ನಿಮ್ಮ ಕಷ್ಟಗಳಿಂದ ಮುಕ್ತರಾಗಲು ಚಾಣಕ್ಯನ ಈ ಮಾತುಗಳನ್ನು ಯಾವತ್ತು ಮರಿಯಬೇಡಿ!!!!

23

ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಯಾವಾಗಲೂ ನೀವು ನಿಮ್ಮ ಮನಸ್ಸಿನಲ್ಲಿ ನೆನಪಿನಲ್ಲಿ ಇಟ್ಟುಕೊಂಡರೆ ಈ ಜೀವನದ ಸೂತ್ರ ನಿಮ್ಮನ್ನು ಬದಲಾಯಿಸುವುದು ಖಚಿತ.

ಹಾಗೆ ಈ ಕೆಲವು ಸೂತ್ರಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಿದರೆ ನಿಮ್ಮ ಜೀವನ ಸಾರ್ಥಕ ವಾಗುವುದರ ಜತೆಗೆ ನೀವು ಅಂದುಕೊಂಡಂತೆ ನೀವು ಬದುಕಬಹುದು.

ಹಾಗಾದರೆ ಚಾಣಕ್ಯರು ಹೇಳಿರುವ ಈ ಮಾತುಗಳು ಯಾವುದು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಾಗಿರುವ ಆ ಸೂತ್ರಗಳು ಯಾವುದು ಎಂಬುದನ್ನು ತಿಳಿಸುತ್ತೇನೆ ವೀಕ್ಷಕರೇ ತಪ್ಪದೇ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೂ ಕೂಡ ಚಾಣಕ್ಯರ ಈ ಸೂತ್ರಗಳು ಇಷ್ಟವಾಗಿದ್ದಲ್ಲಿ ಮಾಹಿತಿಗೆ ತಪ್ಪದೇ ಲೈಕ್ ಮಾಡಿ.

ಹೌದು ಜೀವನವೆಂದರೆ ಅದು ಕಷ್ಟ ಸುಖಗಳ ಸಾಗರ ಇಲ್ಲಿ ನಾವು ಹುಟ್ಟಿದಾಗಿನಿಂದಲೂ ಸಾಯುವವರೆಗೂ ಏನನ್ನಾದರೂ ತಿಳಿದುಕೊಳ್ಳುತ್ತಲೇ ಇರುತ್ತೇನೆ ಪ್ರತಿಯೊಂದು ದಿನವೂ ಕೂಡ ಹೊಸ ಹೊಸ ಪಾಠಗಳನ್ನು ತಿಳಿಸುತ್ತದೆ

ಹಾಗೆ ಈ ಪಾಠಗಳನ್ನೆಲ್ಲ ಅರಿತು ಅವುಗಳನ್ನೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಬದಲಾಯಿಸಿಕೊಂಡು ಮುಂದೆ ಸಾಗಿದರೆ ಮುಂದಿನ ಜೀವನ ನೀವು ಅಂದುಕೊಂಡ ಹಾಗೆ ಇರುತ್ತದೆ.

ಮನುಷ್ಯನ ಅಂತ್ಯಕ್ರಿಯೆಗೆ ಹೋಗುವಾಗ ಆತನ ಅಂತಿಮ ಪಯಣ ಅಂತ ತಿಳಿದು ಹೋಗಬೇಡಿ .ಅಂತ್ಯಕ್ರಿಯೆ ಗೆಂದು ನೀವು ಹೋದಾಗ ಆ ವ್ಯಕ್ತಿ ನಿಮಗೆ ಒಂದು ಪಾಠವನ್ನು ತಿಳಿಸುತ್ತಿರುತ್ತಾರೆ ಜೀವನದ ಸಾರವನ್ನು ಸಾಗುತ್ತಿರುತ್ತಾನೆ ಅದನ್ನು ಅರಿತು ಮುಂದೆ ಸಾಗಿ ಜೀವನ ಬಂಗಾರವಾಗುತ್ತದೆ ನೆಮ್ಮದಿಯ ಸಾಗರವಾಗುತ್ತದೆ.

ಬೇಸಿಗೆಯಲ್ಲಿ ಸೂರ್ಯನನ್ನು ನಿಂದಿಸುವ ಜನ ಮಳೆಗಾಲದಲ್ಲಿ ಮಳೆಯನ್ನು ನಿಂದಿಸುತ್ತಾರೆ ಇಂತಹ ಜನರು ಜನರನ್ನು ಕೂಡ ಅವಶ್ಯಕತೆಗೆ ಬಳಸಿಕೊಂಡು ಬೇಡವಾದಾಗ ದೂರ ಮಾಡಿಕೊಳ್ಳುತ್ತಾರೆ ನಿಂದಿಸುತ್ತಾರೆ. ಈ ಸ್ವಾರ್ಥ ಬದುಕಿನಲ್ಲಿ ಏನಿದೆ ನಿಸ್ವಾರ್ಥತೆಯಿಂದ ಬದುಕಿ.

ನಿಮ್ಮ ಜೀವನದಲ್ಲಿ ಒಳ್ಳೆಯ ವ್ಯಕ್ತಿಗಳು ಯಾರಾದರೂ ಇದ್ದರೆ ಅವರು ತಪ್ಪು ಮಾಡಿದಾಗ ಅವರನ್ನು ದೂರ ಮಾಡಿಕೊಳ್ಳಬೇಡಿ ಯಾಕೆ ಅಂದರೆ ಒಂದು ಬೆಲೆ ಬಾಳುವ ರತ್ನ ಕೊಚ್ಚಿಯಲ್ಲಿ ಬಿದ್ದರು ಕೂಡ ಅದರ ಬೆಲೆ ಕಡಿಮೆಯಾಗುವುದಿಲ್ಲ.

ಹಾಗೆ ಕೋಪವೆಂಬುದು ಒಂಟಿಯಾಗೇ ಬರುತ್ತದೆ ಆದರೆ ಅದು ಹೋಗುವಾಗ ನಿಮ್ಮಲ್ಲಿರುವ ಒಳ್ಳೆಯ ತನವನ್ನು ಹೊತ್ತುಕೊಂಡು ಹೋಗುತ್ತದೆ ಅದೇ ತಾಳ್ಮೆ ಎಂಬುದು ಕೂಡ ಒಂಟಿಯಾಗೇ ಬರುತ್ತದೆ ಆದರೆ ಅದು ನಿಮಗೆ ಎಲ್ಲವನ್ನೂ ಕೂಡ ತಂದುಕೊಡುತ್ತದೆ.

ನೀವು ಅಂದುಕೊಳ್ಳಲು ತ್ತಿರಬಹುದು ಈ ಸಮಾಜ ಯಾಕೆ ಇನ್ನೂ ಬದಲಾಗುತ್ತಿಲ್ಲ ವೆಂದು ಯಾಕೆ ಅಂದರೆ ಬಡವರಿಗೆ ಧೈರ್ಯವಿಲ್ಲ ಮಾಧ್ಯಮದವರಿಗೆ ಸಮಯವಿಲ್ಲ ಆದರೆ ಶ್ರೀಮಂತರಿಗೆ ಅದರ ಅವಶ್ಯಕತೆಯೇ ಇರುವುದಿಲ್ಲ .

ಯಾವತ್ತಿಗೂ ನೀವು ನಿಮ್ಮ ಜೀವನವನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ ಯಾಕೆ ಅಂದರೆ ಸೂರ್ಯ ಚಂದ್ರ ಇಬ್ಬರೂ ಆದರೆ ಅವರು ಹೊಳೆಯುವುದು ಮಾತ್ರ ಅವರ ಸಮಯ ಬಂದಾಗ ಅದೇ ರೀತಿಯಲ್ಲಿ ನಿಮ್ಮ ಜೀವನದಲ್ಲಿಯೂ ಕೂಡ ನಿಮಗೆ ಬೇಕಾಗಿರುವ ಸಮಯ ಬಂದೇ ಬರುತ್ತದೆ.

ಜೀವನದಲ್ಲಿ ನಿಮ್ಮನ್ನು ನೋಡಿ ಉರ್ಕೊಳೊ ಜನರನ್ನು ನೀವು ನಿಂದಿಸದಿರಿ ಯಾಕೆಂದರೆ ಅವರಿಗೆ ನಿಮ್ಮ ಸಾಮರ್ಥ್ಯದ ಬಗ್ಗೆ ತಿಳಿದಿರುತ್ತದೆ. ಜ್ಞಾನಿಗೆ ಹೇಳಬಹುದು ಅಜ್ಞಾನಿಯೂ ಹೇಳಬಹುದು ಆದರೆ ಅಭಿಮಾನಿಗೆ ಹೇಳಲು ಸಾಧ್ಯವಾಗುವುದಿಲ್ಲ ಅಂತಹವರಿಗೆ ಸಮಯವೇ ತಕ್ಕ ಪಾಠವನ್ನು ಕಲಿಸುತ್ತದೆ.

ಕೆಲವೊಂದು ಸಮಯದಲ್ಲಿ ಮೌನವಾಗಿ ಇರಬೇಕಾಗುತ್ತದೆ ಆ ಮೌನ ನಿಮಗೆ ದೊಡ್ಡ ಬದಲಾವಣೆಯನ್ನು ತಂದು ಕೊಡುವುದರಲ್ಲಿ ಸಂಶಯವೇ ಇಲ್ಲ. ಯಾವ ವ್ಯಕ್ತಿ ನಿಮ್ಮ ಸಂತೋಷಕ್ಕಾಗಿ ಸೋಲುತ್ತಾನಾ ಅಂತಹವನ ಎದುರು ನೀವು ಯಾವತ್ತಿಗೂ ಗೆಲ್ಲುವುದಕ್ಕೆ ಸಾಧ್ಯಾನೇ ಇಲ್ಲ.

LEAVE A REPLY

Please enter your comment!
Please enter your name here