Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಆಗಬೇಕು ಅಂದ್ರೆ ಏನ್ ಮಾಡಬೇಕು ಗೊತ್ತ …

ಇಮ್ಯೂನಿಟಿ ಪವರ್ ಅಂದರೆ ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಎಂಬುದು ದೇಶವನ್ನು ಹೇಗೆ ಸೈನಿಕರು ಕಾಯುತ್ತಾರೋ ಹಾಗೆ ಈ ರೋಗ ನಿರೋಧಕ ಶಕ್ತಿ ನಮ್ಮ ದೇಹವನ್ನು ಕಾಯುತ್ತದೆ ನಮಗೆ ಯಾವುದೇ ರೋಗವೂ ಬರದ ಹಾಗೆ ನೋಡಿಕೊಳ್ಳುವ ಕೆಲಸ ಈ ರೋಗ ನಿರೋಧಕ ಶಕ್ತಿಗೆ ಇರುತ್ತದೆ ಇನ್ನು ರೋಗ ನಿರೋಧಕ ಶಕ್ತಿ ಎಂದರೇನು.

ನಮ್ಮ ದೇಹದಲ್ಲಿ ಇರುವಂತಹ ಬಿಳಿ ರಕ್ತ ಕಣಗಳು ನಮ್ಮ ದೇಹಕ್ಕೆ ಯಾವುದೇ ರೋಗ ಸೋಂಕುಗಳು ಬರದ ಹಾಗೆ ನೋಡಿಕೊಳ್ಳುತ್ತವೆ .
ಹಾಗಾದರೆ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಯಾವ ಸಮಸ್ಯೆಗಳು ಬರುತ್ತವೆ ಕೆಲವರು ಹೇಳುತ್ತಾರೆ .

ಶೀತ ಕೆಮ್ಮು ಜ್ವರ ಇಂತಹ ದೊಡ್ಡ ಸಮಸ್ಯೆಗಳು ಬರುತ್ತವೆ ಅಂತ ಆದರೆ ನೀವು ಅಂದುಕೊಂಡಿರುವುದು ರೋಗ ನಿರೋಧಕ ಶಕ್ತಿ ದೇಹದಲ್ಲಿ ಕಡಿಮೆಯಾದರೆ ಕೇವಲ ಶೀತ ಕೆಮ್ಮು ಅಂತಹ ಸಮಸ್ಯೆಗಳು ಮಾತ್ರ ಬರುವುದಿಲ್ಲ ಸುಸ್ತು ಕೂಡ ಆಗುವುದು . ಹೇಗೆ ಶೀತ ಕೆಮ್ಮು ಜ್ವರ ನೆಗಡಿಯನ್ನು ರೋಗ ಅಂತ ಕರೆಯಲಾಗುತ್ತದೆಯೇ ಸುಸ್ತನ್ನು ಕೂಡ ರೋಗ ಅಂತಾನೇ ಪರಿಗಣಿಸಲಾಗುತ್ತದೆ .

ರೋಗ ನಿರೋಧಕ ಶಕ್ತಿ ಇವು ಯಾವಾಗ ನಮ್ಮ ದೇಹದಲ್ಲಿ ಕಡಿಮೆಯಾಗುತ್ತದೆಯೋ ಆಗ ನಮಗೆ ಸುಸ್ತು ಬರುತ್ತದೆ ಈ ಸುಸ್ತು ಅಂದರೆ ಹೇಗಿರುತ್ತದೆ ಅಂತ ಹೇಳುವುದಾದರೆ ಉದಾಹರಣೆಗೆ ನೀವು ಮನೆಯಲ್ಲಿ ಬೆಳಿಗ್ಗೆ ತಿಂಡಿ ತಿಂದು ಕುಳಿತುಕೊಳ್ಳುತ್ತಾರೆ ಆಗ ಮಾಡುವುದಕ್ಕೆ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇರುತ್ತವೆ .

ಅಂತಹ ಕೆಲಸಗಳನ್ನು ಆಮೇಲೆ ಮಾಡೋಣ ನಾಳೆ ಮಾಡೋಣ ಮಧ್ಯಾಹ್ನ ಮಾಡಣ ಅಂತ ಕೆಲಸಗಳನ್ನು ಮಾಡೋದನ್ನು ಮುಂದು ಹಾಕುತ್ತಿರುತ್ತೇವೆ ಆದರೆ ಸಾಮಾನ್ಯವಾಗಿ ಜನರು ಇದನ್ನು ಸೋಂಬೇರಿತನ ಅಂತ ಅಂದುಕೊಳ್ಳುತ್ತಾರೆ ಆದರೆ ಇದು ಸೋಮಾರಿತನವಲ್ಲ ಸುಸ್ತು ಇದು ಯಾಕೆ ಬರುತ್ತದೆ ಅಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಬರುವ ಮೊದಲ ಲಕ್ಷಣವೇ ಈ ಸುಸ್ತು .

ಇನ್ನು ಹೇಗೆ ಈ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಬಹುದು ಇದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಅಥವಾ ಚಿಕಿತ್ಸೆ ಪಡೆದುಕೊಳ್ಳಬೇಕು ಅಂತ ನೀವು ಯೋಚಿಸುತ್ತಿದ್ದೀರಾ ? ಸ್ನೇಹಿತರೆ ಇದಕ್ಕೆ ನೀವು ಮನೆಯಲ್ಲಿಯೇ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು .

ಅದೇನು ಅಂದರೆ ನಿಂಬೆ ಹಣ್ಣಿನ ಜ್ಯೂಸ್ ಹೌದು ನಿಂಬೆಹಣ್ಣಿನ ಜ್ಯೂಸ್ ಅಂದ ಕೂಡಲೇ ಎಲ್ಲರಿಗೂ ನೆನಪಿಗೆ ಬರುವುದು ನಿಂಬೆ ಹಣ್ಣಿನ ಪಾನಕ ! ಈ ಪಾನಕ ಅಂದ್ರೆ ರಾಮನವಮಿ ದಿನ ಹಂಚುತ್ತಿಲ್ಲ ನಿಂಬೆಹಣ್ಣಿನ ಪಾನಕ ಅದು ಅಲ್ಲ .ನಿಂಬೆ ಹಣ್ಣಿನ ಜ್ಯೂಸ್ ಅಂದರೆ ಇದನ್ನು ತಯಾರಿಸುವ ಬಗ್ಗೆ ಹೇಗೆ ಅಂದರೆ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ನಿಂಬೆ ಹಣ್ಣಿನ ರಸವನ್ನು ಹಾಕಿ ಮತ್ತು ಅದಕ್ಕೆ ಸ್ವಲ್ಪ ಸೈಂಧವ ಲವಣವನ್ನು ಬೆರೆಸಿ ಇದನ್ನು ಕುಡಿಯಬೇಕು .

ಸೈಂಧವ ಲವಣ ಅಂದರೆ ಇದು ಗ್ರಂಥಿಕೆ ಅಂಗಡಿಯಲ್ಲಿ ದೊರೆಯುತ್ತದೆ ಇದನ್ನು ತಂದು ಜ್ಯೂಸ್ ಗೆ ಬಳಸಿದರೆ ತುಂಬಾನೇ ಉಪಯೊಗ ಆಗುತ್ತದೆ , ಈ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ .ಇದಿಷ್ಟು ಆದ ಬಳಿಕ ಜನರಲ್ಲಿ ಒಂದು ಪ್ರಶ್ನೆ ಮೂಡಿರುತ್ತದೆ.

ಅದೇನೆಂದರೆ ಈ ಜ್ಯೂಸ್ ಎಷ್ಟು ದಿನ ಕುಡಿಯಬೇಕು ಅಂತ , ಉದಾಹರಣೆಗೆ ಮನೆಯ ಮುಂದೆ ಕಸವನ್ನು ದಿನ ಗುಡಿಸುತ್ತೇನೆ ಸ್ವಲ್ಪ ದಿನ ಗುಡಿಸಿ ಸುಮ್ಮನಾಗಿ ಬಿಡ್ತೀವಿ ಇಲ್ಲ ಅಲ್ವಾ ಪ್ರತಿದಿನ ಗುಡಿಸುತ್ತೇವೆ . ಹಾಗೆಯೇ ಇದು ಕೂಡ ಈ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಉತ್ತಮ ಆರೋಗ್ಯದ ಜೊತೆ ರೋಗನಿರೋಧಕ ಶಕ್ತಿ ಕೂಡ ವೃದ್ಧಿಸುವುದರಲ್ಲಿ ಸಂಶಯವಿಲ್ಲ .

Leave a Reply

Your email address will not be published. Required fields are marked *