Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗಬಹುದು ನಿಮ್ಮ ಕೋಣೆಯಲ್ಲಿರುವ ಈ 10 ವಸ್ತುಗಳು..

ಈಗಿನ ಆಧುನಿಕ ಕಾಲದಲ್ಲಿ ಒಬ್ಬರಲ್ಲ ಒಬ್ಬರು ನಿದ್ರಾ ಹೀನತೆ ಸಮಸ್ಯೆಗೆ ಒಳಗಾಗಿರುತ್ತಾರೆ. ರಾತ್ರಿಯಲ್ಲಿ ಬರುವ ಆಳವಾದ ನಿದ್ದೆ ಅಪರೂಪವಾಗಿದೆ. ಕೆಟ್ಟ ಕನಸು ಬೀಳುವುದು ಅಥವಾ ತಲೆಯಲ್ಲಿ ಕೊರೆಯುವ ನೂರಾರು ಚಿಂತೆಗಳು.

ಮನಸಿನಲ್ಲಿ ತಳಮಳ ಹೀಗೆ ರಾತ್ರಿಯನ್ನು ನಿದ್ದೆ ಇಲ್ಲದೆ ಕಳೆದು ಬಿಡುತ್ತೇವೆ. ಕೆಲವರು ಅಂದರೆ ಬಹುತೇಕರು ನಿದ್ರಾಹೀನತೆಗೆ ಒಳಗಾಗಿದ್ದಾರೆ. ನಿದ್ರಾಹೀನತೆಗೆ ಬಲವಾದ ಕಾರಣವೆಂದರೆ ಮಾನಸಿಕ ಒತ್ತಡ,ನಿದ್ರಾಹೀನತೆಗೆ ಮಾನಸಿಕ ಒತ್ತಡ ವಲ್ಲದಿದ್ದರೂ ಹಲವಾರು ಕಾರಣಗಳಿವೆ.

ಮಾನಸಿಕ ಸಮಸ್ಯೆ, ದೈಹಿಕ ತೊಂದರೆ ಹಾಗೂ ನಿಮ್ಮ ಮನೆಯ ವಾಸ್ತು ಕೂಡ ಕಾರಣವಾಗಬಹುದು.ಆಳವಾದ ನಿದ್ರೆಗೆ ಜಾರದಿರಲು ವಾಸ್ತು ಕೂಡ ಮುಖ್ಯ ಕಾರಣ.ಹಾಗಾಗಿ ನಿಮ್ಮ ಕೋಣೆಯನ್ನು ವಾಸ್ತುವಿಗೆ ಅನುಗುಣವಾಗಿ ರೂಪ ಗಳಿಸಿದರೆ ಆಳವಾದ ನಿದ್ರೆಯನ್ನು ಮಾಡಬಹುದು.

ನಿಮ್ಮ ನಿದ್ರೆಗೆ ತೊಂದರೆಯಾಗದಂತೆ ನಿಮ್ಮ ಮಲಗುವ ಕೋಣೆಯನ್ನು ಸಿದ್ಧಪಡಿಸಿ.ಉತ್ತರ ದಿಕ್ಕಿಗೆ ಮುಖ ಹಾಕಿ ಮಲಗುವುದು ನಿದ್ರಾಹೀನತೆಗೆ ಕಾರಣವಾಗ ಬಹುದು. ಉತ್ತರದಿಕ್ಕಿನಲ್ಲಿ ಮಲಗುವುದರಿಂದ ತಲೆನೋವು ,ಕಿರಿಕಿರಿ ಹಾಗೂ ತೊಂದರೆಗೊಳಗಾದ ನಿದ್ರೆಗೆ ಕಾರಣವಾಗುತ್ತದೆ.

ಹಾಸಿಗೆಯನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಆಳವಾದ ನಿದ್ದೆಗೆ ಜಾರಲು ದಕ್ಷಿಣಭಾಗ ಅತ್ಯುತ್ತಮ ಸ್ಥಾನವಾಗಿದೆ. ಮಲಗುವಾಗ ಬಾಗಿಲಿಗೆ ಎದುರಿಗೆ ತಲೆಯಿಟ್ಟು ಮಲಗಬಾರದು. ಇದರಿಂದ ಕೆಟ್ಟ ಆಲೋಚನೆಗಳು ಹೆಚ್ಚಾಗುತ್ತವೆ.

ಇದರಿಂದ ಕೆಟ್ಟ ಕನಸುಗಳು ಬೀಳುವ ಸಾಧ್ಯತೆಗಳಿರುತ್ತವೆ. ಶಾಂತಿಯುತ ನಿದ್ದೆಗಾಗಿ ಮನೆಯ ಮೇಲ್ಭಾಗದಲ್ಲಿ ಸಮತಟ್ಟಾದ ಮೇಲ್ಮೈ ಇದೆಯೆಂದು ಖಚಿತಪಡಿಸಿಕೊಳ್ಳಿ. ಮಲಗುವ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಇರಿಸುವ ನೀರಿನ ಜಗ್ ಕೂಡಾ ನಿದ್ರಾ ಹೀನತೆಗೆ ಕಾರಣವಾಗಬಹುದು.

ಊಟ ಮಾಡುವಾಗ ಹಾಸಿಗೆಯ ಮೇಲೆ ಊಟ ಮಾಡಿ ಅದೇ ಸ್ಥಳದಲ್ಲಿ ಮಲಗುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ. ಮಲಗುವ ಕೋಣೆಯಲ್ಲಿ ರುವ ಪೀಠೋಪಕರಣಗಳ ಬಣ್ಣ ಗೋಡೆ ಬಣ್ಣಕ್ಕೆ ಹೊಂದಿಕೊಳ್ಳದಿದ್ದರೆ, ನಿದ್ರಾಹೀನತೆ ಕಂಡುಬರಬಹುದು.

ಪಶ್ಚಿಮ ದಿಕ್ಕಿನ ಕಿಟಕಿಯಿಂದ ಸೂರ್ಯನ ಕಿರಣಗಳು ನೇರವಾಗಿ ಸ್ಪರ್ಶಿಸುವ ಬೆಳಕು ನಿದ್ರಾಹೀನತೆಯ ಕಾರಣವಾಗಬಹುದು. ಮಲಗುವ ಕೋಣೆಯಲ್ಲಿ ಇರುವ ಶೌಚಾಲಯ ಬಾಗಿಲನ್ನು ತೆರೆದಿರುವುದು ಕೂಡ ಅಸಮರ್ಪಕ ನಿದ್ದೆಗೆ ಕಾರಣವಾಗಬಹುದು.

ನಿಮ್ಮ ಮಲಗುವ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಹಿತಕರ ದೃಶ್ಯ ಹಾಗೂ ಫೋಟೋ ಫ್ರೇಮ್ ಗಳಿದ್ದರೆ ಅವುಗಳನ್ನು ತೆಗೆದುಬಿಡಿ. ಹಾಸಿಗೆ ಮುಂಭಾಗದಲ್ಲಿ ಕನ್ನಡಿ ಇದ್ದರೂ ಕೂಡ ಕೆಟ್ಟ ಕನಸುಗಳು ಬೀಳುವ ಸಾಧ್ಯತೆ ಇರುತ್ತದೆ.

ಮಲಗುವ ಕೋಣೆಯಲ್ಲಿ ಗ್ಯಾಸ್ ಸಿಲಿಂಡರ್ ಫ್ರಿಡ್ಜ್ ಹಾಗೂ ಬೆಂಕಿ ಬರುವಂತಹ ವಸ್ತುಗಳನ್ನು ಇಡಬಾರದು.ಈಶಾನ್ಯ ಹಾಗೂ ನೈಋತ್ಯ ದಿಕ್ಕಿನಲ್ಲಿರುವ ದೋಷಗಳು ಕೂಡ ನಿದ್ರಾಹೀನತೆಗೆ ಕಾರಣವಾಗಿರುತ್ತವೆ.

ನೀವು ಮಲಗುವ ಕೋಣೆಯಲ್ಲಿ ಯಾವುದೇ ನೀರಿನ ಮೂಲ ಇರಬಾರದು ಯಾಕೆಂದರೆ ಅದು ನಿಮ್ಮ ಜೀವನದಲ್ಲಿ ಪ್ರತ್ಯೇಕತೆಯನ್ನು ಉಂಟುಮಾಡುತ್ತದೆ. ಇನ್ನು ಮಲಗುವಾಗ ತಲೆಯ ಭಾಗದಲ್ಲಿರುವ ಕಿಟಕಿಯನ್ನು ತೆರೆದಿಡಬಾರದು. ನಿಂದಾಗಿ ನಿದ್ದೆಗೆ ತೊಂದರೆ ಉಂಟಾಗುತ್ತದೆ.

ಹಾಗೂ ಮಲಗುವ ಕೋಣೆಯಲ್ಲಿ ನೀರಿನ ಜಲಪಾತದ ಚಿತ್ರ ಹಾಗೂ ಜರಿಯನ್ನು ಇಡಬಾರದು.ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಉದರ ಸಂಬಂಧಿ ಕಾಯಿಲೆಗಳು ಕೂಡ ಉಂಟಾಗಬಹುದು.

ಅಲರಾಮ್ ಗಡಿಯಾರವನ್ನು ಮಂಚದ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ದಿಂಬಿನ ಕೆಳಭಾಗದಲ್ಲಿ ಈ ಗಡಿಯಾರವನ್ನು ಇಟ್ಟುಕೊಳ್ಳಬಾರದು ಇದರಿಂದ ದಂಪತಿ ನಡುವೆ ಕಿರಿಕಿರಿ ಉಂಟಾಗುತ್ತದೆ.

ನೀವು ಮಲಗುವ ಕೋಣೆಯಲ್ಲಿ ದೇವಾಲಯದ ಚಿತ್ರ ಹಾಗೂ ಮರಣ ಹೊಂದಿದವರ ಸಂಬಂಧಿಕರ ಚಿತ್ರವನ್ನು ಇರಿಸಬಾರದು. ಶಾಸ್ತ್ರದ ಪ್ರಕಾರ ಇದು ಮನೆಯಲ್ಲಿ ನಕಾರಾತ್ಮಕತೆ ಬಡತನವನ್ನು ಹೆಚ್ಚಿಸುತ್ತದೆ. ಬೇಕಾದರೆ ಪ್ರತ್ಯೇಕವಾದ ಕೋಣೆಯನ್ನು ಇದಕ್ಕಾಗಿ ಮೀಸಲಿರಿಸಿ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *