ನಿಮ್ಮ ಮನೆಯಲ್ಲಿ ಗ್ಯಾಸ್ ಬಹಳ ಬೇಗ ಖಾಲಿ ಆಗ್ತಿದ್ಯಾ ಹಾಗಾದ್ರೆ ಈ ಒಂದೇ ಒಂದು ಉಪಾಯ ಮಾಡಿ ನೋಡಿ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಬಹಳಷ್ಟು ಜವಬ್ದಾರಿ ಇರುತ್ತದೆ ಹಾಗೂ ಮನೆಯಲ್ಲಿ ಹೆಚ್ಚು ಜವಾಬ್ದಾರಿ ಇರುವುದರಿಂದ ಯಾವ ಯಾವ ಕೆಲಸ ಹೀಗೆ ಸಾಗುತ್ತಾ ಇದೆ ಎಂಬುದರ ಬಗ್ಗೆ ಹೆಚ್ಚು ಗಮನ ವಹಿಸುವುದಕ್ಕೂ ಎಷ್ಟೋ ಬಾರಿ ಸಾಧ್ಯವಾಗುವುದಿಲ್ಲ ಆದರೆ ಈ ಮಾಹಿತಿ ಅಲ್ಲಿ ಹೆಣ್ಣು ಮಕ್ಕಳಿಗಾಗಿ ಸಣ್ಣ ಉಪಾಯವೊಂದನ್ನು ಹೇಳಿಕೊಡುತ್ತವೆ ಇದನ್ನು ಪಾಲಿಸುವುದರಿಂದ ಮನೆಯಲ್ಲಿ ಬೇಗ ಗ್ಯಾಸ್ ಖಾಲಿ ಆಗುವುದನ್ನು ತಪ್ಪಿಸಬಹುದು ಹಾಗಾದರೆ ತಿಳಿಯೋಣ ಬನ್ನಿ ಹೇಗೆ ಗ್ಯಾಸ್ ಅನ್ನು ಉಳಿತಾಯ ಮಾಡುವುದು ಎಂಬುದರ ಚಿಕ್ಕ ಮಾಹಿತಿಯನ್ನು.

ಹೌದು ಇವತ್ತಿನ ಕಾಲದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚು ಆಗುತ್ತಾ ಇದ್ದ ಹಾಗೆ ಎಲ್ಪಿಜಿ ಸಿಲಿಂಡರ್ ದರ ಕೂಡ ಹೆಚ್ಚುತ್ತಾ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚು ಗಮನ ವಹಿಸಬೇಕಾಗಿರುವ ವಿಚಾರ ಏನು ಎಂದರೆ ಗ್ಯಾಸ್ ಅನ್ನು ಅನವಶ್ಯಕವಾಗಿ ವ್ಯರ್ಥ ಮಾಡುವುದರ ಬದಲು ಗ್ಯಾಸ್ ಉಳಿತಾಯ ಮಾಡುವುದರಿಂದ ಸುಮಾರು ಎರಡರಿಂದ 3ತಿಂಗಳಿನ ವರೆಗೂ 1ಸಿಲಿಂಡರ್ ಅನ್ನು ಬಳಕೆ ಮಾಡಬಹುದು.

ಹೌದು ಯಾವಾಗ ಸಣ್ಣಸಣ್ಣ ವಿಚಾರಗಳಲ್ಲಿಯೂ ಗಮನವಹಿಸಿ ಕಾಳಜಿ ವಹಿಸುತ್ತವೆ ಅಂತಹ ಸಮಯದಲ್ಲಿ ನಮಗೆ ತಿಳಿಯದೆ ನಾವು ಸಾಕಷ್ಟು ವಿಚಾರದಲ್ಲಿ ಸಾಕಷ್ಟು ಉಳಿತಾಯವನ್ನು ಮಾಡಿರುತ್ತವೆ ಅದೇ ತರಹ ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ಯಾಸ್ ಅನ್ನು ಉಳಿಸಬಹುದು. ಗಡಿಬಿಡಿಯಲ್ಲಿ ಅಡುಗೆ ಮಾಡುವಾಗ ಸಾಮಾನ್ಯವಾಗಿ ಹಾಲು ಉಕ್ಕಿಸುವ ವುದಾಗಲೀ ಅಥವಾ ಅನ್ನ ಮಾಡುವಾಗ ಹೆಚ್ಚು ನೀರು ಬರ್ನರ್ ಇರುವುದಾಗಲೀ ಧೂಳು ಕೊಳೆ ಬರ್ನರ್ ಗೆ ಸೇರುವುದರಿಂದ ಗ್ಯಾಸ್ ಖರ್ಚಾಗುತ್ತದೆ.

ಆದ್ದರಿಂದ ಬರ್ನರ್ ಅನ್ನೋ ಎರಡ್3ತಿಂಗಳಿಗೊಮ್ಮೆ ಸ್ವಚ್ಚ ಮಾಡಬೇಕು ಹಾಗೂ ಗ್ಯಾಸ್ ಜೆಟ್ ನಲ್ಲಿ ಸಹ ಕ್ಲೀನ್ ಮಾಡುವುದರಿಂದ ಬರ್ನರ್ ಜೋರಾಗಿ ಉರಿಯುತ್ತದೆ ಹಾಗೂ ಗ್ಯಾಸ್ ವ್ಯರ್ಥ ಆಗುವುದಿಲ್ಲ. ಇನ್ನೂ ಜೆಟ್ ಕ್ಲೀನ್ ಮಾಡುವಾಗ ಸಪೂರ ಪಿನ್ ಅಥವಾ ಉದ್ದನೆಯ ಸೂಜಿ ಅನ್ನೋ ತೆಗೆದುಕೊಂಡು ಕ್ಲೀನ್ ಮಾಡುವುದು ಒಳ್ಳೆಯದು ಹೆಚ್ಚು ಪ್ರೆಶರ್ ಹಾಕಿದರೆ ಪೈಪ್ ಹಾಳಾಗುತ್ತದೆ. ಆದ್ದರಿಂದ ಜಟ್ ಕ್ಲೀನ್ ಮಾಡುವಾಗ ಅದೆಷ್ಟು ಜಾಗರೂಕತೆಯಿಂದ ಕ್ಲೀನ್ ಮಾಡಬೇಕು.

ಇನ್ನು ಅಡುಗೆ ಮಾಡುವ ಸಮಯದಲ್ಲಿ ಅದೆಷ್ಟು ಕುಕ್ಕರ್ ಬಳಸುವುದು ಹಾಗೂ ಅಡುಗೆ ಮಾಡುವಾಗ ತರಕಾರಿ ಬೇಯಿಸುವಾಗ ಪಾತ್ರೆ ಮೇಲೆ ತಟ್ಟೆ ಅಥವಾ ಪ್ಲೇಟ್ ಮುಚ್ಚುವ ಮೂಲಕ ಅಡುಗೆ ಮಾಡುವುದರಿಂದ ಹೆಚ್ಚು ಗ್ಯಾಸ್ ಉಳಿತಾಯ ಮಾಡಬಹುದು. ಆದ್ದರಿಂದ ಹೆಣ್ಣುಮಕ್ಕಳು ಇಂತಹ ಕೆಲವೊಂದು ಚಿಕ್ಕಪುಟ್ಟ ವಿಚಾರಗಳಲ್ಲಿ ಗಮನ ವಹಿಸಿ ಕೆಲಸ ಮಾಡುವುದರಿಂದ ಖಂಡಿತವಾಗಿಯೂ ಹೆಚ್ಚು ಗ್ಯಾಸ್ ಉಳಿತಾಯ ಮಾಡುವುದರ ಜೊತೆಗೆ ಹೆಚ್ಚು ಹಣವನ್ನು ಸಹ ಉಳಿತಾಯ ಮಾಡಬಹುದು. ಸಾಕಷ್ಟು ಅಡ್ವಟೈಸ್ ಮೆಂಟ್ ಗಳಲ್ಲಿಯೂ ಸಹ ಕೇಳಿರುತ್ತೀರಾ ನೋಡಿರುತ್ತೀರ ಕುಕ್ಕರ್ ಅಡ್ವಟೈಸ್ ಮಾಡುವಾಗ ಈ ಕುಕ್ಕರ್ ಬಳಸಿದಾಗ ಹೆಚ್ಚು ಗ್ಯಾಸ್ ಉಳಿತಾಯ ಆಗುತ್ತದೆ ಎಂದು ಹೇಳಿರುತ್ತಾರೆ ಇದು ನಿಜ ಕುಕ್ಕರ್ ಬಳಸಿ ಅಡುಗೆ ಮಾಡುವಾಗ ಹೆಚ್ಚು ಗ್ಯಾಸ್ ಉಳಿತಾಯ ಆಗುತ್ತದೆ ಮತ್ತು ಗ್ಯಾಸ್ ವ್ಯರ್ಥ ಆಗುವುದಿಲ್ಲ ಇನ್ನು ಆಗಾಗ ಬರ್ನರ್ಗಳನ್ನು ಕ್ಲೀನ್ ಮಾಡುತ್ತಾ ಇರುವುದರಿಂದ ಸಹ ಗ್ಯಾಸ್ಪರ್ ಸಾಗುವುದು ಕಡಿಮೆಯಾಗುತ್ತದೆ ಗ್ಯಾಸ್ ವೇಗ ಖಾಲಿಯಾಗುವುದಿಲ್ಲ. ಈ ಸಣ್ಣ ಬದಲಾವಣೆಯನ್ನು ಈ ಸಣ್ಣ ಹೆಣ್ಣುಮಕ್ಕಳು ಪಾಲಿಸಿದರೆ ಹೆಚ್ಚು ಸಮಯ ಗ್ಯಾಸ್ ಉಳಿತಾಯ ಮಾಡಬಹುದು ಧನ್ಯವಾದಗಳು.

Leave a Reply

Your email address will not be published. Required fields are marked *