Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಜೀವನದಲ್ಲಿ ಇರುವ ಸರ್ವ ಕಷ್ಟಗಳು ಪರಿಹಾರ ಆಗಬೇಕು ಎಂದರೆ ಈ ಒಂದು ದೀಪವನ್ನು ಹಚ್ಚಿ ನೋಡಿ ನಿಮ್ಮ ಜೀವನವೇ ಬದಲಾಗುತ್ತದೆ !!!!

ಕೆಲವರು ಜೀವನದಲ್ಲಿ ಬಹಳಾನೆ ನೊಂದಿರುತ್ತಾರೆ, ಕಷ್ಟಗಳ ಮೇಲೆ ಕಷ್ಟ ಬರುತ್ತಿದ್ದರೆ ಯಾರು ತಾನೆ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ, ಜೀವನದಲ್ಲಿನಿಮಗೂ ಕೂಡ ಕಷ್ಟದ ಮೇಲೆ ಕಷ್ಟ ಬರುತ್ತಿದ್ದರೆ,

ಅಥವಾ ಮನೆಯಲ್ಲಿ ಕಿರಿಕಿರಿ ಗಂಡ ಹೆಂಡತಿ ಕಲಹ ಅಥವಾ ಮನೆಯಲ್ಲಿ ಇರುವ ಮಕ್ಕಳಿಗೆ ಮದುವೆಯಾಗುತ್ತಿಲ್ಲ ಅನ್ನುವವರು, ಹಣಕಾಸಿನ ಸಮಸ್ಯೆಗಳು ಮಕ್ಕಳ ವಿದ್ಯಾಭ್ಯಾಸ ಅಥವಾ ಎಷ್ಟೋ ದಿನದಿಂದ ಸೈಟುಗಳನ್ನು ಮನೆಗಳನ್ನು ಕೊಂಡುಕೊಳ್ಳಬೇಕು ಅಂತ ಇರ್ತೇವೆ,

ಸಾಲ ಕೊಟ್ಟವರು ಹಣವನ್ನು ಹಿಂದಿರುಗಿ ಕೊಡುತ್ತಿಲ್ಲ, ಇಂತಹ ಅನೇಕ ಕನಸುಗಳು ಅನೇಕ ತೊಂದರೆಗಳು ಜೀವನದಲ್ಲಿ ಇರುತ್ತದೆ.ಜೀವನದಲ್ಲಿ ಎದುರಾಗುವಂತಹ ಕಷ್ಟಗಳಿಗೆ ಪರಿಹಾರವನ್ನು ಹುಡುಕಿಕೊಂಡು ಹೋಗಿ, ಸಮಯ ವ್ಯರ್ಥ ಮಾಡಿಕೊಂಡಿರುವುದರೊಂದಿಗೆ, ಹಣವನ್ನು ಕೂಡ ಕಳೆದುಕೊಂಡಿರುವವರು,

ಈ ಒಂದು ಮಾಹಿತಿಯನ್ನು ತಪ್ಪದೇ ತಿಳಿಯಿರಿ. ನಿಮ್ಮ ಸಮಸ್ಯೆಗಳಿಗೆ ಯಾವುದೇ ತೊಂದರೆಗಳಿಗೆ ಆಗಲಿ ಒಂದು ಸುಲಭವಾದ ಪರಿಹಾರವನ್ನು ನಿಮಗೆ ತಿಳಿಸಿಕೊಡುತ್ತೇನೆ, ಸಾಮಾನ್ಯವಾಗಿ ಕೆಲವರಿಗೆ ಒಂದು ಸಂಶಯವಿರುತ್ತದೆ ಮನೆಯಲ್ಲಿ ಕಾಳಿಕಮಾತೆ ಕಾಲಭೈರವೇಶ್ವರನ ಪೂಜೆ ಮಾಡಬಹುದಾ ಎಂದು.

ಹೌದು ಕಾಲಭೈರವೇಶ್ವರನ ಪೂಜೆಯನ್ನು ಮಾಡುವುದರಿಂದ ಸಕಲ ಅದೃಷ್ಟವೂ ನಮಗೆ ಒಲಿಯುತ್ತದೆ, ನಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟಗಳು ನಿವಾರಣೆಯಾಗುತ್ತದೆ,

ಆದರೆ ಯಾವುದೇ ಕಾರಣಕ್ಕೂ ನಾವು ವಾಸ ಮಾಡುವಂತಹ ಮನೆಯಲ್ಲಿಯೇ ಆಗಲಿ ಅಥವಾ ವಾಸ ಗೃಹದಲ್ಲಿ ಕಾಲಭೈರವೇಶ್ವರನ ಫೋಟೋವನ್ನು ಇಟ್ಟು ವಿಗ್ರಹವನ್ನು ಇಟ್ಟು ಪೂಜಿಸುವುದು ಉತ್ತಮವಲ್ಲ, ಈ ದೇವರ ಪೂಜೆಯನ್ನು ಕಾಲಭೈರವೇಶ್ವರ ದೇವಾಲಯಕ್ಕೆ ಹೋಗಿಯೇ ಮಾಡುವುದು ಶ್ರೇಷ್ಠ ಎಂದು ಹೇಳಲಾಗಿದೆ.

ಕಾಲಭೈರವೇಶ್ವರನ ಪೂಜೆಯನ್ನು ಹೇಗೆ ಮಾಡಬೇಕು ಮತ್ತು ಕಾಲಭೈರವೇಶ್ವರನ ದೇವಾಲಯವು ಎಲ್ಲಿದೆ ಅನ್ನೋ ಪ್ರಶ್ನೆಯಲ್ಲ ಹಾಕಿಕೊಳ್ಳಬೇಡಿ, ಉದಾಹರಣೆಗೆ ಆದಿಚುಂಚನಗಿರಿ ದೇವಾಲಯವೇ ಇದೆ.

ಇನ್ನು ಅನೇಕ ಕಾಲಭೈರವೇಶ್ವರನ ದೇವಾಲಯವೂ ನಮ್ಮ ರಾಜ್ಯದಲ್ಲಿಯೇ ಇದೆ, ಅದನ್ನು ತಿಳಿದುಕೊಂಡು ತಿಂಗಳಿಗೆ ಎರಡು ದಿನ ಅಂದರೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿವಸಗಳಂದು ಕಾಲಭೈರವೇಶ್ವರ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಬೇಕಾಗುತ್ತದೆ.

ಕಾಲಭೈರವೇಶ್ವರನ ಪೂಜೆಯನ್ನು ತಿಂಗಳಿಗೆ ಎರಡು ಬಾರಿ ಮಾಡುವುದಕ್ಕೆ ಸಮಯ ಆಗುತ್ತಿಲ್ಲ ಅನ್ನುವವರು, ಅಮಾವಾಸ್ಯೆಯ ದಿನದಂದು ದೇವಾಲಯಕ್ಕೆ ಹೋಗಿ ಬೂದಗುಂಬಳಕಾಯಿ ಅನ್ನು ಎರಡು ಹೋಳಾಗಿಸಿ, ಅದರೊಳಗೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿ ದೀಪವನ್ನು ಹೊತ್ತಿಸಬೇಕು,

ಈ ರೀತಿ ಕುಂಬಳಕಾಯಿ ಅದರಲ್ಲಿಯೂ ಬೂದಕುಂಬಳಕಾಯಿಯ ದೀಪವನ್ನು ದೇವಾಲಯದಲ್ಲಿ ಹಚ್ಚುವುದರಿಂದ ಮತ್ತು ಈ ಒಂದು ದೀಪವನ್ನು ವಾಸ ಮಾಡುವ ಗೃಹದ ಹೊಸ್ತಿಲಿನಿಂದ ಆಚೆ ಇಟ್ಟು ದೀಪವನ್ನು ಹಚ್ಚುವುದರಿಂದ, ಮನೆಯಲ್ಲಿರುವ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ, ನಿಮಗೆ ಬೇಕಾಗಿರುವ ಪರಿಹಾರವೂ ಕೂಡ ದೊರೆಯುತ್ತದೆ.

ಪರಿಹಾರ ಮಾಡುವುದಕ್ಕೆಂದು ತಂದಂತಹ ಬೂದುಗುಂಬಳ ಕಾಯಿಯನ್ನು ಯಾವುದೇ ಕಾರಣಕ್ಕೂ ಮನೆಯ ಒಳಗೆ ತೆಗೆದುಕೊಂಡು ಬರಬೇಡಿ, ಇದು ಉತ್ತಮವಲ್ಲ ಹಾಗೆ ಈ ಬೂದಗುಂಬಳಕಾಯಿ ದೀಪವನ್ನು ನೀವು ಮನೆಯ ಮುಂದೆ ಹಚ್ಚಿ ಇಡುವುದರಿಂದ, ಮನೆಗೆ ತಗುಲಿರುವ ಕೆಟ್ಟ ಶಕ್ತಿಯ ಪ್ರಭಾವ, ಮನೆಯಲ್ಲಿ ಉಂಟಾಗುವಂತಹ ಸಮಸ್ಯೆಗಳು ಇವೆಲ್ಲವೂ ಕೂಡ ನಿವಾರಣೆಗೊಳ್ಳಲಿದೆ.

ಈ ರೀತಿಯಾಗಿ ಕಾಲಭೈರವೇಶ್ವರನ ಪೂಜೆಯನ್ನು ಮಾಡುವುದರಿಂದ ಜೀವನದಲ್ಲಿ ಎದುರಾಗುತ್ತಿರುವ ಕಷ್ಟನಷ್ಟಗಳು ಎಲ್ಲವೂ ಕೂಡ ಪರಿಹಾರಗೊಂಡು ಜೀವನದಲ್ಲಿ ನೆಮ್ಮದಿ ಎಂಬುದು ದೊರೆಯುತ್ತದೆ .

ಈ ಬೂದಗುಂಬಳಕಾಯಿ ಕೇತುವಿನ ಸಂಕೇತವಾಗಿರುತ್ತದೆ, ಕೇತು ಮೋಕ್ಷದ ಸಂಕೇತವಾಗಿರುತ್ತದೆ, ಮೋಕ್ಷ ಅಂದರೆ ನಿಮ್ಮ ಕಷ್ಟಗಳು ಪರಿಹರಿಸುವಂತಹ ಸಂಕೇತವಾಗಿರುತ್ತದೆ, ಆದ ಕಾರಣ ಈ ಬೂದಗುಂಬಳ ಕಾಯಿಯಲ್ಲಿ ದೀಪವನ್ನು ಹಚ್ಚಿ ಇಡುವುದರಿಂದ ಮನೆಯ ಸಮಸ್ಯೆಗಳು ಮೋಕ್ಷಗಳ್ಳುತ್ತದೆ ಎಂಬುದರ ಅರ್ಥ ಈ ಪರಿಹಾರದ ಅರ್ಥ ಆಗಿರುತ್ತದೆ.

Leave a Reply

Your email address will not be published. Required fields are marked *