ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಇಂದಿನ ಈ ಮಾಹಿತಿಯಲ್ಲಿ ಗುಲಾಬಿ ಗಿಡದ ತುಂಬಾ ಗುಲಾಬಿ ಹೂ ಬಿಡಬೇಕೆಂದರೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಮಾಹಿತಿ ಇಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರ
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಬಣ್ಣ ಬಣ್ಣದ ಗುಲಾಬಿ ಹೂಗಳ ಗಿಡಗಳನ್ನು ಬೆಳೆಸಿರುತ್ತಾರೆ ಆದರೆ ಕೆಲವರ ಮನೆಯಲ್ಲಿ ಪಾಟ್ನಲ್ಲಿ ಬೆಳೆಸಿದರೆ ಇನ್ನು ಕೆಲವರು ಮನೆಯಲ್ಲಿ ನೆಲದಲ್ಲಿಯೇ ಬೆಳೆಸಿರುತ್ತಾರೆ.
ಪಾಟಿನಲ್ಲಿ ಬಳಸಿದಂತಹ ಗುಲಾಬಿ ಗಿಡಗಳು ಕೆಲವೊಮ್ಮೆ ಸರಿಯಾಗಿ ಹೂವುಗಳನ್ನು ಬಿಡುವುದಿಲ್ಲ ಹಾಗೆಯೇ ನೆಲದಲ್ಲಿ ಬೆಳೆಸಿದ ಗಿಡಗಳೂ ಕೂಡ ಕೆಲವೊಮ್ಮೆ ಸರಿಯಾಗಿ ಹೂವುಗಳನ್ನು ಬಿಡುವುದಿಲ್ಲ.
ಯಾಕೆ ಈ ಗಿಡಗಳು ಸರಿಯಾಗಿ ಹೂಗಳನ್ನು ಬಿಡುವುದಿಲ್ಲ ವೆಂದರೆ ಅವುಗಳಿಗೆ ಅಗತ್ಯವಾದಂತಹ ಪೋಷಕಾಂಶಗಳು ಸಿಕ್ಕಿರುವುದಿಲ್ಲ ಆದಕಾರಣ ಗುಲಾಬಿ ಗಿಡಗಳು ದೊಡ್ಡದಾಗಿದ್ದರೂ ಕೂಡ ಹೂಗಳು ಬಿಟ್ಟಿರುವುದಿಲ್ಲ.
ಹಾಗಾಗಿ ನಾವು ಇಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವು ಇದಕ್ಕೆ ಅದು ಲೋಟದಷ್ಟು ಈ ಟಾನಿಕ್ ಹಾಕಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಗುಲಾಬಿ ಗಿಡದಲ್ಲಿ ಗಿಡದ ತುಂಬಾ ಹೂವುಗಳು ಬಿಡಲು ಪ್ರಾರಂಭವಾಗುತ್ತದೆ. ಹಾಗಾದರೆ ಟಾನಿಕ್ ಯಾವುದು ಎಂಬುದನ್ನು ತಿಳಿಸಿಕೊಡುತ್ತೇನೆ.
ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಬಾಳೆಹಣ್ಣನ್ನು ಉಪಯೋಗಿಸುತ್ತಾರೆ ಹಾಗೆಯೇ ಬಾಳೆಹಣ್ಣು ತಿಂದ ಕೂಡಲೇ ಅದರ ಸಿಪ್ಪೆಯನ್ನು ಬಿಸಾಡುತ್ತಾರೆ.ಬಾಳೆಹಣ್ಣಿನ ಸಿಪ್ಪೆಯಿಂದ ಹಲವಾರು ಉಪಯೋಗಗಳಿವೆ ಹಾಗೆಯೇ ನಾವು ಎಂದು ಹೇಳುವಂತಹ ಈ ಒಂದು ಟಾನಿಕ್ ನಲ್ಲಿ ಬಾಳೆಹಣ್ಣು ಅಂದರೆ ಬಾಳೆಹಣ್ಣಿನ ಸಿಪ್ಪೆಯನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ
ಅದು ಹೇಗೆಂದರೆ ಐದರಿಂದ ಆರು ಬಾಳೆ ಹಣ್ಣಿನ ಸಿಪ್ಪೆಗಳನ್ನು ತೆಗೆದುಕೊಂಡು ಅವು ಗಳನ್ನು ಚಿಕ್ಕ ಚಿಕ್ಕ ಪೀಸ್ ಗಳಿಗಾಗಿ ಕತ್ತರಿಸಿಕೊಳ್ಳಬೇಕು. ನಂತರ 2 ಚಮಚಾ ಅಥವಾ 3 ಚಮಚದಷ್ಟು ಉಪ್ಪನ್ನು ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಬೇಕಾಗುವಷ್ಟು ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಬೇಕು.
ನಂತರ ಇದನ್ನು ಮಾಡುವ ವಿಧಾನ ಹೇಗೆಂದರೆ ಮೊದಲಿಗೆ ಒಂದು ಸಿಲಿಂಡರ್ ಶೇಪ್ನಲ್ಲಿ ಇರುವ ಪ್ಲಾಸ್ಟಿಕ್ ಬೌಲ್ ಅನ್ನು ತೆಗೆದುಕೊಳ್ಳಬೇಕು ಪ್ಲಾಸ್ಟಿಕ್ ಬೌಲ್ ಹೇಗಿರಬೇಕೆಂದರೆ ಅದಕ್ಕೆ ಮುಚ್ಚಲು ಮುಚ್ಚಳ ಇರಬೇಕು.ಆ ರೀತಿಯ ಒಂದು ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ಕತ್ತರಿಸಿಕೊಂಡ ಅಂತಹ ಬಾಳೆ ಹಣ್ಣಿನ ಸಿಪ್ಪೆಗಳನ್ನು ಹಾಕಬೇಕು
ನಂತರ ಅದಕ್ಕೆ ಉಪ್ಪನ್ನು ಸೇರಿಸಬೇಕು ನಂತರ ಉಗುರು ಬೆಚ್ಚಗಿರುವ ನೀರನ್ನು ಸೇರಿಸಿಕೊಂಡು ಮೂರು ದಿನಗಳ ಕಾಲ ಅದನ್ನು ಬಿಸಿಲಿನಲ್ಲಿ ಇಡಬೇಕು.ನಂತರ ಮೂರು ದಿನಗಳಾದ ಮೇಲೆ ಅದನ್ನು ತೆಗೆದು ಒಂದು ಬೌಲ್ ನಲ್ಲಿ ಪ್ರತ್ಯೇಕವಾಗಿ ಶೋಧಿಸಿ ಕೊಳ್ಳಬೇಕು.
ಹೀಗೆ ಮಾಡಿದ ನಂತರ ಈ ಒಂದು ಟಾನಿಕ್ ಅನ್ನು ಅಂದರೆ ಮಿಶ್ರಣವನ್ನು ನೀವು ಅರ್ಧ ಲೋಟದಷ್ಟು ನಿಮ್ಮ ಮನೆಯಲ್ಲಿ ಇರುವಂತಹ ಗುಲಾಬಿ ಗಿಡಕ್ಕೆ ವಾರಕ್ಕೆ ಒಂದು ಬಾರಿ ಹಾಕುತ್ತಾ ಬರಬೇಕು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಗುಲಾಬಿ ಗಿಡ ಅದರ ತುಂಬಾ ಹೂವು ಬಿಡಲು ಪ್ರಾರಂಭವಾಗುತ್ತದೆ.
ಅದು ಯಾವುದೇ ರೀತಿಯಾದಂತಹ ಗುಲಾಬಿ ಗಿಡವಾದರೂ ಸರಿ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಗುಲಾಬಿ ಗಿಡ ಹೂವು ಗಿಡದ ತುಂಬಾ ಹೂವುಗಳನ್ನು ಬಿಡಲು ಪ್ರಾರಂಭವಾಗುತ್ತದೆ.
ಇದರ ಫಲಿತಾಂಶ ನಿಮಗೆ ಕೇವಲ 15 ದಿನಗಳಲ್ಲಿ ಸಿಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.