Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ಯಾವಾಗ್ಲೂ ನೆಮ್ಮದಿಯ ವಾತಾವರಣ ನೆಲೆಸಬೇಕೆಂದರೆ ಈ ಗಿಡಗಳನ್ನು ಮನೆಯ ಮುಂದೆ ಬೆಳೆಸಿಕೊಳ್ಳಿ ಸಾಕು ಆಮೇಲೆ ನೋಡಿ ನಿಮ್ಮ ಮನೆಗೆ ಒಳ್ಳೆಯ ದಿನಗಳು ಎದುರಾಗುತ್ತವೆ …!!!

ನಿಮ್ಮ ಮನೆಯ ನೆಮ್ಮದಿಗಾಗಿ ಹಾಗೂ ಒಳಿತಿಗಾಗಿ ಮನೆಯ ಮುಂದೆ ಈ ಗಿಡಗಳನ್ನು ಬೆಳೆಸಿ ನಿಮ್ಮ ಮನೆಯಲ್ಲಿ ಯಾವಾಗಲೂ ಸಮೃದ್ಧಿಯಾಗಿಮತ್ತು ಆರೋಗ್ಯದಿಂದ ಇರುತ್ತದೆ.ಹಾಯ್ ಪ್ರಿಯ ಓದುಗರೇ ಪ್ರಕೃತಿ ನಮಗೆ ದೇವರು ಕೊಟ್ಟ ಒಂದು ಕೊಡುಗೆಯಾಗಿದೆ. ನಮ್ಮ ಮನೆಯ ಸುತ್ತಮುತ್ತಲೂ ಹಚ್ಚು ಹಸಿರಾಗಿದ್ದರೆ ನಾವು ಗಿಡಮರಗಳನ್ನು ಬೆಳೆಸಿಕೊಂಡರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಹಾಗೂ ಮನೆಗೆ ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ. ಪ್ರಕೃತಿಯಲ್ಲಿ ಗಿಡ ಮರ ಪಕ್ಷಿ ಪ್ರಾಣಿ ಗಾಳಿ ನೀರು ಎಲ್ಲವೂ ಇದೆ. ಗಿಡಮರಗಳು ಹೆಚ್ಚಾಗಿ ಇವೆ ಆದ್ದರಿಂದ ನಾವು ಪ್ರತಿನಿತ್ಯ ಗಿಡಮರಗಳ ಸಹಾಯದಿಂದ ಉಸಿರಾಡುತ್ತಿದ್ದೇವೆ. ಹಾಗಾದರೆ ಮನೆಯ ಸುತ್ತಮುತ್ತ ನಾವು ಯಾವ ಯಾವ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು ಎಂದು ಈ ಮಾಹಿತಿಯಲ್ಲಿ ತಿಳಿಯೋಣ. ಸ್ನೇಹಿತರೆ ಈಗಿನ ಕಾಲದಲ್ಲಿ ಬರೀ ಮನೆ ಕಟ್ಟಲು ಫ್ಯಾಕ್ಟರಿ ಕಟ್ಟಲು ತುಂಬಾ ಮರಗಳನ್ನು ಕಡಿಯುತ್ತಿದ್ದಾರೆ.

ಇದರಿಂದ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಭವಿಷ್ಯದಲ್ಲಿ ನಾವು ಚೆನ್ನಾಗಿರಬೇಕೆಂದರೆ ನಾವು ಪ್ರಕೃತಿಯನ್ನು ಚೆನ್ನಾಗಿ ಬೆಳೆಸಬೇಕು ಹಾಗೆಯೇ ಪಂಚಭೂತಗಳಾದ ಗಾಳಿ ನೀರು ಇವುಗಳನ್ನೆಲ್ಲಾ ಮಿತವಾಗಿ ಬಳಸಿಕೊಳ್ಳಬೇಕು. ಮುಂದಿನ ಪೀಳಿಗೆಗೂ ನಾವು ಪ್ರಕೃತಿಯನ್ನು ಬಿಟ್ಟು ಹೋಗಬೇಕು. ಪ್ರಕೃತಿಯನ್ನು ನಾವು ಹಾಳು ಮಾಡಿದರೆ ಅದರ ವಿಕೋಪವನ್ನು ನಾವು ಎದುರಿಸಲೇಬೇಕಾಗುತ್ತದೆ. ಅವಶ್ಯಕತೆ ಇದ್ದಾಗ ಮಾತ್ರ ನಾವು ನೀರನ್ನು ಬಳಸಬೇಕು. ಅನಾವಶ್ಯಕವಾಗಿ ನೀರನ್ನು ಹಾಗೂ ಯಾವುದೇ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬಾರದು. ಪ್ರಕೃತಿಯನ್ನು ಚೆನ್ನಾಗಿ ಬೆಳೆಸಿಕೊಂಡು ಹೋಗುವುದು ಹಾಗೂ ಅದನ್ನು ನಮ್ಮ ಪೀಳಿಗೆಗೂ ಕೊಡುಗೆಯಾಗಿ ನೀಡುವುದು ನಮ್ಮ ಕರ್ತವ್ಯವಾಗಿದೆ.

ಹಾಗಾದರೆ ನೀವು ಕೂಡ ಇಂದಿನಿಂದ ನಿಮ್ಮ ಮನೆಯ ಮುಂದೆ ಗಿಡಗಳನ್ನು ಬೆಳೆಸಿ ಹಾಗೂ ಅವಶ್ಯಕತೆಗೆ ತಕ್ಕಷ್ಟು ಮಾತ್ರ ನೀರು ಹಾಗೂ ಗಾಳಿಯನ್ನು ಬಳಸಿ. ಇಂತಹ ಪ್ರಕೃತಿ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಆಗಿದೆ ಆದರೆ ಇದನ್ನು ನಾವು ಅನಾವಶ್ಯಕವಾಗಿ ಬಳಸಿಕೊಂಡು ಹೋದರೆ ಮುಂದೆ ನಾವು ಬದುಕುವುದು ಕೂಡ ಕಷ್ಟವಾಗುತ್ತದೆ. ಯಾರ ಮನೆಯ ಮುಂದೆ ಇಂತಹ ಗಿಡ ಇರುತ್ತವೆ ಅವರು ಸಮೃದ್ಧಿಯಾಗಿ ಹಾಗೂ ಆರೋಗ್ಯದಿಂದ ಇರುತ್ತಾರೆ. ಮೊದಲನೆಯದಾಗಿ ಮನೆಯ ಮುಂದೆ ತುಳಸಿ ಗಿಡವನ್ನು ನೆಡುವುದು ಒಂದು ಒಳ್ಳೆಯ ಅಂಶವಾಗಿದೆ. ಎಲ್ಲರ ಮನೆ ಮುಂದೆಯೂ ತುಳಸಿಗಿಡ ಇದ್ದೇ ಇರುತ್ತದೆ. ಇದು ಒಂದು ಔಷಧೀಯ ಗಿಡ ಆಗಿದೆ ಹಾಗೂ ಸೋಂಕುಗಳನ್ನು ನಿವಾರಿಸುವ ಅಂಶವೊಂದು ಈ ಗಿಡದಲ್ಲಿದೆ.

ತುಳಸಿ ಗಿಡವು ಮನೆಯ ಮುಂದೆ ಇದ್ದರೆ ಮನೆಯಲ್ಲಿ ಸಕಾರಾತ್ಮಕ ಹಾಗೂ ಧನಾತ್ಮಕ ಶಕ್ತಿಗಳು ಹೆಚ್ಚುತ್ತವೆ. ಇನ್ನು ಇದು ಸಾಕ್ಷಾತ್ ಮಹಾಲಕ್ಷ್ಮಿಯ ಸಂಕೇತ ಆಗಿರುವುದರಿಂದ ಇದನ್ನು ಪ್ರತಿನಿತ್ಯ ಪೂಜಿಸಿದರೆ ತುಂಬಾ ಒಳ್ಳೆಯ ಪಲಾ ನಿಮಗೆ ಸಿಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಸಮೃದ್ಧಿ ಸದಾ ಇರುತ್ತದೆ. ತುಳಸಿ ಗಿಡದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶ ಇರುತ್ತದೆ ಹಾಗಾಗಿ ಇದನ್ನು ಬೆಳಿಗ್ಗೆ ಹಾಳು ಹೊಟ್ಟೆಗೆ ತಿಂದರೆ ಯಾವುದೇ ತರಹದ ಕೆಮ್ಮು ಹಾಗೂ ನೆಗಡಿ ಅಂತಹ ರೋಗಗಳು ಬರುವುದಿಲ್ಲ. ಇನ್ನೂ ಇದು ತೆಳ್ಳಗಾಗಲು ಕೂಡ ಸಹಾಯಕಾರಿಯಾಗಿದೆ. ತುಳಸಿ ಗಿಡವನ್ನು ಪೂಜೆ ಮಾಡುವಾಗ ಈ ಒಂದು ಮಂತ್ರವನ್ನು ಹೇಳಿದ್ದರೆ ಮಹಾಲಕ್ಷ್ಮಿ ಆಶೀರ್ವಾದ ನಿಮಗೆ ಸದಾ ಸಿಗುತ್ತದೆ ಆ ಮಂತ್ರ ಹೀಗಿದೆ ಮೃತ್ಯುಂಜಯ ತ್ರಾಸಹರ ತುಳಸಿ ರೋಗ ನಾಶಿನಿ. ಇದನ್ನು ತುಳಸಿ ಗಿಡವನ್ನು ಪೂಜೆ ಮಾಡುವಾಗ ಹೇಳಬೇಕು.

ಎರಡನೆಯದಾಗಿ ಮನೆಯ ಮುಂದೆ ನಿಂಬೆ ಹುಲ್ಲನ್ನು ಹಚ್ಚಬೇಕು ಇದು ಕೂಡ ನಮ್ಮ ಮನೆಗೆ ಸಕಾರಾತ್ಮಕ ಶಕ್ತಿ ತರುತ್ತದೆ. ಮನೆಯ ಮುಂದೆ ಯಾವುದೇ ದುರ್ವಾಸನೆ ಬರದಂತೆ ನೋಡಿಕೊಳ್ಳುತ್ತದೆ. ಅಡುಗೆ ಮನೆಯ ಹೊರಗೆ ಕೂಡ ಈ ಸಸಿಗಳನ್ನು ನೆಟ್ಟುಕೊಂಡರೆ ತುಂಬಾ ಒಳ್ಳೆಯದು. ಇದರಿಂದ ನಮಗೆ ಪ್ರಶಾಂತವಾದ ವಾತಾವರಣ ಸೃಷ್ಟಿಯಾಗುತ್ತದೆ. ಇನ್ನು ಮೂರನೆಯದಾಗಿ ಬಿದಿರು ಕಮಲ ಎಂಬ ಸಸಿಯನ್ನು ನೀವು ಮನೆಯ ಮುಂದೆ ನೇಡಬೇಕು. ಇದು ಕೂಡ ನಿಮಗೆ ಯಶಸ್ಸು ಹಾಗೂ ಸಮೃದ್ಧಿಯನ್ನು ನೀಡುತ್ತದೆ ಮನೆಯಲ್ಲಿ ಯಾವುದೇ ತರಹದ ಹಣಕಾಸಿನ ತೊಂದರೆಗಳು ಬರುವುದಿಲ್ಲ. ಇನ್ನೂ ನಿಮ್ಮ ಮನೆಗೆ ಗಾಳಿಯ ಅವಶ್ಯಕತೆ ಇದ್ದೇ ಇರುತ್ತದೆ ಅದಕ್ಕಾಗಿ ನೀವು ತೆಂಗು ಅಶೋಕ ಮರ ಹಾಗೂ ಬೇವು ಮರಗಳನ್ನು ಕೂಡ ಬೆಳೆಸಿದರೆ ತುಂಬಾ ಉತ್ತಮ. ಹಾಗಾದರೆ ಸ್ನೇಹಿತರೆ ಈ ಒಂದು ಮಾಹಿತಿ ನಿನಗೆ ತುಂಬಾ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ