Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ನಿಮ್ಮ ಮನೆಯಲ್ಲಿ ಕಷ್ಟಗಳಿದ್ದರೆ ಆ ಕಷ್ಟಗಳ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ..ನಂತರ ಈಶ್ವರನನ್ನು ನೆನೆಸಿಕೊಂಡು ಮಹಾಶಿವನ ಪೋಟೊ ಮುಂದೆ ಇವುಗಳನ್ನು ಇಡಿ ಸಾಕು …ಆಮೇಲೆ ನೋಡಿ ಚಮತ್ಕಾರ !!!!

ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವ ಪರಮೇಶ್ವರ ಶಿವ ಮಂಜುನಾಥಸ್ವಾಮಿಯ ಫೋಟೋ ಮುಂದೆ ವೀಳ್ಯದೆಲೆ ಯಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ, ಎಲ್ಲ ರೀತಿಯ ಸಂಕಷ್ಟಗಳು ಕಳೆಯುತ್ತವೆ.ನಿಮ್ಮ ಜೀವನದಲ್ಲಿ ಏನಾದರೂ ವಿಪರೀತ ವಾದಂತಹ ಕಷ್ಟಗಳಿದ್ದರೆ ಮನೆಯಲ್ಲಿ ಮಕ್ಕಳ ಮದುವೆ ಆಗ್ತಾ ಇಲ್ಲ, ಹಣಕಾಸಿನ ಸಮಸ್ಯೆ ಇದೆ, ಮಕ್ಕಳು ಹೇಳಿದ ಮಾತನ್ನು ಕೇಳುತ್ತಿಲ್ಲ, ಗಂಡ ಹೇಳಿದ ಮಾತನ್ನು ಕೇಳುತ್ತಿಲ್ಲ,ಯಾವಾಗಲೂ ದುಡ್ಡಿನ ಸಮಸ್ಯೆಯಿಂದ ಜೀವನ ಸಾಕಾಗಿದೆ ಎನ್ನುವರು ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಸಮಸ್ಯೆಗಳಿಂದ ದೂರವಾಗಬಹುದು. ವೀಳ್ಯದೆಲೆ ಇಂದ ಚಿಕ್ಕ ತಂತ್ರವನ್ನು ಶಿವನ ಫೋಟೋ ಮುಂದೆ ಮಾಡಬೇಕು.ಈ ತಂತ್ರವನ್ನು ಶಿವನ ಫೋಟೋ ಮುಂದೆ ಯಾವ ರೀತಿಯಾಗಿ ಮಾಡಬೇಕು ಯಾವಾಗ ಮಾಡಬೇಕು ಎನ್ನುವುದನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಶಾಸ್ತ್ರದಲ್ಲಿ ಶಿವನಿಗೆ ವಿಶೇಷವಾಗಿ ಐಶ್ವರ್ಯ ರೇಶ್ವರ ಎಂದು ಕರೆಯುತ್ತಾರೆ.

ಈ ರೀತಿಯಾಗಿ ಐಶ್ವರ್ಯವನ್ನು ಕರುಣಿಸು ವಂತಹ ಶಕ್ತಿ ಆ ಶಿವ ನಲ್ಲಿದೆ. ನಿಮ್ಮ ಮನೆಯಲ್ಲಿ ಶಿವನು ಫೋಟೋ ಮುಂದೆ ಶಿವನ ಫೋಟೋ ಇಲ್ಲ ಎಂದರೆ ಒಂದು ತಂದಿಟ್ಟುಕೊಂಡು,ಶಿವನ ಫೋಟೋಗೆ ಈ ರೀತಿಯಾದಂತಹ ಪೂಜೆಯನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಕಷ್ಟಗಳು ದೂರವಾಗುತ್ತದೆ.ಹಾಗೂ ಆ ಮನೆಯಲ್ಲಿ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಮಹಾಲಕ್ಷ್ಮಿಯ ಅನುಗ್ರಹ ನಿಮ್ಮದಾಗುತ್ತದೆ.ಆ ಶಿವನಿಗೆ ಇಷ್ಟವಾಗುವಂತಹ ಈ ಚಿಕ್ಕ ಕೆಲಸವನ್ನು ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಐಶ್ವರ್ಯ ಅನ್ನೋದು ಮನೆಮಾಡುತ್ತದೆ.ಇದನ್ನು ನೀವು ಸೋಮವಾರದ ದಿನದಂದು ಮಾಡಬೇಕಾಗುತ್ತದೆ. ಮನೆಯಲ್ಲಿ ಮೂರು ಸೋಮವಾರ ಈ ಚಿಕ್ಕ ತಂತ್ರವನ್ನು ಮಾಡಬೇಕು. ಯಾವ ರೀತಿ ಮಾಡಬೇಕೆಂದರೆ ಸೋಮವಾರದ ದಿನದಂದು ಬೆಳಿಗ್ಗೆ ಬೇಗನೇ ಎದ್ದು ಸ್ನಾನವನ್ನು ಮಾಡಿಕೊಂಡು, ಪೂಜೆ ಮಾಡುವಂತಹ ಸಂದರ್ಭದಲ್ಲಿ ಶಿವನು ಫೋಟೋಗೆ ಗಂಧವನ್ನು ಹಚ್ಚಬೇಕು.

ಗಂಧವನ್ನು ಹೇಗೆ ಹೆಚ್ಚು ಬೇಕೆಂದರೆ ನಿಮ್ಮ ಕೈಬೆರಳಿನ ಉಂಗುರದ ಬೆರಳು ಹಾಗೂ ಹೆಬ್ಬಟ್ಟಿ ನಿಂದ ಗಂಧವನ್ನು ಹಚ್ಚಬೇಕು. ಶಿವನಿಗೆ ಗಂಧವನ್ನು ಇಟ್ಟ ನಂತರ ಎರಡು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು.ಈ ವೀಳ್ಯದೆಲೆಯ ಮೇಲೆ ಈ ರೀತಿಯಾದ ವಸ್ತುಗಳನ್ನು ಇಡಬೇಕಾಗುತ್ತದೆ. ಈ ವಸ್ತುಗಳು ಯಾವುವೆಂದರೆ, ಇದನ್ನು ಪಂಚ ಸೌಗಂಧಿಕ ವಸ್ತುಗಳು ಎಂದು ಕರೆಯುತ್ತಾರೆ.ಈ ವಸ್ತುಗಳು ಎಲ್ಲಿ ಸಿಗುತ್ತದೆ ಎಂದರೆ ಪೂಜೆ ಸಾಮಾನುಗಳನ್ನು ಮಾರುವಂತಹ ಅಂಗಡಿಗಳಲ್ಲಿ ಸಿಗುತ್ತದೆ. ಶಿವನಿಗೆ ಇಷ್ಟವಾದ ಅಂತಹ ಈ ಐದು ವಸ್ತುಗಳನ್ನು ಯಾರು ಇಟ್ಟು ಶಿವನನ್ನು ಪೂಜೆ ಮಾಡುತ್ತಾರೆ ಅಂತವರಿಗೆ ಐಶ್ವರ್ಯ, ಅಂತಸ್ತು ಪ್ರಾಪ್ತಿಯಾಗುತ್ತದೆ.

ಅವು ಯಾವ ರೀತಿಯ ವಸ್ತುಗಳೆಂದರೆ ಮೊದಲನೆಯದಾಗಿ ಜಾಜಿಕಾಯಿ. ಎರಡನೆಯದಾಗಿ ಏಲಕ್ಕಿ, ಮೂರನೆಯದಾಗಿ ಜಾಪತ್ರೆ, ನಾಲ್ಕನೆಯದಾಗಿ ಲವಂಗ, ಐದನೇಯದಾಗಿ ದಾಲ್ಚಿನ್ನಿ ಚಕ್ಕೆ.5 ವಸ್ತುಗಳನ್ನು ವೀಳ್ಯದೆಲೆಯ ಮೇಲೆ ಇಟ್ಟು ತಾಂಬೂಲದ ರೀತಿ ಶಿವನಿಗೆ ಅರ್ಪಿಸುತ್ತಾ ಸಂಕಲ್ಪವನ್ನು ಮಾಡಿಕೊಂಡು ಪೂಜೆಯನ್ನು ಮಾಡುತ್ತಾ ಬಂದರೆ ಮೂರು ಸೋಮವಾರಗಳ ನಂತರ, ಮನೆಯಲ್ಲಿ ವಿಶೇಷವಾದಂತಹ ಬದಲಾವಣೆಗಳು ಉಂಟಾಗುತ್ತವೆ.ಸುಖ ಶಾಂತಿ ನೆಮ್ಮದಿಯನ್ನು ವುದು ಮನೆಯಲ್ಲಿ ನೆಲೆಸುತ್ತದೆ.ನಾವು ಚೆನ್ನಾಗಿರಬೇಕು ಹಾಗೂ ನಮ್ಮ ಕುಟುಂಬದವರು ಕೂಡ ಚೆನ್ನಾಗಿರಬೇಕು ಎಂದರೆ ಶಿವನಿಗೆ ಮೂರು ವಾರಗಳ ಕಾಲ ವೀಳ್ಯದೆಲೆಯಲ್ಲಿ ಪೂಜೆಮಾಡಿ ಸಂಕಲ್ಪವನ್ನು ಮಾಡಿಕೊಳ್ಳಬೇಕು.

ಹಾಗೆ ನೀವು ಭಕ್ತಿಯಿಂದ ಈ ರೀತಿಯ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮಗೆ ನಿಮ್ಮ ಕಷ್ಟಗಳು ದೂರವಾಗುತ್ತವೆ ನಿಮ್ಮ ಕುಟುಂಬದಲ್ಲಿ ನೆಮ್ಮದಿ ಅನ್ನುವುದು ನೆಲೆಸುತ್ತದೆ.ನೋಡಿದ್ರೆ ಸ್ನೇಹಿತರೆ ಈ ರೀತಿಯಾಗಿ ಶಿವನಿಗೆ ಪೂಜೆ ಮಾಡಿ ನಿಮ್ಮ ಕಷ್ಟವನ್ನು ಪರಿಹರಿಸಿಕೊಳ್ಳಿ .ನಮ್ಮ ಈ ಮಾಹಿತಿಯನ್ನು ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ