ಗ್ಯಾಸ್ ,ಅಸಿಡಿಟಿ ಸಮಸ್ಯೆ ಇವೆಲ್ಲವೂ ಕೂಡ ಯಾವ ಕಾರಣಕ್ಕಾಗಿ ಬರುತ್ತದೆ ಅಂದರೆ ಸಾಮಾನ್ಯವಾಗಿ ಪ್ರತಿಯೊಬ್ಬರೂ ಹೇಳುವ ಕಾರಣವೆಂದರೆ ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ ಅಂತ ಆದರೆ.
ಇನ್ನು ಕೆಲವರು ಹೇಳುವುದೇನು ಅಂದರೆ ಹೊಟ್ಟೆ ತುಂಬಾ ಊಟ ಮಾಡದೇ ಇದ್ದರೂ ಕೂಡ ಈ ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆ ಕಾಡುತ್ತದೆ ಎಂದು. ಎಷ್ಟೋ ಜನರಿಗೆ ತಿಳಿದಿಲ್ಲ ಈ ಒಂದು ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಸಮಸ್ಯೆ ಹೊಟ್ಟೆ ತುಂಬಾ ಊಟ ಮಾಡಿದರೂ ಕೂಡ ಉಂಟಾಗುತ್ತದೆ .
ಅದು ಹೇಗೆ ಮತ್ತು ಯಾಕೆ ಎಂಬುದನ್ನು ತಿಳಿದುಕೊಳ್ಳೋಣ ಈ ಮಾಹಿತಿಯಲ್ಲಿ, ಜೊತೆಗೆ ಅಸಿಡಿಟಿ ಸಮಸ್ಯೆಗೆ ಒಂದು ಉತ್ತಮವಾದ ಪರಿಣಾಮಕಾರಿ ಮನೆ ಮದ್ದನ್ನು ಕೂಡ ತಿಳಿಯೋಣ.
ಹೌದು ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಅಂದುಕೊಂಡಿರುವುದು ಏನು ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಅರ್ಧ ಹೊಟ್ಟೆ ಊಟ ಮಾಡುವುದರಿಂದ ಅಂತ ಆದರೆ.
ಇನ್ನು ಕೆಲವರು ಹೇಳ್ತಾ ಇರ್ತಾರೆ ನಾನು ಹೊಟ್ಟೆ ತುಂಬಾ ಸರಿಯಾಗಿ ಊಟ ಮಾಡುತ್ತೇನೆ ಆದರೂ ಕೂಡ ಗ್ಯಾಸ್ಟ್ರಿಕ್ ನನ್ನನ್ನು ಕಾಡುತ್ತಿದೆ ಅಂತ, ಇದರಲ್ಲಿಯೇ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವ ವಿಚಾರ ಇದೆ ಅದೇನೆಂದರೆ ಹೊಟ್ಟೆ ಪೂರ್ತಿ ಹಾಗೆ ಊಟ ಮಾಡಿದರೆ ನಮ್ಮ ಜಠರದಲ್ಲಿ ನಾವು ತಿಂದ ಆಹಾರ ಜೀರ್ಣ ಆಗುವುದಿಲ್ಲ.
ಹೌದು ಯಾಕೆ ಅಂದರೆ ಜಠರದಲ್ಲಿ ಉತ್ಪತ್ತಿಯಾಗುವ ಜಠರ ಅಗ್ನಿಗೆ ನಾವು ತಿಂದ ಆಹಾರ ಜೀರ್ಣ ಮಾಡುವುದಕ್ಕಾಗಿ ಸ್ವಲ್ಪ ಜಾಗದ ಅವಶ್ಯಕತೆ ಇರುತ್ತದೆ ಹೇಗೆ ನಾವು ಬಾಯಿಯನ್ನು ಮುಕ್ಕಳಿಸಿ ವುದಕ್ಕಾಗಿ ನೀರನ್ನು ಹಾಕಿಕೊಳ್ಳುತ್ತೇವೆ.
ಅದೇ ರೀತಿ ನಾವು ಹೊಟ್ಟೆಗೆ ಊಟವನ್ನು ಆಹಾರವನ್ನು ಕೂಡ ಅದಕ್ಕೆ ತಕ್ಕ ಪ್ರಮಾಣದಲ್ಲಿ ಸೇವಿಸಬೇಕು, ಬಾಯಿ ತುಂಬಾ ನೀರನ್ನು ಇಟ್ಟುಕೊಂಡು ಹೇಗೆ ಬಾಯನ್ನು ಮುಕ್ಕಳಿಸುವುದು ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಜಠರದ ಪೂರ್ತಿ ಆಹಾರವಿದ್ದರೆ ಅದು ಜೀರ್ಣ ಕ್ರಿಯೆ ಆಗುವುದಕ್ಕೇ ಸಾಧ್ಯವಾಗುವುದಿಲ್ಲ.
ಇನ್ನು ಮುಂದೆ ಊಟ ಮಾಡುವಾಗ ಹೊಟ್ಟೆ ಪೂರ್ತಿಯಾಗಿ ಊಟ ಸೇವಿಸಬೇಡಿ ಹೊಟ್ಟೆಯ ಮುಕ್ಕಾಲು ಭಾಗದಷ್ಟು ಊಟ ಸೇವಿಸಿದರೆ ಸಾಕು ಅದರಲ್ಲಿಯೂ ನಮ್ಮ ಹೊಟ್ಟೆಗೆ ಸಾಕಾಗುವಷ್ಟು ಆಹಾರ ತುಂಬಿದ ಕೂಡಲೇ ನಿಮಗೆ ಒಂದು ಸಿಗ್ನಲ್ ಬರುತ್ತದೆ ಅದೇನೆಂದರೆ ತೇಗು.
ಹೌದು ನಿಮಗೆ ತೇಗು ಬಂದರೆ ನಿಮ್ಮ ಹೊಟ್ಟೆ ಪೂರ್ತಿಯಾಗಿದೆ ಎಂದರ್ಥ ಇನ್ನೂ ಸೇವಿಸುವ ಅವಶ್ಯಕತೆ ಇಲ್ಲ ಅಂತ, ಆದರೆ ಇನ್ನು ಕೆಲವರು ಇರುತ್ತಾರಾ ಹೊಟ್ಟೆ ತುಂಬಿದರೂ ಇನ್ನಷ್ಟು ತಿನ್ನಬೇಕು ಅನ್ನೋ ಆಸೆಯಿಂದ ಹೊಟ್ಟೆ ಪೂರ್ತಿಯಾಗಿ ತಿಂದು ಬಿಡುತ್ತಾರೆ, ಇದರಿಂದ ಅಜೀರ್ಣ ವಾಗುವ ಸಾಧ್ಯತೆ ಇರುತ್ತದೆ ಅಜೀರ್ಣವಾದ ಗ್ಯಾಸ್ಟ್ರಿಕ್ ಆಗುತ್ತದೆ.
ಈ ರೀತಿ ಅಜೀರ್ಣಕ್ಕೆ ಅಸಿಡಿಟಿ ಗ್ಯಾಸ್ಟ್ರಿಕ್ ಇವೆಲ್ಲ ಸಮಸ್ಯೆಗಳಿಗೂ ಸುಲಭ ಪರಿಹಾರವನ್ನು ತಿಳಿಸುತ್ತೇನೆ ಈ ರೀತಿ ನೀವು ಮನೆಯಲ್ಲಿ ಮಾಡಿ ಕೇವಲ ನಾಲ್ಕು ದಿನ ಪಾಲಿಸಿದರೆ ಉತ್ತಮ ಫಲಿತಾಂಶವನ್ನು ನೀವು ಪಡೆದುಕೊಳ್ಳುತ್ತೀರಿ.
ಈ ಮನೆ ಮತ್ತು ಮಾಡುವ ವಿಧಾನ ಹೇಗೆ ಅಂದರೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅರ್ಧಕ್ಕೆ ಕತ್ತರಿಸಬೇಕು ನಂತರ ಒಂದು ನಿಂಬೆ ಹಣ್ಣಿನ ಮೇಲೆ ಅರ್ಧ ಚಮಚ ಜೀರಿಗೆ ಪುಡಿ ಅರ್ಧ ಚಮಚ ಅಜ್ವಾನ ಪುಡಿಯನ್ನು ಹಾಕಿ ಕಾಲು ಚಮಚ ಅರಿಶಿನವನ್ನು ಹಾಕಿ ಅದಕ್ಕೆ ಸೈಂಧವ ಲವಣವನ್ನು ಹಾಕಬೇಕು.
ಈ ನಿಂಬೆ ಹಣ್ಣಿನ ಹೋಳಿನ ಮೇಲೆ ಮತ್ತೊಂದು ಕತ್ತರಿಸಿ ಇಟ್ಟ ನಿಂಬೆ ಹಣ್ಣಿನ ಹೋಳನ್ನಿಟ್ಟು, ಇದನ್ನು ಒಂದು ತವಾದ ಮೇಲೆ ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಬಿಸಿ ಮಾಡಬೇಕು.
ಎರಡು ನಿಮಿಷಗಳ ಬಳಿಕ ಈ ನಿಂಬೆಹಣ್ಣಿನ ಹೋಳನ್ನು ತೆಗೆದುಕೊಂಡು ಜೀರಿಗೆ ಮತ್ತು ಅಜ್ವಾನ ಪುಡಿ ಹಾಕಿದ ನಿಂಬೆ ಹಣ್ಣಿನಿಂದ ರಸವನ್ನು ತೆಗೆದು ಮಧ್ಯಾಹ್ನ ಊಟದ ಬಳಿಕ ರಾತ್ರಿ ಊಟದ ಬಳಿಕ ಈ ಒಂದು ಚಮಚ ರಸವನ್ನು ಸೇವಿಸುತ್ತಾ ಬರುವುದರಿಂದ ಯಾವ ಅಸಿಡಿಟಿ ಸಮಸ್ಯೆ ಇರುವುದಿಲ್ಲ ಅಜೀರ್ಣ ಸಮಸ್ಯೆಯೂ ಕಾಡುವುದಿಲ್ಲ.