ನಿಮಗೆ ತುಂಬಾ ಹತ್ತಿರವಾದವರು ನಿಮಗೆ ಪದೇ ಪದೇ ನೋವು ಕೊಡುತ್ತಿದ್ದರೆ ಈ ರೀತಿಯಾಗಿ ಮಾಡಿ ಸಾಕು !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನೆಯ ವಾತಾವರಣ ಚೆನ್ನಾಗಿದ್ದರೆ ಮನುಷ್ಯನ ಮನಸ್ಥಿತಿ ಕೂಡ ಚೆನ್ನಾಗಿರುತ್ತದೆ ಆದರೆ ಈ ರೀತಿ ಮನುಷ್ಯನ ಮನಸ್ಥಿತಿ ಚೆನ್ನಾಗಿರಬೇಕು ಎಂದರೆ ನಮ್ಮ ಸುತ್ತಮುತ್ತ ಇರುವವರು ಕೂಡ ನಮ್ಮ ಮನಸ್ಸಿಗೆ ಯಾವುದೇ ರೀತಿಯಾದಂತಹ ನೋವುಗಳಾಗಬಾರದು

ಆ ರೀತಿ ಏನಾದರೂ ನೋವುಗಳು ಆರಂಭವಾಯಿತು ಎಂದರೆ ಅವು ಮುಗಿಯುವುದಿಲ್ಲ ನಮಗೆ ಬೇಕಾದವರೆ ನಮಗೆ ಹೆಚ್ಚು ತೊಂದರೆ ಕೊಡುತ್ತಿದ್ದರೆ ಎಂದೆನಿಸಲು ಆರಂಭವಾಗುತ್ತದೆ. ಅದು ಹೇಗೆ ಎಂದು ಯೋಚಿಸಬೇಕು ಮತ್ತು ನಾವು ಬೇರೆಯವರಿಗೆ ಎಂದೂ ಕೂಡ ಹಿಂಸೆಗಳನ್ನು ಕೊಡಬಾರದು.

ಸಾಮಾನ್ಯವಾಗಿ ಮನುಷ್ಯನ ಮನಸ್ಥಿತಿಗಳು ನಕಾರಾತ್ಮಕ ಮತ್ತು ಸಕಾರಾತ್ಮಕ ಎಂದು ಎರಡು ರೀತಿಯಲ್ಲಿ ಇರುತ್ತವೆ ಎಂದೂ ಕೂಡ ನಾವು ನಕಾರಾತ್ಮಕವಾಗಿ ಯೋಚನೆ ಮಾಡಬಾರದು ಸಕಾರಾತ್ಮಕವಾಗಿ ಯೋಚನೆ ಮಾಡಬೇಕು ನಮ್ಮ ಮನಸ್ಸಿನ ಯೋಚನೆಗಳು ನಕಾರಾತ್ಮಕವಾಗಿ ಇದ್ದರೆ ನಮ್ಮ ಇಡೀ ಜೀವನವೇ ಹಾಳಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ

ಅದರ ಜೊತೆಯಲ್ಲಿ ನಾವು ನಕಾರಾತ್ಮಕ ಅಂಶಗಳನ್ನು ಬೇರೆಯವರಿಗೆ ಹೇಳಿಕೊಳ್ಳುತ್ತಾ ಹೋದರೆ ಅದರಿಂದ ಅವರಿಗೂ ಕೂಡ ಕಿರಿಕಿರಿ ಇರುತ್ತದೆ. ಅದರ ಜೊತೆಯಲ್ಲಿ ನಾವು ಎಂದೂ ಕೂಡ ಹಿಂದೆ ಒಂದು ಮುಂದೆ ಒಂದು ಮಾತನಾಡಬಾರದು ಆ ರೀತಿ ಮಾತನಾಡಿದರು ಕೂಡ ನಮ್ಮ ಮನೆಯಲ್ಲಿರುವವರ ಮನಸ್ಥಿತಿಗಳು ಬೇರೆ ಬೇರೆಯಾಗುತ್ತದೆ

ನಾವೂ ಕೂಡ ಬೇರೆಯವರೊಂದಿಗೆ ಮಾತನಾಡುವಂತಹ ಪರಿಸ್ಥಿತಿಯಲ್ಲಿ ಅವರ ಮನಸ್ಸಿಗೆ ನೋವಾಗದ ರೀತಿಯಲ್ಲಿ ಸಾಧ್ಯವಾದಷ್ಟು ಮಾತನಾಡಬೇಕು ಏಕೆಂದರೆ ಬೇರೆಯವರ ಮನಸ್ಥಿತಿಗಳು ನಮಗೇ ತಿಳಿದಿರುವುದಿಲ್ಲ ನಮ್ಮ ಮನಸ್ಥಿತಿಗೆ ಅನುಗುಣವಾಗಿ ನಾವು ಮಾತನಾಡಲು ಹೊರಟಾಗ ಅದು ನಮಗೆ ತೊಂದರೆಯನ್ನ ಮಾಡುತ್ತದೆ

ಅದರ ಜೊತೆಯಲ್ಲಿ ನಮ್ಮ ಮುಂದೆ ಇರುವ ವ್ಯಕ್ತಿಗಳಿಗೂ ಕೂಡ ಅದು ತುಂಬಾ ನೋವನ್ನುಂಟುಮಾಡುತ್ತದೆ ಆ ರೀತಿ ಆಗದ ರೀತಿಯಲ್ಲಿ ನೋಡಿಕೊಳ್ಳುವುದು ಮುಖ್ಯ.
ಮತ್ತು ನಮ್ಮ ಮಾತಿನ ಮೇಲೆ ಹೆಚ್ಚಿನ ನಿಗಾ ಇರಬೇಕು.

ಯಾವ ಮಾತುಗಳನ್ನು ನಾವು ಆಡುತ್ತಿದ್ದೇವೆ ಯಾವ ಮಾತುಗಳಿಂದ ಬೇರೆಯವರ ಮನಸ್ಸು ಹೇಗೆ ಮುರಿಯುತ್ತೇವೆ ಎಂದು ಯೋಚನೆ ಮಾಡುವ ಮೊದಲು ಆ ಮಾತು ಅವರಿಗೆ ಹಿತವನ್ನ ಕೊಡುವ ರೀತಿಯಲ್ಲಿ ಅವರ ತಪ್ಪುಗಳನ್ನು ಹೇಳಬೇಕು ಅದನ್ನ ಹೊರತು ಪಡಿಸಿ ಅವರ ತಪ್ಪುಗಳನ್ನು ಹೇಳುವ ನೆಪದಲ್ಲಿ ಅವರ ಮನಸ್ಸಿಗೆ ನಾವು ಯಾವುದೇ ರೀತಿಯಾದಂತಹ ತೊಂದರೆಗಳನ್ನ ಯಾವುದೇ ಕಾರಣಕ್ಕೂ ಮಾಡಬಾರದು.

ಯಾವಾಗಲೂ ಕೂಡ ನಾವು ಬೇರೆಯವರಿಂದ ತೊಂದರೆಯಾಗಿತ್ತು ಎಂಬ ಕಾರಣಕ್ಕೆ ನಾವು ಅವರಿಗೆ ತೊಂದರೆಯನ್ನು ಕೊಡಲು ಪ್ರಯತ್ನಿಸಬಾರದು ಆ ರೀತಿ ಮಾಡಿದೆವು ಎಂದರೆ ಖಂಡಿತವಾಗಿಯೂ ನಾವು ಮತ್ತೊಂದು ತೊಂದರೆಗೆ ಒಳಗಾಗುತ್ತೇವೆ

ಆದ್ದರಿಂದ ತೊಂದರೆ ಕೊಟ್ಟವರನ್ನು ಕ್ಷಮಿಸಬೇಕು ಮತ್ತು ಅವರು ತೊಂದರೆ ಕೊಡದ ರೀತಿಯಲ್ಲಿ ಅವರಿಗೆ ನಾಜೂಕಾಗಿ ತಿಳುವಳಿಕೆಯನ್ನ ಹೇಳಬೇಕು ಅದನ್ನು ಹೊರತು ಅವರಿಗೆ ನಾವು ತೊಂದರೆ ಕೊಟ್ಟು ನಮ್ಮ ನಡುವೆ ಇರುವ ಸಂಬಂಧವನ್ನು ಹಾಳು ಮಾಡಿಕೊಳ್ಳಬಾರದು.

ಮನೆಯಲ್ಲಿ ಒಂದೇ ಸೂರಿನ ಕೆಳಗೆ ಇರುವವರೆಲ್ಲರೂ ಕೂಡ ನೆಮ್ಮದಿಯುತ ಜೀವನ ಮಾಡುವಂತಾಗಬೇಕು ಅದನ್ನು ಹೊರತುಪಡಿಸಿ ಯಾವಾಗಲೂ ಕೂಡ ಜಗಳ ಆಗುವ ರೀತಿಯಲ್ಲಿ ಮಾತುಕತೆಗಳು ಇರಬಾರದು ಮನಸ್ಸು ಮುರಿದರೆ ಅದನ್ನು ಸರಿಪಡಿಸುವುದು ತುಂಬಾ ಕಷ್ಟ

ಆದ್ದರಿಂದ ಸಾಧ್ಯವಾದಷ್ಟು ಯಾವುದೇ ಮಾತುಗಳನ್ನು ಆಡಬೇಕಾದರೂ ಕೂಡ ಒಮ್ಮೆ ಯೋಚಿಸಿ ಮಾತನಾಡಿ ಎಂಬುದು ನಮ್ಮ ಕಳಕಳಿಯ ಪ್ರಾರ್ಥನೆ ಅಷ್ಟೆ ಏಕೆಂದರೆ ಸಂಬಂಧಗಳು ಚೆನ್ನಾಗಿದ್ದರೆ ಮನೆಯಲ್ಲಿ ನೆಮ್ಮದಿ ಇರುತ್ತದೆ ನೆಮ್ಮದಿ ಇದ್ದರೆ ಸುಖ ಶಾಂತಿ ತಾನಾಗಿಯೇ ಒಲಿದು ಬರುತ್ತದೆ ಆದ್ದರಿಂದ ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕು ಅಷ್ಟೆ ಧನ್ಯವಾದ.

Leave a Reply

Your email address will not be published. Required fields are marked *