Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೇನಾದ್ರು ಈ ರೀತಿ ನಿಮ್ಮ ಜೀವನದಲ್ಲಿ ಬದಲಾವಣೆಗಳು ಆಗುತ್ತಿದ್ದರೆ ನಿಮ್ಮ ಮೇಲೆ ಶನಿದೇವನ ಅನುಗ್ರಹ ಆಗಿದೆ ಎಂದು ಅರ್ಥ !!!

ನಮಸ್ಕಾರ ಫ್ರೆಂಡ್ಸ್ ಜೀವನದಲ್ಲಿ ಏರುಪೇರುಗಳು ಸಹಜ ಈ ಏರುಪೇರುಗಳು ಎದುರಾದಾಗ, ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಜೀವನವನ್ನು ಮುಂದೆ ಸಾಗಿಸುವುದೆ ಬದುಕು ಅಲ್ವಾ.

ಆದ ಕಾರಣ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟ ಎದುರಾಗುತ್ತಿದ್ದರೆ, ಅದಕ್ಕೆ ಜ್ಯೋತಿಷ್ಯ ಶಾಸ್ತ್ರವು ಹೇಳುವುದೇನೆಂದರೆ ರಾಶಿ ಕುಂಡಲಿಯಲ್ಲಿ ಕೆಲವೊಂದು ಗ್ರಹಗಳ ಗ್ರಹಚಾರದಿಂದ ಗ್ರಹಗಳ ಚಲನ ವಲನದಿಂದ ಇಂತಹ ಸಮಸ್ಯೆಗಳು ಜೀವನದಲ್ಲಿ ಬರುತ್ತಿರುತ್ತದೆ ಎಂದು.

ಹಾಗಾದರೆ ಒಬ್ಬ ವ್ಯಕ್ತಿಗೆ ಶನಿದೇವನ ಅನುಗ್ರಹ ಇದೆ ಅಂದರೆ ಶನಿದೇವನ ಆಶೀರ್ವಾದ ಆ ವ್ಯಕ್ತಿಯ ಜೀವನದಲ್ಲಿ ಇರುತ್ತದೆ ಅಂದರೆ ಅದರ ಸಂಕೇತ ಯಾವುದೆಲ್ಲ ಆಗಿರುತ್ತದೆ,

ಶನಿದೇವನ ಅನುಗ್ರಹವನ್ನು ಪಡೆದುಕೊಂಡ ವ್ಯಕ್ತಿಯ ಜೀವನ ಹೇಗಿರುತ್ತದೆ ಅವನ ಜೀವನದಲ್ಲಿ ಶನಿದೇವನ ಅನುಗ್ರಹ ಆಗಿದೆ ಎಂದರೆ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂಬುದನ್ನು ತಿಳಿಯೋಣ

ಇವತ್ತಿನ ಮಾಹಿತಿಯಲ್ಲಿ ನೀವು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದು, ನಿಮ್ಮ ಜೀವನದಲ್ಲಿಯೂ ಎಂದಾದರೂ ಈ ರೀತಿಯ ಬದಲಾವಣೆಗಳು ಆಗಿದೆಯಾ ಹಾಗಾದರೆ ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಮಾಡಿ ತಿಳಿಸಿ.

*ಮೊದಲನೆಯದಾಗಿ ವ್ಯಕ್ತಿಯ ಜೀವನದಲ್ಲಿ ಶನಿದೇವನ ಅನುಗ್ರಹ ವಾಗಿದ್ದರೆ ಅವನ ಬದುಕಿನಲ್ಲಿ ಇದು ಯಾವ ರೀತಿ ಸೂಚನೆ ನೀಡುತ್ತದೆ ಅಂದರೆ ಕೆಲವರು ಜೀವನದಲ್ಲಿ ಬಹಳ ಕಷ್ಟಗಳಿಂದ ಬಳಲಿ ಹೋಗಿರುತ್ತಾರೆ,

ಅಂಥಹವರ ಜೀವನದಲ್ಲಿ ಒಂದೇ ಬಾರಿ ಹುಮ್ಮಸ್ಸು ಹೆಚ್ಚುತ್ತದೆ ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುವ ಶಕ್ತಿ ಅವರಲ್ಲಿ ಒಮ್ಮೆಲೆ ಹೆಚ್ಚು ಬಿಡುತ್ತದೆ. ಇದರ ಅರ್ಥವೇನು ಅಂದರೆ ಆ ವ್ಯಕ್ತಿಯ ಜೀವನದಲ್ಲಿ ಶನಿದೇವನ ಅನುಗ್ರಹ ಆಗಿದೆ ಎಂಬುದರ ಸೂಚನೆ ಇದಾಗಿರುತ್ತದೆ.

*ಹುಟ್ಟಿದ ಮಗುವಿಗೆ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಏನಾದರು ಇದ್ದರೆ, ಆ ಮಗುವಿನ ಜೀವನದಲ್ಲಿಯೂ ಕೂಡ ಶನಿದೇವನ ಅನುಗ್ರಹ ಇದೆ ಶನಿದೇವನ ಆಶೀರ್ವಾದ ಇದೆ ಎಂಬುದರ ಸಂಕೇತ ಇದಾಗಿರುತ್ತದೆ.

*ಕೆಲವರು ಹೆಚ್ಚು ಊಟ ಮಾಡಿದರೆ ದಪ್ಪಗಾಗಿ ಬಿಡುತ್ತಾರೆ ಇನ್ನ ಕೆಲವರು ಊಟ ಬಿಟ್ಟರೆ ಸಣ್ಣಗಾಗಿ ಬಿಡುತ್ತಾರೆ ಈ ರೀತಿ ಸಣ್ಣ ದಪ್ಪ ಆಗುತ್ತಿರುವವರಿಗೆ ಶನಿದೇವನ ಅನುಗ್ರಹ ಆಗಿರುತ್ತದೆಯಂತೆ

ಹೌದು ಹೀಗೆಂದು ಶಾಸ್ತ್ರಗಳು ಕೂಡ ಹೇಳುತ್ತಿದೆ ಮತ್ತು ಜೀವನದಲ್ಲಿ ದೇವರನ್ನೇ ನಂಬುವುದಿಲ್ಲ ದೇವರೆಂದರೆ ಆಗುವುದಿಲ್ಲ ಅನ್ನುವವರು, ಇದ್ದಕ್ಕಿದ್ದ ಹಾಗೆ ದೇವರ ಮೇಲೆ ನಂಬಿಕೆ ಬಂದು ದೇವರ ಪೂಜೆಯನ್ನು ಮಾಡುವುದು,

ದೇವಸ್ಥಾನಗಳಿಗೆ ಹೋಗುವುದು ಹೀಗೆಲ್ಲಾ ಅವರ ವ್ಯಕ್ತಿತ್ವದಲ್ಲಿ ಬದಲಾವಣೆ ಕಂಡು ಬಂದರೆ, ಆತನ ಜೀವನದಲ್ಲಿ ಕೂಡ ಶನಿದೇವನ ಅನುಗ್ರಹ ಆಗಿದೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

*ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅದಕ್ಕೆ ಹೆದರದೆ ಆ ಕಷ್ಟಗಳಿಂದ ಹೊರಬರುವ ಚಾಣಾಕ್ಷತನವನ್ನು ಆ ವ್ಯಕ್ತಿ ಹೊಂದಿದ್ದರೆ ಅವನ ಜೀವನದಲ್ಲಿ ಕೂಡ ಶನಿದೇವನ ಕೃಪಾಕಟಾಕ್ಷ ಯಾವಾಗಲೂ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

*ಇನ್ನು ಕೆಲವರು ಇರುತ್ತಾರೆ ಅವರ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಬೇರೆಯವರ ಬಳಿ ಸಹಾಯ ಕೇಳುವುದಿಲ್ಲ ಆದರೆ ಬೇರೆಯವರಿಗೆ ಮಾತ್ರ ಸಹಾಯ ಮಾಡಲು ಮುಂದಿರುತ್ತಾರೆ ಅವರ ಜೀವನದಲ್ಲಿ ಕೂಡ ಶನಿದೇವರ ಆಶೀರ್ವಾದ ಇರುತ್ತದೆ.

*ಎಷ್ಟೇ ಕಷ್ಟಗಳು ಬಂದರೂ ಜೀವನದಲ್ಲಿ ಯಾರೂ ಸುಳ್ಳು ಹೇಳುವುದೆಲ್ಲವೂ ಸತ್ಯನಿಷ್ಠೆ ಎಂಬ ವಿಚಾರಗಳನ್ನು ಪಾಲನೆ ಮಾಡುತ್ತಾರೋ ಅಂತವರ ಜೀವನದಲ್ಲಿ ಕೂಡ ಶನಿದೇವನ ಆಶೀರ್ವಾದ ಕೃಪಾಕಟಾಕ್ಷ ಇರುತ್ತದೆ.

*ಕೆಲವರು ಉನ್ನತವಾದ ಪದವಿಯನ್ನು ಪಡೆದುಕೊಂಡಿರುತ್ತಾರೆ, ಅಂಥವರು ಕೆಲಸ ಸಿಗದೆ ಪರದಾಡುತ್ತಿರುತ್ತಾರೆ ಇಂತಹ ಸಮಯದಲ್ಲಿ ನೀವು ಕಂಗಾಲಾಗಬೇಡಿ ಶನಿದೇವನು ನಿಮ್ಮನ್ನು ಪರೀಕ್ಷಿಸಲೆಂದು ಈ ರೀತಿಯ ಕಷ್ಟಗಳನ್ನು ನಿಮಗೆ ನೀಡುತ್ತಾ ಇರುತ್ತಾನೆ ಇಂತಹ ಕಷ್ಟಗಳನ್ನು ನಿಮಗೆ ನೀಡಿ ನಿಮ್ಮನ್ನು ಪರೀಕ್ಷೆ ಮಾಡುತ್ತಿರುತ್ತಾನೆ, ಕೊನೆಗೆ ನೀವು ಅಲ್ಲ ಒಂದು ದಿನ ಜಯ ಎಂಬುದು ನಿಮ್ಮದಾಗುತ್ತದೆ.

ಇದಿಷ್ಟು ಶನಿದೇವನ ಅನುಗ್ರಹ ಆಶೀರ್ವಾದ ಕೃಪಾಕಟಾಕ್ಷ ಒಬ್ಬ ವ್ಯಕ್ತಿಯ ಮೇಲೆ ಆದರೆ ಎದುರಾಗುವಂತಹ ಸೂಚನೆಗಳು ಘಟನೆಗಳು ಸಂಕೇತಗಳು ನಿಮಗೆ ಮಾಹಿತಿ ಉಪಯುಕ್ತವಾಗಿದ್ದರೆ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *