ನಿಮ್ಮ ಮನೆಯಲ್ಲಿ ನೀವು ಈ ಒಂದು ದೇವಿಯನ್ನು ಪೂಜೆ ಮಾಡಿದರೆ ಸಾಕು ಧನಧಾನ್ಯ ಸಿರಿಸಂಪತ್ತಿಗೆ ಎಂದಿಗೂ ಕೊರತೆ ಬರುವುದಿಲ್ಲ!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಾವು ಮನೆಯಲ್ಲಿ ಯಾವ ರೀತಿಯಾಗಿ ಪೂಜೆ ಪುನಸ್ಕಾರಗಳನ್ನ ಮಾಡುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ಜೀವನದ ಗತಿ ಸ್ಥಿತಿಗಳು ಇರುತ್ತವೆ ಎಂಬುದನ್ನು ಕೆಲವೊಬ್ಬರು ನಂಬುವುದಿಲ್ಲ. ಆದರೆ ಅದು ನಿಜ ಯಾವ ದೇವಿಯ ಸ್ವರೂಪವನ್ನು ನಾವು ಹೆಚ್ಚಾಗಿ ಪೂಜೆ ಮಾಡಿದರೆ ಆ ದೇವಿ ನಮಗೆ ಒಲಿಯುತ್ತಾಳೆ ಎಂದು ನಾವು ಕಲ್ಪನೆಯನ್ನು ಕೂಡ ಮಾಡಿರುವುದಿಲ್ಲ

ಆದರೆ ಈ ದಿನ ನಾವು ನಿಮಗೆ ಸುಲಭವಾದ ಕೆಲವೊಂದು ಅಂಶಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಈ ಮಾಹಿತಿಯನ್ನು ನೀವು ತಿಳಿದುಕೊಂಡರೆ ಅಚ್ಚರಿ ಪಡುತ್ತೀರ ಏಕೆಂದರೆ ಈಗ ನಾವು ಹೇಳಿದಂತೆ ದೇವಿಯ ಪೂಜೆ ನೀವು ಮಾಡಿದರೆ ಖಂಡಿತವಾಗಿಯೂ ನಿಮ್ಮ ಮನಸ್ಸಿನಲ್ಲಿ ನೀವು ಅಂದುಕೊಂಡದ್ದು ಮತ್ತು ಅಂದುಕೊಂಡಂತಹ ಎಲ್ಲ ಉದ್ದೇಶಗಳು ಈಡೇರುತ್ತವೆ ಆದರೆ ಆ ದೇವಿಯನ್ನು ಪೂಜೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ.

ಅಲ್ಲದೆ ಅದರ ಜೊತೆಯಲ್ಲಿ ಮೇಲಿನ ಮಾಹಿತಿಯನ್ನು ಓದಿ ಆ ದೇವಿ ಯಾವುದಿರಬಹುದು ಎಂದು ಕೂಡ ಯೋಚನೆ ಮಾಡುತ್ತಿದ್ದೀರಾ ಅಲ್ಲದೆ ಆ ದೇವಿಯೇ ಅನ್ನಪೂರ್ಣೇಶ್ವರಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಅನ್ನಪೂರ್ಣೇಶ್ವರಿ ಹೊರನಾಡಿನಲ್ಲಿ ತನ್ನ ಮುಖ್ಯ ಸ್ಥಳದಲ್ಲಿ ನೆಲೆಸಿದ್ದಾಳೆ

ಆದರೆ ಆಕೆ ಎಲ್ಲಾ ಕಡೆಯೂ ಕೂಡ ಸಂಚರಿಸುತ್ತಾಳೆ ಪ್ರತಿನಿತ್ಯ ನಾವು ತಿನ್ನುವ ಅನ್ನ ದಲ್ಲಿಯೂ ಕೂಡ ಅನ್ನಪೂರ್ಣೇಶ್ವರಿಯನ್ನು ನಾವು ಸ್ಮರಿಸುತ್ತೇವೆ ಆದರೆ ಈ ಅನ್ನಪೂಣೇಶ್ವರಿಯನ್ನ ಪೂಜೆ ಮಾಡುವ ವಿಧಾನ ಯಾವುದು ಅನ್ನಪೂರ್ಣೇಶ್ವರಿಗೆ ಅಪಚಾರ ಮಾಡಿದಂತೆ ನಾವು ಹೇಗೆ ನೋಡಿಕೊಳ್ಳುವುದು ಎಂಬ ಗೊಂದಲ ಮಾತ್ರ ನಂಮ್ಮಿದ ದೂರಾಗುವುದಿಲ್ಲ.

ಆದರೆ ಗೊಂದಲಗಳು ನಿವಾರಣೆಯಾಗಲೆಂದು ಈ ದಿನ ನಾವು ಅನ್ನಪೂರ್ಣೇಶ್ವರಿಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ ಅನ್ನಪೂಣೇಶ್ವರಿ ಎಂದರೆ ಸಾಕ್ಷಾತ್ ಅನ್ನ.ಜೀವನದಲ್ಲಿ ನಮಗೆ ಅನ್ನ ದೊರೆತರೆ ಎಲ್ಲವೂ ಕೂಡ ದೊರೆತಂತೆ ಎಂಬುದು ನಮಗೆ ತಿಳಿದಿರುವಂತೆ ಮಾಹಿತಿ

ಆದರೆ ಅದನ್ನ ನಾವು ಹೆಚ್ಚಾಗಿ ನಂಬುವುದಿಲ್ಲ ಆದರೆ ಅದು ಅಕ್ಷರಶಃ ನಿಜ ಆದ್ದರಿಂದ ನಾವು ಅನ್ನಪೂರ್ಣೇಶ್ವರಿ ಅನ್ನಕ್ಕೆ ಹೆಚ್ಚಿನ ಗೌರವವನ್ನು ನೀಡಬೇಕು. ಆ ಗೌರವವನ್ನು ನೀಡಲು ನಾವು ಪ್ರತಿನಿತ್ಯ ಪೂಜೆ ಮಾಡಿ ಊಟ ಮಾಡುವ ಅವಶ್ಯಕತೆಯಿಲ್ಲ

ಅದರ ಬದಲಾಗಿ ಅನ್ನವನ್ನು ವ್ಯರ್ಥ ಮಾಡಬಾರದು ಮತ್ತು ಅನ್ನವನ್ನ ಚೆಲ್ಲಬಾರದು ಅನ್ನವನ್ನು ನಾವು ವ್ಯರ್ಥ ಮಾಡಿದರೆ ಅದು ಅನ್ನಪೂರ್ಣೇಶ್ವರಿಗೆ ಮಾಡುವಂತಹ ಅವಮಾನವಾಗಿರುತ್ತದೆ. ಅದರ ಜೊತೆಯಲ್ಲಿ ನಾವು ತುಂಬಾ ಹೊತ್ತು ತಟ್ಟೆಯ ಮುಂದೆ ಕುಳಿತುಕೊಳ್ಳಬಾರದು ಸಾಧ್ಯವಾದಷ್ಟು ಬೇಗ ಊಟ ಮಾಡಿ ಆ ಜಾಗದಿಂದ ಹೊರಡಬೇಕು.

ಅದರ ಜೊತೆಯಲ್ಲಿ ಯಾವುದೇ ಕಾರಣಕ್ಕೂ ನಾವು ಊಟವನ್ನ ಕಾಯಿಸಬಾರದು ಅಂದರೆ ಮನೆಯವರು ಊಟವನ್ನು ತಟ್ಟಗೆ ಹಾಕಿಟ್ಟ ನಂತರ ನಾವು ಮುಖ ತೊಳೆಯಲು ಹೋಗುವುದು ಅಥವಾ ತಯಾರಾಗಲು ಹೋಗುವುದು ಈ ರೀತಿ ಯಾವ ಕೆಲಸಗಳನ್ನು ಮಾಡಬಾರದು.

ಮೊದಲೇ ತಯಾರಾಗಿ ಅದಾದ ನಂತರ ಊಟ ಬಡಿಸುವ ಸಮಯಕ್ಕೆ ಬಂದು ಕುಳಿತುಕೊಳ್ಳುವುದು ಉತ್ತಮ ಮತ್ತೊಂದು ವಿಶೇಷವಾದ ಅಂಶ ಎಂದರೆ ನಾವು ಅನ್ನವನ್ನ ಸಾಧ್ಯವಾದಷ್ಟು ದಾನ ಮಾಡಬೇಕು ಹಸಿದವರಿಗೆ ಅನ್ನ ಹಾಕಿದರೆ ಅನ್ನಪೂಣೇಶ್ವರಿ ನಮ್ಮ ಮನೆಯಲ್ಲಿ ಯಾವಾಗಲೂ ನೆಲೆಸಿರುತ್ತಾಳೆ

ಅದನ್ನ ಬಿಟ್ಟು ಸುಮ್ಮನೆ ವ್ಯರ್ಥ ಮಾಡುವ ಪ್ರಯತ್ನ ಮಾಡಬಾರದು ಸಾಧ್ಯವಾದಷ್ಟು ಈ ಮಾಹಿತಿ ನಿಮಗೆ ಇಷ್ಟವಾದರೆ ಬೇರೆಯವರಿಗೂ ಕೂಡ ತಿಳಿಸುವ ಪ್ರಯತ್ನ ಮಾಡಿ. ಎಷ್ಟೊಂದು ಜನರು ಅನ್ನ ಇಲ್ಲದೆ ಪ್ರತಿನಿತ್ಯ ಸಾಯುತ್ತಿದ್ದಾರೆ ಅವರಿಗೆ ಸಾಧ್ಯವಾದರೆ ಒಂದು ತುತ್ತು ಅನ್ನ ಕೊಡುವ ಪ್ರತಿಜ್ಞೆಯನ್ನು ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *