ನಿಮ್ಮಯ ಎಲ್ಲಾ ಕಷ್ಟಗಳು ಪರಿಹಾರವಾಗಬೇಕೆಂದರೆ ಇದರಿಂದ ಮಾಡಿದ ವಸ್ತುವಿನಿಂದ ಮಾಡಿದ ತಿಲಕವನ್ನು ನಿಮ್ಮ ಹಣೆಗೆ ಪ್ರತಿದಿನ ಇಟ್ಟುಕೊಳ್ಳಿ ಸಾಕು ಅಂದಿನಿಂದ ನಿಮಗೆ ಒಳ್ಳೆಯ ದಿನಗಳು ಆರಂಭವಾಗುತ್ತವೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದರೂ ಈ ವಸ್ತುವಿನಿಂದ ತಿಲಕವನ್ನು ತಯಾರಿಸಿ ಪ್ರತಿ ದಿವಸ ಈ ತಿಲಕವನ್ನು ಹಣೆಗೆ ಲೇಪನಮಾಡಿ ನಂತರ ಮನೆಯಿಂದ ಆಚೆ ಹೋದರೆ ನಿಮಗೆ ಯಾವ ಕೆಟ್ಟ ಶಕ್ತಿಯ ಪ್ರಭಾವವು ಕೂಡ ನಿಮ್ಮ ಮೇಲೆ ಆಗುವುದಿಲ್ಲ. ಜೊತೆಗೆ ನೀವು ಹೋದಂತಹ ಕೆಲಸಗಳು ಅಡೆತಡೆಗಳೂ ಇಲ್ಲದೆ ಪರಿಪೂರ್ಣವಾಗುತ್ತದೆ. ಹಾಗಾದರೆ ಯಾವ ವಸ್ತುವಿನಿಂದ ತಯಾರಿಸಬೇಕು ಈ ತಿಲಕವನ್ನು ಮತ್ತು ಇದರ ಪ್ರಯೋಜನಗಳೇನು ಇದನ್ನೆಲ್ಲ ತಿಳಿಯೋಣ ಇಂದಿನ ಮಾಹಿತಿಯಲ್ಲಿ, ಸಂಪೂರ್ಣವಾಗಿ ಈ ಲೇಖನವನ್ನು ತಿಳಿದು ನೀವು ಸಹ ಯಾವ ನರ ದೃಷ್ಟಿಯು ನಿಮ್ಮನ್ನು ತಗುಲಬಾರದು ಅಂದರೆ, ತಪ್ಪದೆ ಈ ವಸ್ತುವಿನಿಂದ ಈ ತಿಲಕವನ್ನು ತಯಾರಿಸಿಕೊಂಡು ಹಣೆಗೆ ಲೇಪನ ಮಾಡಿಕೊಂಡು ಬನ್ನಿ.

ಹೌದು ಈ ಪ್ರಪಂಚದಲ್ಲಿ ಎಲ್ಲರೂ ಕೂಡ ಒಂದೇ ತರಹ ಇರುವುದಿಲ್ಲ ಹಾಗೆ ಕೆಲವರು ಕೆಲ ವ್ಯಕ್ತಿಗಳು ಬೆಳೆಯುತ್ತಿದ್ದಾರೆ ಅಂದರೆ, ಅವರನ್ನು ನೋಡಿ ಖುಷಿ ಪಡುವುದಕ್ಕಿಂತ ಅವರನ್ನು ನೋಡಿ ಹೊಟ್ಟೆಕಿಚ್ಚು ಪಡುವವರ ಸಂಖ್ಯೆ ಹೆಚ್ಚಾಗಿದೆ ಇನ್ನು ಇಂಥವರ ಕಣ್ಣಿನಿಂದ ನಿಮ್ಮ ಕೆಲಸ ಕಾರ್ಯಗಳು ಅಡೆತಡೆಗಳಲ್ಲಿ ಸಾಗುತ್ತದೆ ಮತ್ತು ಯಾವ ಕೆಲಸ ಕೂಡ ಪರಿಪೂರ್ಣವಾಗಿ ನಡೆಯುತ್ತಾ ಇರುವುದಿಲ್ಲ. ಇದೆಲ್ಲವೂ ಜನರ ದೃಷ್ಟಿಯ ಪ್ರಭಾವ ಆಗಿರುತ್ತದೆ. ಈ ಮಾತು ಕೆಲವರಿಗೆ ತುಂಬಾ ಪರಿಚಯ ಇರುತ್ತದೆ, ಅದೇನೆಂದರೆ ನರ ದೃಷ್ಟಿಗೆ ಮರವೇ ಸಿಡಿಯುತು ಎಂದು.

ಆದ್ದರಿಂದ ಈ ರೀತಿ ಜನರ ದೃಷ್ಟಿಯೂ ಇದರ ಶಕ್ತಿ ನಮ್ಮ ಮೇಲೆ ಪ್ರಭಾವ ಬೀರಬಾರದು ಅಂದರೆ ನೀವು ಈ ಸಣ್ಣ ಪರಿಹಾರವನ್ನು ಪಾಲಿಸಿ ತುಂಬಾ ಸುಲಭವಾಗಿರುತ್ತದೆ. ಅದೇನೆಂದರೆ ಅರಿಶಿಣ ಕೊಂಬು ಕೇಳಿರುತ್ತೀರಾ ಆದರೆ ಅಡುಗೆಗೆ ಬಳಸುವ ಅರಿಶಿಣದ ಕೊಂಬನ್ನು ನಾವು ಈ ಪರಿಹಾರಕ್ಕೆ ಬಳಸುವಂತಿಲ್ಲ. ಅಂಗಡಿಗಳಲ್ಲಿ ಬ್ಲಾಕ್ ಟರ್ಮರಿಕ್ ಅಂದರೆ ಕಪ್ಪು ಅರಿಶಿನ ಕೊಂಬು ದೊರೆಯುತ್ತದೆ. ಅದನ್ನ ನೀವು ಶುಕ್ರವಾರ ಮಂಗಳವಾರ ಈ ದಿವಸಗಳಂದು ಮನೆಗೆ ತರಬಹುದು ಇನ್ನೂ ಅಮವಾಸ್ಯೆಯ ದಿವಸದಂದು ಈ ಅರಿಶಿಣದ ಕೊಂಬನ್ನು ಮನೆಗೆ ತಂದರೆ ಇನ್ನೂ ಪರಿಣಾಮಕಾರಿಯಾಗಿ ನಿಮಗೆ ಇದರ ಪ್ರಭಾವ ನಿಮಗೆ ದೊರೆಯುತ್ತದೆ.

ನಂತರ ಬೆಳಗ್ಗಿನ ಸಮಯದಲ್ಲಿ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಮನೆಯಲ್ಲಿ ಪೂಜೆಯನ್ನು ಮಾಡಬೇಕು ಮನೆಯನ್ನ ಶುಭ್ರಗಳಿಸಿ ನೀವು ಕೂಡ ಮಡಿಯಾಗಿ ಈ ಅರಿಶಿಣದ ಕೊಂಬನ್ನು ತೇಯ್ದು ಇದರ ಲೇಪನವನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ. ನಂತರ ಮನೆಯಲ್ಲಿ ಹೇಗೆ ಪ್ರತಿನಿತ್ಯ ಪೂಜೆ ಮಾಡುತ್ತಿರುವ ಹಾಗೆ ಪೂಜೆಯನ್ನು ಮಾಡಿ ಆ ದಿವಸ ತಿಲಕವನ್ನು ನೀವು ಆಚೆ ಹೋಗುವ ಮುನ್ನ ಮಕ್ಕಳಿಗೇ ಆಗಲಿ ಮನೆಯ ಯಜಮಾನರಿಗೆ ಆಗಲಿ ಅದನ್ನು ಲೇಪನ ಮಾಡಿಕೊಂಡು ಹೋಗಲು ಹೇಳಬೇಕು. ಈ ರೀತಿ ನೀವು ಈ ತಿಲಕವನ್ನು ಲೇಪನ ಮಾಡಿ ಆಚೆ ಹೋಗುವುದರಿಂದ ಸಕಲ ಕೆಲಸಗಳು ಕೂಡ ಪರಿಪೂರ್ಣವಾಗುತ್ತದೆ ಮತ್ತು ನಿಮ್ಮ ಕೆಲಸಗಳಿಗೆ ಯಾವ ಕೆಟ್ಟ ಶಕ್ತಿಯ ಪ್ರಭಾವವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಅಷ್ಟೇ ಅಲ್ಲ ಪ್ರತಿ ಕೆಲಸದಲ್ಲಿಯೂ ಯಶಸ್ಸು ಕಾಣುತ್ತೀರಿ.

ಹಾಗೆ ಆ ದೇವರ ಆಶೀರ್ವಾದದಿಂದಾಗಿ ನೀವು ಸುರಕ್ಷಿತವಾಗಿ ಮನೆಯನ್ನು ಸೇರುತ್ತೀರಾ ಹಾಗೆ ಮಕ್ಕಳಿಗೂ ಕೂಡ ಈ ಲೇಪನವನ್ನು ಹಚ್ಚುವುದರಿಂದ, ಯಾವ ಕೆಟ್ಟ ಶಕ್ತಿಯೂ ಮಕ್ಕಳನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಇದು ಈ ತಿಲಕದ ಪ್ರಯೋಜನಗಳು ನೀವು ಕೂಡ ಈ ಶಕ್ತಿಶಾಲಿಯಾದ ತಿಲಕವನ್ನು ಹಣೆಗೆ ಲೇಪನ ಮಾಡಿಕೊಂಡು ಆಚೆ ಹೋಗಿ ಎಲ್ಲವೂ ಕೂಡ ಶುಭವಾಗಿರುತ್ತದೆ ಧನ್ಯವಾದ.

Leave a Reply

Your email address will not be published. Required fields are marked *