ಕರ್ನಾಟಕದಲ್ಲಿ ನಾಗದೇವಾಲಯ ಅಂದರೆ ನಮಗೆ ನೆನಪಿಗೆ ಬರುವುದು ಘಾಟಿಸುಬ್ರಹ್ಮಣ್ಯ ಮತ್ತು ಕುಕ್ಕೆ ಸುಬ್ರಹ್ಮಣ್ಯ. ಹಾಗೂ ಜನರು ಸರ್ಪದೋಷ ನಿವಾರಣೆಗಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ದೋಷ ನಿವಾರಣೆ ಮಾಡಿಕೊಂಡು ಬರುತ್ತಾರೆ ಇದರ ಜತೆಗೆ ನಮ್ಮ ಸಂಪ್ರದಾಯದಲ್ಲಿ ನಾವು ನಾಗರಹಾವುಗಳನ್ನು ನಾಗದೇವತೆ ರೂಪದಲ್ಲಿ ಪೂಜೆ ಮಾಡುತ್ತೇವೆ.
ಸರ್ಪದೋಷ ಸಮಸ್ಯೆಗಳಿಂದ ಹಲವು ತೊಂದರೆಗಳನ್ನು ಜೀವನದಲ್ಲಿ ಅನುಭವಿಸುತ್ತಾ ಇರುವವರು ಕುಕ್ಕೆಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಾರೆ. ಅದೇ ರೀತಿಯಲ್ಲಿ ನಾವು ಈ ಮಾಹಿತಿಯಲ್ಲಿ ನಾಗ ದೇವತೆಯ ಮತ್ತೊಂದು ವಿಶೇಷ ದೇವಾಲಯದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಈ ದೇವಾಲಯವು ನಮ್ಮ ರಾಜಧಾನಿಯಾದ ಬೆಂಗಳೂರಿನಲ್ಲಿ ಇದೆ ಈ ದೇವಾಲಯವು ಮುಕ್ತಿನಾಗ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದೆ.
ಈ ದೇವಾಲಯವು ಕೆಂಗೇರಿ ರಸ್ತೆಯಿಂದ ಸ್ವಲ್ಪ ದೂರ ಇರುವ ರಾಮನಹಳ್ಳಿ ಅಲ್ಲಿ ಇದೆ. ಕೆಂಗೇರಿಯಿಂದ ರಾಮನ ಹಳ್ಳಿಗೆ ಹೋಗಲು ಬಸ್ ವ್ಯವಸ್ಥೆ ಇದೆ ಹಾಗೂ ರಾಮನಹಳ್ಳಿಯ ಬಸ್ ನಿಲ್ದಾಣದಲ್ಲಿ ಇಳಿದರೆ, ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮುಕ್ತಿನಾಗ ದೇವಾಲಯವೂ ಇದೆ. ಈ ದೇವಾಲಯದಲ್ಲಿ ಪ್ರತಿಷ್ಠಾಪನೆ ಗೊಂಡಿರುವಂತಹ ಏಕಶಿಲೆ ನಾಗದೇವತೆಯೂ ತನ್ನ ಗೂಡಿಗೆ ಬರುವ ಭಕ್ತಾಧಿಗಳ ಬೇಡಿಕೆಗಳನ್ನು ನೆರವೇರಿಸುತ್ತಾರೆ ಮತ್ತು ಈ ದೇವಾಲಯದ ಬಗ್ಗೆ ಇನ್ನಷ್ಟು ಹೇಳಬೇಕು ಅಂದರೆ ಮುಕ್ತಿನಾಗ ದೇವಾಲಯದ ಮುಂದೆಯೇ ಆದಿ ಮುಕ್ತಿನಾಗ ದೇವಾಲಯವು ಕೂಡ ಇದೆ.
ಮುಕ್ತಿನಾಗ ದೇವಾಲಯ ದಲ್ಲಿ ಸುಮಾರು ಹನ್ನೆರಡು ಅಡಿ ಉದ್ದದ ಕೃಷ್ಣ ಶಿಲೆಯಲ್ಲಿ ಕೆತ್ತನೆ ಮಾಡಿರುವ ನಾಗದೇವತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಇಲ್ಲಿ ಯಾವುದೇ ಗರ್ಭಗುಡಿ ಇಲ್ಲ ಮುಖಮಂಟಪದಲ್ಲಿ ನಾಗದೇವತೆಯನ್ನು ನಿರ್ಮಾಣ ಮಾಡಲಾಗಿದೆ. ಹೆಡೆಬಿಚ್ಚಿ ನಿಂತಿರುವ ಈ ನಾಗದೇವತೆಯ ಆಲಯದಲ್ಲಿ ಸಣ್ಣಸಣ್ಣ ನೂರ ಎಂಟು ನಾಗರ ಶಿಲೆಗಳು ಕೂಡ ಇವೆ. ಈ ದೇವಾಲಯದಲ್ಲಿ ಇಪ್ಪತ್ತ್ 1ಅಡಿ ಉದ್ದದ ಸುಬ್ರಹ್ಮಣ್ಯ ವಿಗ್ರಹವು ಕೂಡ ಇದೆ ಈ ದೇವಾಲಯವನ್ನು ಸಾವಿರದ ಒಂಬೈನೂರ ತೊಂಬತ್ತ ಒಂಬತ್ತರಲ್ಲಿ ವಿಜಯ ಕಾಲೇಜ್ ಪ್ರೊಫೆಸರ್ ಅವರು ನಿರ್ಮಾಣ ಮಾಡಿದ್ದಾರೆ.
ವಿಜಯ ಕಾಲೇಜ್ ಪ್ರೊಫೆಸರ್ ಆದ ಸುಬ್ರಹ್ಮಣ್ಯ ಶಾಸ್ತ್ರಿಗಳಿಗೆ ಕನಸಿನಲ್ಲಿ ನಾಗದೇವತೆ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಸುಬ್ರಹ್ಮಣ್ಯಶಾಸ್ತ್ರಿಗಳು ನಾಗದೇವರ ಪರಮ ಭಕ್ತರಾಗಿರುತ್ತಾರೆ ಮತ್ತು ಪ್ರತಿ ತಿಂಗಳು ಕುಕ್ಕೆಸುಬ್ರಹ್ಮಣ್ಯ ಗೆ ಹೋಗಿ ದರುಶನವನ್ನು ಪಡೆದುಕೊಂಡು ಬರುತ್ತಿರುತ್ತಾರೆ. ಒಮ್ಮೆ ಶಾಸ್ತ್ರಿಗಳು ಜಮೀನು ಕೊಂಡುಕೊಳ್ಳುವುದಕ್ಕಾಗಿ ಜಮೀನು ನೋಡಿ ಕೊಂಡು ಬರುವುದಕ್ಕೆ ಹೋದಾಗ ಅವರಿಗೆ ಅಲ್ಲಿ ಹದಿನಾರು ಅಡಿ ಉದ್ದದ ನಾಗರ ಹಾವಿನ ಪೊರೆ ಕಾಣಿಸುತ್ತದೆ
ಮತ್ತು ಅದೇ ರಾತ್ರಿ ಸುಬ್ರಹ್ಮಣ್ಯ ಶಾಸ್ತ್ರಿ ಅವರ ಕನಸಿಗೆ ಬಂದು ನಾನು ಕಂಡಲ್ಲಿ ನನಗೆ ದೇವಾಲಯ ಕಟ್ಟಿಸು ಎಂದು ನಾಗದೇವರು ಆಜ್ಞೆ ಮಾಡಿದಂತಾಗುತ್ತದೆ. ಮಾರನೇ ದಿವಸವೇ ಸುಬ್ರಹ್ಮಣ್ಯ ಶಾಸ್ತ್ರಿಗಳು ಆ ಜಮೀನನ್ನು ಕೊಂಡುಕೊಂಡು ಅಲ್ಲಿ ದೇವಾಲಯವನ್ನು ನಿರ್ಮಿಸಿರುತ್ತಾರೆ ಮತ್ತು ಅಲ್ಲಿ ಹದಿನಾರು ಅಡಿ ಉದ್ದದ ನಾಗದೇವರನ್ನು ಕೂಡ ಪ್ರತಿಷ್ಠಾಪನೆ ಮಾಡುತ್ತಾರೆ ಈ ಜಾಗದಲ್ಲಿ ಸುಮಾರು ವರುಷಗಳ ಹಿಂದೆ ಜುಂಜಪ್ಪ ಎಂಬ ಹಾವು ಇತ್ತು ಇಲ್ಲಿಯ ಜನರನ್ನು ಆ ಹಾವು ರಕ್ಷಣೆ ಮಾಡುತ್ತಿತ್ತು ಎಂಬ ನಂಬಿಕೆ ಕೂಡ ಇತ್ತು ಅದೇ ಕಾರಣಕ್ಕೆ ಈ ದೇವರಿಗೆ ಚುಂಚು ದೇವರು ಅಂತ ಕೂಡ ಕರೆಯುವುದುಂಟು.
ಇದೇ ದೇವಾಲಯದ ಆವರಣದಲ್ಲಿ ಪಟಾಲಮ್ಮ ಕಾಲಭೈರವ ದೇವರನ್ನು ಕೂಡ ಪ್ರತಿಷ್ಠಾಪನೆ ಮಾಡಲಾಗಿದೆ. ಜನರು ಕುಜದೋಷ ಶನಿಶಾಂತಿ ಮಾಡಿಸುವುದಕ್ಕೆ ಸರ್ಪದೋಷ ನಿವಾರಣೆ ಮಾಡಿಕೊಳ್ಳುವುದಕ್ಕೆ ಸರ್ಪದೋಷ ನಿವಾರಣೆಗಾಗಿ ಪೂಜೆ ಮಾಡಿಸುವುದಕ್ಕೆ ಈ ದೇವಲಯಕ್ಕೆ ಬರುತ್ತಾರೆ. ನೀವು ಎಂದಾದರೂ ಕೆಂಗೇರಿ ಕಡೆ ಹೋದಾಗ ಈ ಮುಕ್ತಿನಾಗ ದೇವಾಲಯಕ್ಕೆ ಹೋಗಿ ದೇವರ ದರ್ಶನ ವನ್ನು ಪಡೆದುಕೊಂಡು ಬನ್ನಿ ಧನ್ಯವಾದಗಳು.