Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೇನಾದ್ರು ಜೀವನದಲ್ಲಿ ಸ್ವಂತ ಮನೆ ಕಟ್ಟುವ ಕನಸು ನಿಮ್ಮಲ್ಲಿದ್ದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಹರಕೆಯನ್ನು ಮಾಡ್ಕೊಳ್ಳಿ ನಿಮ್ಮ ಕನಸು ಖಂಡಿತಾ ನೆರವೇರುತ್ತೆ !!!

ಸ್ನೇಹಿತರೇ ನಮ್ಮ ಸುತ್ತಮುತ್ತ ಎಂತೆಂಥ ಪ್ರದೇಶಗಳು ಇರುತ್ತವೆ ಎಂಬುದು ನಮ್ಮ ಅರಿವಿನಲ್ಲಿ ಇರುವುದಿಲ್ಲ ಆದರೆ ಪ್ರತಿಯೊಂದು ಪ್ರದೇಶಕ್ಕೂ ಕೂಡ ತನ್ನದೇ ಆದಂತಹ ಇತಿಹಾಸವಿರುತ್ತದೆ .

ಮತ್ತು ಎಲ್ಲಾ ಪ್ರದೇಶಗಳು ಕೂಡ ಕೆಲವೊಂದು ಬಾರಿ ಕೆಲವೊಂದು ವಿಶಿಷ್ಟತೆಯನ್ನು ತಿಳಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ ಅಂಥದ್ದೇ ಒಂದು ಪ್ರದೇಶದ ಬಗ್ಗೆ ಈ ದಿನ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ.

ಅದರ ಜೊತೆಯಲ್ಲಿ ಆ ಪ್ರದೇಶದ ವಿಶೇಷತೆ ಏನು ಮತ್ತು ಆ ಪ್ರದೇಶದಿಂದ ನಮಗೆ ಏನೆಲ್ಲಾ ಅನುಕೂಲ ಇದೆ ಎಂಬ ಮಾಹಿತಿಯನ್ನು ಕೂಡ ನಾವು ನಿಮಗೆ ನೀಡಲಿದ್ದೇವೆ ಇದೊಂದು ಪುರಾತನವಾದ ಪ್ರದೇಶ ಇದರ ಬಗ್ಗೆ ಕೆಲವೊಬ್ಬರು ಕೇಳಿರುತ್ತಾರೆ ಮತ್ತು ಕೆಲವೊಬ್ಬರು ಕೇಳಿರುವುದಿಲ್ಲ.

ಮತ್ತು ಕೆಲವೊಬ್ಬರು ನೋಡಿರುತ್ತಾರೆ ಕೂಡ ಈ ಪ್ರದೇಶ ಇರುವುದು ಮಂಡ್ಯ ಜಿಲ್ಲೆಯಲ್ಲಿ ಇಲ್ಲಿ ಒಂದು ಪುರಾತನವಾದ ದೇವಾಲಯವಿದೆ ಆ ದೇವಾಲಯದ ಪ್ರತೀತಿಯನ್ನು ಕೇಳಿದರೆ ನೀವು ಅಚ್ಚರಿ ಪಡುವುದರಲ್ಲಿ ಎರಡು ಮಾತಿಲ್ಲ

ನಾನು ಮೊದಲೇ ಹೇಳಿದ ಹಾಗೆ ಇದು ಮಂಡ್ಯ ಜಿಲ್ಲೆಯಲ್ಲಿರುವ ಒಂದು ಪ್ರದೇಶವಾಗಿದೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಈ ದೇವಾಲಯವಿರುವುದನ್ನು ನಾವು ಗಮನಿಸಬಹುದಾಗಿದೆ.

ಈ ದೇವಾಲಯವನ್ನು ಭೂವರಾಹಸ್ವಾಮಿ ದೇವಾಲಯ ಎಂದು ಕರೆಯುತ್ತಾರೆ ಇಲ್ಲಿ ಭೂದೇವಿಯ ಸಮೇತ ವಿಷ್ಣು ನೆಲೆಸಿರುವುದನ್ನು ನಾವು ಗಮನಿಸಬಹುದಾಗಿದೆ ಈ ದೇವಾಲಯವು ತುಂಬಾ ಪ್ರಖ್ಯಾತಿಯನ್ನು ಹೊಂದಿದೆ.

ಮತ್ತು ಹೆಚ್ಚು ಇತಿಹಾಸವನ್ನು ಕೂಡ ಹೊಂದಿದೆ ಹಿರಣ್ಯ ಕಶಿಪು ವನ್ನು ಕೊಂದ ನಂತರ ವಿಷ್ಣು ಇಲ್ಲಿ ಬಂದು ನೆಲೆಸುತ್ತಾನೆ ಎಂಬ ಪ್ರತೀತಿ ಮಾತುಗಳು ಕೂಡ ಇದೆ ಆದರೆ ಸಾವಿರಾರು ವರ್ಷಗಳ ಕಾಲ ಈ ದೇವಾಲಯವು ಹುದುಗಿ ಹೋಗಿದ್ದು ಅದಾದ ನಂತರ ಹೊಯ್ಸಳರ ಕಾಲದಲ್ಲಿ ಇದ್ದು ಪ್ರಖ್ಯಾತಿಯನ್ನು ಪಡೆದಿದೆ ಎಂಬುದನ್ನು ಗಮನಿಸಬಹುದಾಗಿದೆ .

ಈ ದೇವಾಲಯದ ಪ್ರಖ್ಯಾತಿ ಏನು ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಮೂಡಬಹುದು ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ನಮ್ಮ ಮನೆಯಲ್ಲಿರುವಂತಹ ಕಷ್ಟಗಳ ಬಗ್ಗೆ ಹೇಳಿಕೊಂಡರೆ ಕಷ್ಟಗಳು ಸಾಧ್ಯವಾದಷ್ಟು ಬೇಗ ಪರಿಹಾರವಾಗುತ್ತದೆ.

ಮನೆ ಕಟ್ಟುವ ಕುರಿತು ಯಾವುದಾದರೂ ಸಮಸ್ಯೆಗಳಿದ್ದರೆ ಅದರ ಜೊತೆಯಲ್ಲಿ ಜಮೀನಿಗೆ ಸಂಬಂಧಪಟ್ಟ ಹಾಗೆ ಯಾವುದಾದರೂ ತೊಂದರೆಗಳಿದ್ದರೆ ಹೀಗೆ ಇನ್ನೂ ಹಲವಾರು ಸಮಸ್ಯೆಗಳಿಗೆ ಇಲ್ಲಿ ಪರಿಹಾರವನ್ನು ನೀಡಲಾಗುತ್ತದೆ.

ಇದು ವಿಶೇಷವಾದಂತಹ ದೇವಾಲಯವಾಗಿದೆ ಅಲ್ಲಿರುವ ಮಣ್ಣು ಮತ್ತು ಇಟ್ಟಿಗೆಯನ್ನು ಪೂಜೆ ಮಾಡಿಸಿಕೊಂಡು ನಮ್ಮ ಮನೆಗೆ ತಂದು ಆ ಮಣ್ಣು ಮತ್ತು ಇಟ್ಟಿಗೆಯನ್ನು ನಾವು ಮನೆ ಕಟ್ಟುವ ಸಂದರ್ಭದಲ್ಲಿ ಹಾಕಿ ಶುರು ಮಾಡಿದರೆ ಮನೆಯ ಕೆಲಸ ಎಂದು ನಿಲ್ಲುವುದಿಲ್ಲ.

ಆ ಕೆಲಸವೂ ಸುಸೂತ್ರವಾಗಿ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಅದಾದ ನಂತರ ಅಲ್ಲಿ ನಾವು ಏನನ್ನಾದರೂ ದಾನ ನೀಡುತ್ತೇವೆಂದು ಹರಕೆಯನ್ನು ಮಾಡಿಕೊಳ್ಳಬಹುದು.

ಈ ರೀತಿ ಪೂಜೆ ಮಾಡಿಸಿಕೊಂಡು ಬರುವುದರಿಂದಾಗಿ ಮನೆಯಲ್ಲಿ ಯಾವುದೇ ರೀತಿಯಾದಂತಹ ಕೋರ್ಟ್ ಕೆಲಸಗಳು ಮತ್ತು ಜಮೀನಿನ ವ್ಯಾಜ್ಯಗಳಿದ್ದರೆ ಕೂಡಾ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಇದು ಸರಳವಾದ ಮತ್ತು ಹೆಚ್ಚು ಪೂಜೆ ಪುನಸ್ಕಾರಗಳನ್ನು ಮಾಡದೇ ಇರುವಂತಹ ದೇವಾಲಯವಾಗಿದೆ ನಿಮಗೆ ಜಮೀನಿಗೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯ ದಂತಹ ಸಮಸ್ಯೆಗಳಿದ್ದರೂ ಕೂಡ ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ, ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದಿದ್ದರೂ ಕೂಡ ಒಮ್ಮೆ ಭೇಟಿ ಕೊಟ್ಟು ದೇವರ ಕೃಪೆಗೆ ಪಾತ್ರರಾಗಿ ಎಂಬುದಷ್ಟೇ ನಮ್ಮ ಆಶಯ ಧನ್ಯವಾದಗಳು.

Leave a Reply

Your email address will not be published. Required fields are marked *