ನಿಮ್ಮ ಮನೆಯಲ್ಲಿ ಏನಾದ್ರು ಈ ಒಂದು ಗಿಡ ಸಾಕು ದುಷ್ಟ ಶಕ್ತಿಗಳು, ತಂತ್ರ, ಮಂತ್ರ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಾವು ವಾಸಿಸುವ ಈ ನೆಲದಲ್ಲಿ ಪ್ರಕೃತಿಗೆ ಪರಿಸರಕ್ಕೆ ಗಿಡ ಮರಗಳಿಗೆ ಬಹಳಾನೇ ಒಂದು ಮಹತ್ತರವಾದ ಸ್ಥಾನಮಾನ ಗೌರವವನ್ನು ನೀಡಲಾಗಿದ್ದು ಎಂದಿಗೂ ಕೂಡ ಪ್ರಕೃತಿಯನ್ನು ಪೂಜಿಸುವ ಪದ್ಧತಿ ನಮ್ಮಲ್ಲಿ ಉಳಿದುಕೊಂಡು ಬಂದಿದೆ.ಹಾಗೆ ಋಷಿಮುನಿಗಳು ಈ ಗಿಡ ಮರಗಳಿಗೆ ಅಷ್ಟೊಂದು ಪ್ರಾಧಾನ್ಯತೆಯನ್ನು ಕೊಡುವ ಕಾರಣವಿದೆ ಅಂತಹದ್ದು ಪರಿಸರದಲ್ಲಿ ಏನಿದೆ ಅಂತ ಕೆಲವರು ತಮಗೆ ತಾವೇ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ಆದರೆ ನಿಜಕ್ಕೂ ನಮ್ಮ ಈ ಪ್ರಕೃತಿಯಲ್ಲಿ ಅಡಗಿರುವ ಶಕ್ತಿಯ ಬಗ್ಗೆ ತಿಳಿದರೆ ನಿಮಗೂ ಕೂಡ ಅಚ್ಚರಿಯಾಗುತ್ತದೆ,

ಈ ಒಂದು ಮಾಹಿತಿಯನ್ನು ತಿಳಿದು ಮುಂದಿನ ಪೀಳಿಗೆಯ ಮಂದಿಗೂ ಕೂಡ ನಮ್ಮ ಪ್ರಕೃತಿಯಲ್ಲಿ ಅಡಗಿರುವ ಈ ಒಂದು ಶಕ್ತಿಯ ರಹಸ್ಯದ ಬಗ್ಗೆ ತಿಳಿಸಿಕೊಡಿ.ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿ ಅನೇಕ ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಇಂದಿಗೂ ಕೂಡ ಪಡೆದುಕೊಂಡಿಲ್ಲವಾದರೆ.ಅಂತಹ ಎಷ್ಟೋ ಮಂದಿ ನಮ್ಮ ಪ್ರಕೃತಿ ಮಧ್ಯದಲ್ಲಿ ಇರುವ ಗಿಡಮೂಲಿಕೆಗಳನ್ನು ಬಳಸಿ ಅವರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದಿಕೊಂಡಿರುವ ನಿದರ್ಶನಗಳನ್ನು ನಾವು ಸಾಕಷ್ಟು ಕೇಳಬಹುದು.

ಹಾಗೆ ನಾನು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡಲು ಹೊರಟಿರುವ ಈ ಒಂದು ಗಿಡವೂ ಕೂಡ ಅಷ್ಟೇ ಮನುಷ್ಯನ ಜೀವನದ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡುವ ಈ ಗಿಡವನ್ನು ಮನೆಯ ಮುಂದೆ ಅಥವಾ ಅಕ್ಕಪಕ್ಕದಲ್ಲಿ ಬೆಳೆಸಿಕೊಂಡರೆ ನಾನಾ ತರಹದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಆ ಗಿಡ ಮತ್ತ್ಯಾವುದೋ ಅಲ್ಲ ಬಿಳಿ ಎಕ್ಕದ ಗಿಡ ಹೌದು. ಈ ಎಕ್ಕದ ಗಿಡದಲ್ಲಿ ಲಕ್ಷ್ಮಿ ವಾಸವಿರುತ್ತಾಳೆ ಎಂದು ನಂಬಲಾಗಿದ್ದು ಎಕ್ಕದ ಗಿಡದ ಬೇರನ್ನು ಗಣಪತಿಗೆ ಹೋಲಿಸಲಾಗುತ್ತದೆ ಹೌದು ಈ ಬಿಳಿ ಎಕ್ಕದ ಗಿಡದ ಒಂದು ಬೇರನ್ನು ವ್ಯಾಪಾರ ವಹಿವಾಟುಗಳು ಮಾಡುವ ಸ್ಥಳದಲ್ಲಿ ತಂದು ಇಟ್ಟರೆ ವ್ಯಾಪಾರದ ಮೇಲೆ ಆಗುವ ನರ ದೃಷ್ಟಿಗಳು ನಿವಾರಣೆಗೊಂಡು ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ.

ಹಾಗೆ ಲಾಭವೂ ಕೂಡ ಹೆಚ್ಚುತ್ತದೆ ಎಂದು ನಂಬಲಾಗಿದ್ದು ನಮ್ಮ ಪೂರ್ವಜರು ಈ ಒಂದು ಬಿಳಿ ಎಕ್ಕದ ಗಿಡದ ಬೇರನ್ನು ಮನೆಗೆ ತಂದು ಪೂಜಿಸುತ್ತಿದ್ದರು ಹಾಗೆ ಈ ಬಿಳಿ ಎಕ್ಕದ ಹೂವುಗಳನ್ನು ಗಣಪತಿಗೆ ಅರ್ಪಿಸುತ್ತಿದ್ದರು. ಜೊತೆಗೆ ಈ ಬಿಳಿ ಎಕ್ಕದ ಗಿಡದ ಮಹತ್ವ ಎಷ್ಟಿದೆ ಅಂದರೆ ಶಿವನನ್ನು ಒಲಿಸಿಕೊಳ್ಳುವುದಕ್ಕಾಗಿ ಪಾರ್ವತಿ ದೇವಿ ಈಶ್ವರನಿಗೆ ಈ ಬಿಳಿ ಎಕ್ಕದ ಹೂವನ್ನು ಸಮರ್ಪಿಸಿದ್ದರು ಎಂಬ ಮಾತಿದೆ.

ಕಾಲಿಗೆ ಮುಳ್ಳು ಹೊಕ್ಕರೆ ಅಥವಾ ಗಾಯಗಳು ಆದರೆ ಅದಕ್ಕಾಗಿ ಔಷಧಿಯನ್ನು ಹುಡುಕುತ್ತಾ ಎಲ್ಲೋ ಬೇರೆ ಕಡೆ ಹೋಗುತ್ತಿರಲಿಲ್ಲ ಮನೆಯ ಮುಂದೆ ಇರುವ ಈ ಎಕ್ಕದ ಹಾಲನ್ನು ಬಳಸಿ ಪರಿಹಾರವನ್ನು ಪಡೆದುಕೊಳ್ಳುತ್ತಿದ್ದರು. ಈ ಗಿಡದಲ್ಲಿ ಬರುವ ಹಾಲು ಬಿಳಿ ವಿಷ ಇದರ ವಿಚಾರದಲ್ಲಿ ಬಹಳ ಕಾಳಜಿಯನ್ನು ವಹಿಸಿರಬೇಕಾಗುತ್ತದೆ.ಬಿಳಿ ಎಕ್ಕದ ಗಿಡವನ್ನು ಮನೆಯ ಅಕ್ಕಪಕ್ಕದಲ್ಲಿ ಅಥವಾ ಮನೆಯ ಮುಂಭಾಗದಲ್ಲಿ ಬೆಳೆಸುವುದರಿಂದ ಮನೆಗೆ ಆಗುವ ನರ ದೃಷ್ಟಿಯೂ ಹಾಗೂ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುವುದಿಲ್ಲ .

ಮತ್ತು ಪ್ರತಿ ಶುಕ್ರವಾರದ ದಿನದಂದು ಬಿಳಿ ಎಕ್ಕದ ಗಿಡವನ್ನು ಪೂಜಿಸುವುದರಿಂದ ಲಕ್ಷ್ಮೀಯ ಸಾನಿಧ್ಯವಾಗಲಿದೆ. ಈ ರೀತಿಯಾಗಿ ಅನೇಕ ನಂಬಿಕೆಗಳಿವೆ ಜೊತೆಗೆ ನಮ್ಮ ಮಧ್ಯೆಯೇ ಇರುವ ಅನೇಕ ಗಿಡಮರಗಳಲ್ಲಿ ಅದ್ಭುತವಾದ ಔಷಧೀಯ ಅಡಗಿರುವುದನ್ನು ಕೂಡ ನಾವು ಗಮನಿಸಬಹುದು.ಬಿಳಿ ಎಕ್ಕದ ಗಿಡದ ಹೂವನ್ನು ವ್ಯಾಪಾರ ವಹಿವಾಟು ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳುವುದರಿಂದ ಒಳ್ಳೆಯದು ಅಂತ ಕೂಡ ನಂಬಲಾಗಿದೆ.

ಹಾಗೆ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಾನು ನಿಮಗೆ ಮುಂದಿನ ಮಾಹಿತಿಗಳಲ್ಲಿ ತಿಳಿಸಿಕೊಡಲು ಇಚ್ಚಿಸುತ್ತೇನೆ ಹಾಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಟ್ಟ ಈ ಬಿಳಿ ಎಕ್ಕದ ಗಿಡದ ಮಹತ್ವವದ ಮಾಹಿತಿ ನಿಮಗೆ ಇಷ್ಟವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *