Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಅಡುಗೆ ಮನೆಯಲ್ಲಿರುವ ಉಪ್ಪಿನಿಂದ ಹೀಗೆ ಮಾಡಿದರೆ ಮೂರೇ ವಾರದಲ್ಲಿ ನಡೆಯುತ್ತೆ ಪವಾಡ !!!!

ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತಿದ್ದರೆ ಅಥವಾ ಸಾಲ ಬಾಧೆ ಹೆಚ್ಚಾಗಿದ್ದರೆ, ನೀವು ಕೊಟ್ಟಂತಹ ಹಣ ವಾಪಸ್ಸು ಬರದೆ ಇದ್ದರೆ ಹಾಗೆಯೇ ಮನೆಯಲ್ಲಿ ಮನೆಯ ಸದಸ್ಯರಲ್ಲಿ ನೆಮ್ಮದಿ ಇಲ್ಲದಿದ್ದರೆ, ಏನೇ ಮಾಡಿದರೂ ಎಷ್ಟೇ ಕಷ್ಟಪಟ್ಟರೂ ಕೂಡ ಮನೆಯಲ್ಲಿ ಇರುವಂತಹ ಸಮಸ್ಯೆಗಳು ಪರಿಹಾರವಾಗುತ್ತ ಇಲ್ಲವಾದರೆ.

ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇನು ಅಂತ. ಹೌದು ನಿಮಗೂ ಕೂಡ ಆರ್ಥಿಕ ಸಂಕಷ್ಟಗಳು ಹೆಚ್ಚಾಗಿದ್ದರೆ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಅಟ್ಟಹಾಸ ಕೂಡ ಹೆಚ್ಚಾಗಿದ್ದರೆ, ಈ ರೀತಿ ಮಾಡಿ ಸುಲಭವಾಗಿ ನಿಮ್ಮ ಮನೆಯ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.

ನೀವು ಈ ಪರಿಹಾರವನ್ನು ಮಾಡೋದಕ್ಕೆ ಕೇವಲ ನಿಮಗೆ ಅವಶ್ಯಕತೆ ಇರುವುದು ಏನು ಅಂದರೆ ಉಪ್ಪು , ಹೌದು ಈ ಉಪ್ಪಿನಿಂದ ಕೇವಲ ಅಡುಗೆಯ ರುಚಿಯನ್ನು ಮಾತ್ರ ಹೆಚ್ಚಿಸುವುದಲ್ಲದೇ ನಿಮ್ಮ ದೃಷ್ಟಿ ದೋಷ ನಿವಾರಣೆ ಮಾಡಬಹುದು,

ಹಾಗೆಯೇ ನಿಮ್ಮ ಮನೆಯಲ್ಲಿರುವಂತಹ ಆರ್ಥಿಕ ಸಂಕಷ್ಟಗಳನ್ನು ಕೂಡ ದೂರ ಮಾಡಿಕೊಳ್ಳಬಹುದು. ನಾವು ಹೇಳುವ ಹಾಗೆ ನೀವು ಮಾಡಿ  ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರದ ದಿನದಂದು ಈ ರೀತಿ ಮಾಡಿದರೆ ನಿಮ್ಮ ಮನೆಯ ಎಲ್ಲ ಸಂಕಷ್ಟಗಳು ಬೇಗನೆ ನಿವಾರಣೆಯಾಗಿ ಬಿಡುತ್ತದೆ.

ಈ ಒಂದು ಪರಿಹಾರವನ್ನು ಮಾಡೋದಕ್ಕೆ ಉಪ್ಪನ್ನು ಬಳಸಬೇಕು ಅಂತ ಹೇಳಿದೆವು, ಆದರೆ ಇದಕ್ಕೆ ಪುಡಿ ಉಪ್ಪನ್ನು ಬಳಸಬಾರದು. ಸಮುದ್ರದ ಉಪ್ಪು ಅಂದರೆ ಕಲ್ಲುಪ್ಪನ್ನು ಬಳಸಿದರೆ ತುಂಬಾನೇ ಶ್ರೇಷ್ಠ.

ಹಾಗೂ ಇದನ್ನು ಹೀಗೆ ಬಳಸಿದರೆ ಮನೆಯ ಸಂಕಷ್ಟಗಳು ದೂರವಾಗುತ್ತದೆ ಅಂದರೆ, ನೀವು ಮಲಗುವ ಮುಂಚೆ ಅಥವಾ ಸಂಜೆಯ ಸಮಯದಲ್ಲಿ ನಿಮ್ಮ ಮನೆಯ ನಾಲ್ಕು ಮೂಲೆಗಳಲ್ಲಿ ಅಂದರೆ ಅಡುಗೆ ಕೋಣೆಯನ್ನು ಹೊರತುಪಡಿಸಿ ನಿಮ್ಮ ಮನೆಯ ಹಾಲ್ ರೂಮ್ ಅಥವಾ ನೀವು ಮಲಗುವಂತಹ ಕೊಡೆಯಲ್ಲಿ ಆ ಕೋಣೆಯ ನಾಲ್ಕು ಮೂಲೆಗೆ ಒಂದು ಹಿಡಿ ಉಪ್ಪನ್ನು ಇಡಿ.

ಈ ಪರಿಹಾರವನ್ನು ಮಂಗಳವಾರದಂದು ಅಥವಾ ಶುಕ್ರವಾರದಂದು ಅಥವಾ ಅಮಾವಾಸ್ಯೆ ಹುಣ್ಣಿಮೆಯ ದಿನದಂದು ಮನೆಯಲ್ಲಿ ಮಾಡಿ, ಮತ್ತೊಂದು ಮಾಹಿತಿ ಏನು ಅಂದರೆ,

ನೀವು ಈ ಪರಿಹಾರವನ್ನು ಮಾಡುವಾಗ ಮಂಗಳವಾರದ ದಿನದಂದು ಅಂದರೆ ಸೋಮವಾರ ರಾತ್ರಿ ಇಡಬಾರದು, ಮಂಗಳವಾರ ರಾತ್ರಿ ಅಥವಾ ಸಂಜೆ ಇಟ್ಟು ನಂತರ ಅದನ್ನು ಬುಧವಾರ ಬೆಳಗ್ಗೆ ಯಾವುದಾದರೂ ಹರಿಯುವ ನೀರಿಗೆ ಅಥವಾ ನಿಮ್ಮ ಮನೆಯ ಬಳಿ ಇರುವಂತಹ ಚರಂಡಿಗೆ ಈ ಉಪ್ಪನ್ನು ಹಾಕಿ.

ಹೀಗೆ ಈ ರೀತಿಯ ಪರಿಹಾರವನ್ನು ಮಾಡುವುದರಿಂದ ನೀವು ನಿಮ್ಮ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಯನ್ನು ಈ ಪರಿಹಾರದ ಮುಖಾಂತರ ಹೊರಹಾಕಬಹುದು.

ಹಾಗೂ ನಿಮ್ಮ ಮನೆಯ ಮನೆಯ ಮೇಲೆ ಯಾವುದಾದರೂ ಕೆಟ್ಟ ದೃಷ್ಟಿ ಆಗಿದ್ದರೂ ಕೂಡ ಈ ಉಪ್ಪು ಅದನ್ನು ಹೀರಿ ನಿಮ್ಮ ಮನೆಯ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸುತ್ತದೆ.ಮತ್ತೊಂದು ವಿಚಾರವನ್ನು ನಾನು ನಿಮಗೆ ತಿಳಿಸಲು ಇಚ್ಛಿಸುತ್ತೇನೆ

ಅದೇನೆಂದರೆ ಮಂಗಳವಾರ ಮತ್ತು ಶುಕ್ರವಾರದ ದಿನದಂದು ಯಾವುದೇ ಕಾರಣ ಲಕ್ಷ್ಮಿಯ ಸ್ವರೂಪವಾದಂತಹ ಈ ಉಪ್ಪನ್ನು ಮನೆಯಿಂದ ಆಚೆ ಹಾಕಬೇಡಿ, ಹಾಗೆಯೇ ನೀವು ನಿಮ್ಮ ಮನೆಯನ್ನು ಸ್ವಚ್ಛ ಪಡಿಸುವಾಗ ಮನೆಯನ್ನು ಒರೆಸುವಾಗ ಆ ನೀರಿಗೆ ಕಲ್ಲುಪ್ಪನ್ನು ಬೆರೆಸಿ ಮನೆಯನ್ನು ಒರೆಸುವುದರಿಂದ ಕೂಡ ತುಂಬಾನೇ ಉಪಯುಕ್ತವಾಗುತ್ತದೆ.

ಹಾಗೂ ನಿಮ್ಮ ಮನೆಯ ಸಂಕಷ್ಟಗಳು ದೂರವಾಗಲು ಇದು ಸಹಕರಿಸುತ್ತದೆ.ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ನಿಮ್ಮ ಗೆಳೆಯರಿಗು ಕೂಡ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *