ನಿಮ್ಮ ಮನೆಯಲ್ಲಿ ಯಾವ ತುಳಸಿ ಇಡಬೇಕು ಕೃಷ್ಣ ತುಳಿಸಿಯೋ ಅಥವಾ ರಾಮ ತುಳಸಿಯೋ … ಯಾವ ಯಾವ್ದೋ ಬೆಳೆಸಿದರೆ ಕಷ್ಟಗಳು ತಪ್ಪಿದಲ್ಲ …ಅದ್ಕಕೆ ಅವುಗಳ ವ್ಯತ್ಯಾಸ ತಿಳ್ಕೊಳಿ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ತುಳಸಿ ಎಲೆಗಳು ಆಧ್ಯಾತ್ಮಿಕವಾಗಿಯೂ ಮತ್ತು ವೈಜ್ಞಾನಿಕವಾಗಿಯೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಇದರ ಶ್ರೇಷ್ಠತೆ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ಇರುತ್ತದೆ ತುಳಸಿ ಗಿಡವನ್ನು ಪ್ರತಿಯೊಬ್ಬರು ಮನೆಯ ಮುಂದೆ ಬೆಳೆಸಿಕೊಂಡಿರುತ್ತಾರೆ ಯಾಕೆ ಅಂತೀರಾ ಈ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಕೇವಲ ಕೆಟ್ಟ ಶಕ್ತಿ ಮಾತ್ರ ಮನೆಯೊಳಗೆ ಪ್ರವೇಶ ಮಾಡುವುದಲ್ಲದೆ .ಇದು ಗಾಳಿಯನ್ನು ಸ್ವಚ್ಛ ಮಾಡುತ್ತದೆ ಹೌದು ನೀವೇನಾದರೂ ಪೇಟೆಯಲ್ಲಿ ಇದ್ದರೆ ಅಥವಾ ನಿಮ್ಮ ಮನೆ ರಸ್ತೆಯ ಬದಿಯಲ್ಲಿ ಇದ್ದರೆ, ಗಾಳಿ ಕಲುಷಿತ ಆಗಿದೆ ಧೂಳು ಹೆಚ್ಚು ಅನ್ನುವವರು ಈ ತುಳಸಿ ಗಿಡವನ್ನು ನಿಮ್ಮ ಮನೆಯ ಅಂಗಳದಲ್ಲಿ ಬೆಳೆಸಿಕೊಳ್ಳಿ, ಇದರಿಂದ ನಿಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವೂ ಶುದ್ಧವಾಗಿರುತ್ತದೆ ಎಂದು ಹೇಳಲಾಗಿದೆ.ಅಷ್ಟೇ ಅಲ್ಲ ತುಳಸಿ ಗಿಡದಲ್ಲಿಯೂ ಕೂಡ ಅನೇಕ ವಿಧವಿದೆ ಆದರೆ ಹೆಚ್ಚಿನ ಜನರು ಬಳಸುವುದು ಎರಡು ವಿಧದ ತುಳಸಿ ಗಿಡಗಳನ್ನು ಒಂದು ಕೃಷ್ಣ ತುಳಸಿ ಮತ್ತು ಒಂದು ರಾಮ ತುಳಸಿ ಇನ್ನು ಕೆಲವರು ಇದನ್ನು ಬಿಳಿ ತುಳಸಿ ಮತ್ತು ಕರಿ ತುಳಸಿ ಅಂತ ಕೂಡ ಕರೆಯುತ್ತಾರೆ. ಹಾಗಾದರೆ ಈ ಬಿಳಿ ತುಳಸಿ ಮತ್ತು ಕಪ್ಪು ತುಳಸಿ ಅಂದರೆ ಕೃಷ್ಣ ತುಳಸಿ ರಾಮ ತುಳಸಿ ನಡುವೆ,

ಇರುವಂತಹ ವ್ಯತ್ಯಾಸಗಳೇನು ಇವುಗಳ ಪ್ರಾಮುಖ್ಯತೆ ಏನು, ಅನ್ನೋದರ ವಿಚಾರಗಳನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಹಾಗೆ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸುವುದಾದರೆ ಯಾವ ಗಿಡವನ್ನು ಬೆಳೆಸುವುದು ಉತ್ತಮ ಅನ್ನುವುದನ್ನು ಕೂಡ ತಿಳಿಯೋಣ.ಹೌದು ಮನೆಯಲ್ಲಿ ನೀವು ತುಳಸಿ ಗಿಡವನ್ನು ಕಡ್ಡಾಯವಾಗಿ ಬೆಳೆಸಲೇಬೇಕು ಅದರಲ್ಲಿಯೂ ಮಕ್ಕಳಿದ್ದ ಮನೆಯಲ್ಲಿ ಅಂತೂ ತುಳಸಿ ಎಳೆಯ ಅವಶ್ಯಕತೆ ತುಂಬಾನೆ ಇರುತ್ತದೆ ಯಾಕೆ ಅಂದರೆ ವಾತಾವರಣದ ಬದಲಾವಣೆಯಿಂದ ಅಥವಾ ಮಕ್ಕಳು ಹೆಚ್ಚಾಗಿ ಹಾಲು ಕುಡಿಯುವುದರಿಂದ ಕಫದ ಸಮಸ್ಯೆ ಉಂಟಾಗುತ್ತಿರುತ್ತದೆ,

ಆಗ ಮಕ್ಕಳಿಗೆ ತುಳಸಿ ರಸವನ್ನು ಕುಡಿಸುವುದರಿಂದ ಈ ಕಸದ ಸಮಸ್ಯೆ ಬೇಗನೆ ನಿವಾರಣೆಗೊಳ್ಳಲಿದೆ.ಈ ಕೃಷ್ಣ ತುಳಸಿ ನೋಡುವುದಕ್ಕೆ ಕಪ್ಪು ಬಣ್ಣದಲ್ಲಿದ್ದು ಇದರ ಮೇಲಿರುವ ಗೆರೆಗಳು ಹೆಚ್ಚಾಗಿರುತ್ತದೆ ಮತ್ತು ಈ ಕೃಷ್ಣ ತುಳಸಿ ಗಿಡದ ಎಲೆಯು ಉದ್ದವಾಗಿರುತ್ತದೆ ಆದರೆ ರಾಮ ತುಳಸಿಯಲ್ಲಿ ಎಲೆಗಳು ಚಿಕ್ಕದಾಗಿರುತ್ತದೆ ಮತ್ತು ಇದರ ಮೇಲೆ ಇರುವಂತಹ ಗೆರೆಗಳು ಕೂಡ ಸಣ್ಣದಾಗಿ ಇರುತ್ತದೆ. ಹಾಗೇ ಕೃಷ್ಣ ತುಳಸಿಯ ಎಲೆಯ ಘಾಟು ತುಂಬಾ ಇರುತ್ತದೆ ಆದರೆ ರಾಮ ತುಳಸಿ ಎಲೆಗಳು ಸ್ವಲ್ಪ ಸಿಹಿಯಾಗಿರುತ್ತದೆ.

ಎಲ್ಲ ಜಾತಿಯ ತುಳಸಿ ಎಲೆಗಳು ಅದ್ಭುತವಾದ ಔಷಧೀಯ ಗುಣವನ್ನು ಹೊಂದಿದೆ ಆದರೆ ಅದರಲ್ಲಿರುವ ಔಷಧೀಯ ಗುಣದ ಪ್ರಮಾಣ ಒಂದೊಂದರಲ್ಲಿಯು ಸ್ವಲ್ಪ ವ್ಯತ್ಯಾಸವನ್ನು ನಾವು ಕಾಣಬಹುದಾಗಿದೆ ಅಷ್ಟೇ ಆದರೆ ಆರೋಗ್ಯದ ವಿಚಾರದಲ್ಲಿ ನಮ್ಮ ಅನಾರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಆದಷ್ಟು ಕೃಷ್ಣ ತುಳಸಿಯನ್ನು ಬಳಸುವುದು, ಬಹಳಾನೇ ಶ್ರೇಷ್ಠವಾಗಿದ್ದು ನಿಮ್ಮ ಮನೆಯ ಮುಂದೆ ನೀವು ಈ ಕೃಷ್ಣ ತುಳಸಿ ಮತ್ತು ರಾಮ ತುಳಸಿ ಎರಡೂ ಗಿಡಗಳನ್ನು ಬೆಳೆಸುವುದು ಶ್ರೇಷ್ಠ ಹಾಗೂ ಉತ್ತಮ.ಆದರೆ ಕೆಲವರಲ್ಲಿ ಒಂದು ಸಮಸ್ಯೆ ಇರುತ್ತದೆ ಮನೆಯ ಮುಂದೆ ಸ್ವಲ್ಪವೇ ಜಾಗವಿರುವುದು ಒಂದು ಗಿಡವನ್ನು ಮಾತ್ರ ಬಳಸುವುದಕ್ಕೆ ಸಾಧ್ಯ ಆಗುತ್ತದೆ, ಯಾವ ಗಿಡವನ್ನು ಬೆಳೆಸಿದರೆ ಮನೆಗೆ ಶ್ರೇಷ್ಠ ಅಂತ ಕೇಳ್ತಾರೆ, ಅಂಥವರು ಮನೆಯ ಅಂಗಳದಲ್ಲಿ ಸ್ವಲ್ಪ ಜಾಗ ಇದೆ ಅನ್ನುವವರು ಕೃಷ್ಣ ತುಳಸಿಯನ್ನು ಬೆಳೆಸಿಕೊಳ್ಳಿ. ಈ ಕೃಷ್ಣ ತುಳಸಿ ಪೂಜೆಗೆ ಶ್ರೇಷ್ಠ ಮತ್ತು ಮನೆ ಮದ್ದಿಗೂ ಶ್ರೇಷ್ಠ.

Leave a Reply

Your email address will not be published. Required fields are marked *