ನಿಮಗೆ ನಾನು ಮೊದಲೇ ಹೇಳಿದ ಹಾಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಶೇಷವಾದ ಮಹಿಮೆಯನ್ನು ಹೊಂದಿರುವಂತಹ ಸ್ಥಳಗಳು ಇದ್ದೇ ಇರುತ್ತವೆ. ಹೀಗೆ ಒಂದು ಮಹಿಮೆಯನ್ನು ಹೊಂದಿರುವಂತಹ ಸ್ಥಳದ ಬಗ್ಗೆ ನಾವು ಇವತ್ತು ಪ್ರಸ್ತಾಪ ಮಾಡಲು ಹೊರಟಿದ್ದೇವೆ,
ನಿಮಗೆ ಗೊತ್ತಿರಬಹುದು ನಮ್ಮ ಕರ್ನಾಟಕದಲ್ಲಿ ಇರುವ ಕರಾವಳಿಯ ಭಾಗವನ್ನು ದೇವರುಗಳ ತವರೂರು ಅಂತ ಕರೆಯುತ್ತಾರೆ. ಈ ಪ್ರದೇಶದಲ್ಲಿ ಹಲವಾರು ಪ್ರಸಿದ್ಧಿ ಹೊಂದಿರುವಂತಹ ದೇವಸ್ಥಾನಗಳನ್ನು ನಾವು ನೋಡಬಹುದಾಗಿದೆ, ಅದಕ್ಕೆ ಉದಾಹರಣೆ ಎಂದರೆ ಉಡುಪಿಯಲ್ಲಿರುವ ದೇವಸ್ಥಾನ ಹಾಗೂ ಧರ್ಮಸ್ಥಳದ ದೇವಸ್ಥಾನಗಳು ಹಾಗೂ ಮುರುಡೇಶ್ವರ ಅನ್ನುವಂತಹ ಪುಣ್ಯ ಕ್ಷೇತ್ರಗಳು.
ಬನ್ನಿ ಇವತ್ತು ನಾವು ಉಡುಪಿಯಲ್ಲಿ ಇರುವಂತಹ ಅಂಬಲಪಾಡಿಯ ಮಹಾಕಾಳಿಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ ಹಾಗೂ ಈ ಕಾಳಿಯ ಮಹಿಮೆಯ ಬಗ್ಗೆ ಹಾಗೂ ಅವಳ ಪವಾಡದ ಬಗ್ಗೆ ಕೆಲವೊತ್ತು ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳೋಣ. ಉಡುಪಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಈ ದೇವಸ್ಥಾನ,
ತುಂಬಾ ಜನ ಇಲ್ಲಿಗೆ ಸಾವಿರಾರು ಜನರ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇದರ ಅರ್ಥ ನಾವು ತಿಳಿದುಕೊಳ್ಳಬೇಕಾದರೆ ಅಂಬಾ ಎಂದರೆ ತಾಯಿ ಎಂದು ಅರ್ಥ ಹಾಗು ವಾಡಿ ಅಂದರೆ ಬೆಟ್ಟದ ತುದಿ ಅಂತ ಇಲ್ಲಿನ ಜನ ಹೇಳುತ್ತಾರೆ. ಅಂದರೆ ಬೆಟ್ಟದ ಮೇಲೆ ಇರುವಂತಹ ತಾಯಿ ಎಂದು ಇಲ್ಲಿನ ಜನರು ಅಂಬಲಪಾಡಿ ಅಂತ ಕರೆಯುತ್ತಾರೆ.
ಇಲ್ಲಿನ ಜನರು ಹೇಳುವ ಪ್ರಕಾರ ಪ್ರತಿ ಶುಕ್ರವಾರ 5 ರಿಂದ 6 ಗಂಟೆ ಸಮಯದಲ್ಲಿ ಯಾರು ಬೇಕಾದರೂ ಬಂದು ಈ ದೇವಸ್ಥಾನದಲ್ಲಿ ಈ ಅಮ್ಮನ ಜೊತೆಗೆ ಮಾತನಾಡಿ ಕೊಳ್ಳಬಹುದು ಹಾಗೂ ಅವರ ಕುಂದುಕೊರತೆಗಳನ್ನು ಅಮ್ಮನ ಹತ್ತಿರ ಹೇಳಿಕೊಳ್ಳಬಹುದು ಎನ್ನುತ್ತಾರೆ ಅಲ್ಲಿನ ದೇವಸ್ಥಾನದ ಅರ್ಚಕರು. ಇಲ್ಲಿರುವಂತಹ ದೇವಿಯನ್ನು ಮರದಿಂದ ಮಾಡಿದ್ದು 6 ಅಡಿ ಎತ್ತರವಿದೆ, ಈ ಮೂರ್ತಿಯನ್ನು ನಾವು ಕಣ್ಣಿಂದ ನೋಡುವುದಕ್ಕೆ ನಿಜವಾಗಲೂ ಒಂದು ಸ್ವರ್ಗದ ಬಾಗಿಲು ನಮ್ಮ ಹತ್ತಿರ ತಿಳಿದ ಹಾಗೆ ಭಾಸವಾಗುತ್ತದೆ.
ಈ ದೇವಸ್ಥಾನವು ಇರುವುದು ಎಲ್ಲಿ ಎನ್ನುವಂತಹ ಪ್ರಶ್ನೆಗೆ ಉತ್ತರ ಕೇವಲ ಎಂಟು ಕಿಲೋಮೀಟರ್ ಉಡುಪಿಯಿಂದ ನಾವು ಕ್ರಮಿಸಿದರೆ ನಿಮಗೆ ಈ ದೇವಸ್ಥಾನ ಸಿಗುತ್ತದೆ. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈ ದೇವತೆಯ ಹತ್ತಿರ ನೀವೇನಾದರೂ ನಿಮ್ಮ ಕಷ್ಟವನ್ನು ಹೇಳಿಕೊಂಡರೆ ಕೆಲವೇ ಕ್ಷಣಗಳಲ್ಲಿ ಹಾಗೂ ಕೆಲವೇ ದಿನಗಳಲ್ಲಿ ನಿಮ್ಮ ಕಷ್ಟಗಳು ದೂರವಾಗುತ್ತವೆ ಅಂತಾರೆ ಇಲ್ಲಿನ ಜನರು.
ಈ ದೇವಿಯ ಒಂದು ಪವಾಡದ ಕುರಿತು ಕೆಲವೊಂದು ಕಥೆಗಳು ಇಲ್ಲಿ ಸಿಗುತ್ತವೆ ಅದರಲ್ಲಿ ಒಂದು ಉದಾಹರಣೆಯ ಕಥೆಯನ್ನು ಹೇಳುತ್ತೇನೆ ಸ್ವಲ್ಪ ಕೇಳೋಣ ಬನ್ನಿ. ಒಬ್ಬ ಬಡ ರೈತನ ಮಗ ಇದ್ದಕ್ಕಿದ್ದ ಹಾಗೆ ಮನೆಯಿಂದ ಬಿಟ್ಟು ಹೋಗುತ್ತಾನೆ ಹೋದಂತಹ ಮಗನನ್ನು ಬಡ ರೈತ ಎಷ್ಟೇ ಹುಡುಕಿದರೂ ಸಿಗಲಾರದ ಇಂತಹ ಪರಿಸ್ಥಿತಿಗೆ ಆ ಬಡ ರೈತ ಬರುತ್ತಾನೆ, ಕೊನೆಗೆ ಸಂಪೂರ್ಣವಾಗಿ ಕಂಗಾಲಾದ ಅಂತ ಈ ರೈತ ಕೊನೆಗೆ ಈ ದೇವಿಯ ಹತ್ತಿರ ಬಂದು ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ.
ಹೀಗೆ ಮಾಡಿಕೊಂಡಂತಹ ಸ್ವೀಕರಿಸಿದ ಈ ದೇವಿ ಆತನ ಕಷ್ಟವನ್ನು ನಿವಾರಣೆ ಮಾಡುತ್ತಾಳೆ, ಅದು ಹೇಗೆ ಅಂತೀರಾ ಕೆಲವೇ ದಿನಗಳಲ್ಲಿ ಕಳೆದು ಹೋದಂತಹ ಮಗ ನಾನು ಹುಬ್ಬಳ್ಳಿಯಲ್ಲಿ ಇದ್ದೇನೆ ಎನ್ನುವಂತಹ ಸಂದೇಶವನ್ನು ಪತ್ರದ ಮುಖಾಂತರ ಈ ಬಡ ರೈತರಿಗೆ ಕಳಿಸಿರುತ್ತಾನೆ. ಹೀಗೆ ಸಾವಿರಾರು ಉದಾಹರಣೆಗಳನ್ನು ನಾವು ಈ ದೇವಸ್ಥಾನಗಳಲ್ಲಿ ನೋಡಬಹುದಾಗಿದೆ. ಹಾಗಾದರೆ ಇನ್ನೇಕೆ ತಡ ನೀವೇನಾದರೂ ಉಡುಪಿ ಗೆ ಹೋಗಿದ್ದೆ ಆಗಲಿ ಈ ಸ್ಥಳಕ್ಕೆ ಭೇಟಿ ಕೊಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ,