ಹಸ್ತ ಸಾಮುದ್ರಿಕ ಶಾಸ್ತ್ರವೂ ತಿಳಿಸುವ ಹಾಗೆ ಕೈನಲ್ಲಿ ಈ ರೀತಿಯ ಮೀನಿನ ರೇಖೆ ಇದ್ದರೆ ಏನಾಗುತ್ತದೆ ಗೊತ್ತಾ, ಈ ಮೀನಿನ ರೇಖೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ.ಹಾಗಾದರೆ ಕೈಯಲ್ಲಿ ಮೀನಿನ ರೇಖೆ ಎಲ್ಲಿ ಇದ್ದರೆ ಏನು ಲಾಭ ಯಾವ ಅದೃಷ್ಟ ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತೀರಿ ಎಂಬುದನ್ನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.
ವೀಕ್ಷಕರೇ ನೀವು ಗಮನಿಸಿರಬಹುದು ಮನೆಯಲ್ಲಿ ಹಿರಿಯರು ಇದ್ದಾಗ ಅಥವಾ ಶಾಸ್ತ್ರದ ಬಗ್ಗೆ ಸ್ವಲ್ಪ ಮಾಹಿತಿ ತಿಳಿದಿದ್ದರೆ ಆಗ ಮನೆಯಲ್ಲಿ ಮಕ್ಕಳಿಗೆ ಅಥವಾ ದೊಡ್ಡವರಿಗೆ ಆಗಲಿ ಕೈಗಳನ್ನು ನೋಡ್ತಾರೆ ಕೈಗಳಲ್ಲಿ ಮೀನಿನ ಹಸ್ತರೇಖೆ ಇದ್ದರೆ ಅದಕ್ಕೆ ಅರ್ಥವೇನು ಎಂಬುದನ್ನು ನಿಮಗೆ ಇಂದಿನ ಮಾಹಿತಿಯಲ್ಲಿ ನಾನು ತಿಳಿಸಿಕೊಡುತ್ತೇನೆ.
ಕೈಯಲ್ಲಿನ ತೋರು ಬೆರಳಿನ ಕೆಳಭಾಗದಲ್ಲಿ ಮೀನಿನ ರೇಖೆ ಇದ್ದರೆ, ಅದನ್ನು ಶುಕ್ರ ಸ್ಥಾನ ಎಂದು ಕರೆಯುತ್ತಾರೆ, ಈ ಭಾಗದಲ್ಲಿ ಮೀನಿನ ರೇಖೆ ಇದ್ದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಮದುವೆಯಾದ ಬಳಿಕ ಅತ್ತೆ ಮನೆಯಿಂದ ಹುಡುಗಿಯಾಗಿ ಹುಡುಗನಾಗಲೀ ಒಳ್ಳೆಯ ಸಂಪತ್ತನ್ನು ಪಡೆದುಕೊಳ್ಳುತ್ತಾನೆ ಹೌದು ಮದುವೆಯಾದ ಬಳಿಕ ಅತ್ತೆ ಮನೆಯಿಂದ ಆ ವ್ಯಕ್ತಿ ಶ್ರೀಮಂತನಾಗುವ ಯೋಗವಿದೆ ಎಂದು ಹಸ್ತ ಸಾಮುದ್ರಿಕ ಶಾಸ್ತ್ರವೂ ತಿಳಿಸುತ್ತದೆ.
ಹೆಬ್ಬೆರಳಿನ ಪಕ್ಕದ ಬೆರಳಿನ ಕೆಳಗೆ ಈ ಮೀನಿನ ರೇಖೆ ಇದ್ದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಏನೆಲ್ಲಾ ಅದೃಷ್ಟವನ್ನು ಪಡೆದುಕೊಳ್ಳುತ್ತಾನೆ ಅಂತ ಹೇಳುವುದಾದರೆ, ಈ ಒಂದು ಸ್ಥಾನವನ್ನು ಕುಜ ಸ್ಥಾನ ಎಂದು ಕರೆಯಲಾಗುತ್ತದೆ.ಮತ್ತು ಒಂದು ರೇಖೆ ಕುಜ ಸ್ಥಾನದಲ್ಲಿ ಇದ್ದರೆ ಆ ವ್ಯಕ್ತಿ ಪೊಲೀಸ್ ಅಥವಾ ಮಿಲಿಟರಿ ಕೆಲಸವನ್ನು ಪಡೆದುಕೊಂಡು, ಅದ್ಭುತವಾದ ರಾರಾಜಿಸುವ ವೃತ್ತಿ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಮತ್ತು ಇವರ ಪ್ರವೃತ್ತಿಗೆ ಒಳ್ಳೆಯ ಹೆಸರನ್ನು ನೀಡುವಂತಹ ವ್ಯಕ್ತಿಗಳು ಇವರಾಗಿರುತ್ತಾರೆ ಎಂದು ಹೇಳಲಾಗಿದೆ.
ಮೀನಿನ ರೇಖೆ ಮಧ್ಯ ಬೆರಳಿನ ಕೆಳಭಾಗದಲ್ಲಿ ಇದ್ದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಹೆಚ್ಚು ಓದಿಕೊಂಡಿಲ್ಲ ಅಂದರೂ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳುವ ಅದೃಷ್ಟವನ್ನು ಪಡೆದುಕೊಂಡಿರುತ್ತಾರೆ.ಮೀನಿನ ರೇಖೆ ಉಂಗುರ ಬೆರಳಿನ ಕೆಳಭಾಗದಲ್ಲಿ ಇದ್ದರೆ ಅಂದರೆ ಈ ಸ್ಥಾನವನ್ನು ಶನಿಯ ಸ್ಥಾನ ಎಂದು ಕರೆಯಲಾಗುತ್ತದೆ, ಶನಿಯ ಸ್ಥಾನದಲ್ಲಿ ಮೀನಿನ ರೇಖೆ ಇದ್ದರೆ ಆತನ ಜೀವನದಲ್ಲಿ ಆ ವ್ಯಕ್ತಿ ಅದೃಷ್ಟವಂತ ನಾಗಿರುತ್ತಾನೆ ಹುಟ್ಟಿದಾಗಿನಿಂದಲೇ ಅದೃಷ್ಟವನ್ನು ಪಡೆದುಕೊಂಡು ಜೀವನ ನಡೆಸುವ ಈ ವ್ಯಕ್ತಿ ಫಾರಿನ್ಗೆ ಹೋಗುವ ಅದೃಷ್ಟವನ್ನು ಕೂಡ ಪಡೆದುಕೊಂಡಿರುತ್ತಾರೆ ಎಂದು ಹೇಳಲಾಗಿದೆ.
ಕಿರು ಬೆರಳಿನ ಕೆಳಭಾಗದಲ್ಲಿ ಮೀನಿನ ರೇಖೆ ಇದ್ದರೆ ಅದನ್ನು ಬುಧ ಸ್ಥಾನ ಎಂದು ಕರೆಯಲಾಗುತ್ತದೆ ಮೀನಿನ ರೆಕ್ಕೆ ಮಸ್ತಾನ ದಲ್ಲಿ ಇದ್ದರೆ ಆ ವ್ಯಕ್ತಿ ದೊಡ್ಡ ವ್ಯಾಪಾರಿ ಆಗುತ್ತಾನೆ ದೊಡ್ಡ ಬಿಸಿನೆಸ್ ಮ್ಯಾನ್ ಆಗುತ್ತಾನೆ ಎಂದು ಕೂಡ ಹೇಳಲಾಗಿದೆ.ಮೀನಿನ ರೇಖೆ ಮಣಿಕಟ್ಟಿನ ಭಾಗದಲ್ಲಿದ್ದರೆ ಅಥವಾ ಮಣಿಕಟ್ಟಿನ ಮೇಲ್ಭಾಗದಲ್ಲಿ ಇದ್ದರೆ ಅದನ್ನು ಕುಜ ಸ್ಥಾನ ಎಂದು ಕರೆಯುತ್ತಾರೆ ಈ ಭಾಗದಲ್ಲಿಯೂ ಮೀನಿನ ರೇಖೆ ಇದ್ದರೆ ಅವನು ಕೂಡ ಜೀವನದಲ್ಲಿ ಬಹಳಾನೆ ಅದೃಷ್ಟವಂತ ನಾಗಿರುತ್ತಾನೆ ಎಂದು ಹೇಳಲಾಗಿದ್ದು, ಈ ವ್ಯಕ್ತಿಯು ಆತನ ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೇರುತ್ತಾನೆ ಎಂದು ಹೇಳಲಾಗಿದೆ.
ಇದಿಷ್ಟು ಇವತ್ತಿನ ಮಾಹಿತಿ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ನಿಮ್ಮ ಕೈಯಲ್ಲಿಯೂ ಮೀನಿನ ರೇಖೆ ಇದ್ದರೆ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಧನ್ಯವಾದ.