ಮನೆಯ ಗೃಹಲಕ್ಷ್ಮಿಯಾದ ಮಹಿಳೆ ತಲೆ ಬಾಚುವ ವಿಚಾರದಲ್ಲಿ ಮತ್ತು ತಲೆ ಸ್ನಾನ ಮಾಡುವ ವಿಚಾರದಲ್ಲಿ ಈ ಕೆಲವೊಂದು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲೇಬಾರದು. ಶಾಸ್ತ್ರಗಳು ತಿಳಿಸುತ್ತವೆ
ಮಹಿಳೆಯರು ತಲೆ ಬಾಚಿಕೊಳ್ಳುವ ವಿಚಾರದಲ್ಲಿ ಮತ್ತು ತಲೆ ಸ್ನಾನ ಮಾಡುವ ವಿಚಾರದಲ್ಲಿ ಮಾಡುವ ತಪ್ಪಿನಿಂದ ಕೂಡ ಮನೆಯಲ್ಲಿ ಜೇಷ್ಠ ಲಕ್ಷ್ಮಿ ನೆಲೆಸುತ್ತಾಳೆ ಅಂತ ಆದಕಾರಣ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದು ಮಹಿಳೆಯರು ಈ ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದರೆ,
ಇದರಿಂದ ನಿಮ್ಮ ಮನೆಗೆ ದಾರಿದ್ರ್ಯವು ಉಂಟಾಗುತ್ತದೆ ಸಂಪೂರ್ಣವಾಗಿ ಲೇಖನವನ್ನ ತಿಳಿದು ನೀವು ತಪ್ಪದೆ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದರೆ ಅದನ್ನು ಈಗಲೆ ನಿಲ್ಲಿಸಿ ಅದಕ್ಕಾಗಿ ತೆಗೆದುಕೊಳ್ಳಬೇಕಾಗಿರುವ ಕೆಲವೊಂದು ಕ್ರಮಗಳನ್ನು ಕೈಗೊಂಡು ಮನೆಯಲ್ಲಿ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆದು ಏಳಿಗೆಯನ್ನು ಕಾಣಿ.
ಹೌದು ಮಹಿಳೆಯರು ತಲೆ ಬಾಚುವಾಗ ದೇವರಮನೆ ಮುಂದೆ ನಿಂತು ಅಥವಾ ಹಾಲ್ ನಲ್ಲಿ ಅಥವಾ ಅಡುಗೆ ಮನೆಯಲ್ಲಿ ತಲೆ ಬಾಚಿ ಕೊಳ್ಳುತ್ತಾ ಇರ್ತಾರೆ ಅಥವಾ ಮನೆಯ ಮುಂಭಾಗದಲ್ಲಿ ಅಂದರೆ ಮುಖ್ಯದ್ವಾರದ ಎದುರು ನಿಂತು ತಲೆಯನ್ನ ಬಾಚಿಕೊಳ್ತಾ ಇರುತ್ತಾರೆ.
ಈ ರೀತಿ ಮಾಡುವುದು ಶುದ್ಧ ತಪ್ಪು ಅಂತ ಹೇಳುತ್ತದೆ ಶಾಸ್ತ್ರ ಯಾಕೆಂದರೆ ಈ ಎಲ್ಲಾ ಮಹಿಳೆಯರ ಚಟುವಟಿಕೆಯಿಂದ ಮನೆಯಲ್ಲಿ ಅಷ್ಟಲಕ್ಷ್ಮಿ ಪ್ರವೇಶಿಸುತ್ತಾಳೆ ಮತ್ತು ಮನೆಯ ಮುಖ್ಯದ್ವಾರದ ಮುಂದೆ ನಿಂತು ತಲೆ ಬಾಚಿಕೊಳ್ಳುವುದರಿಂದ ಮನೆಗೆ ಕೆಟ್ಟ ದೃಷ್ಟಿ ತಗಲುತ್ತದೆ ಅಂತಾ ಹೇಳಲಾಗುತ್ತದೆ.
ಮನೆಯಲ್ಲಿ ತಲೆ ಬಾಚುವಾಗ ಮಲಗುವ ಕೋಣೆಯಲ್ಲಿ ಕುಳಿತು ತಲೆ ಬಾಚುವುದರಿಂದ ಒಳ್ಳೆಯದು ಆದರೆ ಈ ರೀತಿ ಮನೆಯ ದೇವರ ಮನೆ ಅಡುಗೆ ಮನೆ ಅಥವಾ ಹಾಲ್ ಅಥವಾ ಮನೆಯ ಮುಖ್ಯ ದ್ವಾರದಲ್ಲಿ ನಿಂತು ತಲೆ ಬಾಚಬಾರದು. ಕೆಲವರು ಬೇರೆ ಮಹಿಳೆಯರ ಬಳಿ ತಲೆಯನ್ನು ಬಾಚಿಕೊಳ್ತಾರೆ
ಅಥವಾ ಜಡೆ ಹಾಕಿಸಿಕೊಳ್ಳುತ್ತಾರೆ ಈ ರೀತಿ ಜಡೆ ಹಾಕಿಸಿಕೊಳ್ಳುವುದು ತಪ್ಪಲ್ಲ ಆದರೆ ಒಬ್ಬರ ಕೂದಲಿನ ಸಿಕ್ಕನ್ನು ಮತ್ತೊಬ್ಬರು ತೆಗೆಯುವುದು ತಪ್ಪು ಇದರಿಂದ ಕೂಡ ಮನೆಗೆ ದಾರಿದ್ರ ಉಂಟಾಗುತ್ತದೆ. ಈ ರೀತಿಯ ತಪ್ಪಿನಿಂದ ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಉಂಟಾಗುತ್ತದೆ ಅಂತಾ ಹೇಳಲಾಗುತ್ತದೆ.
ಮಹಿಳೆಯರು ಸಿಕ್ಕು ಸಿಕ್ಕು ಬಿಡಿಸಿದಂತಹ ಕೂದಲನ್ನು ಯಾವುದೇ ಕಾರಣಕ್ಕೂ ಅಂಗೈನಲ್ಲಿ ಇಟ್ಟುಕೊಳ್ಳುವುದು ಅಥವಾ ಮನೆ ಒಳಗೆ ಇಡುವುದು ಮಾಡಬಾರದು. ಇದರಿಂದ ಕೂಡ ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುತ್ತದೆ. ಅದನ್ನು ಡಸ್ಟ್ ಬಿನ್ ಗೆ ಹಾಕಬೇಕು.
ಸಿಕ್ಕು ಬಿಡಿಸಿದ ಕೂದಲು ನೆಲದ ಮೇಲೆ ಬಿದ್ದಿದ್ದರೆ ಅದನ್ನು ಕೂಡಲೆ ತೆಗೆದು ಹಾಕಬೇಕು. ಇಲ್ಲದಿದ್ದಲ್ಲಿ ಮನೆಯ ಹಿರಿಯರು ಮಾಡುವಂತಹ ಕೆಲಸ ನೆರವೇರುವುದಿಲ್ಲ ಅಂತ ಹೇಳಲಾಗುತ್ತದೆ ಮತ್ತು ಆ ಸಿಕ್ಕು ಬಿಡಿಸಿದ ಕೂದಲನ್ನು ತುಳಿಯಲು ಬಾರದು ಇದರಿಂದ ಕೂಡ ದರಿದ್ರ ಪ್ರಾಪ್ತಿಯಾಗುತ್ತದೆ.
ಮಹಿಳೆಯರು ಮಂಗಳವಾರ ಮತ್ತು ಶುಕ್ರವಾರದ ದಿವಸದಂದು ತಲೆ ಸ್ನಾನ ಮಾಡುತ್ತಾ ಇರುತ್ತಾರೆ ಆದರೆ ಈ ರೀತಿ ಮಹಿಳೆಯರು ಶುಕ್ರವಾರ ಮಂಗಳವಾರ ತಲೆಸ್ನಾನ ಮಾಡುವುದರಿಂದ ಕೂಡ ಮನೆಗೆ ದರಿದ್ರ ಪ್ರಾಪ್ತಿಯಾಗುತ್ತದೆ ಹಾಗೆ ಅನಾರೋಗ್ಯ ಸಮಸ್ಯೆಗಳು ಕೂಡ ಉಂಟಾಗಬಹುದು ಅಂತ ಹೇಳಲಾಗುತ್ತದೆ.
ಆದರೆ ಶನಿವಾರದ ದಿವಸದಂದು ತಲೆಸ್ನಾನ ಮಾಡುವುದರಿಂದ ಅಂತಹ ಮನೆಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಅಂತ ತಿಳಿಸುತ್ತದೆ ಶಾಸ್ತ್ರ. ತಲೆ ಸ್ನಾನ ಮಾಡಿದ ಬಳಿಕ ಮನೆಯಲ್ಲಿ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು
ಮತ್ತು ಆ ತಲೆ ಕೂದಲಿನಿಂದ ಬೀಳುವ ಹನಿಗಳು ಕೂಡ ಮನೆಯ ಒಳಗೆ ಬೀಳಬಾರದು. ಮನೆಯಲ್ಲಿ ಹೆಣ್ಣುಮಕ್ಕಳು ತಲೆ ಕೂದಲನ್ನು ಬಿಟ್ಟು ಓಡಾಡುವುದರಿಂದ ಮನೆಗೆ ದುಷ್ಟ ಶಕ್ತಿ ಪ್ರಭಾವ ಬೀರುತ್ತದೆ ಮತ್ತು ತಲೆ ಕೂದಲನ್ನು ಹಾಗೆ ಬಿಟ್ಟು ದೇವರ ಪೂಜೆಯನ್ನು ಕೂಡ ಮಾಡಬಾರದು.