ನಮಸ್ಕಾರ ಪ್ರಿಯ ವೀಕ್ಷಕರೇ ನಾನು ಇಂದಿನ ಮಾಹಿತಿಯಲ್ಲಿ ಹೆಣ್ಣುಮಕ್ಕಳಿಗೆ ಉಪಯುಕ್ತವಾಗುವಂತಹ ಒಂದು ವಿಚಾರವನ್ನು ತಿಳಿಸಿಕೊಡುತ್ತೇನೆ ಅದೇನೆಂದರೆ ಇದೀಗ ಶ್ರಾವಣ ಮಾಸ ಈ ಶ್ರಾವಣ ಮಾಸದಲ್ಲಿ ಹಬ್ಬಗಳು ಹೆಚ್ಚು,
ಅಷ್ಟೇ ಅಲ್ಲದೆ ಶ್ರಾವಣ ಮಾಸ ಬಂತು ಅಂದರೆ ಇನ್ನೇನು ಹಬ್ಬಗಳು ಶುರು ಆದಂತೆ. ಈ ಹಬ್ಬಗಳಲ್ಲಿ ಮನೆಯ ಹೆಣ್ಣುಮಕ್ಕಳು ಮನೆಯನ್ನು ಸ್ವಚ್ಛ ಪಡಿಸಿ ಅಡುಗೆಯನ್ನು ಮಾಡಿ ದೇವರ ಮನೆಯನ್ನು ಸಿಂಗರಿಸಬೇಕು ಜೊತೆಗೆ ದೇವರ ಮನೆಯ ಸಾಮಗ್ರಿಗಳನ್ನು ಕೂಡ ತೊಳೆದಿಟ್ಟುಕೊಳ್ಳಬೇಕು.
ಈ ದೇವರ ಸಾಮಗ್ರಿಗಳನ್ನು ಸ್ವಚ್ಛ ಪಡಿಸುವುದು ಅಷ್ಟೊಂದು ಸುಲಭದ ಮಾತಲ್ಲ ಯಾಕೆ ಅಂತೀರಾ ಎಣ್ಣೆ ಜಿಡ್ಡಿನ ಕಲೆ ಅಷ್ಟೊಂದು ಸುಲಭವಾಗಿ ಹೋಗುವುದಿಲ್ಲ ಅದಕ್ಕಾಗಿಯೇ ಗಂಟೆಗಟ್ಟಲೆ ಈ ದೇವರ ಸಾಮಗ್ರಿಗಳನ್ನು ಬೆಳಗಬೇಕಾಗುತ್ತದೆ, ಇನ್ನು ಕೆಲವರು ದೇವರ ಸಾಮಗ್ರಿಗಳನ್ನು ಬೆಳಗುತ್ತಾರೆ ಅದರಲ್ಲಿ ಜಿಡ್ಡು ಹೋಗಿರುವುದಿಲ್ಲ ಜೊತೆಗೆ ದೇವರು ಸಾಮಗ್ರಿಗಳ ಬಣ್ಣವು ಕೂಡ ಮಾಸಿ ಹೋಗಿಬಿಟ್ಟಿರುತ್ತದೆ.
ಇನ್ನೇನು ಗೌರಿ ಗಣೇಶ ಹಬ್ಬ ಬಂತು ಅಲ್ವಾ ಮನೆಯಲ್ಲಿ ಹೆಣ್ಣು ಮಕ್ಕಳು ಹಬ್ಬಕ್ಕೆಂದು ತಯಾರಿ ಮಾಡಿಕೊಳ್ಳಬೇಕಾಗುತ್ತದೆ, ಆಗ ದೇವರ ಸಾಮಗ್ರಿಗಳನ್ನು ಕೂಡ, ಬೀರುವಿನಲ್ಲಿ ಇಟ್ಟ ಕೆಲವೊಂದು ಚಿಕ್ಕ ಪುಟ್ಟ ಹಿತ್ತಾಳೆ ಸಾಮಗ್ರಿಗಳನ್ನು ಕೂಡಾ ಸ್ವಚ್ಛ ಪಡಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ಈ ಮನೆ ಮದ್ದನ್ನು ಪಾಲಿಸಿ ನೋಡಿ ಕೇವಲ ಹತ್ತು ನಿಮಿಷಗಳಲ್ಲಿಯೇ ದೇವರ ಸಾಮಗ್ರಿಗಳು ಪಳಪಳನೆ ಹೊಳೆಯುವಂತೆ ಆಗುತ್ತದೆ.
ಈ ಮನೆ ಮದ್ದನ್ನು ಮಾಡುವ ವಿಧಾನವೂ ಹೇಗಿದೆ ಮೊದಲಿಗೆ ಒಂದು ಕುಕ್ಕರನ್ನು ತೆಗೆದುಕೊಳ್ಳಿ ಮನೆಯಲ್ಲಿ ಹೆಚ್ಚು ದೇವರ ಸಾಮಗ್ರಿಗಳಿದ್ದರೆ ಸ್ವಲ್ಪ ದೊಡ್ಡ ಗಾತ್ರದ ಕುಕ್ಕರನ್ನು ತೆಗೆದುಕೊಳ್ಳಿ,
ಅದಕ್ಕೆ ಹುಣಸೆ ಹಣ್ಣನ್ನು ಹಾಕಬೇಕು ಸ್ವಲ್ಪ ಪ್ರಮಾಣದಲ್ಲಿ ಹುಣಸೆ ಹಣ್ಣನ್ನು ತೆಗೆದುಕೊಂಡು ಕುಕ್ಕರ್ನ ಒಳಗೆ ಒಂದು ಭಾಗದಲ್ಲಿಯೇ ಈ ಹುಣಸೆ ಹಣ್ಣನ್ನ ಇಡಬಾರದು, ನಾಲ್ಕು ಭಾಗವಾಗಿ ಈ ಹುಣಸೆ ಹಣ್ಣನ್ನು ಇಡುವುದರಿಂದ ಇದರಲ್ಲಿ ನೀರನ್ನು ಹಾಕಿದಾಗ ಇದು ಕುದಿಯಲು ಆರಂಭಿಸುತ್ತದೆ, ಆಗ ಪಾತ್ರೆ ಸಾಮಗ್ರಿಗಳು ಚೆನ್ನಾಗಿ ಸ್ವಚ್ಛವಾಗುತ್ತದೆ.
ಇಷ್ಟೇ ಅಲ್ಲ ಈ ಕುಕ್ಕರ್ಗೆ ಹುಣಸೆ ಹಣ್ಣನ್ನು ಇಟ್ಟ ನಂತರ ನೀರನ್ನು ಹಾಕಬೇಕು ನೀರನ್ನು ಹಾಕಿದ ಮೇಲೆ ದೇವರ ಸಾಮಗ್ರಿಗಳನ್ನು ಇದರೊಳಗೆ ಇರಿಸಿ, ನಂತರ ಎರಡು ಟೊಮೆಟೊವನ್ನು ತೆಗೆದುಕೊಂಡು ಇದನ್ನು ನಾಲ್ಕು ಭಾಗವಾಗಿ ಕತ್ತರಿಸಿಕೊಂಡು, ಇದನ್ನು ಕೂಡ ಒಂದೇ ಕಡೆ ಇಡದೆ ನಾಲ್ಕು ಭಾಗವಾಗಿ ಈ ಟೊಮೆಟೊ ಹಣ್ಣನ್ನು ಇರಿಸಬೇಕು.
ಇದೀಗ ಕುಕ್ಕರ್ ಅನ್ನು ಮುಚ್ಚಿ ಒಂದು ವಿಷಲ್ ಹಾಕಿಸಿ, ನಂತರ ಈ ಪೂಜಾ ಸಾಮಗ್ರಿಗಳನ್ನು ಸಾಬೂನು ಪುಡಿಯನ್ನು ಬಳಸಿ ಮತ್ತೊಮ್ಮೆ ಸ್ವಚ್ಛ ಪಡಿಸಿ, ಈಗ ನೋಡಿ ಪೂಜಾ ಸಾಮಗ್ರಿಗಳು ಮೊದಲನೆಯ ಬಣ್ಣವನ್ನೇ ಪಡೆದುಕೊಂಡಿದ್ದು ಪಳಪಳನೆ ಹೊಳೆಯುತ್ತಿರುತ್ತದೆ, ಕಡಿಮೆ ಸಮಯದಲ್ಲಿ ಪೂಜಾ ಸಾಮಗ್ರಿಗಳನ್ನು ಸ್ವಚ್ಛ ಪಡಿಸಿದ ಹಾಗೆಯೂ ಕೂಡ ಆಯ್ತು ಅಲ್ವಾ ಫ್ರೆಂಡ್ಸ್.
ಈ ದಿನ ತಿಳಿಸಿದಂತಹ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಪ್ರಯೋಜನ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ಆಚಾರ ವಿಚಾರ ಪದ್ಧತಿಯನ್ನು ಕುರಿತು ಅನೇಕ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮಾಹಿತಿ ಅನ್ನು ಓದಿದ್ದಕ್ಕೆ ಧನ್ಯವಾದ ಶುಭ ದಿನ ಧನ್ಯವಾದಗಳು