Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ತಲೆಯಲ್ಲಿ ಹೇನಿನ ಕಾಟ ಜಾಸ್ತಿ ಆಗಿದ್ಯಾ ಹಾಗಾದ್ರೆ ಹೀಗೆ ಮಾಡಿ ಸಾಕು ನಿಮಿಷಗಳಲ್ಲಿ ತಲೆಯಲ್ಲಿ ಇರುವ ಹೇನುಗಳು ಮಾಯವಾಗುತ್ತವೆ!!!!

ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಕಾಡುತ್ತಿದ್ದ ಈ ಒಂದು ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಹೆಚ್ಚು ಹೌದು ಏನು ಅಂತೀರಾ ಹೆಣ್ಣುಮಕ್ಕಳಲ್ಲಿ ಕಾಡುತ್ತಿದ್ದ ಆ ಒಂದು ಸಮಸ್ಯೆ ಏನು ಅಂದರೆ ಏನು ಹೇನಿನ ಸಮಸ್ಯೆ.ಹೌದು ಈ ಹೇನಿನ ಸಮಸ್ಯೆ ಬಂದರೆ ನೆಮ್ಮದಿಯೇ ಇರುತ್ತಿರಲಿಲ್ಲ ಬರೀ ತಲೆಯಲ್ಲಿ ಹೇನುಗಳನ್ನು ಹಿಡಿದು ಅಥವಾ ಹೇನುಗಳ ಕಾಟದಿಂದ ತಲೆ ಕೆರೆದು ಬೇಸರವಾಗಿ ಬಿಡುತ್ತಿತ್ತು ಅದರಲ್ಲಿಯೂ ತಕ್ಷಣವೇ ಈ ಒಂದು ಸಮಸ್ಯೆ ಪರಿಹಾರವಾಗುತ್ತ ಇರಲಿಲ್ಲ, ಎಷ್ಟೇ ಪ್ರಯತ್ನಿಸಿದರೂ ಈ ಸಮಸ್ಯೆಯಿಂದ ಪರಿಹಾರ ದೊರೆಯದೇ ಹಲವು ಜನರು ಏನು ಮಾಡುವುದೆಂದು ತಿಳಿಯದೆ ತುಂಬಾನೇ ಯೋಚನೆ ಮಾಡ್ತಾ ಇರ್ತಾರೆ.

ತಲೆಯಿರುವ ಎಲ್ಲರನ್ನೂ ಕಾಡುವ ಒಂದು ಕೀಟದ ಹೆಸರೇನು ಎಂದು ಕೇಳಿದರೆ ಎಲ್ಲರೂ ಹೇಳುವ ಉತ್ತರ ‘ಅದು ಹೇನು’. ನಮ್ಮ ತಲೆಯಲ್ಲೇ ಆಶ್ರಯ ಪಡೆದು, ನಮ್ಮದೇ ರಕ್ತ ಹೀರಿ ಜೀವಿಸುವ ಈ ರಕ್ತಪಿಪಾಸುವಿನದ್ದು ರಕ್ತಬೀಜಾಸುರನ ವಂಶವೇ ಇರಬೇಕು.  ರಕ್ತ ಕುಡಿದು ಸುಮ್ಮನೇ ಉಳಿಯುವ ಜೀವಿಯಲ್ಲ ಇದು. ಬದಲಿಗೆ ಪದೇ ಪದೇ ತಲೆಯನ್ನು ಪರಪರ ಎಂದು ಕೆರೆದುಕೊಳ್ಳುವ ಪರದಾಟಕ್ಕೆ ಒಡ್ಡುವ ಪರಾವಲಂಬಿ ಕೀಟವಿದು. ಈ ಜೀವಿಗೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ತನ್ನವರೇ. ಒಂದು ಲೆಕ್ಕದಲ್ಲಿ ದೇಶ-ಕಾಲ-ವ್ಯಕ್ತಿಗಳನ್ನು ನೋಡದೇ ಎಲ್ಲರನ್ನೂ ಸಮಾನವಾಗಿ ಕಾಡುವ ಈ ಹೇನಿನದ್ದೂ ಕೂಡ ‘ವಸುಧೈವ ಕುಟುಂಬಕಂ’ ಎಂಬ ನೀತಿ. ಎಂಥ ಕಷ್ಟಗಳಿಗೆ ತಲೆ ಕೊಟ್ಟು ಅಭ್ಯಾಸವಿರುವ ವಿಶ್ವವಿಜೇತನೂ ಹೇನಿಗೆ ತಲೆ ಕೊಟ್ಟು ಗೆದ್ದ ದಾಖಲೆಗಳಿಲ್ಲ.

ಈ ಹೇನುಗಳ ಸಮಸ್ಯೆ ಕಾಡಿದರೆ ಕೂಡಲೇ ಪರಿಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಒಂದು ಮನೆ ಮದ್ದು ಇದನ್ನು ನೀವು ಬಳಸಿ ಹಾಗೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.ಕೆಲವರು ಈ ಹೇನುಗಳ ಸಮಸ್ಯೆ ಕಾಡುತ್ತಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಶಾಂಪುಗಳನ್ನು ಅಥವಾ ಆಯಿಲ್ಗಳನ್ನು ತಂದು ಹಚ್ಚಿ ಕೊಳ್ತಾರೆ ಇದರಿಂದ ಕೂದಲು ಉದುರುವ ಸಾಧ್ಯತೆ ಇರುತ್ತದೆ ಮತ್ತು ಬೇಗನೆ ಪರಿಹಾರವೂ ಕೂಡ ಸಿಗುವುದಿಲ್ಲ.ಆದ ಕಾರಣ ಈ ಒಂದು ಪರಿಹಾರವನ್ನು ಪಾಲಿಸಿ ನೋಡಿ ಈ ಪರಿಹಾರ ಮಾಡಲು ಬೇಕಾಗಿರುವುದು ಕೊಬ್ಬರಿ ಎಣ್ಣೆ ಕರ್ಪೂರ ನಿಂಬೆ ಹಣ್ಣಿನ ರಸ.

ಇಷ್ಟು ದೊಡ್ಡ ತಲೆಗೆ ಅಷ್ಟು ಸಣ್ಣ ಹೇನೊಂದು ಭಾರವೇ ಎಂದು ಯಾರಾದರೂ ಕೇಳಿದರೆ ಖಂಡಿತ ಇಲ್ಲ. ಹೇನಿನಿಂದ ಜೀವವೇನೂ ಹೋಗುವುದಿಲ್ಲ. ಆದರೆ, ಇದ್ದಷ್ಟೂ ದಿನ ಈ ಹೇನುಗಳು ನಮ್ಮ ಜೀವ ತಿನ್ನುವುದು ಗ್ಯಾರಂಟಿ. ಎರಡು ನಿಮಿಷ ನಿಮ್ಮ ಕೈ ಸ್ವತಂತ್ರವಾಗಿ ಯಾವುದೋ ಕೆಲಸದಲ್ಲಿ ನಿರತವಾಗಿರಲು ಬಿಡುವುದೇ ಇಲ್ಲ ಇವು. ಕೆರೆದುಕೊಳ್ಳುತ್ತಲೇ ಇರಬೇಕು. ಆ ರೀತಿಯ ನಿರಂತರ ಕೆರೆತ ನಿಮ್ಮ ಮನಶ್ಶಾಂತಿಯ ಜೊತೆಗೆ ತಲೆಯಲ್ಲಿ ಗಾಯವನ್ನೂ ಉಂಟು ಮಾಡಬಹುದು. ಅದೇ ನಂತರದಲ್ಲಿ ಸೋಂಕನ್ನೂ ಉಂಟು ಮಾಡಿ ದೊಡ್ಡ ತಲೆನೋವಿಗೇ ಕಾರಣವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ನೀವು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೆದುರೇ ಕೆರೆದುಕೊಳ್ಳುವಂತೆ ಮಾಡಿ ನಿಮಗೆ ಅಪಮಾನವನ್ನೂ ಉಂಟುಮಾಡಬಹುದು. ನಿಧಾನವಾಗಿ ನಿಮ್ಮ ಎಲ್ಲ ಆನಂದವನ್ನೂ ಹಾಳುಗೆಡವಿ ಸಿಟ್ಟು, ಸಿಡುಕು, ಕೋಪಕ್ಕೆಲ್ಲ ಕಾರಣವಾದೀತು. ಸಂಸಾರದಲ್ಲಿ ಎಲ್ಲವೂ ಇದ್ದು ಅವುಗಳ ಜೊತೆಗೆ ಹೇನೂ ಒಂದು ಇದ್ದುಬಿಟ್ಟರೆ ಸಿಹಿ ಪಾಯಸದಲ್ಲಿ ಜಿರಳೆ ಬಿದ್ದಂತಾಗಲಿಲ್ಲವೇ

ಕೊಬ್ಬರಿ ಎಣ್ಣೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಕೂದಲಿನ ಪೋಷಣೆ ಮಾಡುತ್ತದೆ ಕೂದಲನ್ನು ಮೃದುವಾಗಿಸುತ್ತದೆ ಹಾಗೆ ಕೂದಲ ಆರೈಕೆಯನ್ನು ಚೆನ್ನಾಗಿ ಮಾಡುತ್ತದೆ ಕೂದಲು ಬರುವ ಸಮಸ್ಯೆಯನ್ನು ಕೂಡ ತಡೆಗಟ್ಟುತ್ತದೆ.ಇನ್ನು ಕರ್ಪೂರ ಇದೊಂದು ಉತ್ತಮವಾದ ಔಷಧೀಯ ವಸ್ತು ವಂದನೆ ಹೇಳಿದರೆ ತಪ್ಪಾಗಲಾರದು ಇದನ್ನು ನಾವು ದೇವರ ಪೂಜೆಯಲ್ಲಿ ಬಳಸುತ್ತೇವೆ, ಇದರ ಘಮ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇಷ್ಟ ಆಗುತ್ತದೆ ಆದರೆ ಇದರ ಘಮ ಹೇನುಗಳಿಗೆ ಆಗುವುದಿಲ್ಲ ಇದರ ಘಮ ಅಂದರೆ ದೂರ ಓಡಿಹೋಗುತ್ತವೆ ಹೇನುಗಳು.

ಇನ್ನು ನಿಂಬೆಹಣ್ಣಿನ ರಸ ಈ ನಿಂಬೆಹಣ್ಣಿನ ರಸದಲ್ಲಿರುವ ಸಿಟ್ರಿಕ್ ಆಮ್ಲವು ಹೇನುಗಳ ನಾಶ ಮಾಡುತ್ತದೆ ಮತ್ತು ಹೇನುಗಳು ಸಾಯುವ ಹಾಗೆ ಮಾಡುತ್ತದೆ ಆದ ಕಾರಣ ಈ ಮೂರು ಪದಾರ್ಥಗಳ ಮಿಶ್ರಣವನ್ನು ಮಾಡಿ ಕೂದಲಿನ ಎಳೆ ಎಲೆಗೆ ಹಚ್ಚುತ್ತಾ ಬನ್ನಿ.ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಮೂರರಿಂದ ನಾಲ್ಕು ಅಥವಾ ಕೂದಲು ಉದ್ದವಾಗಿ ಇರದೇ ಇದ್ದರೆ ಎರಡು ಕರ್ಪೂರವನ್ನು ಕೊಬ್ಬರಿ ಎಣ್ಣೆಯೊಳಗೆ ಮುರಿದು ಹಾಕಬೇಕು ಅಥವಾ ಪುಡಿ ಮಾಡಿ ಕೊಬ್ಬರಿ ಎಣ್ಣೆ ಯೊಂದಿಗೆ ಕರಗಿಸಿ ನಂತರ ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಇದೀಗ ಎಣ್ಣೆಯನ್ನು ಹಚ್ಚುವ ರೀತಿಯಲ್ಲಿಯೆ ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಗಳ ಬಳಿಕ ಬೆಚ್ಚಗಿನ ನೀರಿನಿಂದ ಶಾಂಪೂವನ್ನು ಬಳಸಿ ತಲೆಯನ್ನು ತೊಳೆದುಕೊಳ್ಳಬೇಕು ಹಾಗೆ ತಲೆಯನ್ನು ತೊಳೆದುಕೊಂಡ ನಂತರ ಬಾಚಣಿಕೆಯ ಸಹಾಯದಿಂದ ಕೂದಲನ್ನು ಬಾಚಿ ಇದರಿಂದ ಸತ್ತ ಹೇನುಗಳು ಮೊಟ್ಟೆಯೂ ಬಿದ್ದು ಹೋಗುತ್ತದೆ.ಈ ರೀತಿ ವಾರಕ್ಕೆ ಒಮ್ಮೆ ಮಾಡಿ ಹೇಗೆ ನಿಮ್ಮ ಕೂದಲಿನಲ್ಲಿ ಇರುವ ಹೇನುಗಳು ಹೊಟ್ಟುಗಳು ಹೇನಿನ ಮೊಟ್ಟೆಗಳು ಇವೆಲ್ಲವೂ ಕೂಡಾ ಪರಿಹಾರವಾಗುತ್ತದೆ ಎಂಬುದನ್ನು ನೀವೆ ಕಾಣಬಹುದು.

ಈ ಮನೆ ಮುತ್ತಿನಲ್ಲಿ ಯಾವುದಾದರೂ ಅಡ್ಡ ಪರಿಣಾಮಗಳಿವೆಯ ಎಂದು ನೀವು ಯೋಚಿಸಿದರೆ ಇದರಲ್ಲಿ ಯಾವ ಅಡ್ಡ ಪರಿಣಾಮಗಳು ಇಲ್ಲ ನೈಸರ್ಗಿಕವಾದ ಸಾಮಗ್ರಿಗಳನ್ನು ಬಳಸಿರುವುದರಿಂದ ಕೂದಲು ಉದುರುವ ಸಮಸ್ಯೆ ಕಾಡುವುದಿಲ್ಲ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ