ನು ಹಾಕಿದ ನಂತರ ಅದಕ್ಕೆ ಎರಡು ಏಲಕ್ಕಿಯನ್ನು ಹಾಕಬೇಕು. ನಂತರ ಅಂದರೆ ಏಲಕ್ಕಿಯನ್ನು ಹಾಕಿದ ನಂತರ ಹತ್ತು ರೂಪಾಯಿ ನೋಟಿನ ಮೇಲೆ ಒಂದು ರೂಪಾಯಿ ನಾಣ್ಯವನ್ನು ಇಡಬೇಕು .

ಒಂದು ರೂಪಾಯಿ ನಾಣ್ಯವು ಲಕ್ಷ್ಮಿಯ ಸಂಕೇತವಾಗಿದೆ ಹಾಗಾಗಿ ನೀವು ಹತ್ತು ರೂಪಾಯಿ ನೋಟಿನ ಮೇಲೆ ಒಂದು ರೂಪಾಯಿ ನಾಣ್ಯವನ್ನು ಇಡುವುದರಿಂದ ಲಕ್ಷ್ಮಿ ಯಾವಾಗಲೂ ನಿಮ್ಮ ಮನೆಯಲ್ಲಿ ಇರುತ್ತಾರೆ ಎಂದು ಹೇಳಬಹುದು ಸ್ನೇಹಿತರೆ.

ಹತ್ತು ರೂಪಾಯಿ ನೋಟಿನ ಮೇಲೆ ಈ ಮೂರು ವಸ್ತುಗಳನ್ನು ಇಟ್ಟ ನಂತರ ಅಂದರೆ ಪಚ್ಚಕರ್ಪೂರ ,ಎರಡು ಏಲಕ್ಕಿ, ಮತ್ತು ಒಂದು ರೂಪಾಯಿ ನಾಣ್ಯ ಇವುಗಳನ್ನು ಇಟ್ಟ ನಂತರ ಹತ್ತು ರೂಪಾಯಿ ನೋಟನ್ನು ಸುತ್ತಿ ಅದಕ್ಕೆ ಕೆಂಪು ದಾರವನ್ನು ಮಧ್ಯದಲ್ಲಿ ಕಟ್ಟಬೇಕು. ಹೀಗೆ ಕಟ್ಟಿದ ನಂತರ ಹತ್ತು ರೂಪಾಯಿ ನೋಟನ್ನು ಯಾರಿಗೂ ಕಾಣದಂತೆ ನಿಮ್ಮ ಮನೆಯಲ್ಲಿ ಇಡಬೇಕು.

ದೇವರ ಕೋಣೆ, ಅಡುಗೆ ಮನೆ ,ಹಾಗೂ ನೀವು ದುಡ್ಡು ಇಡುವ ಸ್ಥಳದಲ್ಲಿ ಕೂಡ ಇದನ್ನು ಇಡಬಹುದು. ಇದನ್ನು ನೀವು ಶನಿವಾರದ ದಿನ ಮಾಡಬೇಕಾಗುತ್ತದೆ. ಇದನ್ನು ಮನೆಯಲ್ಲಿ ಯಾರಾದರೂ ಒಬ್ಬರು ಮಾಡಿದರೆ ಸಾಕಾಗುತ್ತದೆ.

ಮನೆ ಯಜಮಾನ ಅಥವಾ ಯಜಮಾನಿ ಕೆಲಸವನ್ನು ಮಾಡಬಹುದು. ಇಲ್ಲದಿದ್ದರೆ ಮನೆಯಲ್ಲಿ ಮಕ್ಕಳಿದ್ದರೆ ಅವರಿಂದ ಈ ಕೆಲಸವನ್ನು ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ.

ಯಾಕೆಂದರೆ ಮಕ್ಕಳನ್ನು ದೇವರ ಸಮಾನ ಎಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ಮಕ್ಕಳ ಕೈಯಲ್ಲಿ ಮಾಡುವುದರಿಂದ ತುಂಬಾನೇ ಒಳ್ಳೆಯ ಫಲವನ್ನು ನೀಡುತ್ತದೆ ಎಂದು ಹೇಳಬಹುದು.

ನೋಟನ್ನು ಒಂದು ಬಾರಿ ದೇವರ ಕೋಣೆಯಲ್ಲಿ, ಅಡುಗೆ ಮನೆಯಲ್ಲಿ ಅಥವಾ ಹಣಕಾಸು ಇಡುವ ಸ್ಥಳದಲ್ಲಿ ಇಟ್ಟಾಗ ಇದನ್ನು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ಇದನ್ನು ಬದಲಾಯಿಸಬೇಕಾಗುತ್ತದೆ.

ಆದರೆ ಯಾವುದೇ ಕಾರಣಕ್ಕೂ ಆ ಮೂರು ವಸ್ತುಗಳನ್ನು ಬದಲಾಯಿಸಬಾರದು. ಹತ್ತು ರೂಪಾಯಿ ನೋಟನ್ನು ಮಾತ್ರ ಬದಲಾಯಿಸಿ ಮೂರು ವಸ್ತುಗಳನ್ನು ತೆಗೆದುಕೊಂಡು ಆ ನೋಟಿನಲ್ಲಿ ಹಾಕಿ ಅದೇ ರೀತಿಯಾಗಿ ಸುತ್ತಿ ಕಟ್ಟಿಡಬೇಕು.

ಸ್ನೇಹಿತರೆ ಈ ತಂತ್ರವನ್ನು ನೀವು ಸರಿಯಾಗಿ ಪಾಲಿಸಿದ್ದೇ ಆದಲ್ಲಿ ನಿಮಗೆ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ದೂರವಾಗಿ ನಿಮ್ಮ ಮನೆಯಲ್ಲಿ ನೆಮ್ಮದಿ ಎನ್ನುವುದು ನೆಲೆಸುತ್ತದೆ.

ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನನಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ