ನಾವು ದಿನನಿತ್ಯ ಯಾವಯಾವ ಆಹಾರ ವನ್ನು ಸೇವಿಸಿದರೆ ನಮ್ಮ ಶರೀರ ಸದೃಢವಾಗಿರುತ್ತದೆ ಎಂದು ತಿಳಿದುಕೊಳ್ಳಿ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮ್ಮ ದೇಹಕ್ಕೆ ಹೇಗೆ ವಿಟಮಿನ್ಸ್ ಗಳ ಅವಶ್ಯಕತೆ ಇರುತ್ತದೆಯೋ ಹಾಗೆ ಖನಿಜಾಂಶಗಳ ಅವಶ್ಯಕತೆ ಕೂಡ ಇದ್ದೇ ಇರುತ್ತದೆ ಹಾಗಾಗಿ ವಿಟಮಿನ್ಸ್ ಗಳನ್ನು ಹೇಗೆ ನಾವು ಆಹಾರದ ಮುಖಾಂತರ ಸೇವಿಸುತ್ತೇವೊ ಖನಿಜಾಂಶಗಳನ್ನು ಕೂಡಾ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಪಡೆದುಕೊಳ್ಳಬೇಕಾಗುತ್ತದೆ.

ದಿನನಿತ್ಯ ನಾವು ನೀರನ್ನು ಕುಡಿಯುವುದರಿಂದ ಅರ್ಧದಷ್ಟು ಖನಿಜಾಂಶ ನಮ್ಮ ದೇಹಕ್ಕೆ ಸೇರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಜನರು ನೀರನ್ನು ಫಿಲ್ಟರ್ ಮಾಡಿ ಕುಡಿಯುವುದರಿಂದ ಅದರಲ್ಲಿಯು ನೀರನ್ನು ಫಿಲ್ಟರ್ ಮಾಡುವಾಗ ರಿವರ್ಸ್ ಆಸ್ಮೋಸಿಸ್ ಪ್ರೊಸೆಸ್ ಬಳಸಿ ಫಿಲ್ಟರ್ ಮಾರುವುದರಿಂದ ನೀರಿನಲ್ಲಿರುವ ಖನಿಜಾಂಶ ಅರ್ಧದಷ್ಟು ಕಡಿಮೆಯಾಗಿ ಬಿಟ್ಟಿರುತ್ತದೆ.

ಇದರಿಂದ ದೇಹಕ್ಕೆ ಬೇಕಾಗುವಷ್ಟು ಖನಿಜಾಂಶ ದೊರೆತಿರುವುದಿಲ್ಲ ಆದ್ದರಿಂದಲೆ ಮಿನರಲ್ ವಾಟರ್ ಎಂದು ಏನು ಕರೆಯುತ್ತಾರೋ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

ಹಾಗಾದರೆ ಈ ಮಿನರಲ್ಸ್ ಅನ್ನು ನಮ್ಮ ದೇಹಕ್ಕೆ ಹೇಗೆ ಪಡೆದುಕೊಳ್ಳಬಹುದು ಎಂದರೆ ಅದಕ್ಕಾಗಿ ಇರುವುದು ಒಂದೇ ಒಂದು ಮಾರ್ಗ ಉತ್ತಮ ಪೋಷಕಾಂಶವುಳ್ಳ ಆಹಾರವನ್ನು ಸೇವಿಸುವುದು.

ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಯಾವ ಆಹಾರವನ್ನು ಸೇವಿಸುವುದರಿಂದ ಎಷ್ಟು ಪ್ರಮಾಣದ ಖನಿಜಾಂಶ ನಮ್ಮ ದೇಹಕ್ಕೆ ದೊರೆಯುತ್ತದೆ ಎಂಬ ಮಾಹಿತಿಯನ್ನು ತಿಳಿಸುತ್ತೇನೆ .

ಇದೇ ಆಹಾರ ಪದ್ಧತಿಯನ್ನು ಪಾಲಿಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ ಈ ಒಂದು ಮಾಹಿತಿ ಉತ್ತಮ ಆರೋಗ್ಯಕ್ಕಾಗಿ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನ ಕೊನೆಗೆ ಕಾಮೆಂಟ್ ಮಾಡಿ.

ಮೂಳೆಗಳು ಬಲಗೊಳ್ಳಬೇಕಾದರೆ ಅದಕ್ಕೆ ಅವಶ್ಯಕ ಇರುವ ಖನಿಜಾಂಶವೆಂದರೆ ಕ್ಯಾಲ್ಶಿಯಂ ಮತ್ತು ಫಾಸ್ಫರಸ್ ಈ ಎರಡೂ ಖನಿಜಾಂಶವು ದೇಹದಲ್ಲಿ ಕೊರತೆಯಾದರೆ ಮೂಳೆ ನೋವಿನ ಸಮಸ್ಯೆ ಎದುರಾಗುತ್ತದೆ.

ಹಾಗಾದರೆ ಈ ಎರಡು ಖನಿಜಾಂಶವು ಹೆಚ್ಚಾಗಿ ಯಾವ ಆಹಾರ ಪದಾರ್ಥದಲ್ಲಿ ಇರುತ್ತದೆ ಅಂದರೆ, ಹಾಲು ಚೀಸ್ ಮೊಸರು ರಾಗಿ ಹಸಿರು ತರಕಾರಿಗಳಲ್ಲಿ ಕ್ಯಾಲಿ ಯಂ ಮತ್ತು ಫಾಸ್ಪರಸ್ ಹೇರಳವಾಗಿದ್ದು ಇಂತಹ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುತ್ತಾ ಬನ್ನಿ ಮೂಳೆಗಳು ಬಲಗೊಂಡು ಮೂಳೆ ನೋವಿನ ಸಮಸ್ಯೆ ಬರುವುದಿಲ್ಲ.

ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿ ಆಗಬೇಕಾದರೆ ಐರನ್ ಅವಶ್ಯಕತೆ ಇದ್ದೇ ಇರುತ್ತದೆ, ಇದಕ್ಕಾಗಿ ನಿಯಮಿತವಾಗಿ ಹಸಿರು ತರಕಾರಿಗಳನ್ನು ಗೋಧಿ ಸೇಬು ಮೊಳಕೆ ಕಟ್ಟಿದ ಕಾಳುಗಳು ಮೀನು ಮಾಂಸ ಸಿರಿಧಾನ್ಯಗಳು ತಿನ್ನುವುದರಿಂದ ಐರನ್ ಅಂಶದ ಕೊರತೆ ಪರಿಹಾರವಾಗುತ್ತದೆ.

ನಮ್ಮ ಮಾಂಸ ಖಂಡಗಳು ಮೆದುಳು ನರಗಳು ಉತ್ತಮ ಆರೋಗ್ಯದಿಂದ ಇರಬೇಕಾದರೆ ಪೊಟಾಶಿಯಂ ಖನಿಜಾಂಶದ ಅವಶ್ಯಕತೆ ಇದ್ದು ದೇಹದಲ್ಲಿ ನೀರಿನ ಅಂಶವನ್ನು ನಿಯಂತ್ರಣದಲ್ಲಿ ಇಡುವುದು ಕೂಡ ಪಟಾಕಿಯನ್ನು ಕಾರ್ಯವಾಗಿರುತ್ತದೆ. ಟೊಮೆಟೊ ಹಸಿರು ತರಕಾರಿ ಕಿತ್ತಳೆ ಹಣ್ಣು ಬಾಳೆಹಣ್ಣು ಬಟಾಣಿ ತಿನ್ನುವುದರಿಂದ ಪೊಟ್ಯಾಶಿಯಂ ಹೇರಳವಾಗಿ ನಮ್ಮ ದೇಹಕ್ಕೆ ದೊರೆಯುತ್ತದೆ.

ದೇಹವು ಉತ್ತಮವಾಗಿ ಬೆಳವಣಿಗೆಯಾಗಬೇಕಾದರೆ ಅದಕ್ಕೆ ಅಯೋಡಿನ್ ಅವಶ್ಯಕತೆ ಹೆಚ್ಚಾಗಿರುತ್ತದೆ ಈ ಅಯೋಡಿನ್ ಪಡೆದುಕೊಳ್ಳುವುದಕ್ಕಾಗಿ ನಾವು ಮೀನು ಹಸಿರು ತರಕಾರಿಗಳು ಹಣ್ಣು ಮತ್ತು ಸರಿಯಾದ ಪ್ರಮಾಣದ ಉಪ್ಪಿನಂಶವನ್ನು ಸೇವಿಸುತ್ತಾ ಬಂದಲ್ಲಿ ಅಯೋಡಿನ್ ಅಂಶವು ನಮ್ಮ ದೇಹಕ್ಕೆ ದೊರೆಯುತ್ತದೆ.

ಈ ಮೇಲೆ ತಿಳಿಸಿದ ಖನಿಜಾಂಶಗಳು ನಮ್ಮ ದೇಹಕ್ಕೆ ಅತ್ಯಾವಶ್ಯಕವಾಗಿದ್ದು ನಾನು ಹೇಳಿದ ಆಹಾರ ಪದ್ಧತಿಯನ್ನು ಪಾಲಿಸುವುದರಿಂದ ಯಾವುದೇ ಖನಿಜಾಂಶದ ಕೊರತೆಯಿಂದ ನಿಮ್ಮ ದೇಹ ಬಳಲುವುದಿಲ್ಲ ಉತ್ತಮ ಆರೋಗ್ಯವನ್ನು ನೀವು ಪಡೆದುಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *