ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮ ಅಂಗಾಂಗಗಳಲ್ಲಿ ಈ ಕಣ್ಣು ಕೂಡ ಒಂದು ಮತ್ತು ಪಂಚೇಂದ್ರಿಯಗಳಲ್ಲಿ ಕಣ್ಣು ಕೂಡ ಸೇರಿಕೊಂಡಿದೆ ಆದ ಕಾರಣ ಈ ಕಣ್ಣು ನಮಗೆ ಅದೆಷ್ಟು ಅವಶ್ಯಕವಾಗಿದೆ ಎಂಬುದನ್ನು ನೀವೆ ಅರ್ಥ ಮಾಡಿಕೊಳ್ಳಿ.ಅದರಲ್ಲಿಯೂ ಕಣ್ಣಿಲ್ಲದಿದ್ದರೆ ಆ ಒಂದು ಕಷ್ಟವನ್ನು ಅನುಭವಿಸುವವರಿಗೆ ಮಾತ್ರ ಅದರ ಸಂಕಟ ತಿಳಿದಿರುತ್ತದೆ ಹಾಗೆಯೇ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದ್ದು ಕಣ್ಣುಗಳಿಗೆ ಯಾವುದೇ ರೀತಿಯ ಸೋಂಕು ಆಗದೇ ಇರುವ ಹಾಗೆ ನೋಡಿಕೊಳ್ಳಬೇಕು ಮತ್ತು ಪ್ರತಿ ದಿನ ನಾವು ನಮ್ಮ ಕಣ್ಣುಗಳನ್ನು ನೀರಿನಿಂದ ಸ್ವಚ್ಛ ಪಡಿಸಿಕೊಳ್ಳುತ್ತಾ ಇರಬೇಕಾಗುತ್ತದೆ.
ಈ ಕಣ್ಣುಗಳ ಸೃಷ್ಟಿ ಅದೆಷ್ಟು ಅದ್ಭುತ ಅಲ್ವಾ ನಮ್ಮ ಈ ಎರಡು ಸುಂದರ ಕಣ್ಣುಗಳಿಂದಲೇ ನಾವು ಈ ಸುಂದರ ಪ್ರಪಂಚವನ್ನು ಕಾಣಲು ಸಾಧ್ಯ ನಾವು ಸಾಮಾನ್ಯವಾಗಿ ಆಚೆ ಹೋದಾಗ ಕಣ್ಣುಗಳಿಗೆ ದೂಳು ಬೀಳುವುದು ಅಥವಾ ಕಣ್ಣಿನಿಂದ ನೀರು ಬರುವುದು ಇದೆಲ್ಲ ಸಹಜವಾಗಿರುತ್ತದೆ ಹಾಗಾದರೆ ಕಣ್ಣುಗಳಿಗೆ ಧೂಳು ಬಿದ್ದಾಗ ಕಣ್ಣು ಉರಿಯುತ್ತಿರುವಾಗ ಏನು ಮಾಡಬೇಕು ಇದಕ್ಕಾಗಿ ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ದೊರೆಯುವಂತಹ ಡ್ರಾಕ್ಸ್ ಆಗಲಿ ಅಥವಾ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಅಂಗಡಿಗಳಲ್ಲಿ ದೊರೆಯುವಂತಹ ಯಾವುದೇ ಕಣ್ಣಿಗೆ ಸಂಬಂಧಪಟ್ಟ ಔಷಧಿಗಳನ್ನು ಬಳಸಲು ಹೋಗಬೇಡಿ.
ಪ್ರತಿದಿನ ಕಣ್ಣುಗಳನ್ನು ತಣ್ಣೀರಿನಿಂದ ಸ್ವಚ್ಛ ಪಡಿಸಿಕೊಳ್ಳಿ ಮತ್ತು ಈ ಕಣ್ಣಿನ ಸೂಕ್ಷ್ಮತೆಯ ಬಗ್ಗೆ ನೀವು ಕೆಲವೊಂದು ವಿಚಾರವನ್ನು ತಿಳಿದುಕೊಂಡಿರಬೇಕಾಗುತ್ತದೆ ಹಾಗೆ ಈ ಕಣ್ಣಿನ ಸುತ್ತ ಇರುವಂತಹ ನರಗಳನ್ನು ಕೂಡ ಸೂಕ್ಷ್ಮವಾಗಿ ಇಡುವುದು ನಮ್ಮ ಕರ್ತವ್ಯ,ಈ ಕಣ್ಣಿನ ಸುತ್ತ ಇರುವ ನರಗಳನ್ನು ಸೂಕ್ಷ್ಮವಾಗಿಯೇ ಇಡಬೇಕಾದರೆ ಏನು ಮಾಡಬೇಕು ಅಂದರೆ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಈ ಕಣ್ಣುಗಳ ಸುತ್ತ ಹಚ್ಚಿ ಪ್ರತಿದಿನ ಮೃದುವಾಗಿ ಮಸಾಜ್ ಮಾಡಿಕೊಳ್ಳುತ್ತಾ ಇರಬೇಕು ಇದರಿಂದ ಕಣ್ಣುಗಳ ಸೂಕ್ಷ್ಮತೆ ಹೆಚ್ಚುತ್ತದೆ.
ಕಣ್ಣಿಗೆ ಕಸ ಬಿದ್ದಾಗ ಏನು ಮಾಡಬೇಕು ಅಂದರೆ ಸುಲಭವಾದ ಪರಿಹಾರಗಳನ್ನು ನಿಮಗೆ ತಿಳಿಸಿಕೊಡುತ್ತೇನೆ ಕಣ್ಣಿಗೆ ಕಸ ಬಿದ್ದಿದೆ ಅಂದ ಕೂಡಲೆ, ಯಾರಾದರು ಸಹಾಯದಿಂದ ಕಣ್ಣುಗಳನ್ನು ರೂಪಿಸಿಕೊಳ್ಳಿ ಅಥವಾ ನೀವು ಮನೆಯಲ್ಲಿದ್ದ ರ್ಯಾಕ್ ಒಂದು ಸಣ್ಣನೆಯ ಈರುಳ್ಳಿ ಖಾರ ಇರುವಂತಹ ಈರುಳ್ಳಿಯನ್ನು ತೆಗೆದುಕೊಂಡು ಒಂದು ಕುಟ್ಟಾಣಿಯಲ್ಲಿ ಅಥವಾ ನೆಲದ ಮೇಲೆ ಜಜ್ಜಿ ಇದರಿಂದ ಬರುವಂತಹ ಆಮ್ಲದ ಅಂಶ ನಿಮ್ಮ ಕಣ್ಣಿನಲ್ಲಿ ನೀರನ್ನ ತರಿಸುತ್ತದೆ, ಇದರಿಂದ ಕಣ್ಣುಗಳು ಸ್ವಚ್ಛವಾಗುತ್ತದೆ ಕಣ್ಣಿನಲ್ಲಿ ಬಿದ್ದಿರುವಂತಹ ಕಸುವು ಆಚೆ ಬರುತ್ತದೆ.
ಕಣ್ಣುಗಳಲ್ಲಿ ಕಸ ಬಿದ್ದಾಗ ಕಣ್ಣನ್ನು ಜೋರಾಗಿ ಉಜ್ಜಬೇಡಿ ಇದರಿಂದ ಕಣ್ಣಿನೊಳಗೆ ಇರುವ ಗುಡ್ಡೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಣ್ಣಿನೊಳಗೆ ಧೂಳು ಹೋದಾಗ ಕಸ ಹೋದಾಗ ಕಣ್ಣುಗಳನ್ನು ಉಜ್ಜದೆ ನಮ್ಮ ಕಣ್ಣಿನ ಮೇಲಿನ ರೆಪ್ಪೆಯನ್ನು ಕೆಳಭಾಗದ ರೆಪ್ಪೆಯ ಮೇಲೆ ತಂದು ಇಟ್ಟುಕೊಳ್ಳಬೇಕು ಈ ರೀತಿ ಮಾಡುವುದರಿಂದ ಕಣ್ಣಿನೊಳಗೆ ಕಸುವು ಆಚೆ ಬರುತ್ತದೆ.ನೀವೇನಾದರೂ ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುತ್ತಿದ್ದರೆ ಅಥವಾ ಮೊಬೈಲ್ ಅನ್ನು ಹೆಚ್ಚಾಗಿ ಬಳಸುತ್ತಿದ್ದರೆ, ಎರಡು ಗಂಟೆಗಳಿಗೊಮ್ಮೆ ಒಂದು ಬಟ್ಟೆಯ ಸಹಾಯದಿಂದ ಆ ಬಟ್ಟೆಯನ್ನು ತೇವ ಮಾಡಿಕೊಂಡು, ಕಣ್ಣುಗಳನ್ನು ಮೃದುವಾಗಿ ಒರೆಸಿಕೊಳ್ಳಿ, ಇದರಿಂದ ಕಣ್ಣುಗಳಿಗೆ ಆಯಾಸವಾಗುವುದಿಲ್ಲ.ನೀವು ಪ್ರತಿದಿನ ಎಷ್ಟು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೋ ಅಷ್ಟೆ ನಿಮ್ಮ ದೇಹದ ಬಗ್ಗೆಯೂ ಕಾಳಜಿ ಮಾಡಬೇಕು ಸೂಕ್ಷ್ಮ ಅಂಗಾಂಗಗಳ ಬಗ್ಗೆ ಕೂಡ ಕಾಳಜಿ ವಹಿಸುವುದು ಒಳ್ಳೆಯದು.