ಸಾಮಾನ್ಯವಾಗಿ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಣ ಗಳಿಸಬೇಕು ಎಂಬುದು ಒಂದು ದೊಡ್ಡ ಉದ್ದೇಶವಾಗಿರುತ್ತದೆ ಹಣ ಗಳಿಸುವುದರ ಜೊತೆಗೆ ತಾವು ಒಂದು ಉನ್ನತ ಹುದ್ದೆಯಲ್ಲಿ ಇರಬೇಕು ಮತ್ತು ಜನರು ನಮ್ಮ ಬಗ್ಗೆ ಒಳ್ಳೆಯ ಮಾತನಾಡಬೇಕು.
ಇತ್ತೀಚಿನ ದಿನಗಳಲ್ಲಿ ಇವೆಲ್ಲವೂ ಕೂಡ ತುಂಬಾ ಕಠಿಣ ಅದರಲ್ಲೂ ಕೂಡ ಎಷ್ಟೇ ಕಷ್ಟವಾದರೂ ಕೂಡ ಹಣ ದೊರೆಯುತ್ತಿಲ್ಲ ಎನ್ನುವವರೇ ಜಾಸ್ತಿ ಆದರೆ ಕೆಲವೊಂದು ಅಂಶಗಳ ಆಧಾರದ ಮೇಲೆ ನೀವು ಶ್ರೀಮಂತರಾಗುತ್ತಿರೊ ಇಲ್ಲವೋ ನಿಮ್ಮ ಬಳಿ ಹಣ ಇರುತ್ತದೆಯೋ ಇಲ್ಲವೋ ಎಂದು ಹೇಳಬಹುದಾಗಿದೆ ಅದು ಯಾವುದೆಂದರೆ ಹಸ್ತಸಾಮುದ್ರಿಕ ಶಾಸ್ತ್ರ ಈ ಶಾಸ್ತ್ರದ ಆಧಾರದ ಮೇಲೆ ಪ್ರತಿಯೊಂದು ವ್ಯಕ್ತಿಯ ಜೀವನ ಹೇಗಿರುತ್ತದೆ
ಮತ್ತು ಅವನ ಕೈಯ ರೇಖೆಗಳ ಆಧಾರದ ಮೇಲೆ ಅವನು ಹೇಗೆ ಜೀವನದಲ್ಲಿ ಎಲ್ಲವನ್ನೂ ನಡೆಸಿಕೊಂಡು ಹೋಗುವ ಶಕ್ತಿಯನ್ನ ಹೊಂದಿರುತ್ತಾನೆ ಎಂಬ ವಿವರಗಳನ್ನು ಹೇಳಬಹುದು. ಕೈ ಯ ಮೇಲಿರುವ ಗೆರೆಗಳು ನಮ್ಮ ಜೀವನದ ಭವಿಷ್ಯವನ್ನು ಹೇಳುವಲ್ಲಿ ಹೆಚ್ಚು ಪಾತ್ರವನ್ನು ನಿರ್ವಹಿಸುತ್ತವೆ
ಇವುಗಳ ಆಧಾರದ ಮೇಲೆ ನಮ್ಮ ಮುಂದಿನ ಭವಿಷ್ಯ ಹೇಗಿರುತ್ತದೆ ನಮಗೆ ನಮ್ಮ ಜೀವನದಲ್ಲಿ ಅಥವಾ ನಮ್ಮ ಕುಟುಂಬದಲ್ಲಿ ಯಾವ ರೀತಿಯಾದ ಸಂಕಷ್ಟಗಳು ಎದುರಾಗುತ್ತವೆ ಮತ್ತು ನಾವು ಯಾವ ರೀತಿಯಾದಂತಹ ಜೀವನ ಮಾಡುತ್ತೇವೆ ಎಂಬ ಸಂಪೂರ್ಣ ಮಾಹಿತಿಯನ್ನು ನಮ್ಮ ಕೈ ಯ ರೇಖೆಗಳ ಆಧಾರದ ಮೇಲೆ ನೋಡಬಹುದು.
ಅಂಥದ್ದೇ ಒಂದು ರೇಖೆ ಎಂದರೆ ನಮಗೆ ಎಷ್ಟರ ಮಟ್ಟಿಗೆ ಹಣ ಇರುತ್ತದೆ ಮತ್ತು ನಾವು ಯಾವ ಸಮಯದಲ್ಲಾದರೂ ಶ್ರೀಮಂತರಾಗುತ್ತೇವೆಯೇ ಅಥವಾ ನಮ್ಮ ಜೀವನದಲ್ಲಿ ದುಡ್ಡು ಎಂಬುದು ಸಿಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ನಾವು ತಿಳಿದುಕೊಳ್ಳಬಹುದು ಆದರೆ ಅದು ಕೇವಲ ಮನುಷ್ಯನ ಮನಸ್ಥಿತಿ ಹೇಗಿರುತ್ತದೆ ಎಂಬುದರ ಆಧಾರದ ಮೇಲೆ ಎಂದು ಹಲವರು ಹೇಳುತ್ತಾರೆ.
ಆದರೆ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಕೈ ರೇಖೆಗಳ ಆಧಾರದ ಮೇಲೆ ಅವುಗಳನ್ನೆಲ್ಲ ತಿಳಿದುಕೊಳ್ಳಬಹುದು ಎಂದು ಹೇಳಲಾಗಿದೆ.ಅದೇನೆಂದರೆ ನಿಮ್ಮ ಹೆಬ್ಬೆಟ್ಟಿನ ಪಕ್ಕದ ಬೆರಳ ಕೆಳಗೆ ಒಂದು ರೇಖೆ ಇರುತ್ತದೆ ಅದನ್ನು ವಿದ್ಯಾ ರೇಖೆ ಎಂದು ಹೇಳಲಾಗುತ್ತದೆ ಆ ರೇಖೆಯ ಆಧಾರದ ಮೇಲೆ ಪ್ರತಿಯೊಂದು ಕೂಡ ನಿರ್ಧಾರವಾಗುತ್ತದೆ.
ಅದು ವಿದ್ಯಾ ರೇಖೆ ಎಂದು ಹೇಳಿದರೂ ಕೂಡ ಆ ರೇಖೆ ಹೇಗಿದೆ ಎಂಬುದರ ಮೇಲೆ ಕೂಡ ನಿಮ್ಮ ಜೀವನದಲ್ಲಿ ಹಣ ನಿಮ್ಮ ಹಣವನ್ನು ನೀವು ಸಂಗ್ರಹಿಸುತ್ತಿರೋ ಇಲ್ಲವೋ ಎಂದು ಕೂಡ ತಿಳಿದು ಕೊಳ್ಳಬಹುದಾಗಿದೆ. ಅದರ ಜೊತೆಯಲ್ಲಿ ನಿಮ್ಮ ಹೆಬ್ಬೆಟ್ಟಿನ ಪಕ್ಕದಲ್ಲಿ ಸ್ವಲ್ಪ ಊದಿದ ರೀತಿಯಲ್ಲಿ ಇದ್ದರೆ ಅಂದರೆ ಸ್ವಲ್ಪ ಉಬ್ಬಿದ್ದರೆ ಮತ್ತು ನಿಮ್ಮ ಕಿರು ಬೆರಳಿನ ಕೆಳಗೆ ಕೂಡ ಸ್ವಲ್ಪ ಉಬ್ಬಿದ್ದರೆ ನಿಮಗೆ ಖಂಡಿತವಾಗಿಯೂ ಜೀವನದಲ್ಲಿ ದುಡ್ಡು ಎಂಬುದು ಸಿಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ
ಇಂದಲ್ಲ ನಾಳೆ ನಿಮಗೆ ದುಡ್ಡು ಸಿಕ್ಕೇ ಸಿಗುತ್ತದೆ ಆದರೆ ನೀವು ಎಷ್ಟು ಕಷ್ಟ ಪಡುತ್ತೀರೋ ಅದಕ್ಕೆ ಅನುಗುಣವಾಗಿ ದುಡ್ಡು ದೊರೆಯುತ್ತದೆ ಈ ರೀತಿ ನಾನು ಹೇಳಿದ ಜಾಗದಲ್ಲಿ ನಿಮ್ಮ ಕೈ ಉಬ್ಬಿದ್ದರೆ ನೀವು ಒಂದಲ್ಲ ಒಂದು ದಿನ ಕೋಟ್ಯಧೀಶ್ವರಾಗುವಿರಿ ದುಡ್ಡು ನಿಮ್ಮ ಬಳಿಯೇ ಉಳಿಯುತ್ತದೆ
ಎಂಬುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಸಾಧ್ಯವಾದಷ್ಟು ಈಗ ಹೇಳಿದ ಮಾಹಿತಿಗೆ ಅನುಗುಣವಾಗಿ ನಿಮ್ಮ ಕೈಯನ್ನು ಒಂದು ಬಾರಿ ಪರೀಕ್ಷಿಸಿಕೊಳ್ಳಿ ನಿಮಗೆ ಅದರ ಅರಿವು ಆದ ನಂತರ ಈ ಮಾಹಿತಿಯನ್ನು ಬೇರೆಯವರ ಕೈ ನೋಡಿ ಕೂಡ ಹೇಳಿ ಅವರಿಗೂ ಕೂಡ ಸ್ವಲ್ಪ ಸಮಾಧಾನ ಪಡಿಸಿ ಧನ್ಯವಾದಗಳು ಶುಭದಿನ.