ಇಂದಿನ ಮಾಹಿತಿಯಲ್ಲಿ ಹೆಣ್ಣು ಮಕ್ಕಳಿಗೆ ಒಂದು ಉಪಯುಕ್ತಕಾರಿ ಆಗಿರುವಂತಹ ವಿಚಾರವನ್ನು ತಿಳಿದುಕೊಳ್ಳೋಣ ಈ ಮಾಹಿತಿ ಏನು ಅಂದರೆ ಬಟ್ಟೆಗಳು ಒಗೆದ ನಂತರವೂ ಕೂಡಾ ಈ ಬಟ್ಟೆಗಳಿಂದ ವಾಸನೆ ಬರುತ್ತಿರುತ್ತದೆ.
ಈ ವಾಸನೆ ಎಂತಹ ಡಿಟರ್ಜೆಂಟ್ ಬಳಸಿದರೂ ಕೂಡ ಹೋಗುವುದೇ ಇಲ್ಲ ಅದರಲ್ಲಿಯೂ ಮಳೆಗಾಲದಲ್ಲಿ ಅಂತೂ ಇಂತಹ ವಾಸನೆ ಹೆಚ್ಚಾಗಿರುತ್ತದೆ, ಬಟ್ಟೆಗಳಲ್ಲಿ ಬರುವ ಈ ರೀತಿಯ ವಾಸನೆಯನ್ನು ಹೋಗಲಾಡಿಸಿ ಕೊಳ್ಳುವುದಕ್ಕಾಗಿಯೇ ಕೆಲವೊಂದು ಪರಿಹಾರಗಳನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಾವು ಮನೆಯಲ್ಲಿ ಹಾಕಿಕೊಳ್ಳುವಂತಹ ಬಟ್ಟೆಗಳನ್ನು ವಾಶ್ ಮಾಡುವಾಗ ಅದಕ್ಕೆ ಅಷ್ಟು ನೋವು ಪ್ರಾಮುಖ್ಯತೆಯನ್ನು ನೀಡುವುದಿಲ್ಲ, ಆದರೆ ಆಚೆ ಹಾಕಿಕೊಂಡು ಹೋಗುವಂತಹ ಬಟ್ಟೆಗಳಿಗೆ ವಾಸನೆ ಬರಬಾರದೆಂದು ಮತ್ತು ಎಂತಹ ಒಳ್ಳೆಯ ಡಿಟರ್ಜೆಂಟ್ ಅನ್ನು ಬಳಸಿದ್ದರೂ ಕೂಡಾ, ಈ ವಾಸನೆ ಹೋಗುತ್ತಿರುವುದಿಲ್ಲ,
ಇದಕ್ಕಾಗಿ ನಾವು ಕೆಲವೊಂದು ವಿಚಾರಗಳನ್ನು ತಿಳಿದು, ಇದನ್ನು ಮನೆಯಲ್ಲಿ ಪಾಲಿಸುತ್ತಾ ಬಂದರೆ ಸಾಕು, ಹಾಗೆಯೇ ಬಟ್ಟೆಗಳು ವಾಸನೆ ಬರುವಾಗ ಈ ಬಟ್ಟೆಗಳನ್ನು ಕಬೋರ್ಡ್ ಒಳಗೆ ಇರಿಸಿ ಬಿಡುತ್ತೇವೆ, ಇದರಿಂದ ಕಬೋರ್ಡ್ ಒಳಗಿರುವ ಎಲ್ಲ ಬಟ್ಟೆಗಳು ಕೂಡ ವಾಸನೆ ಬಂದು ಬಿಡುತ್ತದೆ.
ಇದಕ್ಕಾಗಿ ನಾವು ಮಾಡಬೇಕಾಗಿರುವುದು ಏನು ಅಂದರೆ ಕಬೋರ್ಡ್ ಒಳಗೆ ಕೆಲವೊಂದು ವಸ್ತುಗಳನ್ನು ಇರಿಸಬೇಕು ಕೆಲವರಿಗೆ ನಶೆ ಗುಳಿಗೆಯ ವಾಸನೆ ಆಗುತ್ತಿರುವುದಿಲ್ಲ ಇದರ ಬದಲು ನೀವೇನಾದರೂ ಬಳಸುತ್ತಿರುವ ತಹ ಪರ್ಫ್ಯೂಮ್ ಬಾಟಲ್ ಗಳು ಖಾಲಿ ಆಗೋಕೆ ಬಂದಿದ್ದರೆ
ಅದನ್ನು ಸಹ ನೀವು ಕೊಡಲೇ ಇರಿಸಬಹುದು ಅಥವಾ ಸೇಂಟ್ ಗಳನ್ನು ಕಬೋರ್ಡ್ ಒಳಗೆ ಇರಿಸುವುದರಿಂದ ಈ ಕಬೋರ್ಡ್ ಒಳಗಿನಿಂದ ಬರುವಂತಹ ವಾಸನೆ ಕಡಿಮೆಯಾಗುತ್ತದೆ ಮತ್ತು ಬೇರೆ ಬಟ್ಟೆಗಳು ಕೂಡ ವಾಸನೆ ಬರುವುದಿಲ್ಲ.
ನೆನಪಿನಲ್ಲಿಡಿ ಬಟ್ಟೆಗಳನ್ನು ಇಟ್ಟಿರುವ ಕಬೋರ್ಡ್ ನ್ನು ದಿನಕ್ಕೆ ಹತ್ತು ನಿಮಿಷಗಳಾದರೂ ತೆರೆದಿಡಿ ಇದರಿಂದ ಕಬೋರ್ಡ್ ಒಳಗೆ ಒಳಗೆ ಫ್ರೆಶ್ ಗಾಳಿ ಪಸರಿಸಿ ಕಬೋರ್ಡ್ ವಾಸನೆ ಬರದೇ ಇರುವ ಹಾಗೆ ಇದು ಸಹಕರಿಸುತ್ತದೆ.
ನೀವೇನಾದರೂ ಕಬೋರ್ಡ್ ಒಳಗೆ ಬಟ್ಟೆಗಳನ್ನು ಇಡುವುದಕ್ಕಾಗಿ ಹ್ಯಾಂಗರ್ಗಳನ್ನು ಬಳಸುತ್ತಿದ್ದರೆ ಅದೇನಾದರೂ ಕಟ್ಟಿಗೆಯ ಹ್ಯಾಂಗರ್ ಗಳು ಆಗಿದ್ದರೆ, ಈ ಕಟ್ಟಿಗೆಯ ಹ್ಯಾಂಗರ್ ಗಳಿಗೆ ಪರ್ಫ್ಯೂಮ್ ಅನ್ನು ಹೊಡೆದು ಬಟ್ಟೆಗಳನ್ನು ಇದಕ್ಕೆ ಹಾಕಿ ಇಡುವುದರಿಂದ ಕೂಡ ಬಟ್ಟೆಗಳು ವಾಸನೆ ಬರುವುದಿಲ್ಲ.
ಮತ್ತೊಂದು ವಿಚಾರ ಏನು ಅಂದರೆ ಕಬೋರ್ಡ್ ಒಳಗೆ ಬಟ್ಟೆಗಳನ್ನು ಇರಿಸುವಾಗ ತುಂಬಾ ಒತ್ತೊತ್ತಾಗಿ ಈ ಬಟ್ಟೆಗಳನ್ನು ಜೋಡಿಸಿ ಇಡಬಾರದು, ಸ್ವಲ್ಪ ಗಾಳಿ ಆಡುವ ಹಾಗೆ ಇಡಬೇಕಾಗುತ್ತದೆ ಇದರಿಂದ ಬಟ್ಟೆಗಳು ವಾಸನೆ ಬರುವುದಿಲ್ಲ.
ಹಾಗೆ ಬಟ್ಟೆಗಳನ್ನು ಕಬೋರ್ಡ್ ಒಳಗೆ ಜೋಡಿಸಿ ಇಡುವಾಗ ಒಂದು ಟಿಶ್ಯೂ ಪೇಪರ್ ಗೆ ಪರ್ಫ್ಯೂಮ್ ಅನ್ನು ಅಥವಾ ಸುಗಂಧಭರಿತ ದ್ರವ್ಯವನ್ನು ಟಿಷೂ ಪೇಪರ್ ಗೆ ಹಚ್ಚಿ ಬಟ್ಟೆಗಳ ಕೆಳಗೆ ಇರಿಸಬೇಕು ಅಥವಾ ಕಾಟನ್ ಅನ್ನು ತೆಗೆದುಕೊಂಡು ಅದನ್ನು ಉಂಡೆ ಮಾಡಿ ಇದಕ್ಕೂ ಕೂಡ ಬರ್ಫಿ ಹೊಡೆದು ಬಟ್ಟೆಗಳ ನಡುವೆ ಇಡುವುದರಿಂದ ಕೂಡ ಬಟ್ಟೆಗಳು ವಾಸನೆ ಬರುವುದಿಲ್ಲ.
ಈ ಚಿಕ್ಕ ಪುಟ್ಟ ಕೆಲವೊಂದು ವಿಚಾರಗಳನ್ನು ಬಟ್ಟೆಗಳ ಬಗ್ಗೆ ಪಾಲಿಸಿಕೊಂಡು ಬನ್ನಿ ಬಟ್ಟೆಗಳು ಕೂಡ ವಾಸನೆ ಬರುವುದಿಲ್ಲ ಮತ್ತು ಕಬೋರ್ಡ್ ನಲ್ಲಿ ಕೂಡ ವಾಸನೆ ಬರುವುದಿಲ್ಲ.
ಇನ್ನು ಬಟ್ಟೆಗಳನ್ನು ಒಗೆದ ನಂತರ ಈ ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸಿ ನಂತರ ಈ ಬಟ್ಟೆಗಳನ್ನು ಕಬೋರ್ಡ್ ಒಳಗೆ ಜೋಡಿಸಿ ಇಡಬೇಕಾಗುತ್ತದೆ ಇಲ್ಲದಿದ್ದರೆ ಬಟ್ಟೆಗಳಲ್ಲಿರುವ ನೀರಿನ ಅಂಶ ಬಟ್ಟೆಗಳು ವಾಸನೆ ಬರುವ ಹಾಗೆ ಮಾಡುತ್ತದೆ.
ಹಾಗೆ ಬಟ್ಟೆಗಳನ್ನು ಸ್ವಚ್ಛ ಪಡಿಸುವಾಗ ಸೋಪಿನ ನೊರೆ ಸಂಪೂರ್ಣವಾಗಿ ಹೋಗುವ ಹಾಗೆ ಒಗೆಯಬೇಕು. ಈ ಚಿಕ್ಕ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.