ಸ್ನೇಹಿತರೆ ನಾವು ಮನೆಯಲ್ಲಿ ಯಾವ ಕೆಲಸಗಳನ್ನು ಮಾಡಿದರೂ ಕೂಡ ನಮ್ಮ ಮನೆಯಲ್ಲಿ ಇರುವಂತಹ ಹಿರಿಯರು ನಮಗೆ ತುಂಬಾ ಸಲಹೆಗಳನ್ನು ನೀಡುತ್ತ ಇರುತ್ತಾರೆ. ಅದೇ ರೀತಿಯಲ್ಲಿ ಅವರು ನೀಡುವಂತಹ ಸಲಹೆಗಳು ಅವರು ಹಿಂದಿನ ಕಾಲದಿಂದಲೂ ಕೂಡ ಅನುಸರಿಸಿಕೊಂಡು ಬಂದಂತಹ ಸಲಹೆಗಳು.
ಆದರೆ ಹಿರಿಯರು ನೀಡುವಂತಹ ಎಷ್ಟು ಅನುಭವದ ಮಾತುಗಳನ್ನು ಸಲಹೆಗಳನ್ನು ನಮ್ಮ ಪೀಳಿಗೆಯ ಮಂದಿ ಈ ಸಲಹೆಗಳನ್ನು ತಿರಸ್ಕರಿಸುತ್ತಾರೆ ಮತ್ತು ನಂಬುವುದಿಲ್ಲ. ಈ ರೀತಿ ಮಾಡುವುದರಿಂದ ಅನೇಕ ರೀತಿಯಾದ ಕೆಡುಕುಗಳು ಆಗುತ್ತವೆ.
ಹೌದು ಸ್ನೇಹಿತರೇ ನಾವು ನಮ್ಮ ಮನೆಯಲ್ಲಿ ಇರುವಂತಹ ಹಿರಿಯರು ಹೇಳುವಂತಹ ಮಾತುಗಳನ್ನು ಕೇಳಬೇಕು. ಏಕೆಂದರೆ ಅವರು ಹೇಳುವ ಮಾತುಗಳು ಅವರ ಅನುಭವದ ಮಾತುಗಳಾಗಿರುತ್ತವೆ ಮತ್ತು ಅವುಗಳಿಂದ ನಿಜವಾಗಿಯೂ ನಮಗೆ ಒಳ್ಳೆಯದು ಆಗುತ್ತದೆ. ನಾವು ಇದನ್ನು ಅನುಸರಿಸದೆ ಇದ್ದರೆ ನಮಗೆ ಕೆಡುಕು ಆಗುವುದು ಖಂಡಿತ.
ನಾವು ಮನೆಯಿಂದ ಹೊರಗೆ ಹೋಗುವಾಗ ಪೂಜೆಯನ್ನು ಮಾಡಿ ಹೋಗಬೇಕು ಅದೇ ರೀತಿಯಲ್ಲಿ ನಾವು ಪೂಜೆಯನ್ನು ಮಾಡುವಾಗ ಹಚ್ಚಿಟ್ಟಂತ ದೀಪಗಳು ಗಾಳಿ ಯಿಂದ ಹೋಗದೆ ತನ್ನಿಂದ ತಾನೇ ಹಾರಿ ಹೋದರೆ ನಾವು ಅಂದು ಮನೆಯಿಂದ ಹೊರಗೆ ಹೋಗಬಾರದೆಂದು ಅರ್ಥ.
ಈ ರೀತಿಯ ಅನೇಕ ರೀತಿಯ ಸಂದೇಶವನ್ನು ದೇವರು ನಮಗೆ ಪ್ರತಿನಿತ್ಯ ನೀಡುತ್ತಾರೆ. ಈ ರೀತಿ ದೀಪವು ನಂದಿ ಹೋದರೆ ನಾವು ಇಂದು ಹೋಗುವ ಕೆಲಸ ಆಗುವುದಿಲ್ಲ ಅಥವಾ ನಮಗೆ ಏನಾದರೂ ಕೆಡುಕು ಸಂಭವಿಸುತ್ತದೆ ಎಂದು ಅರ್ಥ.
ಆದ್ದರಿಂದ ಈ ರೀತಿ ಆದರೆ ನಾವು ಮನೆಯಿಂದ ಹೊರಗೆ ಹೋಗುವುದನ್ನು ನಿಲ್ಲಿಸಬೆಕು ನಂತರ ನಾವು ಯಾವುದಾದರೊಂದು ಕೆಲಸಕ್ಕೆ ಹೋಗುವಾಗ ಹಿಂದೆಯಿಂದ ನಮ್ಮನ್ನು ಯಾರಾದರೂ ಕೂಗಿದರೆ ನಾವು ಆ ಕೆಲಸವನ್ನು ಮಾಡದೆ ಅಲ್ಲಿ ನಿಂತು ಕೊಳ್ಳಬಾರದು ಈ ರೀತಿ ನಿಂತುಕೊಂಡರೆ ನಾವು ಮಾಡಲು ಹೊರಟ ಕೆಲಸ ಆಗುವುದಿಲ್ಲ.
ಅದೇ ರೀತಿಯಲ್ಲಿ ತೆಂಗಿನ ಕಾಯಿಯನ್ನು ತೆಗೆದುಕೊಂಡು ನಾವು ದೃಷ್ಟಿಯನ್ನು ತೆಗೆಸಿಕೊಳ್ಳುವುದು ಸರ್ವೇಸಾಮಾನ್ಯ ಈ ರೀತಿ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆದುಕೊಂಡು ಆ ತೆಂಗಿನಕಾಯಿಯನ್ನು ಒಡೆದಾಗ ಆ ತೆಂಗಿನ ಕಾಯಿಯೂ ಕೆಟ್ಟು ಹೋಗಿದ್ದರೆ ನಮಗೆ ದೊಡ್ಡ ಗಂಡಾಂತರ ಎದುರಾಗುತ್ತದೆ
ಅಥವಾ ದೊಡ್ಡ ಸಮಸ್ಯೆಯೂ ನಮಗೆ ಎದುರಾಗುತ್ತದೆ ಎಂದು ಅರ್ಥ. ಆದ್ದರಿಂದ ತೆಂಗಿನ ಕಾಯಿಯನ್ನು ಒಡೆದಾಗ ಅದು ಕೆಟ್ಟು ಹೋಗಿದ್ದಲ್ಲಿ ನಾವು ದೇವರ ಮೊರೆ ಹೋಗುವುದರಿಂದ ನಮಗಾಗುವ ಅಂತಹ ಕೆಡುಕು ದೂರವಾಗುತ್ತದೆ.
ಅದೇ ರೀತಿಯಲ್ಲಿ ನಾವು ದೇವಸ್ಥಾನಗಳಲ್ಲಿ ಹಾಗೆಯೇ ಮನೆಯ ದೇವರಿಗೆ ನೈವೇದ್ಯವನ್ನು ಇಡಲು ತೆಂಗಿನಕಾಯಿ ಒಡೆದಾಗ ಅದು ಕೆಟ್ಟು ಹೋಗಿದ್ದಲ್ಲಿ ಈ ಯಾವುದೇ ರೀತಿಯ ಕೆಡುಕು ಉಂಟಾಗುವುದಿಲ್ಲ
ಮತ್ತು ಯಾವ ಪಂಚಾಂಗ ಗಳಲ್ಲಿಯೂ ಕೂಡ ದೇವರ ನೈವೇದ್ಯಕ್ಕೆ ಒಡೆದ ಕಾಯಿ ಕೆಟ್ಟರೆ ಕೆಡುಕಾಗುತ್ತದೆ ಎಂದು ಹೇಳಿಲ್ಲ. ಅದೇ ರೀತಿಯಲ್ಲಿ ನಮ್ಮ ದೃಷ್ಟಿಯನ್ನು ತೆಗೆಯಲು ಒಡೆದ ತೆಂಗಿನಕಾಯಿ ಕೆಟ್ಟರೆ ಅದು ನಮಗೆ ಆಗುವಂತಹ ಕೆಡುಕುಗಳ ಮುನ್ಸೂಚನೆಯಾಗಿರುತ್ತದೆ ಧನ್ಯವಾದಗಳು ಸ್ನೇಹಿತರೇ