ನಿಮ್ಮ ಕಾಲು ಏನಾದ್ರು ಈ ರೀತಿ ಉಳುಕಿದ್ದರೆ ತಕ್ಷಣವೇ ಹೀಗೆ ಮಾಡಿ ಸಾಕು ಉಳುಕು ಹೋಗುತ್ತೆ…!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನಮಸ್ಕಾರ ಪ್ರಿಯ ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತಿರುವಂತಹ ಈ ಒಂದು ವಿಚಾರ ಉಳುಕಿನ ಬಗ್ಗೆ. ಹೌದು ಈ ಕಾಲು ಕೈ ಅಥವಾ ಕತ್ತಿನ ಭಾಗ ಉಳುಕಿರುತ್ತದೆ ಅಲ್ವಾ, ಆಗ ನೀವು ನೋವಿನ ಮಾತ್ರೆಗಳನ್ನು ಅಥವಾ ಉಳುಕಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇದ್ದರೆ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ.ಉಳುಕಿದ ಭಾಗ ನೋಯುತ್ತಿದೆ ಅಂತ ಪೇನ್ ಕಿಲ್ಲರ್ ಮಾತ್ರೆಯನ್ನು ತೆಗೆದುಕೊಳ್ತೀರಾ. ಆಗ ನೋವು ಕೂಡ ಕಡಿಮೆಯಾಗುತ್ತದೆ. ಇನ್ನು ಈ ಪೇನ್ಕಿಲ್ಲರ್ ಮಾತ್ರೆ ತೆಗೆದುಕೊಂಡಾಗ ನಿಮ್ಮ ಮೇಲೆ ಆಗುವ ಅಡ್ಡ ಪರಿಣಾಮಗಳು ಬಹಳಷ್ಟು ಆಗಿರುತ್ತದೆ. ಆದ ಕಾರಣ ನೀವು ಉಳುಕಿನ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ಮೊದಲು ಸ್ವಲ್ಪ ಜಾಗರೂಕತೆಯಿಂದ ಯೋಚನೆ ಮಾಡಿ ನಂತರ ಉಳುಕಿನ ಮಾತ್ರೆಗಳನ್ನು ತೆಗೆದುಕೊಳ್ಳಿ.

ಹಾಗಾದರೆ ಮಾತ್ರೆಯನ್ನು ಬಿಟ್ಟು ಬೇರೆ ಪರಿಹಾರ ಇಲ್ವಾ ಅಂತ ನೀವು ಯೋಚನೆ ಮಾಡ್ತಾ ಇದ್ದರೆ. ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಈ ಉಳುಕಿನ ಸಮಸ್ಯೆಗೆ ಪರಿಹಾರವನ್ನಾಗಿ ನಾವು ಏನು ಮಾಡಿಕೊಳ್ಳಬಹುದು ಅಂತ. ಇದೊಂದು ಹಳೆಯ ಪದ್ಧತಿ ಅಂತ ಹೇಳಿದರೆ ತಪ್ಪಾಗಲಾರದು, ಈ ಪದ್ಧತಿಯಲ್ಲಿ ನಾವು ಉಳುಕನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಬಳಸುತ್ತಿರುವ ಪದಾರ್ಥ ಹುಣಸೆಹಣ್ಣು. ಹೌದು ಈ ಹುಣಸೆ ಹಣ್ಣನ್ನು ಬಳಸಿ ನೀವು ಹುಳುಕನ್ನು ನಿವಾರಣೆ ಮಾಡಿಕೊಳ್ಳಬಹುದು.ಹೇಗೆ ಅಂದರೆ ಈ ಹುಣಸೆ ಹಣ್ಣನ್ನು ತೆಗೆದು ಸ್ವಲ್ಪ ನೀರಿನಲ್ಲಿ ಬೇಯಿಸಿ ನಂತರ ಆ ಹುಣಸೆ ಹಣ್ಣನ್ನು ಕಿವುಚದೇ ಅದರ ಪ್ಯಾಕ್ ಅನ್ನು ನಿಮ್ಮ ಉಳುಕಿದ ಭಾಗದಲ್ಲಿ ಹಚ್ಚಿಕೊಳ್ಳಿ. ಈ ರೀತಿ ನೀವು ಮಾಡುತ್ತಾ ಬಂದರೆ ಕೇವಲ ಎರಡು ಮೂರು ದಿನಗಳಲ್ಲಿಯೆ ಈ ಉಳುಕಿದ ಸಮಸ್ಯೆ ಬೇಗನೆ ಪರಿಹಾರ ಆಗುತ್ತದೆ.

ಅಷ್ಟೇ ಅಲ್ಲ ನೀವು ಈ ಹುಣಸೆ ಹಣ್ಣಿನ ಪ್ಯಾಕ್ ಹಾಕುವುದಕ್ಕೆ ಆಗುತ್ತಿಲ್ಲ ಅನ್ನುವುದಾದರೆ ಹುಣಸೆ ಹಣ್ಣಿನ ಮರ ಇದ್ದರೆ ನೀವು ಆ ಹುಣಸೆ ಹಣ್ಣಿನ ಮರದ ಸೊಪ್ಪನ್ನು ಕೂಡ ಬಳಸಿ ಅದನ್ನು ನೀರಿನಲ್ಲಿ ಬೇಯಿಸಿ ನೀರನ್ನು ತೆಗೆದು ಆ ಒಂದು ಹುಣಸೆಹಣ್ಣಿನ ಸೊಪ್ಪನ್ನು ಕೂಡ ಪ್ಯಾಕ್ ಹಾಕಬಹುದು. ಅಂದರೆ ನೋವಾದ ಭಾಗದ ಮೇಲೆ ಸೊಪ್ಪನ್ನು ಅಂದರೆ ಸ್ವಲ್ಪ ಬಿಸಿ ಇರಬೇಕು ಅದರ ಶಾಖವನ್ನು ನೀವು ಉಳುಕಿದ ಜಾಗಕ್ಕೆ ಶಾಖ ನೀಡುವ ಮುಖಾಂತರ ಆ ಉಳುಕನ್ನು ನಿವಾರಣೆ ಮಾಡಿಕೊಳ್ಳಬಹುದು.ಹುಣಸೆ ಹಣ್ಣು ಮಾತ್ರ ಅಲ್ಲ ನುಗ್ಗೆ ಸೊಪ್ಪಿನಿಂದ ಕೂಡ ನೀವು ಈ ಉಳುಕನ್ನು ನಿವಾರಿಸಿಕೊಳ್ಳಬಹುದು. ಹೇಗೆ ಎಂದರೆ ಈ ಉಳುಕಾದ ಭಾಗಕ್ಕೆ ನುಗ್ಗೆ ಸೊಪ್ಪನ್ನು ಹಾಕಿ ಕಟ್ಟಬೇಕು ಅಂದರೆ ನುಗ್ಗೆ ಸೊಪ್ಪು ಬೇಯಿಸಿದಾಗ ಅದು ಬಿಸಿಯಲ್ಲೆ ಇರಬೇಕು ಅದನ್ನು ನೀವು ನೋವಾದ ಭಾಗಕ್ಕೆ ಇಟ್ಟು. ಅದರ ಮೇಲೆ ಒಂದು ಕಾಟನ್ ಬಟ್ಟೆಯನ್ನು ಕಟ್ಟಬೇಕು. ಈ ರೀತಿ ಕಟ್ಟುವುದರಿಂದ ಆ ಒಂದು ನೋವು ಬೇಗನೆ ನಿವಾರಣೆಯಾಗುತ್ತದೆ

ನಮ್ಮ ಪೂರ್ವಿಕರು ಉಳುಕಿದಾಗ ಆ ಒಂದು ಉಳುಕು ತೆಗೆಯುವ ಮುಖಾಂತರ ಸ್ವಲ್ಪ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನರಗಳನ್ನು ಸರಿಯಾಗಿ ಕೂರಿಸುತ್ತಿದ್ದರು. ಆಗ ಈ ನೋವಾದ ಭಾಗ ಸರಿಯಾಗುತ್ತಿತ್ತು ಉಳುಕು ಕೂಡ ನಿವಾರಣೆಯಾಗುತ್ತಿತ್ತು. ಇನ್ನು ಉಳುಕಿದ ಕೂಡಲೆ ಅದರ ಮೇಲೆ ಹರಳೆಣ್ಣೆಯನ್ನು ಹಾಕಿ ಸ್ವಲ್ಪ ಮಸಾಜ್ ಮಾಡಬೇಕು ಈ ರೀತಿ ಮಾಡುವುದರಿಂದ ಕೂಡ ಉಳುಕು ಬೇಗನೆ ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *