ನಿಮ್ಮ ಮನೆಗೆ ಲಕ್ಷ್ಮಿಯ ಅನುಗ್ರಹ ಆಗಬೇಕೆಂದರೆ ಮನೆಯಲ್ಲಿ ಹೆಣ್ಣುಮಕ್ಕಳು ಈ ರೀತಿ ಇರ್ಬೇಕು !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇಂದಿನ ಮಾಹಿತಿಯಲ್ಲಿ ತಿಳಿಯೋಣ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ ಮತ್ತು ಚಿಕ್ಕ ಪುಟ್ಟ ವಿಚಾರಗಳಲ್ಲಿಯೂ ಹೆಣ್ಣುಮಕ್ಕಳು ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತಾರೆ.ಅಂತಹ ತಪ್ಪುಗಳು ಯಾವುವು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಹಾಗೆ ನೀವು ಕೂಡ ಈ ಒಂದು ಮಾಹಿತಿಯನ್ನು ತಪ್ಪದೇ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ

ಮಾಹಿತಿಯನ್ನು ತಿಳಿದ ನಂತರ ನಿಮಗೂ ಕೂಡ ಈ ಮಾಹಿತಿ ಉಪಯುಕ್ತವಾಗಿ ಇದ್ದರೆ ತಪ್ಪದೇ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.ಹೌದು ಪರಾಶಕ್ತಿ ಆದಿಶಕ್ತಿಯಾದ ಹೆಣ್ಣು ಮನೆಯ ಕಣ್ಣಾಗಿ ಇರುತ್ತಾಳೆ,ಮನೆಯಲ್ಲಿ ಯಾವತ್ತಿಗೂ ಹೆಣ್ಣು ಮಕ್ಕಳನ್ನು ನೋಯಿಸಬಾರದು ಮತ್ತು ಹೆಣ್ಣು ಮಕ್ಕಳ ಕೂದಲನ್ನು ಆ ಮನೆಯಲ್ಲಿ ಯಾರೂ ಕೂಡ ಎಳೆಯಬಾರದು ಕೂದಲನ್ನು ಮುಟ್ಟಬಾರದು, ಯಾಕೆ ಅಂದರೆ ಈ ಒಂದು ತಪ್ಪನ್ನು ಮಾಡುವುದರಿಂದ ಮನೆಗೆ ದಾರಿದ್ರ್ಯವೂ ಪ್ರವೇಶಿಸುತ್ತದೆ ಮನೆ ಯಾವತ್ತಿಗೂ ಕೂಡ ಏಳಿಗೆಯಾಗುವುದಿಲ್ಲ.

ಹಾಗೆಯೇ ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರು ಇಡಬಾರದು ಮತ್ತು ಹೆಣ್ಣು ಮಕ್ಕಳು ಮುನಿಸಿಕೊಂಡು ರಾತ್ರಿ ಸಮಯದಲ್ಲಿ ಊಟವನ್ನು ಬಿಡುವುದರಿಂದ ಮನೆಯ ಗಂಡಸರಿಗೆ ಏಳಿಗೆಯಾಗುವುದಿಲ್ಲ.ಆ ಮನೆಯಲ್ಲಿ ದಾರಿದ್ರ್ಯವೂ ಬರುತ್ತದೆ ಅಂತ ಹೇಳ್ತಾರೆ ಯಾಕೆ ಅಂದರೆ ಮನೆಯ ಲಕ್ಷ್ಮೀ ಸ್ವರೂಪವಾಗಿರುವ ಹೆಣ್ಣು ಮುನಿಸಿಕೊಂಡು ಊಟವನ್ನು ಬಿಟ್ಟರೆ ಅಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಅಂತ ಹೇಳ್ತಾರೆ.

ಆದ ಕಾರಣ ಮನೆಯಲ್ಲಿರುವ ಗಂಡು ಮಕ್ಕಳು ಯಾವತ್ತಿಗೂ ಹೆಣ್ಣುಮಕ್ಕಳನ್ನು ನೋಯಿಸಬೇಡಿ ಮತ್ತು ಹೆಣ್ಣು ಮಕ್ಕಳು ರಾತ್ರಿ ಸಮಯದಲ್ಲಿ ಊಟ ಬಿಟ್ಟು ಮಲಗುವ ಸಂದರ್ಭಗಳನ್ನು ತಂದುಕೊಳ್ಳಬೇಡಿ.ಮನೆಯಲ್ಲಿ ಮಕ್ಕಳಾಗಲಿ ಅಥವಾ ಕೆಲವರು ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡ್ತಾರೆ ಅಂತ ತಪ್ಪುಗಳಲ್ಲಿ ದಿಂಬಿನ ಮೇಲೆ ಕುಳಿತುಕೊಳ್ಳುವುದು ದಿಂಬಿನ ಮೇಲೆ ಕಾಲನ್ನು ಹಾಕುವುದು ಇಂತಹ ತಪ್ಪುಗಳನ್ನು ಮಾಡ್ತಿರ್ತಾರೆ ಅದು ಕೂಡ ತಪ್ಪು,

ಈ ದಿಂಬು ಶನಿಯ ಸ್ವರೂಪವಾಗಿರುತ್ತದೆ ಆದ ಕಾರಣ ದಿಂಬಿಗೆ ಒದೆಯುವುದು ಅಥವಾ ತುಳಿಯುವುದಾಗಿ ಮಾಡುವುದರಿಂದ ಶನಿಯ ಕೆಟ್ಟ ದೃಷ್ಟಿಗೆ ಪಾತ್ರರಾಗ ಬೇಕಾಗುತ್ತದೆ.ಇನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಕೋಪಗೊಂಡು ಮನೆಯ ಸದಸ್ಯರಿಗಾಗಲೀ ಅಥವಾ ತಮ್ಮ ಮಕ್ಕಳಿಗಾಗಲಿ ದಾರಿದ್ರ್ಯ ಪೀಡೆ ಎಂಬ ಮಾತುಗಳಿಂದ ಕರೆಯಬಾರದು.ಯಾಕೆ ಅಂದರೆ ಲಕ್ಷ್ಮಿ ಸ್ವರೂಪವಾದ ಹೆಣ್ಣು ಮಗಳು ಕೆಟ್ಟ ಮಾತಲ್ಲಿ ಬೈದರೆ ಅದು ದೇವರ ಬಾಯಿಂದಲೇ ಶಾಪವನ್ನು ಕೊಟ್ಟಂತೆ ಆಗುತ್ತದೆ ಆದ ಕಾರಣ ಮನೆಯಲ್ಲಿ ಹೆಣ್ಣುಮಕ್ಕಳನ್ನು ಗೌರವಿಸಬೇಕು ಅವರನ್ನು ಕೆಣಕಬಾರದು.

ಮನೆಯಲ್ಲಿ ಹೆಣ್ಣು ಮಕ್ಕಳು ಪೂಜೆಯ ಸಮಯದಲ್ಲಿ ಕೆಟ್ಟ ಪದಗಳನ್ನು ಬಳಸಬಾರದು ಅವಾಚ್ಯ ಪದಗಳನ್ನು ಈ ಸಮಯದಲ್ಲಿ ಬಳಸುವುದರಿಂದ ದೇವರ ಪೂಜೆ ಪೂರ್ಣವಾಗುವುದಿಲ್ಲ ಮತ್ತು ಆ ಪೂಜೆ ದೇವರಿಗೆ ಸಮರ್ಪಿತವು ಕೂಡ ಆಗುವುದಿಲ್ಲ ಎಂದು ಹೇಳಲಾಗಿದೆ.ಇಂತಹ ಕೆಲವೊಂದು ಪದ್ಧತಿಗಳನ್ನು ನಿಯಮಗಳನ್ನು ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಂಡು ಹೆಣ್ಣು ಮಕ್ಕಳು ಮನೆಯಲ್ಲಿ ಇರುವುದರಿಂದ ಆ ಮನೆ ಇಳಿಕೆಯಾಗುತ್ತದೆ ಮತ್ತು ಮನೆಯ ಏಳಿಗೆಗಾಗಿ ಮನೆಯ ಉದ್ಧಾರಕ್ಕಾಗಿ ಹೆಣ್ಣು ಮಕ್ಕಳನ್ನು ಗೌರವಿಸಬೇಕು,

ಹೆಣ್ಣುಮಕ್ಕಳನ್ನು ಖುಷಿಯಿಂದ ನೋಡಿಕೊಳ್ಳುವುದರಿಂದ ಆ ಮನೆಯಲ್ಲಿ ನೆಮ್ಮದಿ ಇರುತ್ತದೆ ಆ ಮನೆ ಏಳಿಗೆಯಾಗುತ್ತದೆ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಆ ಮನೆಯಲ್ಲಿ ಆಗುತ್ತದೆ ಎಂದು ಶಾಸ್ತ್ರವು ಹೇಳುತ್ತದೆ. ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *