Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಿಮಗೆ ಏನಾದ್ರು ಪ್ರತಿನಿತ್ಯ ನಿದ್ರಾಹೀನತೆ ಸಮಸ್ಯೆ ಇದ್ದರೆ ಈ ರೀತಿಯಾಗಿ ನೈಸರ್ಗಿಕ ಮಾಡುವ ಈ ಚಿಕೆತ್ಸೆಯಿಂದ ಕಣ್ಣು ತುಂಬಾ ನಿದ್ದೆ ಮಾಡಬಹುದು !!!rr

ಮಾನವನಿಗೆ ಅತ್ಯಂತ ಸುಖ ಶಾಂತಿ ನೀಡುವ ಸಾಧನ ಯಾವುದು ಎಂಬ ಪ್ರಶ್ನೆಗೆ ಉತ್ತರ ನಿದ್ರೆ, ಸುಖವಾಗಿ ನಿದ್ರಿಸುವವನೇ ಸಂಪೂರ್ಣ ಆರೋಗ್ಯವಂತ, ರಾತ್ರಿ ವೇಳೆಯಲ್ಲಿ ಊಟದಲ್ಲಿ ಮಜ್ಜಿಗೆ ಮತ್ತು ಈರುಳ್ಳಿಯನ್ನು ಹೆಚ್ಚಾಗಿ ಸೇವಿಸಬೇಕು,

ಬಾದಾಮಿ ಪುಡಿಯನ್ನು ಹಾಲಿಗೆ ಸೇರಿಸಿ ಕುಡಿಯುವುದರಿಂದ ಸುಖ ನಿದ್ರೆ ಲಕ್ಷ್ಯ ರಾತ್ರಿ ವೇಳೆಯಲ್ಲಿ ಗೋಧಿ ಚಪಾತಿಯೊಂದಿಗೆ ಈರುಳ್ಳಿಯನ್ನು ಉಪಯೋಗಿಸಿ ಊಟ ಮಾಡಿ ನಂತರ ಒಂದು ಲೋಟ ಮಜ್ಜಿಗೆಯನ್ನು ಕುಡಿದು ಮಲಗುವುದರಿಂದ ನಿದ್ರಾಹೀನತೆ ತೊಲಗುತ್ತದೆ.

ಮನುಷ್ಯನಿಗೆ ನಿದ್ರೆ ಎನ್ನುವುದು ತುಂಬಾನೇ ಅವಶ್ಯಕ. ನಿದ್ದೆಯನ್ನು ಸರಿಯಾಗಿ ಮಾಡದಿದ್ದರೆ ಹಲವಾರು ಕಾಯಿಲೆಗಳು ಬರಲು ಶುರುವಾಗುತ್ತದೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಅಂತಹ ಮನುಷ್ಯ ಆ ದಿನ ಆತ ಕ್ರಿಯಾಶೀಲವಾಗಿರುವುದಿಲ್ಲ.

ಹಾಗಾಗಿ ಪ್ರತಿದಿನ ಸರಿಯಾಗಿ ನಿದ್ದೆ ಬಂದರೆ ಎಂಟರಿಂದ ಹತ್ತು ಗಂಟೆ ನಿದ್ದೆ ಮಾಡಲೇಬೇಕು.ನಿದ್ರೆಯನ್ನು ಸರಿಯಾಗಿ ಮಾಡದಿದ್ದರೆ ಮನುಷ್ಯ ವಿಷಯದಲ್ಲಿ ಹಲವಾರು ತೊಂದರೆಯುಂಟಾಗುತ್ತದೆ.

ಹಾಗಾಗಿ ನಿದ್ರೆ ಮನುಷ್ಯನಿಗೆ ಅತಿ ಅವಶ್ಯಕ. ಹಲವಾರು ಜನರು ಈ ದಿನ ಕಷ್ಟಪಟ್ಟು ರಾತ್ರಿಯಲ್ಲಿ ಚೆನ್ನಾಗಿ ನಿದ್ದೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಅವ್ರಿಗೆ ನಿದ್ದೆ ಬರುವುದಿಲ್ಲ. ನಿದ್ದೆ ಬರದೇ ಇರಲು ಹಲವಾರು ಕಾರಣಗಳಿವೆ.

ಇದರಲ್ಲಿ ಮೊದಲನೇ ಕಾರಣ ಎಂದರೆ ಮಾನಸಿಕ ಒತ್ತಡ. ಹೌದು ಮನುಷ್ಯನು ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ದಿನೇದಿನೇ ಹೋದಹಾಗೆ ತನ್ನ ಕೆಲಸವನ್ನು ಹೆಚ್ಚಿಸಿಕೊಳ್ಳುತ್ತಾ ಇದ್ದಾನೆ.ಅತಿಯಾದ ಮಾನಸಿಕ ಒತ್ತಡದಿಂದ ನಿದ್ರೆಬಾರದ ಸಮಸ್ಯೆ ಉಂಟಾಗುತ್ತದೆ.ನಿಮಗೆ ನಿದ್ದೆ ಬಾರದ ಸಮಸ್ಯೆ ಇದ್ದಲ್ಲಿ ನಾವು ಹೇಳುವ ರೀತಿ ಮಾಡಿದರೆ ನೀವು ಆರಾಮಾಗಿ ನಿದ್ರೆ ಮಾಡಬಹುದು

ರಾತ್ರಿ ಮಲಗುವುದಕ್ಕೆ ಮುಂಚೆ ಆರಾಮವಾದ ಕುರ್ಚಿ ಅಥವಾ ಸೋಫಾದ ಮೇಲೆ ಕುಳಿತು ಪಾದಗಳನ್ನು ನಮಗೆ ಬೇಕೆಂಬ ಮಟ್ಟಿಗಿನ ಬಿಸಿ ನೀರನ್ನು ತುಂಬಿರುವ ಬಕೆಟ್ಟಿನಲ್ಲಿ ನಿಮ್ಮ ಪಾದಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರಲಿ.

ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕುಳಿತುಕೊಳ್ಳಿ, ಇದಕ್ಕೆ ಜಲ ಚಿಕಿತ್ಸೆ ಎನ್ನುತ್ತಾರೆ ಬಿಸಿ ನೀರಿನಲ್ಲಿ ಕಾಲುಗಳನ್ನು ಇಟ್ಟುಕೊಳ್ಳುವುದಕ್ಕಿಂತ ಮುಂಚಿತವಾಗಿ ಶುದ್ಧವಾದ ಎರಡು ಲೋಟ ನೀರನ್ನು ಕುಡಿದಿರಬೇಕು, ಆನಂತರದಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನವನ್ನು ಮಾಡಿ ಈಗ ನಿಮಗೆ ಸುಖ ನಿದ್ದೆ ಬರುವುದರಲ್ಲಿ ಸಂದೇಹವೇ ಇಲ್ಲ.

ಪಥ್ಯ : ದಿನವೊಂದಕ್ಕೆ ಎಂಟರಿಂದ ಹತ್ತು ಲೋಟ ಶುದ್ಧವಾದ ನೀರನ್ನು ಸೇವಿಸುವುದು, ತಡವಾಗಿ ಊಟ ಮಾಡಬಾರದು, ನೀವು ಮಲಗುವುದಕ್ಕಿಂತಲು ಮುಂಚಿತವಾಗಿ ಅಂದರೆ ಒಂದು ಗಂಟೆಯ ಮುಂಚಿತವಾಗಿ ಊಟವನ್ನು ಮಾಡಿ ಮುಗಿಸುವುದು,

ಮತ್ತೆ ಅರ್ಧ ಗಂಟೆ ನಂತರ ಎರಡು ಲೋಟ ಶುದ್ಧವಾದ ನೀರನ್ನು ಕುಡಿದು 20 ನಿಮಿಷಗಳ ಕಾಲ ವಾಕ್ ಮಾಡುವುದು, ಮಲಗುವುದಕ್ಕೆ ಹತ್ತು ನಿಮಿಷಗಳ ಮುಂಚೆ ಬಿಸಿಯಾದ ಒಂದು ಲೋಟ ಹಾಲನ್ನು ಕುಡಿಯುವುದು.

ನಂತರ 10 ನಿಮಿಷಗಳ ಕಾಲ ಧ್ಯಾನ ಅವಶ್ಯಕ ಮತ್ತು ನೀವು ಸೇವಿಸುವ ಆಹಾರ ಸಾತ್ತ್ವಿಕವಾಗಿರಬೇಕು ಅಂದರೆ ಉಪ್ಪು, ಖಾರ, ಹುಳಿ ಅತಿಯಾಗಬಾರದು, ಸಿಹಿ ಮೊಸರು, ಕಡೆದ ಮಜ್ಜಿಗೆ, ವಾರಕ್ಕೆ ಎರಡು ದಿನ ಮೊಳಕೆ ಕಾಳುಗಳು, ಸೊಪ್ಪು ಹೆಚ್ಚಾಗಿ ಉಪಯೋಗಿಸತಕ್ಕದ್ದು, ಪರಂಗಿ ಹಣ್ಣು, ಸೇಬು, ಬಾಳೆಹಣ್ಣು ಸೇವಿಸುವುದು.

ಅಪಥ್ಯ : ಹುಳಿ ಇರುವ ಯಾವುದೇ ಹಣ್ಣುಗಳನ್ನು ಸೇವಿಸದಿರಿ, ಉಪ್ಪಿನ ಕಾಯಿ ಚಿಪ್ಸ್ ಅತಿ ಖಾರ ಸಂಪೂರ್ಣವಾಗಿ ಬಿಡ ತಕ್ಕದ್ದು.

ನೋಡಿರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *