Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಮನೆಯಲ್ಲಿ ತುಳಸೀ ಗಿಡ ಈ ರೀತಿ ಇದ್ದರೆ … ನೀವು ಧನವಂತರಾಗುವುದು ಖಚಿತ !!!!!

ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಬೇಕು ಅಂತ ಈಗಾಗಲೇ ಸಾಕಷ್ಟು ವಿಚಾರಗಳಲ್ಲಿ ತಿಳಿಸಿಕೊಟ್ಟಿದ್ದೆ ಹಾಗೆ ತುಳಸಿ ಗಿಡವನ್ನು ಹೇಗೆ ಯಾವ ರೀತಿ ಪೂಜಿಸಬೇಕು ಜೊತೆಗೆ ತುಳಸಿ ಮಾತೆಯನ್ನು ಹೇಗೆ ಪೂಜಿಸಬೇಕು.

ಅಂತ ತಿಳಿಸುವುದರ ಜೊತೆಗೆ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಆಗುತ್ತದೆ ಇದು ವೈಜ್ಞಾನಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿಯೂ ಇಷ್ಟೆಲ್ಲ ಪ್ರಯೋಜನವನ್ನು ಒದಗಿಸಿಕೊಡುತ್ತದೆ.

ಅಂತ ತಿಳಿಸಲಾಗಿದೆ, ಆದರೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಈ ತುಳಸಿ ಗಿಡವನ್ನು ಇಡಬೇಕು ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬಾರದು ಎಂಬುದರ ಬಗ್ಗೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ.

ಹೌದು ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿ ಯಾವೆಲ್ಲಾ ವಸ್ತುಗಳು ಎಲ್ಲಿ ಇಡಬೇಕು ಅಲ್ಲೇ ಇಡಬೇಕು ಇದರಿಂದ ಮನೆಯ ವಾಸ್ತು ಸಮತೋಲನದಲ್ಲಿ ಇರುವುದರ ಜೊತೆಗೆ ಇದರಿಂದ ಅನೇಕ ಪ್ರಯೋಜನಗಳು ಕೂಡ ಆಗುತ್ತದೆ.

ಹಾಗೆ ಅನೇಕ ಮಾಹಿತಿಗಳಲ್ಲಿ ತಿಳಿಸಿರುವ ಹಾಗೆ ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಆಮ್ಲಜನಕ ಪೂರೈಕೆ ಆಗುವುದರ ಜೊತೆಗೆ ಶ್ವಾಸ ಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ ಅಂತ ಹೇಳಲಾಗಿದೆ.

ಹಾಗಾದರೆ ಮನೆಯ ಸಮತೋಲನಕ್ಕಾಗಿ ವಾಸ್ತುಶಾಸ್ತ್ರದ ಪ್ರಕಾರ ವಾಸ್ತು ದೋಷ ನಿವಾರಣೆ ಆಗುವುದಕ್ಕಾಗಿ ಯಾವೆಲ್ಲ ಜಾಗದಲ್ಲಿ ತುಳಸಿ ಗಿಡವನ್ನು ಇಡಬೇಕು ಅಂತ ಹೇಳುವುದಾದರೆ ಮನೆಯ ನೈರುತ್ಯ ಮತ್ತು ದಕ್ಷಿಣ ದಿಕ್ಕಿನಲ್ಲಿ ಈ ತುಳಸಿ ಗಿಡವನ್ನು ಇಡಬೇಕು.

ಇದರಿಂದ ಮನೆಯ ವಾಸ್ತು ಸಮತೋಲನದಲ್ಲಿ ಇರುವುದರ ಜೊತೆಗೆ ಈ ರೀತಿ ನೈಋುತ್ಯ ಅಥವಾ ದಕ್ಷಿಣ ಭಾಗದಲ್ಲಿ ತುಳಸಿ ಗಿಡವನ್ನು ಇಟ್ಟರೆ ಮನೆಯ ವಾಸ್ತು ಕೂಡ ಸಮತೋಲನದಲ್ಲಿ ಇರುತ್ತದೆ ಸಮತೋಲನದಲ್ಲಿ ಇರದ ವಾಸ್ತುವಿಗು ಕೂಡ ಪರಿಹಾರ ದೊರೆಯುತ್ತದೆ ಹೀಗೆ ಮಾಡುವುದರಿಂದ.

ಇನ್ನು ಯಾವ ದಿಕ್ಕಿನಲ್ಲಿ ಈ ಒಂದು ತುಳಸಿ ಗಿಡವನ್ನು ಬೆಳೆಸಬಾರದು ತುಳಸಿ ಗಿಡವನ್ನು ಇಡಬಾರದು ಅಂದರೆ ಮನೆಯ ಈಶಾನ್ಯ ದಿಕ್ಕಿನಲ್ಲಿ. ಹೌದು ಈ ರೀತಿ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ತುಳಸಿ ಗಿಡವನ್ನು ಇಡುವುದರಿಂದ ಸಮತೋಲನದಲ್ಲಿ ಇರುವ ವಾಸ್ತುವೂ ಕೂಡ ಅಸಮತೋಲನಕ್ಕೆ ತಿರುಗಿ ಮನೆಯ ವಾಸ್ತು ಸರಿ ಹೊಂದುವುದಿಲ್ಲ ಅಂತ ವಾಸ್ತುಶಾಸ್ತ್ರ ತಿಳಿಸುತ್ತಿದೆ.

ಈ ಒಂದು ಮಾಹಿತಿಯ ಪ್ರಕಾರ ತುಳಸಿ ಗಿಡವನ್ನು ದಕ್ಷಿಣ ದಿಕ್ಕು ಅಥವಾ ನೈಋುತ್ಯ ದಿಕ್ಕಿನಲ್ಲಿ ಇಡೀ ಯಾವುದೇ ಕಾರಣಕ್ಕೂ ಈಶಾನ್ಯ ಭಾಗದಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಲು ಹೋಗಬೇಡಿ.

ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಿ ನೆಲೆಸಿರುವ ಕಾರಣ ಇದಕ್ಕೆ ಮನೆಯಲ್ಲಿ ಒಂದು ವಿಶೇಷವಾದ ಸ್ಥಾನಮಾನವನ್ನು ನೀಡಿ ಹಾಗೇ ಪ್ರತಿದಿನ ಹೆಣ್ಣು ಮಕ್ಕಳು ಬೆಳಿಗ್ಗೆ ಹಾಗೂ ಸಂಜೆ ತುಂಬಿದ ಕೊಡದಿಂದ ನೀರನ್ನು ತೆಗೆದು ತುಳಸಿ ಗಿಡಕ್ಕೆ ಹಾಕಿ ಮತ್ತು ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾ ತುಳಸಿ ಮಾತೆಗೆ ಪೂಜೆಯನ್ನು ಸಲ್ಲಿಸಿ ಇದರಿಂದ ಒಳ್ಳೆಯದಾಗುತ್ತದೆ.

ಮನೆಯಲ್ಲಿ ಯಾವ ವಿಧದ ತುಳಸಿ ಗಿಡವನ್ನು ಬೆಳೆಸಿದರೆ ಉತ್ತಮ ಅಂದರೆ ಬಿಳಿ ತುಳಸಿ ಮತ್ತು ಶ್ರೀ ಕೃಷ್ಣ ತುಳಸಿ ಅಂದರೆ ಕಪ್ಪು ತುಳಸಿ ಗಿಡವನ್ನು ಬೆಳೆಸಬಹುದು ಈ ಎರಡು ತುಳಸಿ ಗಿಡ ಶ್ರೇಷ್ಠ ಅಂತ ಕರೆಯಲಾಗಿದ್ದು ಈ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಬೆಳೆಸಿ ಇದು ಆರೋಗ್ಯಕ್ಕೂ ಉತ್ತಮ. ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಮೆಚ್ಚುಗೆಯನ್ನು ನೀಡಿ ಧನ್ಯವಾದ.

Leave a Reply

Your email address will not be published. Required fields are marked *