Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಿಮ್ಮ ಬಟ್ಟೆಗಳಿಗೆ ತಾಗಿರುವ ಎಣ್ಣೆಯ ಕಲೆಗಳು ಹೋಗಬೇಕೆಂದರೆ ಹೀಗೆ ಮಾಡಿ !!!!

ಸಾಮಾನ್ಯವಾಗಿ ಯಾವುದಾದರೂ ಫಂಕ್ಷನ್ಗಳಿಗೆ ಹೋದಾಗ ಕಾರ್ಯಕ್ರಮಗಳಿಗೆ ಹೋದಾಗ ಪೂಜೆಯ ಸಮಯದಲ್ಲಿ ಬಟ್ಟೆಗಳು ಎಣ್ಣೆ ಕಲೆ ಆಗುವುದು ಸಹಜವಾಗಿರುತ್ತದೆ

ಇನ್ನು ಪೂಜೆಗೆ ಕುಳಿತವರು ಕೂಡ ಪೂಜೆಯ ಬಗ್ಗೆ ಯೋಚನೆ ಮಾಡುತ್ತಾ ಬಟ್ಟೆಗಳಿಗೆ ಎಣ್ಣೆಯ ಕರೆಗಳನ್ನು ಮಾಡಿಕೊಂಡು ಬಿಟ್ಟಿರುತ್ತಾರೆ, ಈ ಒಂದು ಎಣ್ಣೆ ಕಲೆಯನ್ನು ಯಾವ ರೀತಿ ವಾಶ್ ಮಾಡುವುದು ಈ ಕಲೆಯನ್ನು ಹೇಗೆ ಹೋಗಲಾಡಿಸುವುದು ಎಂಬುದನ್ನು ನಾನು ನಿಮಗೆ ಇಂದಿನ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ,

ತಪ್ಪದೆ ಸಂಪೂರ್ಣ ಮಾಹಿತಿಯನ್ನು ತಿಳಿದು ನೀವು ಕೂಡ ಈ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ. ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಮಕ್ಕಳು ತಮ್ಮ ಬಟ್ಟೆಗಳ ನಾಡುವಾಗ ಎಣ್ಣೆಯ ಕಲೆ ಮಾಡಿಕೊಂಡಿದ್ದರೆ ಅಥವಾ ಯಾವುದೇ ಕಾರಣಗಳಿಂದ ಈ ಬಟ್ಟೆಗಳು ಕಲೆ ಆಗಿದ್ದರೆ ಅದನ್ನು ಹೋಗಲಾಡಿಸುವುದಕ್ಕೆ ಸುಲಭವಾದ ಪರಿಹಾರಗಳನ್ನು ನಾವು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಸುಲಭ ಅನಿಸಿದರೂ ನೀವು ಈ ಬಟ್ಟೆಗಳನ್ನು ವಾಶ್ ಮಾಡುವುದಕ್ಕೆ ಸ್ವಲ್ಪ ಕೆಲಸ ಮಾಡಬೇಕಾಗುತ್ತದೆ.

ಎಣ್ಣೆ ಕಲೆಯಾದ ಬಟ್ಟೆಯನ್ನು ತೆಗೆದುಕೊಳ್ಳಿ ಈ ಎಣ್ಣೆ ಕಲೆ ತುಂಬಾ ಹಳೆಯದಾದ ಕಲೆ ಹಾಕದೆ ಇದ್ದಲ್ಲಿ ಆ ಎಣ್ಣೆಯ ಕಲೆ ಮೇಲೆ ಮುಖಕ್ಕೆ ಹಚ್ಚುವಂತಹ ಪೌಡರ್ ಆ ಪೌಡರನ್ನು ಕೂಡ ಹಾಕಬಹುದು

ಅಥವಾ ಸೀಮೆ ಸುಣ್ಣದ ಪುಡಿಯನ್ನು ಹಾಕಿದರೂ ಉತ್ತಮ, ಇದು ಬಟ್ಟೆಯ ಮೇಲೆ ಆಗಿರುತಕ್ಕಂತಹ ಎಣ್ಣೆಯ ಕಲೆಯನ್ನು ಹೀರಿಕೊಳ್ಳುತ್ತದೆ ಮತ್ತು ನೀವು ಆ ನಂತರ ಈ ಬಟ್ಟೆಗಳನ್ನು ವಾಶ್ ಮಾಡುವುದರಿಂದ ಕಲೆಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಮತ್ತೊಂದು ವಿಧದಲ್ಲಿ ಈ ಬಟ್ಟೆಯ ಮೇಲೆ ಆಗಿರುತಕ್ಕಂತಹ ಎಣ್ಣೆಯ ಕಲೆಯನ್ನು ಪರಿಹರಿಸಬಹುದು ಅದು ಹೇಗೆ ಅಂದರೆ, ಪಾತ್ರೆ ತೊರೆಯುವಂತಹ ಲಿಕ್ವಿಡ್ ಅನ್ನು ತೆಗೆದುಕೊಳ್ಳಬೇಕು

ನಂತರ ಬಟ್ಟೆಯ ಮೇಲೆ ಆಗಿರುವ ಎಣ್ಣೆಯ ಕಲೆಯ ಮೇಲೆ ಈ ಲಿಕ್ವಿಡ್ನ್ನು ಹಾಕಿ ಒಂದು ಬ್ರಶ್ನ ಸಹಾಯದಿಂದ, ಅಂದರೆ ಟೂತ್ ಬ್ರಷ್ ಅನ್ನು ಬಳಸಿ ಈ ಬಟ್ಟೆಯ ಮೇಲೆ ನಿಧಾನವಾಗಿ ಹಚ್ಚಬೇಕು ಇದರಿಂದ ಬಟ್ಟೆಯ ಮೇಲೆ ಆಗಿರುವ ಎಣ್ಣೆಯ ಕಲೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ

ಆ ನಂತರ ನೀವು ಬಟ್ಟೆ ಅನ್ನು ವಾಸ ಮಾಡುವ ಹಾಗೆ ವಾಶ್ ಮಾಡಬೇಕು, ಈ ರೀತಿ ಮಾಡುವುದರಿಂದ ಬಟ್ಟೆಯ ಮೇಲೆ ಆಗಿರುವ ಎಣ್ಣೆಯ ಕಲೆ ಕ್ರಮೇಣವಾಗಿ ಕಡಿಮೆ ಆಗುತ್ತಾ ಬರುತ್ತದೆ.

ಹೆಣ್ಣು ಮಕ್ಕಳಿಗೆ ಏನಾದರೂ ಸೀರೆಯ ಮೇಲೆ ಎಣ್ಣೆ ಚೆಲ್ಲಿದರೆ ಅಥವಾ ಎಣ್ಣೆ ಕಲೆಯಾದರೆ ಅದಕ್ಕೆ ತಕ್ಷಣವೇ ಪೌಡರ್ ಹಾಕುವುದರಿಂದ ಅದರ ಮುಖಕ್ಕೆ ಹಚ್ಚುವಂತಹ ಪೌಡರ್ ಅನ್ನು ಅದರ ಮೇಲೆ ಹಾಕಿ ಸ್ವಲ್ಪ ಸಮಯ ಬಿಡುವುದರಿಂದ ಎಣ್ಣೆಯ ಕಲೆ ಬೇಗನೆ ಕಡಿಮೆಯಾಗಿಬಿಡುತ್ತದೆ ಕಲೆ ಕೂಡ ಕಾಣಿಸುವುದಿಲ್ಲ.

ಬಟ್ಟೆ ಎಣ್ಣೆಯ ಕಲೆಯಾದಾಗ ಅದನ್ನು ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿಡಬೇಕು ಆ ನಂತರ ವಾಶ್ ಮಾಡುವುದರಿಂದ ಕೂಡ ಬಟ್ಟೆಯಿಂದ ಎಣ್ಣೆಯ ಕಲೆ ಬೇಗನೆ ಬಿಡುತ್ತದೆ. ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ನೀವು ಬಟ್ಟೆಗಳನ್ನು ವಾಶ್ ಮಾಡುವುದು ಸುಲಭ, ಹಾಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ, ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *