ಅನ್ನದಲ್ಲಿ ಮಹಾಶಿವನಿಗೆ ಇದನ್ನು ಹಾಕಿ ಎಡೆ ಮಾಡಿದರೆ ನಿಮಗೆ ಬಡತನದ ಕಷ್ಟ ಎಂದಿಗೂ ಬರುವುದಿಲ್ಲ ಹಾಗಾದರೆ ಶಿವನಿಗೆ ಏನನ್ನು ತಿನ್ನಲು ಇಷ್ಟ ಎಂದು ನೀವೇ ನೋಡಿ.ಹಾಯ್ ಸ್ನೇಹಿತರೆ ದೇವರ ಬಗ್ಗೆ ನಿಮಗೆ ನಂಬಿಕೆ ಇದ್ದರೆ ಈ ಒಂದು ಮಾಹಿತಿ ಓದಿ. ಕಷ್ಟ ಬಂದಾಗ ಮಾತ್ರ ನಾವು ದೇವರ ಬಳಿ ಹೋಗುವುದು ತಪ್ಪು. ಸುಖ ಇದ್ದಾಗ ದೇವರನ್ನು ಮರೆಯದೆ ಪ್ರತಿನಿತ್ಯ ನಾವು ಹೇಗೆ ದೇವರನ್ನು ಪೂಜಿಸುತ್ತೇವೆ ಹಾಗೆ ಯಾವುದೇ ಕಷ್ಟ ಇದ್ದಾಗ ಕೂಡ ನಾವು ದೇವರ ಪೂಜೆ ಮಾಡಬೇಕು ಹಾಗೂ ಬೇರೆಯವರಿಗೆ ಸಹಾಯ ಮಾಡಬೇಕು. ಶಿವನ ಮಹಿಮೆಗಳು ಅಪಾರವಾಗಿದೆ. ಒಂದು ಸಲ ಯಾರಿಗಾದರೂ ಶಿವನ ಆಶೀರ್ವಾದ ಸಿಕ್ಕರೆ ಜೀವನ ಪೂರ್ತಿಯಾಗಿ ಅವರು ಸಕಲ ಭೋಗಗಳಿಂದ ಸಮೃದ್ಧಿಯಾಗಿ ಇರುತ್ತಾರೆ. ಹಾಗಾದರೆ ನಾವು ಶಿವನ ಸಂಪೂರ್ಣ ಅನುಗ್ರಹ ಇರಬೇಕೆಂದರೆ ಏನು ಮಾಡಬೇಕು ಎಂಬುದನ್ನು ನೋಡಿ.
ಸ್ನೇಹಿತರೆ ಜೀವನದಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತದೆ ಆದರೆ ಅವುಗಳನ್ನು ಎದುರಿಸುವ ಶಕ್ತಿ ಕೆಲವೊಬ್ಬರಿಗೆ ಮಾತ್ರ ಇರುತ್ತದೆ ಅಂಥವರು ಒಳ್ಳೆಯ ಸ್ಥಾನದಲ್ಲಿರುವವರು ಇರುತ್ತಾರೆ. ದೇವಾದಿ ದೇವ ಎಂದು ಕರೆಯಲ್ಪಡುವ ಶಿವನು ಸೃಷ್ಟಿಯ ಲಯ ಕರ್ತ. ತ್ರಿಲೋಕದ ಕಲ್ಯಾಣಕ್ಕಾಗಿಯೇ ಶಿವನು ಹುಟ್ಟಿ ಬಂದ ಎಂದು ಹೇಳಲಾಗುವುದು. ಸೃಷ್ಟಿಯ ಒಳಿತಿಗಾಗಿ ಇರುವ ತ್ರಿಮೂರ್ತಿಗಳಲ್ಲಿ ಶಿವನು ಅತ್ಯಂತ ಸರಳ ಹಾಗೂ ಶಕ್ತಿಶಾಲಿ.ಲಿಂಗಾಯತ ಮತದ ಪ್ರಕಾರ ಶಿವವೇ ಪರಬ್ರಹ್ಮ. ಕೆಲವರು ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ. ಶಿವರಾತ್ರಿ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಚತುರ್ದಶಿಯಂದು ಆಚರಿಸಲಾಗುತ್ತದೆ.
ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಕೂಡ ಮಾಡುತ್ತಾರೆ. ಶಿವರಾತ್ರಿಯಲ್ಲಿ ದಿನ ಶಿವನನ್ನು ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.ಇದರ ಮುಂದಿನ ದಿನ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸುವರು.ತಂಬಿಟ್ಟು ಈ ಹಬ್ಬದ ಪ್ರಮುಖ ತಿನಿಸು. ಶಿವರಾತ್ರಿ ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ.ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯ ಬಳಿ ಹೇಳಿದ್ದಾನೆ ಎಂಬ ನಂಬಿಕೆ ಇದೆ
ಹಾಗೆಯೇ ಇದು ಶಿವಪುರಾಣದಲ್ಲಿ ಇದೆ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ.ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ ಇದೆ. ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ.ಭೂ-ಸಂಚಾರ ಮಾಡುತ್ತಾನೆ.ಎಲ್ಲ ಸ್ಥಾಳ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂದು ಹೇಳುತ್ತಾರೆ.
ಶಿವನ ಆಶೀರ್ವಾದ ಬೇಕೆಂದರೆ ಪ್ರತಿ ಸೋಮವಾರ ಪೂಜೆಯನ್ನು ಮಾಡಿ ಶಿವನಿಗೆ ಬಿಲ್ವಪತ್ರೆಯನ್ನು ಹಾಕಬೇಕು 21 ಸಲ ಓಂ ನಮಃ ಶಿವಾಯ ಎಂದು ಮಂತ್ರವನ್ನು ಪಠಿಸಬೇಕು. ಹಾಗೆಯೇ ಕೈಲಾಸವಾಸಿ ಶಿವನಿಗೆ ಮೊಸರನ್ನ ಎಂದರೆ ತುಂಬಾ ಇಷ್ಟ ಹಾಗಾಗಿ ನೈವೇದ್ಯ ಮಾಡುವಾಗ ಅನ್ನಕ್ಕೆ ಮೊಸರು ಹಾಕುವುದು ಅಥವಾ ಅನ್ನದಲ್ಲಿ ಮೊಸರನ್ನು ಹಾಕಿ ಅದನ್ನು ಕಲಸಿ ಮೊಸರನ್ನ ನೈವೇದ್ಯ ಮಾಡಬೇಕು. ಈ ರೀತಿಯಾಗಿ ಪ್ರತಿ ಸೋಮವಾರ ಮಾಡುತ್ತ ಬಂದರೆ ಮನೆಯಲ್ಲಿ ಬಡತನ ಕಡಿಮೆಯಾಗುತ್ತದೆ ಹಾಗೂ ಮನೆಯಲ್ಲಿ ಆರೋಗ್ಯದ ಸಮಸ್ಯೆ ಹಾಗೂ ಜಗಳಗಳು ನಡೆಯುವುದಿಲ್ಲ ಸ್ನೇಹಿತರೆ
ಹಾಗಾದರೆ ಒಂದು ಕೆಲಸವನ್ನು ನೀವು ಮನೆಯಲ್ಲಿ ಮಾಡಿ ನೋಡಿ ಇದು ತುಂಬಾ ಸುಲಭವಾದ ಪರಿಹಾರ ಹಾಗಾಗಿ ಇದನ್ನು ನೀವು ಮಾಡಿ ಹಾಗೂ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಮಾಡಲು ತಿಳಿಸಿ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ. ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ