ನಿಮ್ಮ ಕಣ್ಣು ಅಥವಾ ಕಣ್ಣಿನ ರೆಪ್ಪೆ ಹಾರಿದರೆ ಏನಾಗುತ್ತೆಂದು ಗೊತ್ತಾ…?

35

ಸಾಮಾನ್ಯವಾಗಿ ಶುಭ ಅಶುಭ ಶಕುನ ಇವೆಲ್ಲವೂ ಜರುಗುವುದು ಮನುಷ್ಯನ ಕೈಯಲ್ಲಿ ಇರುವುದಿಲ್ಲ ಅವೆಲ್ಲವೂ ವಿಧಿಯ ಆಟ ಆದರೆ ನಮ್ಮ ಹಿರಿಯರು ಕಣ್ಣುಗಳು ಬಡಿದುಕೊಂಡರೆ ಅದರ ಆಧಾರದ ಮೇಲೆ ಶುಭವಾಗುತ್ತೆ ಅಂತ ಹೇಳ್ತಿರ್ತಾರೆ .

ಇದನ್ನು ಅವರ ಅನುಭವದ ಮಾತುಗಳು ಅಂತ ಕೂಡ ಹೇಳ್ತಾರೆ, ಹೇಗೆ ನಮ್ಮ ಭಾರತ ದೇಶದಲ್ಲಿ ಬಲಗಣ್ಣು ಬಡಿದರೆ ಎಡಗಣ್ಣು ಬಡಿದರೆ ಅದಾಗುತ್ತದೆ ಅಂತ ಹೇಳ್ತಾರೋ ಬೇರೆ ಬೇರೆ ದೇಶಗಳಲ್ಲಿ ಕೂಡ ಇದೇ ರೀತಿ ಅವರ ಶಾಸ್ತ್ರದ ಪ್ರಕಾರ ಒಂದಿಷ್ಟು ಕಾರಣಗಳನ್ನು ಕೂಡ ಹೇಳ್ತಾರೆ.

ಹಾಗಾದರೆ ಇಂದಿನ ಮಾಹಿತಿಯಲ್ಲಿ ಅದನ್ನು ತಿಳಿಯೋಣ, ನಿಮ್ಮ ಕೂಡ ಮಾಹಿತಿಯನ್ನು ತಿಳಿದು ಇದನ್ನು ಪ್ರತಿಯೊಬ್ಬರಿಗೂ ಕೂಡ ಮಿಸ್ ಮಾಡದೇ ಶೇರ್ ಮಾಡಿ ಹಾಗೂ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಆಚಾರ ವಿಚಾರ ವೆಂಬ ಹೆಸರಿನಲ್ಲಿ ನಮ್ಮ ಭಾರತ ದೇಶದಲ್ಲಿ ಈ ಪದ್ಧತಿ ಪದ್ಧತಿ ಅಂತ ಪಾಲಿಸುತ್ತಾನೆ ಇರ್ತಾರೆ ಇನ್ನೂ ಹೆಣ್ಣು ಮಕ್ಕಳಿಗೆ ಎಡಗಣ್ಣು ಬಡಿದರೆ ಅದು ಶುಭ ಬಲಗಣ್ಣು ಬಡಿದರೆ ಅದು ಅಶುಭ ಅಂತ ಹೇಳುವುದರೊಂದಿಗೆ, ಗಂಡು ಮಕ್ಕಳಲ್ಲಿ ಬಲಗಣ್ಣು ಪಡೆದುಕೊಂಡರೆ ಶುಭವಾಗುತ್ತೆ ಎಡಗಣ್ಣು ಬಡೆದುಕೊಂಡರೆ ಹುಷಾರಾಗಿರಬೇಕು ಕೆಟ್ಟದ್ದು ಏನಾದರೂ ಸಂಭವಿಸಬಹುದು ಅಂತ ಕೂಡ ಹೇಳ್ತಾರೆ.

ಇದೇ ರೀತಿಯಲ್ಲಿ ಅಮೆರಿಕ ಮತ್ತು ಚೀನಾಗಳಲ್ಲಿ ಕೂಡ ಕೆಲವೊಂದು ಮಾತುಗಳನ್ನು ಹೇಳ್ತಾರಂತೆ ಅದೇನೆಂದರೆ ಚೀನಿಯರು ತಮ್ಮ ಶಾಸ್ತ್ರದ ಪ್ರಕಾರ ಬಲಗಣ್ಣು ಬಡೆದುಕೊಂಡರೆ ತಮ್ಮ ಸ್ನೇಹಿತರ ಮನೆಗೆ ಔತಣದ ಆಹ್ವಾನ ಬರಬಹುದು ಎಂದು ನಂಬಿದರೆ ಎಡಗಣ್ಣು ಬಡಿದರೆ ತಮ್ಮ ಮನೆಗೆ ಯಾವುದಾದರೂ ದೊಡ್ಡ ವ್ಯಕ್ತಿಗಳ ಆಗಮನ ಗಬಹುದು ಎಂದು ನಂಬುತ್ತಾರೆ.

ಇದೇ ವಿಚಾರವನ್ನು ಅಮೆರಿಕನ್ನರು ಹೇಗೆ ನಂಬ್ತಾರೆ ಅಂದ್ರೆ ಎಡಗಣ್ಣು ಬೆಳೆದುಕೊಂಡರೆ ಬಂಧು ಬಳಗದವರು ಮನೆಗೆ ಆಗಮಿಸುತ್ತಾರೆ ಅಥವಾ ಬಲಗಣ್ಣು ಪಡೆದುಕೊಂಡರೆ ಆ ಮನೆಯಲ್ಲಿ ಮಗು ಜನಿಸುತ್ತದೆ ಎಂಬ ವಿಚಾರಗಳನ್ನು ನಂಬುತ್ತಾರೆ.

ಹೀಗೆ ಒಂದೊಂದು ದೇಶದಲ್ಲಿ ಒಂದೊಂದು ಪದ್ಧತಿ ಶಾಸ್ತ್ರವನ್ನು ಅನುಸರಿಸುವುದರಿಂದ ಒಬ್ಬೊಬ್ಬರು ಒಂದೊಂದು ಅಂತಾರೆ ಆದರೆ ವೈಜ್ಞಾನಿಕವಾಗಿ ಕಾರಣವನ್ನು ಹೇಳಬೇಕಾದರೆ ಈ ರೀತಿ ಕಣ್ಣು ಪಡೆದುಕೊಳ್ಳುವುದರಿಂದ ಕಣ್ಣಿನಲ್ಲಿ ಯಾವುದಾದರೂ ಸಮಸ್ಯೆ ಇರಬಹುದು ಅಂದುಕೊಳ್ಳಬೇಕು.

ಅಥವಾ ನಮ್ಮ ದೇಹದಲ್ಲಿ ಯಾವುದಾದರೂ ಪೋಷಕಾಂಶಗಳ ಕೊರತೆ ಇದ್ದಾಗ ಅದನ್ನು ನಮ್ಮ ದೇಹ ತಿಳಿಸುವುದಕ್ಕೆ ಈ ರೀತಿ ಕಣ್ಣುಗಳ ರೆಪ್ಪೆ ಅನ್ನು ಬಡಿಸುವುದರ ಮುಖಾಂತರ ಸೂಚನೆ ನೀಡುತ್ತಾ ಇರುತ್ತೆ.

ಕಣ್ಣು ಕೂಡ ಸೂಕ್ಷ್ಮವಾದ ಅಂಗವಾಗಿದ್ದು ಧೂಳು ಪ್ರದೂಷಣೆ ಮಾಲಿನ್ಯವಿರುವ ಪ್ರದೇಶಗಳಲ್ಲಿ ಕಲುಷಿತ ವಾತಾವರಣದಿಂದಾಗಿ ಅಥವಾ ಕಣ್ಣಿಗೆ ಧೂಳು ಬಿದ್ದಾಗ ಕಣ್ಣಿಗೆ ಸಂಬಂಧಪಟ್ಟ ಯಾವುದಾದರೂ ಸಮಸ್ಯೆಗಳಿದ್ದರೆ, ಈ ರೀತಿ ಕಣ್ಣುಗಳು ಬಡೆದುಕೊಳ್ಳುತ್ತವೆ. ಒಂದು ದಿನಕ್ಕಿಂತ ಹೆಚ್ಚು ಸಮಯ ಕಣ್ಣು ಬಡೆದುಕೊಂಡರೆ ಅದನ್ನು ಕಣ್ಣಿನ ಆಸ್ಪತ್ರೆಗೆ ತೋರಿಸುವುದು ಉತ್ತಮ.

ಶಾಸ್ತ್ರ ಸಂಪ್ರದಾಯ ಅಂತಹ ನಂಬಿಕೊಂಡು ಕುಳಿತರೆ ಒಂದು ಸಮಸ್ಯೆ ಹೋಗಿ ಇನ್ನೂ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ ಆದ ಕಾರಣ ಶಾಸ್ತ್ರಗಳನ್ನು ಒಂದು ಲಿಮಿಟ್ನಲ್ಲಿ ನಂಬೋಣ ಅದು ನಮ್ಮ ಆರೋಗ್ಯಕ್ಕೆ ಮಾರಕವಾಗಬಾರದು ಅಷ್ಟೇ.

ನಿಮಗೂ ಈ ಒಂದು ಮಾಹಿತಿ ಉಪಯುಕ್ತ ಆಗಿದೆ ಹಾಗೂ ಇಂಟರೆಸ್ಟಿಂಗ್ ಆಗಿತ್ತು ಅಂದಲ್ಲಿ ಬೇರೆ ಅವರಿಗೂ ಇದನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here