ನಿಮ್ಮ ಅಡುಗೆ ಮನೆಯ ಕಸವನ್ನು ಗೊಬ್ಬರ ಮಾಡಿ ..ನಿಮ್ಮ ಮನೆಯಲ್ಲಿಯೇ ಉಪಯೋಗಿಸಬಹದು ಅದು ಹೇಗೆ ಗೊತ್ತಾ …ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ !!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೆಣ್ಣು ಮಕ್ಕಳು ಮನೆಯ ಮುಂದೆ ಇರುವಂತಹ ಸ್ವಲ್ಪ ಜಾಗದಲ್ಲಿ ಪಾಟ್ ಗಳಲ್ಲಿ ಗಿಡವನ್ನು ಬೆಳೆಸುತ್ತಿರುತ್ತಾರೆ. ಇನ್ನು ಕೆಲ ಹೆಣ್ಣುಮಕ್ಕಳಿಗಂತೂ ಗಾರ್ಡನಿಂಗ್ ಮಾಡುವುದರಲ್ಲಿ ಬಹಳಾನೇ ಆಸಕ್ತಿ ಇರುತ್ತದೆ ಅಂತಹವರು ಈ ಒಂದು ಮಾಹಿತಿಯನ್ನು ತಪ್ಪದೇ ತಿಳಿಯಲೇಬೇಕು.

ಯಾಕೆ ಅಂದರೆ ನೀವೇನಾದರೂ ಗಾರ್ಡನಿಂಗ್ ಮಾಡುತ್ತಿದ್ದರೆ ನಿಮ್ಮ ಮನೆಯ ಗಿಡಗಳಿಗೆ ಸುಲಭವಾಗಿ ಗೊಬ್ಬರವನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇನೆ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೂ ಕೂಡ ಈ ಮಾಹಿತಿ ಉಪಯುಕ್ತ ಆಗಿದೆ ಅಂದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಹೌದು ಸಾಮಾನ್ಯವಾಗಿ ನಾವು ಮನೆಯಲ್ಲಿ ತರಕಾರಿಗಳ ತ್ಯಾಜ್ಯವನ್ನು ತೆಂಗಿನ ಕಾಯಿಯ ಸಿಪ್ಪೆ, ಕಡಲೆಕಾಯಿ ಬೀಜ ,ಮತ್ತು ಮನೆಯ ಮುಂದೆ ಒಣಗಿ ಬಿದ್ದಿರುವ ಎಲೆಗಳನ್ನು ಇವನ್ನೆಲ್ಲ ನೋಡ್ತಾನೆ ಇರ್ತೇವೆ.

ಇವುಗಳಲ್ಲಿಯೇ ನಾವು ಸಸಿಗಳಿಗೆ ಬೇಕಾಗಿರುವ ಗಿಡಗಳಿಗೆ ಬೇಕಾಗಿರುವ ಮುಖ್ಯವಾದ ಪೋಷಕಾಂಶಗಳನ್ನು ಕಾಣಬಹುದು ಹೇಗೆ ಅಂದರೆ ತೆಂಗಿನ ನಾರು ಕಡಲೆಕಾಯಿ ಬೀಜ ಒಣಗಿದ ಎಲೆ ಮತ್ತು ಮರದ ಕೆಲಸ ಮಾಡುವಾಗ ಬಿದ್ದ ಪುಡಿಗಳು ಇವನ್ನೆಲ್ಲ ಬ್ರೌನ್ಸ್ ಅಂತ ಕರೆದರೆ ಹಸಿರು ತರಕಾರಿಗಳು ಸೊಪ್ಪು ಇವುಗಳ ತ್ಯಾಜ್ಯವನ್ನು ಗ್ರೀನ್ಸ್ ಅಂತ ಕರೆಯುತ್ತೇವೆ.

ಬ್ರೌನ್ಸ್ ನಲ್ಲಿ ಹೆಚ್ಚು ಕಾರ್ಬನ್ ಅಂಶ ಇದ್ದರೆ ಗ್ರೀನ್ಸ್ ವ್ಯರ್ಥ ಪದಾರ್ಥಗಳಲ್ಲಿ ನೈಟ್ರೋಜನ್ ಇರುತ್ತದೆ, ಈ ಎರಡೂ ತ್ಯಾಜ್ಯ ಪದಾರ್ಥಗಳು ಚೆನ್ನಾಗಿ ಗೊಬ್ಬರವಾಗಿ ಮಾಡಿದರೆ ಇದನ್ನು ಗಿಡಗಳಿಗೆ ಹಾಕುವುದರಿಂದ ಗಿಡಗಳಿಗೆ ಒಳ್ಳೆಯ ಪೋಷಕಾಂಶವೂ ದೊರೆಯುತ್ತದೆ ಹಾಗಾದರೆ ಈ ಬ್ರೌನ್ಸ್ ಮತ್ತು ಗ್ರೀನ್ಸ್ ತ್ಯಾಜ್ಯ ಪದಾರ್ಥಗಳಿಂದ ಹೇಗೆ ಗೊಬ್ಬರ ಮಾಡುವುದು ಎಂಬುದನ್ನು ತಿಳಿಯೋಣ.

ಮೊದಲಿಗೆ ಜ್ಯೂಸ್ ಕುಡಿಯುವ ಬಾಟಲ್ ಆಗಲಿ ಚಾಕೊಲೇಟ್ ಡಬ್ಬ ಗಳಾಗಲಿ ಇಂತಹ ಡಬ್ಬವನ್ನು ತೆಗೆದುಕೊಂಡು ಅರ್ಧಕ್ಕೆ ಕತ್ತರಿಸಿಕೊಳ್ಳಬೇಕು ನಂತರ ಒಂದಾದ ಮೇಲೆ ಒಂದರಂತೆ ಪದರಗಳ ಹಾಗೆ ಗ್ರೀನ್ಸ್ ಮತ್ತು ಬ್ರೌನ್ಸ್ ವೆಸ್ಟ್ ಗಳನ್ನು ಇದರಲ್ಲಿ ತುಂಬಿಕೊಳ್ಳಬೇಕು .

ಹೇಗೆ ಅಂದರೆ ಮೊದಲಿಗೆ ಬ್ರೌನ್ಸ್ ಅಂದರೆ ತೆಂಗಿನಕಾಯಿಯ ನಾರು ಒಣಗಿದ ಎಲೆ ಇವುಗಳನ್ನು ಸ್ವಲ್ಪ ಸ್ವಲ್ಪ ಚಿಕ್ಕದಾಗಿ ಕತ್ತರಿಸಿಕೊಂಡು ಹಾಕಿಕೊಂಡು ನಂತರ ಗ್ರೀನ್ಸ್ ಬೆಸ್ಟ್ ಗಳು ಅಂದರೆ ತರಕಾರಿ ಸಿಪ್ಪೆ ಇಂತಹ ತ್ಯಾಜ್ಯಗಳನ್ನು ಸಣ್ಣದಾಗಿ ಕತ್ತರಿಸಿ ಮತ್ತೊಂದು ಪದರ ಹಾಕಿಕೊಳ್ಳಬೇಕು ಹೀಗೆ ಪೂರ್ತಿಯಾಗಿ ಡಬ್ಬಾ ತುಂಬುವವರೆಗೂ ಹಾಕಿಕೊಂಡು ಅದರ ಮೇಲೆ ಮಣ್ಣನ್ನು ಹಾಕಬೇಕು.

ಡಬ್ಬಕ್ಕೆ ವ್ಯರ್ಥ ಪದಾರ್ಥಗಳನ್ನು ತುಂಬುವಾಗ ಮೊಸರನ್ನ ಒಂದು ಪದರ ಹಾಕಿದರೆ ಇದು ಬೇಗನೆ ಕೊಳೆತು ಗೊಬ್ಬರ ಬೇಗನೆ ಆಗುತ್ತದೆ. ಚಳಿಗಾಲದಲ್ಲಿ ಗೊಬ್ಬರ ಆಗುವುದಕ್ಕೆ ಮೂರು ತಿಂಗಳುಗಳ ಕಾಲ ಬೇಕಾಗುತ್ತದೆ ಬೇಸಿಗೆ ಕಾಲವಾದರೆ ನಲವತ್ತೈದು ದಿನಗಳು ಸಾಕು.

ಈ ರೀತಿ ಡಬ್ಬದಲ್ಲಿ ವ್ಯರ್ಥ ಪದಾರ್ಥಗಳನ್ನು ತುಂಬಿ ಮೇಲೆ ಮಣ್ಣನ್ನು ಹಾಕಿದ ನಂತರ ಇದನ್ನು ಹಾಗೇ ಇಡಿ ನಂತರ ಕೆಳಭಾಗದಲ್ಲಿ ಒಂದು ಪ್ಲೇಟ್ ಅಥವಾ ಬೌಲನ್ನು ಇಡಬೇಕು ಯಾಕೆ ಅಂದರೆ ಈ ಬೇಡದೆ ಇರುವ ಪದಾರ್ಥದಿಂದ ಒಂದು ರೀತಿಯ ನೀರು ಆಚೆ ಬರುತ್ತದೆ ಇದನ್ನು ಗಿಡಗಳಿಗೆ ಹಾಕುವುದರಿಂದ ಗಿಡಗಳಿಗೆ ಒಳ್ಳೆಯ ಪೋಷಕಾಂಶ ದೊರೆಯುತ್ತದೆ.

ಈ ರೀತಿ ಗೊಬ್ಬರವನ್ನು ತಯಾರಿಸಿ ನೀವು ನಿಮ್ಮ ಮನೆಯ ಗಿಡಗಳಿಗೆ ಹಾಕುವುದರಿಂದ ಯಾವ ರಾಸಾಯನಿಕ ಗೊಬ್ಬರದ ಅವಶ್ಯಕತೆ ಇರುವುದಿಲ್ಲ. ನೀವು ಡಬ್ಬದಲ್ಲಿ ತುಂಬಿಟ್ಟಿರುವ ವ್ಯರ್ಥ ಪದಾರ್ಥದ ಮೇಲೆ ಮಣ್ಣು ಹಾಕಿರುತ್ತೀರಿ ಅದರ ಮೇಲೆಯೇ ಒಂದು ಸಸಿಯನ್ನು ನೆಟ್ಟರೆ ಇದು ಬೇಗನೇ ಬೆಳೆದು ಒಳ್ಳೆಯ ಫಲ ನೀಡುತ್ತದೆ ಮತ್ತು ಉತ್ತಮವಾದ ಪೌಷ್ಟಿಕಾಂಶಗಳು ಇದರಲ್ಲಿ ಇರುತ್ತದೆ.

ಈ ರೀತಿ ನೀವು ಮನೆಯಲ್ಲಿ ಬೇಡದೆ ಇರುವ ಪದಾರ್ಥಗಳಿಂದ ಗಿಡಗಳಿಗೆ ಉತ್ತಮವಾಗಿ ಒಳ್ಳೆಯ ಪೋಷಕಾಂಶವುಳ್ಳ ಗೊಬ್ಬರವನ್ನು ಮಾಡಿ ಹಾಕಬಹುದು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಫ್ರೆಂಡ್ಸ್ ಧನ್ಯವಾದ.

Leave a Reply

Your email address will not be published. Required fields are marked *