ನಿಮ್ಮ ಪ್ರೇಮ ಸಂಬಂಧ ಮತ್ತು ದಾಂಪತ್ಯ ಜೀವನದಲ್ಲಿ ಯಶಸ್ಸನ್ನು ಗಳಿಸಲು ನಿಮ್ಮಲ್ಲಿ ಈ ಗುಣಸ್ವಭಾವಗಳು ಇದ್ದರೆ ಸಾಕು ನೀವು ಸಂತೋಷವಾಗಿರುತ್ತೀರಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸಾಮಾನ್ಯವಾಗಿ ಕುಟುಂಬ ಚೆನ್ನಾಗಿದ್ದರೆ ಮನುಷ್ಯನ ಜೀವನ ಕೂಡ ಚೆನ್ನಾಗಿರುತ್ತದೆ ಕುಟುಂಬದಲ್ಲಿ ಎಲ್ಲವೂ ಕೂಡ ಅಡಗಿದೆ ಎಂದರೆ ತಪ್ಪಾಗಲಾರದು ಕುಟುಂಬ ಎಂದರೆ ಒಂದು ಪರಿಸರ ಚೆನ್ನಾಗಿರಲು ಸಹಕಾರಿ ಮಾಡುವಂತಹ ಅಂಶ ಆಗಿದೆ ಎಂದರೂ ತಪ್ಪಾಗುವುದಿಲ್ಲ.

ಈ ಕುಟುಂಬವನ್ನು ನಿರ್ವಹಣೆ ಮಾಡುವುದು ಗಂಡ ಹೆಂಡತಿ ಮಕ್ಕಳು ಮತ್ತು ಪರಿವಾರದಲ್ಲಿರುವವರ ಎಲ್ಲರ ಕರ್ತವ್ಯವಾಗಿರುತ್ತದೆ ಆದರೆ ಎಂದೂ ಕೂಡ ಕುಟುಂಬದಲ್ಲಿ ಗಂಡಸು ತನ್ನ ಕೆಲವೊಂದು ಕರ್ತವ್ಯ ಗಳನ್ನು ಮಾಡಲೇಬೇಕು ಆ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸುವ ಗುಣಗಳು ಅವನಲ್ಲಿರಬೇಕು

ಆಗ ಒಂದು ಕುಟುಂಬ ಚೆನ್ನಾಗಿರುತ್ತದೆ ಮನೆಯ ಒಳಗೆ ಮಹಿಳೆ ಎಷ್ಟು ಕಷ್ಟಪಟ್ಟು ದುಡಿದರೂ ಕೂಡ ಮನೆಗೆ ಹೊರಗಿನಿಂದ ಬರುವ ಗಂಡಸು ಆಕೆಯನ್ನು ಹೇಗೆ ನಡೆದುಕೊಳ್ಳುತ್ತಾನೆ ಎಂಬುದರ ಮೇಲೆ ಆಕೆಯ ಮನಸ್ಥಿತಿ ಕೂಡ ಬೆಳೆಯುತ್ತಾ ಹೋಗುತ್ತದೆ

ಆದ್ದರಿಂದ ಈಗ ಹೇಳುವಂತಹ ಮೂರು ಸ್ವಭಾವಗಳು ಪ್ರತಿಯೊಂದು ಗಂಡಸಿನಲ್ಲಿಯೂ ಕೂಡ ಇರಬೇಕು ಆ ರೀತಿ ಗುಣ ಸ್ವಭಾವಗಳನ್ನು ಹೊಂದಿದರೆ ಖಂಡಿತವಾಗಿಯೂ ಯಶಸ್ಸು ಎಂಬುದು ನಿಮ್ಮ ಮನೆ ಯಲ್ಲಿ ಯಾವಾಗಲೂ ನೆಲೆಸಿರುತ್ತದೆ ಎಂದರೆ ತಪ್ಪಾಗುವುದಿಲ್ಲ ಆ ಮೂರು ಗುಣಗಳು ಯಾವುವು ಈ ಗುಣಗಳನ್ನು ಹೇಳಿದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಅಲ್ಲದೆ.

ಚಾಣಕ್ಯ ಮುನಿಗಳು ಜೀವನ ಸಂಸಾರ ಗಂಡ ಹೆಂಡತಿ ಗುಣಸ್ವಭಾವ ಪ್ರತಿಯೊಂದರ ಬಗ್ಗೆಯೂ ಕೂಡ ಕೆಲವೊಂದು ಅಂಶಗಳನ್ನು ಮನಗಂಡು ಹೇಳಿದ್ದಾರೆ ಅದರಲ್ಲಿ ಈ ಗುಣ ಸ್ವಭಾವ ಕೂಡ ಮುಖ್ಯವಾಗಿದೆ ಆ ಗುಣಗಳು ಯಾವುವೆಂದರೆ ಮನೆಯಲ್ಲಿರುವ ಗಂಡಸರು ಯಾವಾಗಲು ಕೂಡ ಮಹಿಳೆಯರಿಗೆ ಗೌರವಿಸಬೇಕು.

ತಂದೆ ಅಣ್ಣ ತಮ್ಮ ಇವರುಗಳಿಗೆ ಗೌರವ ಕೊಡುವುದು ಎಷ್ಟು ಮುಖ್ಯವೋ ಪ್ರತಿಯೊಂದು ಗಂಡಸು ಕೂಡ ತಾಯಿ ತಂಗಿ ಅಕ್ಕನಿಗೂ ಕೂಡ ಗೌರವವನ್ನ ಕೊಡಲೇಬೇಕು ಆ ರೀತಿ ಗೌರವವನ್ನು ಕೊಡುತ್ತ ಬಂದರೆ ಖಂಡಿತವಾಗಿಯೂ ಮುಂದೆ ನಿಮ್ಮ ಹೆಂಡತಿಗೂ ಕೂಡ ಗೌರವಿಸುತ್ತೀರಾ

ಅದರ ಜೊತೆಯಲ್ಲಿ ಬೇರೆ ಮಹಿಳೆಯರನ್ನು ಕೂಡ ಗೌರವಿಸುವ ಸ್ವಭಾವವನ್ನು ನೀವು ಹೊಂದಿರಬೇಕು ಮತ್ತು ಪ್ರತಿಯೊಂದು ಗಂಡಸು ಕೂಡ ತನ್ನ ಹೆಂಡತಿಯ ಜೊತೆಯಲ್ಲಿ ನಿಯತ್ತಾಗಿರಬೇಕು ಅಂದರೆ ಪರಸ್ತ್ರೀಯ ಕಡೆ ಗಮನವನ್ನೇ ಹರಿಸದೇ ಇರುವುದು ಮತ್ತು ಬೇರೆ ಸ್ತ್ರೀಯರಿಗೆ ಗೌರವವನ್ನು ಸೂಚಿಸುವುದು ಹೆಂಡತಿಯನ್ನ ಗೌರವಿಸುವುದರ ಜೊತೆಗೆ ಆಕೆಗೆ ಪ್ರೀತಿ ಸ್ವತಂತ್ರ ಎಲ್ಲವನ್ನೂ ಕೂಡ ಕೊಟ್ಟು ಆಕೆಯೂ ಕೂಡ ಸರಿಸಮಾನಳು ಎಂಬ ಭಾವನೆಯೊಂದಿಗೆ ಜೀವನವನ್ನ ಮಾಡಬೇಕು.

ತನ್ನ ಹೆಂಡತಿಗೆ ಯಾವಾಗಲೂ ಕೂಡ ಸುರಕ್ಷತೆಯ ಭಾವ ಮೂಡಿಸುವ ರೀತಿಯಲ್ಲಿ ಗಂಡ ನಡೆದುಕೊಳ್ಳಬೇಕು ಏಕೆಂದರೆ ಹೆಂಡತಿ ತನ್ನ ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಎಲ್ಲವನ್ನೂ ಕೂಡ ಕಳೆದುಕೊಳ್ಳುತ್ತೇನೆ ಎಂಬ ಭಾವದಲ್ಲಿ ಇರುತ್ತಾಳೆ

ಆ ಭಾವವನ್ನು ದೂರಮಾಡಲು ಆಕೆಗೆ ಸುರಕ್ಷತೆಯನ್ನು ನೀಡುವುದು ಪ್ರತಿಯೊಂದು ಗಂಡನ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ಪ್ರತಿಯೊಂದು ಗಂಡನೂ ಕೂಡ ಮಹಿಳೆಯರಿಗೆ ಗೌರವಿಸುವುದು ಮತ್ತು ಆಕೆಯ ಜತೆ ನಿಯತ್ತಾಗಿ ನಡೆದುಕೊಳ್ಳುವುದು ಮತ್ತು ಆಕೆಗೆ ಸುರಕ್ಷತೆಯ ಭಾವವನ್ನು ಮೂಡಿಸುವುದು ಈ ರೀತಿ ಮಾಡುವುದು ಮುಖ್ಯ

ಈ ರೀತಿ ನೀವೇನಾದರೂ ಮಾಡಿದಿರಿ ಎಂದರೆ ನಿಮ್ಮ ಮನೆಯಲ್ಲಿ ಎಲ್ಲವೂ ಕೂಡ ಸರಿಯಾಗಿರುತ್ತದೆ ಅದರ ಜೊತೆಯಲ್ಲಿ ಕುಟುಂಬವೂ ಕೂಡ ಎಂದು ತನ್ನ ದಿಕ್ಕನ್ನು ಬದಲಿಸುವುದಿಲ್ಲ ನೇರವಾದ ದಿಕ್ಕಿನಲ್ಲಿ ಸತ್ಯದ ದಾರಿಯಲ್ಲಿ ನಡೆಯುತ್ತದೆ ಎಂಬುದನ್ನು ಆಚಾರ್ಯ ಚಾಣಕ್ಯ ದಾಖಲೆಗಳೊಂದಿಗೆ ಹೇಳಿದ್ದಾರೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ಮತ್ತು ಬೇರೆಯವರ ಕುಟುಂಬಗಳು ಹಾಳಾಗದ ರೀತಿಯಲ್ಲಿ ಅವರಿಗೂ ಕೂಡ ತಿಳಿದುಕೊಳ್ಳಲು ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *