Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಅಂಗೈನಲ್ಲಿ ಈ ಒಂದು ರೇಖೆ ಇದ್ದರೆ ಸಾಕು ನಿಮ್ಮ ಜೊತೆ ವಿಷ್ಣು ದೇವರಿದ್ದು ನಿಮ್ಮನ್ನು ಕಷ್ಟಗಳಿಂದ ಯಾವಾಗ್ಲೂ ಕೂಡ ಪಾರು ಮಾಡುತ್ತಾನಂತೆ ಹಾಗಾದ್ರೆ ಆ ರೇಖೆ ಯಾವುದು …!!!

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದ ಕೆಲವೊಂದು ಪದ್ಧತಿಗಳಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಹೆಚ್ಚಾಗಿ ನಂಬಲಾಗುತ್ತದೆ ಹಾಗೆಯೇ ಈ ಒಂದು ಜ್ಯೋತಿಷ್ಯಶಾಸ್ತ್ರವು ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತಹ ಒಂದು ರೀತಿಯಾದಂತಹ ಶಾಸ್ತ್ರ ಎಂದೇ ಹೇಳಬಹುದು ಹೌದು ಸ್ನೇಹಿತರೆ ಹೌದು ಜ್ಯೋತಿಷಶಾಸ್ತ್ರದಲ್ಲಿ ಬರುವಂತಹ ಒಂದು ಶಾಸ್ತ್ರ ಯಾವುದೆಂದರೆ ಅದು ಹಸ್ತರೇಖೆ ಎನ್ನುವ ಶಾಸ್ತ್ರ ಹೌದು ಹಸ್ತರೇಖೆಯಲ್ಲಿ ನಮ್ಮ ಅದೃಷ್ಟವು ಮತ್ತು ದುರದೃಷ್ಟವೋ ಅಡಗಿರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ನಮ್ಮ ಕೈಯನ್ನು ನೋಡಿ ಹಲವಾರು ರೀತಿಯಾದಂತಹ ನಮ್ಮ ಭವಿಷ್ಯವನ್ನು ನಾವು ತಿಳಿದುಕೊಳ್ಳಬಹುದು ಆದರೆ ಇದು ಕೆಲವೇ ಕೆಲವು ಜನಗಳಿಗೆ ಈ ಒಂದು ಶಾಸ್ತ್ರ ತಿಳಿಯುತ್ತದೆ

ಹೌದು ಸ್ನೇಹಿತರೆ ಕೈಯಲ್ಲಿ ಅಂದರೆ ನಮ್ಮ ಅಂಗೈಯಲ್ಲಿ ಹಲವಾರು ರೀತಿಯಾದಂತಹ ಗೆರೆಗಳನ್ನು ನಾವು ನೋಡಿರುತ್ತೇವೆ ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿ ನಮ್ಮ ಕೈಯಲ್ಲಿ ಇರುವಂತಹ ಒಂದೊಂದು ಗೆರೆಗೊ ಕೂಡ ಒಂದೊಂದು ಅರ್ಥವಿದೆಯೆಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾದರೆ ಅಂಗೈಯಲ್ಲಿ ಒಂದು ರೇಖೆ ಎಂದರೆ ನಿಮಗೆ ಅಂದರೆ ನಿಮ್ಮ ಬೆನ್ನ ಹಿಂದೆ ವಿಷ್ಣು ದೇವರು ಯಾವಾಗಲೂ ಇರುತ್ತಾರೆ ಎನ್ನುವುದು ವಾಡಿಕೆ ಹಾಗಾದರೆ ನಿಮ್ಮ ಅಂಗೈ ಎಲ್ಲಿ ಯಾವ ರೇಖೆ ಇದ್ದರೆ ನಿಮಗೆ ಅದೃಷ್ಟ ಹಾಗೆಯೇ ಯಾವ ರೇಖೆ ನಿಮ್ಮ ಕೈಯಲ್ಲಿದ್ದರೆ ದುರದೃಷ್ಟ ಎನ್ನುವುದರ ಸಂಪೂರ್ಣವಾದ ಅಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಾವು ತಿಳಿದುಕೊಳ್ಳೋಣ ಸ್ನೇಹಿತರೆ

ನಮ್ಮ ದೇಶದಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಅನೇಕ ಜನರು ನಂಬುತ್ತಾರೆ. ಹಾಗೆ ನಮ್ಮ ದೇಶದಲ್ಲಿ ಅನೇಕ ಜನರು ಅನೇಕ ರೀತಿಯಲ್ಲಿ ಜ್ಯೋತಿಷ್ಯವನ್ನು ಹೇಳುತ್ತಾರೆ. ಕೆಲವರು ಮುಖ ನೋಡಿ ಹೇಳುತ್ತಾರೆ ಇನ್ನು ಕೆಲವರು ನಾವು ಹುಟ್ಟಿದ ದಿನ ಅಥವಾ ದಿನಾಂಕವನ್ನು ನೋಡಿ ಹೇಳುತ್ತಾರೆ. ಮತ್ತೆ ಕೆಲವರು ನಮ್ಮ ಕೈಯಲ್ಲಿರುವ ಹಸ್ತರೇಖೆಯನ್ನು ಕೂಡ ನೋಡಿ ಜ್ಯೋತಿಷ್ಯವನ್ನು ಹೇಳುತ್ತಾರೆ. ಅದೇ ರೀತಿ ನಮ್ಮ ಕೈಯಲ್ಲಿರುವ ಹಸ್ತ ರೇಖೆಯನ್ನು ನೋಡಿ ಜ್ಯೋತಿಷ್ಯ ಹೇಳುವವರು ತುಂಬಾ ಜನ ಇದ್ದಾರೆ.ಕೈಯಲ್ಲಿರುವ ಹಸ್ತ ರೇಖೆಯನ್ನು ನೋಡುವ ಮುನ್ನ ನಾವು ಹುಡುಗರಾದರೆ ಬಲಗೈ ಹಾಗೂ ಹುಡುಗಿಯರಾದರೆ ಎಡಗೈಯನ್ನು ನೋಡಬೇಕು ಬನ್ನಿ ಸ್ನೇಹಿತರೆ ಹಾಗಾದರೆ ಹಸ್ತದಲ್ಲಿ ಯಾವ ಯಾವ ಚಿಹ್ನೆ ಇದ್ದರೆ ನಮಗೆ ಏನೇನೂ ಲಭಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಇಂದು ನಾವು ನಿಮಗೆ ಹಸ್ತರೇಖೆ ಯಲ್ಲಿ ವೈ ಅಕ್ಷರದ ಚಿಹ್ನೆ ಇದ್ದರೆ ಅದರಿಂದ ಆಗುವ ಲಾಭ ನಷ್ಟ ಅಥವಾ ಅದರಿಂದಾಗುವ ಒಳ್ಳೆಯ ಪರಿಣಾಮಗಳು ಅಥವಾ ಕೆಟ್ಟ ಪರಿಣಾಮಗಳ ಬಗ್ಗೆ ಇಂದೂ ನಾವು ತಿಳಿಸಿಕೊಡುತ್ತೇವೆ.

ನಮ್ಮ ಹಸ್ತದಲ್ಲಿ ಈ ಚಿಹ್ನೆಯ ರೇಖೆ ಇದ್ದರೆ ಅಂತಹ ರೇಖೆಗಳನ್ನು ನಾವು ವಿಷ್ಣು ರೇಖೆ ಎಂದು ಕರೆಯುತ್ತೇವೆ. ಇಂತಹ ವಿಷ್ಣು ರೇಖೆಯೂ ಇದ್ದವರು ಒಳ್ಳೆಯ ವ್ಯಕ್ತಿಗಳಾಗಿರುತ್ತಾರೆ. ಹಾಗೆ ಇದು ಇಂಗ್ಲಿಷ್ ಅಕ್ಷರದ ವೈ ಆಕಾರದಲ್ಲಿ ಇರುತ್ತದೆ. ಈ ವೈ ಆಕಾರವನ್ನು ನಾವು ವಿಷ್ಣು ರೇಖೆ ಎಂದು ಕೂಡ ಕರೆಯುತ್ತೇವೆ. ಇಂತಹ ವೈ ಆಕಾರದ ವಿಷ್ಣು ರೇಖೆ ಇದ್ದವರು ತುಂಬಾ ಅದೃಷ್ಟಶಾಲಿಗಳು ಬುದ್ಧಿ ಶಾಲೆಗಳು ಹಾಗೂ ಒಳ್ಳೆಯ ಮನಸ್ಸುಳ್ಳ ವ್ಯಕ್ತಿಗಳಾಗಿರುತ್ತಾರೆ.ಈ ರೀತಿಯ ವಿಷ್ಣು ರೇಖೆಯನ್ನು ಉಳ್ಳವರು ಉದಾರ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ ಹಾಗೂ ಇವರು ಯಾರಿಗಾದರೂ ಕಷ್ಟ ಎಂದು ಕೇಳಿಕೊಂಡು ಬಂದರೆ ಅವರಿಗೆ ಸಹಾಯ ಮಾಡಲು ಮೊದಲನೆಯ ವ್ಯಕ್ತಿಯಾಗಿ ಮುನ್ನುಗ್ಗುತ್ತಾರೆ ಮತ್ತು ಎಂತಹ ದೊಡ್ಡ ಕೆಲಸವಾಗಲಿ ಅಥವಾ ಚಿಕ್ಕ ಕೆಲಸವಾಗಲಿ ಅದನ್ನು ಧೈರ್ಯವಾಗಿ ಮಾಡಲು ಮುನ್ನುಗ್ಗುತ್ತಾರೆ. ಹೌದು ಸ್ನೇಹಿತರೆ ಈ ರೀತಿಯ ವಿಷ್ಣು ರೇಖೆಯು ನಮ್ಮ ಹಸ್ತದಲ್ಲಿ ಇದ್ದರೆ, ಅವರು ಹೆಚ್ಚು ಬುದ್ಧಿಶಾಲಿಗಳು ಧೈರ್ಯವಂತರು ಆಗಿರುತ್ತಾರೆ. ಹಾಗೆಯೇ ಇವರು ಹೆಚ್ಚು ದಾನಧರ್ಮಗಳನ್ನು ಮಾಡುತ್ತಾರೆ. ಇವರು ಮಾಡುವ ದಾನ ಧರ್ಮಗಳನ್ನು ಇವರು ಎಲ್ಲಿಯೂ ಕೂಡ ಹೇಳಿಕೊಳ್ಳುವುದಿಲ್ಲ ಮತ್ತು ಇವರು ಮಾಡುವ ದಾನ ಧರ್ಮಗಳು ಬಲಗೈಯಲ್ಲಿ ಕೊಟ್ಟ ವಿಚಾರ ಎಡಗೈಗೆ ತಿಳಿಯುವುದಿಲ್ಲ ಎಂಬಂತೆ ಗೌಪ್ಯವಾಗಿ ಇಡುತ್ತಾರೆ.

ಇವರು ಆಡಂಬರದ ಜೀವನವನ್ನು ಇಷ್ಟಪಡುವುದಿಲ್ಲ ಹಾಗೆಯೇ ಇವರು ಯಾವ ಕ್ಷೇತ್ರದಲ್ಲಾದರೂ ಕೆಲಸ ಮಾಡಿದರೂ ಇವರು ಪ್ರಗತಿಯನ್ನು ಅಥವಾ ಯಶಸ್ಸನ್ನು ಪಡೆಯುತ್ತಾರೆ. ಈ ವಿಷ್ಣು ರೇಖೆಯು ವಿದ್ಯಾರ್ಥಿಗಳ ಹಸ್ತದಲ್ಲಿ ಇದ್ದರೆ ಇವರು ವಿದ್ಯೆಯಲ್ಲಿ ಅತಿ ಹೆಚ್ಚು ಯಶಸ್ಸನ್ನು ಪಡೆಯುತ್ತಾರೆ ಹಾಗೆ ಇವರು ಅತಿ ಹೆಚ್ಚು ಯಶಸ್ಸನ್ನು ಪಡೆದು ಎಲ್ಲರ ಮೆಚ್ಚುಗೆಗೆ ಮತ್ತು ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ ಮತ್ತು ಇವರು ಯಾವ ಕೆಲಸವನ್ನಾದರೂ ಸಂತೋಷದಿಂದ ಮಾಡಿ ಮುಗಿಸುತ್ತಾರೆ. ಇವರ ಬಳಿಗೆ ಯಾರಾದರೂ ಕಷ್ಟ ಎಂದು ಹೇಳಿಕೊಂಡು ಬಂದರೆ ಇವರು ಅವರಿಗೆ ಸಹಾಯ ಮಾಡಲು ಇಚ್ಚಿಸುತ್ತಾರೆ.

ಎಲ್ಲರಿಗೂ ಇವರು ಸಹಾಯ ಮಾಡುತ್ತಾರೆ ಹಾಗೆಯೇ ಈ ವಿಷ್ಣುವಿಗೆ ಯಾರಲ್ಲಿ ಇರುತ್ತದೊ, ಅವರು ಹೆಚ್ಚು ಕೋಪಿಷ್ಠರಾಗಿರುತ್ತಾರೆ ಹಾಗೆ ಇವರಿಗೆ ಇದ್ದಕ್ಕಿದ್ದಂತೆ ಕಾರಣವಿಲ್ಲದೆ ಕೆಲವೊಮ್ಮೆ ಕೋಪ ಬರುತ್ತದೆ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ