ನಿಮಗೇನಾದ್ರು ದೇಹದಲ್ಲಿ ಈ ಐದು ಜಾಗಗಳಲ್ಲಿ ಮಚ್ಚೆ ಇದ್ದರೆ ಅದೃಷ್ಟ ನಿಮ್ಮನ್ನು ತಾನಾಗಿಯೇ ಹುಡುಕಿಕೊಂಡು ಬರುತ್ತದೆ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವಾಗಿದ್ದರೂ ಆತನ ದೇಹದ ಯಾವುದಾದರೊಂದು ಭಾಗದಲ್ಲಿ ಮಚ್ಚೆ ಎನ್ನುವುದು ಇದ್ದೇ ಇರುತ್ತದೆ. ಕೆಲವು ಸಲ ಏನೇ ಅವಘಡವಾದರೂ ಮಚ್ಚೆ ಮೂಲಕವೇ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲಾಗುತ್ತದೆ. ಸಣ್ಣದಾಗಲಿ ಅಥವಾ ದೊಡ್ಡದಾಗಲಿ ಮಚ್ಚೆ ದೇಹದಲ್ಲಿ ಇದ್ದೇ ಇರುತ್ತದೆ. ಕೆಲವರ ಮುಖ, ಕೈ ಹಾಗೂ ಕಾಲಿನ ಭಾಗದಲ್ಲಿ ಮಚ್ಚೆ ಇರುತ್ತದೆ. ಇದು ಕಣ್ಣಿಗೆ ಕಾಣುವಂತಿರುತ್ತದೆ ಹುಟ್ಟಿದಾಗಿನಿಂದ ಸಾಕಷ್ಟು ಮಚ್ಚೆಗಳು ನಮ್ಮ ಮೈಮೇಲೆ ಇರುತ್ತದೆ ಮತ್ತು ಈ ಮಚ್ಚೆಗಳು ಮನುಷ್ಯನಿಗೆ ಶುಭಫಲ ಅಥವಾ ಬೇರೆ ರೀತಿಯ ಫಲಗಳನ್ನು ತಂದುಕೊಡುತ್ತದೆ ಅನ್ನೋದನ್ನು ನೀವೇನಾದರೂ ನಂಬುತ್ತೀರಾ ಹಾಗಾದರೆ ನಾವು ಹೇಳುವಂತಹ ಈ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ಓದಿ ಮತ್ತು ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ ಒಲಿಯುತ್ತದೆ.

ಮತ್ತು ದುರದೃಷ್ಟ ಉಳಿಯುವುದು ಅನ್ನೋದನ್ನು ನಾವು ಇಲ್ಲಿ ಸಂಪೂರ್ಣವಾಗಿ ತಿಳಿಯೋಣ ಆದ್ದರಿಂದ ಸ್ನೇಹಿತರೇ ತಪ್ಪದೇ ಮಾಹಿತಿಯನ್ನು ಓದಿ ಮತ್ತು ನಿಮಗೆ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ ಮತ್ತು ಈ ರೀತಿಯ ಅನೇಕ ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ .ಮಚ್ಚೆಗಳು ಅಂದರೆ ಕಪ್ಪಾಗಿ ಅಥವಾ ಬಿಳಿಯಾಗಿ ಕೂಡ ಈ ಮಚ್ಚೆಗಳು ಇರುತ್ತದೆ ಇನ್ನು ಕೆಲವರಿಗೆ ಹುಟ್ಟಿದಾಗಿನಿಂದಲೂ ಕೆಲವೊಂದು ಮಚ್ಚೆಗಳು ಇರುತ್ತದೆ ಹುಟ್ಟಿದ ಕೆಲವು ವರ್ಷಗಳು ಕಳೆದ ಮೇಲೆ ಕೂಡ ಮಚ್ಚೆಗಳು ಹುಟ್ಟುತ್ತವೆ .ಈ ರೀತಿ ನಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಮಚ್ಚೆ ಇದೆ ಅನ್ನು ಆಧಾರದ ಮೇಲೆ ಶುಭಫಲಗಳನ್ನು ಅದು ತಂದುಕೊಡುತ್ತದೆ ಇಲ್ಲವಾದಲ್ಲಿ ಕೆಲವೊಂದು ವಿಚಾರದಲ್ಲಿ ಮಚ್ಚೆಗಳು ಕೆಲವೊಂದು ಭಾಗದಲ್ಲಿ ಇರುವ ಕಾರಣದಿಂದಾಗಿ ಅದು ನಮಗೆ ಆರೋಗ್ಯ ಸಮಸ್ಯೆ ಅಥವಾ ದುರಾದೃಷ್ಟವನ್ನು ತಂದುಕೊಡುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ .

ನಿಮಗೇನಾದರೂ ಹಣೆಯ ಮೇಲೆ ಮಚ್ಚೆ ಇದ್ದರೆ ಅವರುಗಳು ಮೇಧಾವಿಗಳಾಗುತ್ತಾರೆ ಮತ್ತು ಹೆಚ್ಚು ಬುದ್ಧಿವಂತರು ಕೂಡ ಆಗಿರುತ್ತಾರೆ ಎಂದು ಹೇಳಲಾಗುತ್ತದೆ . ಮೂಗಿನ ಮೇಲೆ ಮಚ್ಚೆ ಇದ್ದರೆ ಅವರುಗಳು ಹೆಚ್ಚು ಯೋಚನೆ ಮಾಡುವಂತಹ ಅಂದರೆ ಯಾವುದೇ ವಿಷಯದಲ್ಲಿ ಹೆಚ್ಚು ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ವ್ಯಕ್ತಿಗಳು ಆಗಿರುತ್ತಾರೆ .ಹುಬ್ಬಿನ ಮೇಲೆ ಮಚ್ಚೆ ಇದ್ದರೆ ಅವರುಗಳು ಕೀರ್ತಿವಂತರಾಗುತ್ತಾರೆ ಮತ್ತು ಇವರು ಸಾಕಷ್ಟು ಫೇಮಸ್ ಆಗಿಯೂ ಕೂಡ ಇರುತ್ತಾರೆ ಇಂತಹ ವ್ಯಕ್ತಿಗಳು ಅಂತ ಹೇಳಬಹುದು . ಗಡ್ಡದ ಮೇಲೆ ಮಚ್ಚೆ ಇದ್ದರೆ ಅಂತಹವರು ಧನ ಕೀರ್ತಿಯನ್ನು ಹೆಚ್ಚಾಗಿ ಸಂಪಾದಿಸುತ್ತಾರೆ ಅಂತ ಹೇಳಲಾಗುತ್ತದೆ .ಭುಜದ ಮೇಲೆ ಮಚ್ಚೆ ಇದ್ದರೆ ಅಂತಹವರ ವ್ಯಕ್ತಿತ್ವ ಚಂಚಲವಾಗಿರುತ್ತದೆ ಎಂದು ಕೂಡ ಹೇಳುತ್ತಾರೆ ಮತ್ತು ತೊಡೆಯ ಮೇಲೆ ಈ ರೀತಿಯ ಮಚ್ಚೆಗಳು ಇದ್ದರೆ ಅಂತಹವರಿಗೆ ಆರೋಗ್ಯ ಹೆಚ್ಚಾಗಿರುತ್ತದೆ ಮತ್ತು ಇಂಥವರಿಗೆ ಆಯಸ್ಸು ಕೂಡ ಹೆಚ್ಚಾಗಿರುತ್ತದೆ ಎಂದು ನಂಬಲಾಗದು .

ಕಾಲಿನ ಮೇಲೆ ಅಂದರೆ ಪಾದದ ಮೇಲೆ ಮಚ್ಚೆ ಏನಾದರೂ ಇದ್ದರೆ ಅಂಥವರಿಗೆ ಅನಾರೋಗ್ಯ ಕಾಡುತ್ತಿರುತ್ತದೆ ಮತ್ತು ಅವರು ಅಕಾಲ ಮರಣ ಹೊಂದುತ್ತಾರೆ ಅಂತ ಕೂಡ ಹೇಳಲಾಗುವುದು . ಮಂಡಿಯ ಮೇಲೆ ಮಚ್ಚೆ ಏನಾದರೂ ಇದ್ದರೆ ಅಂತಹವರಿಗೆ ಅಧಿಕ ಸಂತಾನ ಲಾಭ ಇರುತ್ತದೆ ಅಂತ ಕೂಡ ಹೇಳುತ್ತಾರೆ .ಈ ರೀತಿಯಾಗಿ ನಮ್ಮ ದೇಹದ ಹಲವು ಭಾಗಗಳಲ್ಲಿ ಮಚ್ಚೆ ಇದ್ದರೆ ಅದು ಅದೃಷ್ಟವೋ ದುರಾದೃಷ್ಟವೋ ಅಂತ ನಮ್ಮ ಹಿಂದಿನ ಕಾಲದಿಂದಲೂ ಪೂರ್ವಿಕರು ಹೇಳುತ್ತಲೇ ಬಂದಿದ್ದಾರೆ .ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *