Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ಅತಿಯಾದ ಹಣಕಾಸಿನ ಸಮಸ್ಯೆ ಇದೆಯೇ..ಹಣಕಾಸಿನ ಪರಿಸ್ಥಿತಿ ಸುಧಾರಿಸಿ ನೀವು ಶ್ರೀಮಂತರಾಗಲು ಬೆಂಕಿಪೊಟ್ಟಣದ ಒಳಗೆ ಈ ಒಂದು ವಸ್ತುವನ್ನು ಹಾಕಿಡಿ ಸಾಕು ನೋಡಿ ಆಮೇಲೆ ಅಂದಿನಿಂದ ನಿಮಗೆ ರಾಜಯೋಗ ಶುರು ಆಗತ್ತೆ ..!!!

ಹಾಯ್ ಸ್ನೇಹಿತರೆ ಜೀವನದಲ್ಲಿ ನೆಮ್ಮದಿಯಾಗಿರಲು ಆರೋಗ್ಯ ಮತ್ತು ಹಣ ಎರಡು ತುಂಬಾ ಮುಖ್ಯ. ಈಗಿನ ಕಾಲದಲ್ಲಿ ಹಣವನ್ನು ಪಡೆಯಲು ಎಂತೆಂತಹ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ ಹಾಗೆ ವಾಮಾಚಾರ ವಶೀಕರಣ ವನ್ನು ಕೂಡ ಮಾಡುತ್ತಾರೆ ಒಳ್ಳೆಯ ದಾರಿಯಿಂದ ಹಣವನ್ನು ಪಡೆಯುವರು ಜೀವನದಲ್ಲಿ ದೊಡ್ಡ ಸ್ಥಾನವನ್ನು ಪಡೆಯುತ್ತಾರೆ ಆದರೆ ಕೆಟ್ಟ ಮಾರ್ಗದಲ್ಲಿ ಹಣವನ್ನು ಸಂಪಾದಿಸಿದವರು ಕೊನೆಗೆ ಒಂದು ದಿನ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ನಮ್ಮ ಹಿಂದಿನ ಹಿರಿಯರು ಮಾಡಿರುವ ಎಲ್ಲಾ ಕೆಲಸಗಳಿಗೂ ಒಂದೊಂದು ಒಳ್ಳೆಯ ಕಾರಣಗಳಿವೆ ಹಾಗೆ ಅವುಗಳು ವೈಜ್ಞಾನಿಕವಾಗಿಯೂ ನೋಡಿದರು ಒಳ್ಳೆಯದಕ್ಕೆ ಆಗಿರುತ್ತವೆ.

ಆದರೆ ಈ ಆಧುನಿಕ ಯುಗದಲ್ಲಿ ಎಲ್ಲಾ ನಂಬಿಕೆಗಳನ್ನು ಮೂಢನಂಬಿಕೆಗಳೆಂದು ತಿಳಿದು ಹೊಸ ಹೊಸ ಟೆಕ್ನಾಲಜಿ ಗಳನ್ನು ಬಳಸುತ್ತಾರೆ. ಈಗ ನಾನು ಹೇಳಿಕೊಡುವ ಪರಿಹಾರ ತುಂಬಾ ವರ್ಷಗಳ ಹಿಂದೆ ಮಾಡುತ್ತಿದ್ದ ಕೆಲಸ ಆದರೆ ಇದನ್ನು ಕಡೆಗಣಿಸಿ ನಮ್ಮ ಜನರೇಶನ್ ಮರೆಯುವಂತೆ ಆಗಿದೆ. ಸ್ನೇಹಿತರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದಾಗ ಹಾಗೂ ರಾಹುವಿನ ವಕ್ರದೃಷ್ಟಿ ನಮ್ಮ ಮನೆಯ ಮೇಲೆ ಇದ್ದಾಗ ನಾವು ಏನೇ ಮಾಡಿದರೂ ಕೈಗೆ ಸಿಗುವುದಿಲ್ಲ. ಹಣದ ಸಮಸ್ಯೆ ಈಗಂತೂ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಕಾಣುವ ಒಂದು ದೊಡ್ಡ ತೊಂದರೆಯಾಗಿದೆ. ದುಡ್ಡಿಲ್ಲದಿದ್ದರೆ ನೆಮ್ಮದಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾಲ ಮುಂದೆ ಬಂದಿದೆ.

ಹಾಗಾದರೆ ಸ್ನೇಹಿತರೇ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಸಮಸ್ಯೆಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದ್ದರೆ ನೀವು ಕೂಡ ನಾನು ಹೇಳುತ್ತಿರುವ ಪರಿಹಾರವನ್ನು ಮನೆಯಲ್ಲಿ ತಪ್ಪದೇ ಮಾಡಿ ಹಾಗೆ ನಿಮಗೆ ಇದರಿಂದ ಒಳ್ಳೆಯದಾದರೆ ಎಲ್ಲರೂ ಸಂತೋಷವಾಗಿ ಇರ್ತಾರೆ. ದುಡ್ಡು ಎಲ್ಲರ ಮನೆಯಲ್ಲಿ ಬರುತ್ತಾ ಇರುತ್ತದೆ ತಕ್ಷಣವೇ ಖರ್ಚಾಗಿ ಬಿಡುತ್ತದೆ. ಇದು ಎಲ್ಲರ ಮನೆಯಲ್ಲಿ ನಡೆಯುವ ಸಾಮಾನ್ಯವಾದ ಘಟನೆ ಆದರೆ ಬರೀ ಖರ್ಚಿನ ಮುಖ ಇದ್ದ ಲಾಭದ ಮುಖ ಇಲ್ಲದೆ ಹೋದರೆ ತೊಂದರೆಗಳು ಬರುವುದು ಸಹಜ. ನೀವು ಈ ಪರಿಹಾರವನ್ನು ಯಾರಿಗೂ ಹೇಳೋದು ಬೇಡ ಮನೆಯಲ್ಲಿ ನೀವು ಇದನ್ನು ಮಾಡಿ ಒಂದ್ಸಲ ನೋಡಿ. ಸ್ನೇಹಿತರೆ ಬೆಂಕಿ ಪೊಟ್ಟಣವು ಚಿಕ್ಕದಾದರೂ ದೇವರಿಗೆ ದೀಪ ಹಚ್ಚಲು ಬಳಸುವ ಒಂದು ಸಾಧನ.

ಇದರ ಒಳಗಡೆ ಬೆಂಕಿಕಡ್ಡಿ ಅಳತೆಯಂತೆ ನೀವು ಮನೆಯಲ್ಲಿ ದೇವರಿಗೆ ಬಳಸುವ ಉದ್ದಿನ ಕಡ್ಡಿಯನ್ನು ಕಟ್ ಮಾಡಿ ಅದಕ್ಕೆ ನೀಲಿ ದಾರದಿಂದ ಸುತ್ತಿ ಬೆಂಕಿಪೊಟ್ಟಣದ ಒಳಗಡೆ ಹಾಕಿ ಇಡಬೇಕು ಇದನ್ನು ನೀವು ಯಾರಿಗೂ ಕಾಣದಂತೆ ಇರುವ ಜಾಗದಲ್ಲಿ ಇಡಬೇಕು. ಈ ರೀತಿಯಾಗಿ ಮಾಡಿನೋಡಿ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಗೆ ಇದನ್ನು ತೆಗೆದು ಚೇಂಜ್ ಮಾಡಿ ಇಡಿ. ಹಾಗೆ ಸ್ನೇಹಿತರೇ ಇನ್ನೊಂದು ಪರಿಹಾರವೆಂದರೆ ಇದೇ ಬೆಂಕಿ ಪೊಟ್ಟಣದ ಒಳಗಡೆ ಸ್ವಲ್ಪ ಸಾಸಿವೆಗಳನ್ನು ಹಾಕಿ ಯಾರಿಗೂ ಕಾಣದೆ ಇರುವ ಜಾಗದಲ್ಲಿ ತೆಗೆದಿಡಿ. ಹಾಗೆಯೇ ಈ ಸಾಸಿವೆಗಳಲ್ಲಿ 5 ಸಾಸುವೆಗಳನ್ನು ತೆಗೆದು ದೀಪಕ್ಕೆ ಹಾಕಿ ದೀಪವನ್ನು ಹಚ್ಚಿ. ನಿಮ್ಮ ಮನೆಯ ಮೇಲೆ ಅಥವಾ ನಿಮ್ಮ ಮೇಲೆ ರಾಹುವಿನ ವಕ್ರದೃಷ್ಟಿ ಬಿದ್ದರೆ ನೀವು ಮಾಡುವ ಈ ಮೇಲಿನ ಪರಿಹಾರ ಗಳಿಂದ ತುಂಬಾ ಲಾಭವನ್ನು ಪಡೆಯುತ್ತೀರಿ.

ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ 21 ಪ್ರದಕ್ಷಿಣೆ ಹಾಕಿ ತುಪ್ಪದ ದೀಪವನ್ನು ಹಚ್ಚಬೇಕು ಅದರಲ್ಲಿ ಸ್ವಲ್ಪ ಸಾಸಿವೆಗಳನ್ನು ಹಾಕಬೇಕು. ಹೀಗೆ ಮಾಡುವುದರಿಂದ ನಿಮಗೆ ಹಣದ ಸಮಸ್ಯೆ ಹೆಚ್ಚಾಗಿ ಕಾಡುವುದಿಲ್ಲ. ಇನ್ನು ಗೋಧಿ ಹಿಟ್ಟಿನೊಂದಿಗೆ ಸ್ವಲ್ಪ ಹಾಲು ಮತ್ತು ಅರಿಶಿನವನ್ನು ಸೇರಿಸಿ ದೀಪವನ್ನು ಮಾಡಿ ಪ್ರತಿ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅದರೊಳಗೆ ಎಳ್ಳೆಣ್ಣೆಯನ್ನು ಹಾಕಿ ದೀಪವನ್ನು ಬೆಳಗಬೇಕು ಹೀಗೆ ಮಾಡುವುದರಿಂದ ಶನಿ ಹಾಗೂ ರಾಹುವಿನ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಈ ಎಲ್ಲಾ ಪರಿಹಾರಗಳಲ್ಲಿ ಒಂದು ಪರಿಹಾರವನ್ನು ನೀವು ಮಾಡಿದರೂ ನೀವು ತುಂಬಾ ಲಾಭವನ್ನು ಕಾಣುತ್ತೀರಿ ಆದರೆ ನೀವು ಮಾಡುವ ಪರಿಹಾರಗಳು ರಹಸ್ಯ ಆಗಿರಬೇಕು. ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದೇವರನ್ನು ನೆನೆದು ನಂಬಿಕೆಯಿಂದ ಪರಿಹಾರಗಳನ್ನು ಮಾಡಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ