Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಕಷ್ಟಗಳು ಪರಿಹಾರವವಾಗಬೇಕು ಮತ್ತು ನಿಮ್ಮ ಮೇಲೆ ಶನಿದೇವರ ಅನುಗ್ರಹ ಆಗಬೇಕೆಂದರೆ ಪ್ರತೀ ಶನಿವಾರ ಈ ಕೆಲಸವನ್ನು ಮಾಡಿ !!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಶನಿದೇವನ ಆಶೀರ್ವಾದವನ್ನು ಪಡೆಯಲು ನೀವು ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಹಾಗೂ ಯಾವ ಕೆಲಸಗಳನ್ನು ಶನಿವಾರದಂದು ಮಾಡಬೇಕು ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಸಾಮಾನ್ಯವಾಗಿ ಎಲ್ಲರಿಗೂ ಕೂಡ ಶನಿದೇವನ ಅನುಗ್ರಹ ಆಗುವುದಿಲ್ಲ. ಶನಿದೇವನ ಅನುಗ್ರಹವನ್ನು ಪಡೆಯಲು ಯಾವ ಕೆಲಸಗಳನ್ನು ಮಾಡಬೇಕು ಹೇಗೆ ಮಾಡಬೇಕು ಯಾವ ಕೆಲಸಗಳನ್ನು ಮಾಡಿದರೆ ಕೃಪೆಗೆ ಪಾತ್ರರಾಗುತ್ತಾರೆ ಮಾಹಿತಿಯನ್ನು  ಲೇಖನದಲ್ಲಿ ತಿಳಿಯೋಣ.

ಸಾಮಾನ್ಯವಾಗಿ ಶನಿವಾರ ವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಆದರೆ ಇದು ನಿಜವಲ್ಲ.ಶನಿವಾರ ನ್ಯಾಯದ ದೇವರಾದ ಶನಿದೇವನಿಗೆ ಅರ್ಪಿಸಲಾದ ದಿನ ಶನಿ ಯಾವಾಗಲೂ ಜನರಿಗೆ ಕೆಟ್ಟದ್ದನ್ನೂ ಮಾಡುವುದಿಲ್ಲ ಒಳಿತನ್ನು ಕೂಡ ಮಾಡುತ್ತಾನೆ ನಾವು ಮಾಡಿದಂತಹ ಕರ್ಮಗಳ ಮೇಲೆ ಆಧಾರಿತವಾಗಿದೆ ಒಳಿತನ್ನು ಮಾಡುವವರಿಗೆ ಶನೇಶ್ವರ ಸಂಪತ್ತು ಸಮೃದ್ಧಿ ಮತ್ತು ಸಂತೋಷವನ್ನು ನೀಡುತ್ತಾನೆ ಕೆಲವೊಂದು ಒಳ್ಳೆಯ ಕೆಲಸಗಳನ್ನು ಮಾಡಿದರೆ ಶನೇಶ್ವರನ ಆಶೀರ್ವಾದವನ್ನು ಪಡೆಯಬಹುದು.

ಹಾಗಾದರೆ ಕೆಲಸಗಳು ಯಾವುವು ಎಂದರೆ ಮೊದಲನೆಯದಾಗಿ ನೀವು ನಿಮ್ಮ ಮನೆಯ ಹತ್ತಿರ ಯಾರಾದರೂ ಬಂದರೆ ನಿಮ್ಮ ಕೈಯಲ್ಲಾದಷ್ಟು ಸಹಾಯವನ್ನು ಮಾಡಿ ಆದರೆ ಅವರನ್ನು ಹಾಗೆಯೇ ಕಳಿಸಬೇಡಿ .ಹೀಗೆ ಮಾಡಿದರೆ ನೀವು ಶನಿ ದೇವರ ಕೃಪೆಗೆ ಪಾತ್ರರಾಗಬಹುದು.ಹಾಗೆಯೇ ಶನಿವಾರದ ದಿನದಂದು ನೀವು ಕಪ್ಪು ಶ್ವಾನಕ್ಕೆ ನಿಮ್ಮ ಮನೆಯಲ್ಲಿ ತಯಾರಿಸಿದಂತಹ ಆಹಾರವನ್ನು ನೀಡಿ ಹಾಗೂ ಮನೆಯಲ್ಲಿ ಆಹಾರ ಸಿದ್ಧವಾಗದ್ದಿದ್ದರೆ ಹೊರಗಡೆಯ ತಿಂಡಿಯನ್ನು ಕೂಡ ನೀಡುವುದರಿಂದ  ಯಾವಾಗಲೂ ಶನಿ ದೇವರ ಅನುಗ್ರಹ ಇರುತ್ತದೆ.

ಹಾಗೂ ಎಷ್ಟೇ ಕಷ್ಟ ಬಂದರೂ ಕೂಡ ಶನಿದೇವನ ನಮ್ಮನ್ನು ಕಾಪಾಡುತ್ತಾನೆ. ಹಾಗೆಯೇ ಶನಿವಾರದ ದಿನ ನೀವು ಒಳ್ಳೆಯ ಕೆಲಸಕ್ಕೆ ಹೋಗುವಾಗ ಕಪ್ಪು ಬಟ್ಟೆಯನ್ನು ಧರಿಸುವುದು ಒಳ್ಳೆಯದು ಹಾಗೂ ಶನಿವಾರ ದಿನ ಪಕ್ಷಿಗಳಿಗೆ ನೀವು  ಆಹಾರವಾಗಿ ನೀಡಿದರೆ ನಿಮಗೆ ಶನಿದೇವರ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಕೂಡ ಇರುತ್ತದೆ.ಹಾಗೂ ಕಪ್ಪು ಉದ್ದನ್ನು ದೇವಸ್ಥಾನಕ್ಕೆ ದಾನಮಾಡಿದರೆ ತುಂಬಾನೆ ಒಳ್ಳೆಯದು. ಶನಿವಾರದ ದಿನದಂದು ಪಕ್ಷಿಗಳಿಗೆ ಆಹಾರ ನೀಡುವುದರಿಂದ ಶನಿಯ ನಕಾರತ್ಮಕ ಪರಿಣಾಮಗಳು ನಿಮ್ಮ ಮೇಲೆ ಆಗುವುದಿಲ್ಲ ಹಾಗೂ ಶನಿ ದೇವರ ಅನುಗ್ರಹ  ನಿಮ್ಮ ಮೇಲೆ ಉಂಟಾಗುತ್ತದೆ.

ಇನ್ನು ಶನಿದೇವರ ಸಾಡೆಸಾತ್ ದೋಷವನ್ನು ನಿವಾರಿಸಲು ಅಶ್ವತ್ಥ ಮರವನ್ನು ಏಳು ಸುತ್ತು ಪ್ರದಕ್ಷಿಣೆ ಹಾಕಬೇಕುಹೇಗೆ ಪ್ರದಕ್ಷಿಣೆಯನ್ನು ಮಾಡುವಾಗ ಓಂ ಶನೇಶ್ವರಾಯ ನಮಃ ಎನ್ನುವ ಮಂತ್ರವನ್ನು ಹೇಳಿಕೊಂಡು ಪ್ರದಕ್ಷಿಣೆಯನ್ನು ಮಾಡಿದರೆ ಶನಿದೇವನ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ.ಶನಿಯ ಕೆಟ್ಟ ಕಣ್ಣನ್ನು ದೂರ ಮಾಡಲು ಪ್ರತಿ ಶನಿವಾರ ಹನುಮಾನ್ ಚಾಲೀಸ್ ಪಠಿಸಬೇಕು.ಶನಿವಾರದಂದು ನೀವೇನಾದರೂ ಮುಖ್ಯ ಕೆಲಸಕ್ಕೆಹೋಗುತ್ತಿದ್ದರೆ ನೀವು ಕಪ್ಪು ಬಟ್ಟೆ ಧರಿಸಿಕೊಂಡು ಹೋದರೆ ಶನಿಯ ಪ್ರಭಾವ ನಿಮ್ಮ ಮೇಲೆ ಯಾವಾಗಲೂ ಒಳ್ಳೆಯದಾಗಿರುತ್ತದೆ.

ಶನಿ ದೋಷ ಮತ್ತು ಸಾಡೆಸಾತ್ ದೋಷವನ್ನು ನಿವಾರಿಸಲು ನೀವು ಓಂ ಶನೇಶ್ವರಾಯ ನಮಃ ಎನ್ನುವ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ರೀತಿಯಾಗಿ ನೀವು ಮಾಡಿದರೆ ಶನಿ ದೇವರ ಅನುಗ್ರಹವನ್ನು ಪಡೆಯಬಹುದು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಎಂದು ಸಂಪ್ರದಾಯದ ಆಚಾರ-ವಿಚಾರಗಳನ್ನು ಲೈಕ್ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *