Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಿಮ್ಮ ಕೂದಲು ದಟ್ಟವಾಗಿ ಬೆಳೆಯಲು ಮತ್ತು ಉದುರುವುದನ್ನು ಕಡಿಮೆ ಮಾಡಲು ಈ ನೀರನ್ನು ಹಚ್ಚಿ ಆಮೇಲೆ ನೋಡಿ ನಿಮ್ಮ ಕೂದಲು ಹೇಗೆ ಕಪ್ಪಾಗಿ ದಟ್ಟವಾಗಿ ಬೆಳೆಯುತ್ತವೆ, ನೀವೇ ಬೆರಗಾಗುತ್ತೀರಾ

ಕೂದಲೆಂದರೆ ಹೆಣ್ಣುಮಕ್ಕಳಿಗೆ ಅಚ್ಚು ಮೆಚ್ಚು,ಈಗ ಕೆಲವು ಗಂಡಸರು ಕೂಡ ಕೂದಲನ್ನು ಬೆಳೆಸುವುದಕ್ಕಾಗಿ ಮೊರೆಹೋಗುತ್ತಿದ್ದಾರೆ.ತಲೆಯ ಕೂದಲನ್ನು ನೈಸರ್ಗಿಕ ಮೂಲಗಳಿಂದ ಆರೋಗ್ಯಕರವಾಗಿ ಬೆಳೆಯುವಂತೆ ನೋಡಿಕೊಳ್ಳಬಹುದು.

ಇದಕ್ಕೆ ಮೂಲವಾಗಿ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಸೇವಿಸಬೇಕು. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಶಾಂಪೂ ಮತ್ತು ಕೇಶವಿನ್ಯಾಸ ಎಂದು ಅತಿ ಹೆಚ್ಚು ಮಂದಿ ತಮ್ಮ ಸೌಂದರ್ಯವನ್ನು ರಹಸ್ಯವನ್ನು ಹಾಳುಗೆಡವಿದ್ದಾರೆ.

ರಾಸಾಯನಿಕ ಪದಾರ್ಥಗಳನ್ನು ಬಳಸುವ ಮೂಲಕ ಕೂದಲಿನ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆ .ದೇಹದಲ್ಲಿ ಎಲ್ಲ ಕ್ರಿಯೆಗಳಿಗೂ ಕಾರಣವಾಗಿರುವಂತೆ ಕೂದಲಿನ ಆರೈಕೆ ಮತ್ತು ಆರೋಗ್ಯವನ್ನು ಹಾರ್ಮೋನುಗಳು ನೋಡಿಕೊಳ್ಳುತ್ತವೆ. ಸ್ನೇಹಿತರೆ ಎಲ್ಲರಿಗೂ ಅವರ ಕೂದಲುಗಳು ದಟ್ಟವಾಗಿ ಕಪ್ಪಾಗಿ ಹಾಗೂ ಮೃದುವಾಗಿರಬೇಕು ಎಂದು ಇಷ್ಟಪಡುತ್ತಾರೆ.

ಸ್ನೇಹಿತರೆ ಇವತ್ತು ನಾನು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಕೂದಲನ್ನು ಹೇಗೆ ದಟ್ಟವಾಗಿ ಕಪ್ಪಾಗಿರುವಂತೆ ಮಾಡಬೇಕು ಎಂದು ತಿಳಿಸಿಕೊಡುತ್ತೇನೆ. ಸ್ನೇಹಿತರೆ ಈ ಮನೆಮದ್ದಿಗೆ ಮುಖ್ಯವಾಗಿ ಬೇಕಾಗಿರುವ ಅಂತಹದ್ದು ಅಕ್ಕಿ, ಮೊದಲನೆಯದಾಗಿ ಅಕ್ಕಿಯನ್ನು ಒಂದು ಬೌಲ್ಗೆ ಹಾಕಿಕೊಳ್ಳಬೇಕು. ನಂತರ ಅಕ್ಕಿಗೆ ಅಕ್ಕಿ ಮುಳುಗುವಷ್ಟು ನೀರನ್ನು ಹಾಕಬೇಕು.

ಅಕ್ಕಿಗೆ ನೀರು ಹಾಕಿದ ನಂತರ ಅದನ್ನು 20 ನಿಮಿಷ ನೆನೆಯಲು ಬಿಡಬೇಕು.ನಂತರ ಅಕ್ಕಿ ತೊಳೆದಿರಿವ ನೀರನ್ನು ಚೆಲ್ಲ ಬಾರದು.ನಂತರ ಅಕ್ಕಿ ತೊಳೆದಿರುವ ನೀರನ್ನು ಒಂದು ಬಾಟಲ್ ಗೆ ಹಾಕಿ ಕೊಳ್ಳಬೇಕು. ಅಕ್ಕಿಯನ್ನು ತೊಳೆದು ಇರುವಂತಹ ನೀರು ನಮ್ಮ ಕೂದಲಿಗೆ ತುಂಬಾನೆ ಒಳ್ಳೆಯದು. ಯಾಕೆಂದರೆ ಅಕ್ಕಿ ತೊಳೆದ ಅಂತಹ ನೀರಿನಲ್ಲಿ ಕಾರ್ಬೋಹೈಡ್ರೇಟ್ಗಳು ಜಾಸ್ತಿಯಾಗಿರುತ್ತದೆ.

ಇದು ಏನ್ ಮಾಡುತ್ತದೆ ಕೂದಲು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಹಾಗೆಯೇ ಇದನ್ನು ಬಳಸುವುದರಿಂದ ಕೂದಲು ಉದುರುವುದು ಸಹ ಕಡಿಮೆಯಾಗುತ್ತದೆ. ಹೌದು ಸ್ನೇಹಿತರೆ ಇದನ್ನು ನೇರವಾಗಿ ಕೂದಲಿಗೆ ಬಳಸಬಹುದು ಆದರೂ ಇದು ಇನ್ನೂ ಹೆಚ್ಚಾಗಿ ಆಗಿ ಕೆಲಸ ಮಾಡಬೇಕೆಂದರೆ, ನೀರನ್ನು ಒಂದು ಬಾಟಲಿಗೆ ಹಾಕಿಟ್ಟು 24 ಗಂಟೆಗಳ ಕಾಲ ಹಾಗೆ ಇಡಿ.

ನೀವು ಇದನ್ನು ಕಂಡಿಷ್ನರ್ ತರ ಯೂಸ್ ಮಾಡಬೇಕು ಎಂದರೆ ಮೊದಲಿಗೆ ನಿಮ್ಮ ಕೂದಲನ್ನು ಚೆನ್ನಾಗಿ ಶಾಂಪು ಇಂದ ತೊಳೆದುಕೊಳ್ಳಿ. ನಂತರ ಅದನ್ನು ಸ್ಪ್ರೇ ಬಾಟಲ್ನಲ್ಲಿ ಹಾಕಿಕೊಂಡು ನಂತರ ಸ್ಪ್ರೇ ಮಾಡಿಕೊಳ್ಳಬೇಕು. ನಂತರ ಎರಡರಿಂದ ಮೂರು ನಿಮಿಷಗಳ ಕಾಲ ಹಾಗೆ ಇಟ್ಟುಕೊಂಡು ನಂತರ ನಿಮ್ಮ ತಲೆ ಕೂದಲುಗಳನ್ನು ತೊಳೆದುಕೊಳ್ಳಬೇಕು.

ಕೂದಲು ತೆಳ್ಳಗಿರುವವರು ಮತ್ತು ಕೂದಲು ಉದುರುತ್ತದೆ ಎನ್ನುವವರು ಈ ವಿಧಾನವನ್ನು ಅನುಸರಿಸಿ. ಒಂದು ಬೌಲ್ ನಲ್ಲಿ ನಿಮ್ಮ ಕೂದಲಿಗೆ ಬೇಕಾದಷ್ಟು ನೆನೆಸಿದ ನೀರನ್ನು ಹಾಕಿಕೊಳ್ಳಿ. ನಂತರ ಮಾರುಕಟ್ಟೆಯಲ್ಲಿ ಸಿಗುವಂತಹ ಆನಿಯನಿ ಎಸೆನ್ಶಿಯಲ್ ಎಣ್ಣೆ ಯನ್ನುಮಿಕ್ಸ್ ಮಾಡಬೇಕು.

ಇದಕ್ಕೆ ಒಂದು ಅಥವಾ ಎರಡು ಹನಿಗಳನ್ನು ಸೇರಿಸಬೇಕು.ನಿಮಗೆ ಎಸೆನ್ಶಿಯಲ್ ಎಣ್ಣೆ ಸಿಕ್ಕಿಲ್ಲ ಎಂದರೆ ಮನೆಯಲ್ಲಿ ಇರುವಂತಹ ಈರುಳ್ಳಿಯನ್ನು ಗ್ರೈಂಡ್ ಮಾಡಿಕೊಂಡು ಅದರ ರಸವನ್ನು ಆ ನೀರಿಗೆ ಹಾಕಿಕೊಳ್ಳಬೇಕು.

ಈರುಳ್ಳಿ ಸಹ ನಮ್ಮ ಕೂದಲನ್ನು ತುಂಬಾ ಕಪ್ಪಗೆ ದಟ್ಟವಾಗಿ ಬೆಳೆಯುವುದಕ್ಕೆ ಸಹಾಯಮಾಡುತ್ತದೆ.ನಂತರ ಮಿಶ್ರಣಕ್ಕೆ ಒಂದು ಸ್ಪೂನ್ ನಷ್ಟು ಕೊಬ್ಬರಿಯನ್ನು ಹಾಕಿಕೊಳ್ಳಬೇಕು. ಹೀಗೆ ಮಾಡಿದ ಮಿಶ್ರಣವನ್ನು ನಂತರ ಕೂದಲಿಗೆ ಹಚ್ಚಬೇಕು. ಇದನ್ನು ನೀವು ತಲೆ ಸ್ನಾನ ಮಾಡುವುದಕ್ಕಿಂತ ಅರ್ಧ ಗಂಟೆ ಮುಂಚೆ ಈ ಮಿಶ್ರಣವನ್ನು ಕೂದಲಿಗೆ ಹಾಕಬೇಕು.

ಇದನ್ನು ನೀವು ಮಾಡಿದರೆ ನಿಮ್ಮ ಕೂದಲು ಕಪ್ಪಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ ಸ್ನೇಹಿತರೆ.ನೋಡಿದ್ರಲ್ಲ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ.ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *