Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ದೇಹದಲ್ಲಿ ಈ ರೀತಿಯಾದ ಗುಣಲಕ್ಷಣಗಳು ಕಂಡುಬಂದರೆ ನಿಮಗೆ ಖಂಡಿತಾ ಕಿಡ್ನಿ ಸಮಸ್ಯೆ ಇದೆ ಎಂದು ಅರ್ಥ !!!!

ನಮಸ್ಕಾರ ಸ್ನೇಹಿತರೆ,ನಾನು ಇಂದಿನ ಮಾಹಿತಿಯಲ್ಲಿ ನಿಮ್ಮ ಕಿಡ್ನಿಯಲ್ಲಿ ಸಮಸ್ಯೆ ಕಂಡು ಬಂದರೆ ಯಾವ ರೀತಿಯಾದ ಲಕ್ಷಣಗಳು ನಿಮ್ಮ ಶರೀರದಲ್ಲಿ ಕಂಡು ಬರುತ್ತವೆ ಎಂಬುದನ್ನು ನಾನು ಎಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಅಪಾಯಕಾರಿಯಾದ ಅಂತಹ ಲಕ್ಷಣಗಳಿದ್ದರೂ ಅವರು ಅದರ ಕಡೆ ಗಮನ ಕೊಡುವುದಿಲ್ಲ.

ಇತ್ತೀಚಿನ ದಿನಮಾನಗಳಲ್ಲಿ ಹಲವಾರು ಜನರು ಹೃದಯಘಾತ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.ಇವರು ಸಾಮಾನ್ಯವಾಗಿ ಎಷ್ಟೇ ಆಸ್ಪತ್ರೆಗೆ ಹೋಗಿ ಮಾತ್ರೆ ತೆಗೆದುಕೊಂಡರೂ ಕೂಡ ಏನೂ ಪ್ರಯೋಜನವಾಗುವುದಿಲ್ಲ.

ಹೀಗಾಗಿ ನಮ್ಮ ಶರೀರದಲ್ಲಿ ಕಂಡುಬರುವ ಪ್ರಾರಂಭದ ಹಂತದಲ್ಲಿ ನಾವು ಎಚ್ಚೆತ್ತುಕೊಂಡರೆ ಎಲ್ಲಾ ಸಮಸ್ಯೆಗಳನ್ನು ನಮ್ಮ ಶರೀರದಿಂದ ಹೊಡೆದೋಡಿಸಬಹುದು ಸ್ನೇಹಿತರೆ.

ಹೌದು ಕಿಡ್ನಿ ಅನ್ನುವುದು ನಮ್ಮ ಶರೀರಕ್ಕೆ ಬೇಕಾದಂತಹ ಪ್ರಮುಖವಾದಂತಹ ಒಂದು ಅಂಗ. ಇದು ಸರಿಯಾಗಿ ಕೆಲಸ ಮಾಡದಿದ್ದರೆ ನಮ್ಮ ದೇಹದಲ್ಲಿನ ಇಡಿ ಆರೋಗ್ಯ ವ್ಯವಸ್ಥೆ ಹದಗೆಡುತ್ತದೆ.

ಹಿಂದಿನ ಕಾಲದಲ್ಲಿ ಅಷ್ಟಾಗಿ ಜನರು ಈ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ ಯಾಕೆಂದರೆ ಅವರ ಆಹಾರ ಪದ್ಧತಿಗಳು ಬೇರೆ ತರಹ ಇದ್ದವು. ಆದರೆ ಇಂದಿನ ಕಾಲದಲ್ಲಿ ಕಾಲದ ಆಹಾರ ಪದ್ಧತಿಗಳು ಎಲ್ಲಾ ರೀತಿಯ ರಾಸಾಯನಿಕಗಳು ನಾವು ತಿನ್ನುವಂತಹ ಆಹಾರಕ್ಕೆ ಸೇರಿ ನಮ್ಮ ದೇಹವು ಅಂದರೆ ಶರೀರವು ದಿನದಿಂದ ದಿನಕ್ಕೆ ಹದಗೆಡುತ್ತಿದೆ.

ಹೌದು ಸ್ನೇಹಿತರೆ ನಿಮ್ಮ ಶರೀರದಲ್ಲಿ ನಾವು ಹೇಳುವಂತಹ ಈ ರೀತಿಯ ಗುಣಲಕ್ಷಣಗಳು ಕಂಡುಬಂದರೆ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದು ಅರ್ಥ. ಹಾಗಿದ್ದರೆ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

ಅದು ಯಾವ ರೀತಿಯ ಗುಣಲಕ್ಷಣಗಳು ಎಂದರೆ.ನಿಮ್ಮ ಶರೀರದಲ್ಲಿ ಯಾವಾಗಲೂ ಬೆನ್ನು ನೋವು ಬರುತ್ತಿರುತ್ತದೆ ಹೀಗೆ ಬೆನ್ನುನೋವು ವಿಪರೀತವಾಗಿ ಬಂದರೆ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದು ಅರ್ಥ.

ನೀವು ಬಗ್ಗಿದರು, ಕುಳಿತರು ಕೂಡ ಕಿಡ್ನಿ ಇರುವ ಜಾಗದಲ್ಲಿ ಯಥೇಚ್ಛವಾಗಿ ನೋವು ಬರುತ್ತದೆ. ನೀವು ಯಾವುದೇ ಕೆಲಸ ಮಾಡದಿದ್ದರೂ ಕೂಡ ನಿಮಗೆ ಆಯಾಸವಾಗುತ್ತದೆ . ಈ ರೀತಿಯ ಲಕ್ಷಣಗಳು ನಿಮಗೆ ಏನಾದರೂ ಕಂಡುಬಂದಲ್ಲಿ ನಿಮಗೆ ನಿಮ್ಮ ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥ.

ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ವೆಂದರೆ ಆಗ ಕಾಣಿಸಿಕೊಳ್ಳುವ ಇನ್ನೊಂದು ಲಕ್ಷಣ ಯಾವುದೆಂದರೆ ರಕ್ತದೊತ್ತಡ. ಹೌದು ರಕ್ತದೊತ್ತಡ ಹೆಚ್ಚಾದರೂ ಕೂಡ ನೀವು ಒಂದು ಸಾರಿ ನಿಮ್ಮ ಕಿಡ್ನಿಯನ್ನು ಚೆಕ್ ಮಾಡಿಸಿಕೊಳ್ಳಲೇಬೇಕು.

ಸಾಮಾನ್ಯವಾಗಿ ನೀವು ದಿನದಲ್ಲಿ ಮೂರರಿಂದ ನಾಲ್ಕು ಸಾರಿ ಮೂತ್ರ ವಿಸರ್ಜನೆಯನ್ನು ಮಾಡಬೇಕು. ಹೀಗೆ ಪದೇ ಪದೇ ನಿಮಗೆ ಮೂತ್ರ ವಿಸರ್ಜನೆ ಮಾಡಬೇಕು ಎಂದು ಅನಿಸುತ್ತಿದ್ದರೆ ಅದು ಕಿಡ್ನಿ ಸಮಸ್ಯೆ ಎಂದು ಅರ್ಥ.

ಹೀಗಾಗಿ ನೀವು ಯಾವುದೇ ಕಾರಣಕ್ಕೂ ಅದನ್ನು ಕಡೆಗಣಿಸಬಾರದು. ಮತ್ತು ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ಇ ಪೀ ಓ ಹಾರ್ಮೋನ್ ಬಿಡುಗಡೆಯಾಗುತ್ತದೆ.

ಇದರಿಂದ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಅವುಗಳಿಂದ ರಕ್ತ ಸೂಕ್ತ ಪ್ರಮಾಣದಲ್ಲಿ ಸಿಗುವುದಿಲ್ಲ. ಇದರಿಂದ ತುಂಬಾನೇ ಆಯಾಸವಾಗುತ್ತದೆ ಮತ್ತು ತಲೆನೋವು ತುಂಬಾನೇ ನಿಮಗೆ ಕಾಡುತ್ತಿರುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ನಾವು ಮೇಲೆ ಹೇಳಿದ ಲಕ್ಷಣಗಳು ನಿಮಗೆ ಗೋಚರಿಸಿದರೆ ತಕ್ಷಣವೇ ವೈದ್ಯರ ಬಳಿ ಭೇಟಿನೀಡಿ ಒಂದು ಬಾರಿ ಟೆಸ್ಟ್ ಮಾಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಆರೋಗ್ಯವನ್ನು ಕಡೆಗಣಿಸಬೇಡಿ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *