ಈ ಪದ್ಧತಿಯು ವೈದಿಕ ಕಾಲದಲ್ಲಿ ಪ್ರಚಲಿತವಾಗಿ ರಲಿಲ್ಲ ಮುಂದೆ ಪೌರಾಣಿಕ ಕಾಲದಲ್ಲಿ ಇದು ಜನ ಮನ್ನಣೆ ಪಡೆಯಿತು, ಇದು ದಕ್ಷಿಣ ಭಾರತದಲ್ಲಿ ಉದಯಿಸಿದ ಎಂದು ಕೆಲವರ ವಾದ ಇಂದು ಎಲ್ಲೆಡೆ ಇದು ಆಚರಣೆಯಲ್ಲಿದೆ,
ತಿಲಕವನ್ನು ಪೂಜಾ ಸಂದರ್ಭದಲ್ಲಿ ಸಭೆ ಸಮಾರಂಭಗಳಲ್ಲಿ ಅತಿಥಿಗಳನ್ನು ಗೌರವಿಸುವ ಶುಭ ಕಾರ್ಯಕ್ಕೆ ಹೊರಡುವ ವೇಳೆಯಲ್ಲಿ ಇಟ್ಟುಕೊಳ್ಳುತ್ತಾರೆ, ಭಾರತೀಯ ಸಂಪ್ರದಾಯಸ್ಥ ಮಹಿಳೆಯರು ಸೌಭಾಗ್ಯದ ಸಂಕೇತ ವಾಗಿ ಹಣೆಗೆ ಕುಂಕುಮ ಇಟ್ಟು ಕೊಳ್ಳುತ್ತಾರೆ, ಆದರೆ ಬಣ್ಣ ಹಾಗೂ ಆಕಾರದಲ್ಲಿ ವೈವಿಧ್ಯತೆ ಇದೆ.
ಪವಿತ್ರತೆ ಮೂಡಿಸುವ ತಿಲಕವನ್ನು ಧಾರ್ಮಿಕ ಚಿನ್ಹೆ ಎಂದು ಗುರುತಿಸಲಾಗುವುದು, ವರ್ಣಗಳ ಅನುಸಾರವಾಗಿ ಹೇಳಬೇಕೆಂದರೆ, ಬ್ರಾಹ್ಮಣರು ಸತ್ಯ ಶುದ್ಧ ಆಚಾರ ಮತ್ತು ಉತ್ತಮ ವೃತ್ತಿಧರ್ಮದ ಸಂಕೇತವಾಗಿ ಬಿಳಿ ಚಂದನದ ಗುರುತನ್ನು, ಕ್ಷತ್ರಿಯರು ತಮ್ಮ ವಂಶದ ಸಾಹಸ ಗುಣವಾಗಿ ಕೆಂಪು ಕುಂಕುಮವನ್ನು,
ವೈಶ್ಯರು ವರ್ತಕರಾಗಿರುವುದರಿಂದ ಅಭಿವೃದ್ಧಿಯ ಸೂಚಕವಾಗಿ ಅರಿಶಿನವನ್ನು ಶೂದ್ರರು, ವಿಧೇಯ ಸೇವಕರಾಗಿ ಇರುವುದರಿಂದ ಕಪ್ಪು ಬಣ್ಣದ ಅಥವಾ ಕಸ್ತೂರಿಯನ್ನು ಸಾಂಕೇತಿಕವಾಗಿ ಹಣೆಯ ಮೇಲೆ ಇಟ್ಟು ಕೊಳ್ಳುತ್ತಿದ್ದರು.
ನಾನು ಸದಾಕಾಲವೂ ದೇವನ ನೆನಪಿನಲ್ಲಿರುವಂತೆ ಆಗಲಿ ಭಾವ ಲಹರಿಯಿಂದ ಕರ್ತವ್ಯ ಕರ್ಮಗಳು ಸುಗಮವಾಗಲಿ, ಪ್ರಾಮಾಣಿಕತೆ ಇರಲಿ, ಸಂಕಲ್ಪ ಸಿದ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗೂ ಲಭಿಸಲಿ ಹೀಗೆ ಪರಶಿವನ ಕೃಪಾಕಟಾಕ್ಷ ಬಯಸಿ ಬರಮಾಡಿಕೊಳ್ಳುವ ಮನೋವೃತ್ತಿ ಇಂದ ಶ್ರೀ ರಕ್ಷೆ ದೊರಕುವುದು.
ಯೋಗ ಸೂತ್ರದ ಪ್ರಕಾರ ಎರಡು ಹಬ್ಬಗಳ ಮಧ್ಯದಲ್ಲಿರುವ ಸ್ಥಾನಕ್ಕೆ ಆಜ್ಞಾಚಕ್ರ ಎನ್ನುವರು, ನೆನಪಿನ ಶಕ್ತಿ ಮತ್ತು ಚಿಂತನೆ ಯುಕ್ತಿ ಹೆಚ್ಚಿಸುವ ಕೇಂದ್ರಬಿಂದುವೇ ಆಗಿರುವುದರಿಂದ ಅಲ್ಲಿ ತಿಲಕ ಹಚ್ಚಿದರೆ ಒಳ್ಳೆಯದು, ಕಳೆಯೂ ಹೆಚ್ಚುವುದು ಉಷ್ಣ ಕಡಿಮೆಯಾಗಿ ಆರೋಗ್ಯ ವೃದ್ಧಿಸುವುದು, ತಲೆ ನೋವು ಶಮನವಾಗುವುದು, ದುಷ್ಟ ವಾಂಛೆಗಳು ದೂರವಾಗಿ ಶಿಷ್ಟಾಚಾರ ಬೆಳೆಯುತ್ತದೆ, ಬೇಸರವಿಲ್ಲದೆ ಕೆಲಸಗಳನ್ನು ಕೂಡ ಮಾಡಬಹುದು, ಒಟ್ಟಿನಲ್ಲಿ ನೈಸರ್ಗಿಕ ಅವುಗಳನ್ನು ಬಳಸದೆ ಆಧುನಿಕತೆಗೆ ಮಾರು ಹೋದರೆ ತೊಂದರೆ ಹೆಚ್ಚು.
ವಿವಾಹಿತ ಮಹಿಳೆಯರು ಹಣೆಯ ಮೇಲೆ ಯಾವಾಗಲೂ ಕುಂಕುಮ ಧರಿಸಲೇ ಬೇಕೆಂಬ ಶಾಸ್ತ್ರೋಕ್ತ ವಿಧಿ ಇದೆ, ಧಾರ್ಮಿಕ ಸಮುದಾಯಗಳಲ್ಲಿ ಪ್ರತಿದಿನ ಸ್ನಾನವಾದ ನಂತರ ಹಣೆಗೆ ಕುಂಕುಮ ಧರಿಸುವುದರಿಂದ ಶೋಭೆ ಹಾಗೂ ಪ್ರತಿಭೆಗಳು ಗುಣವಾಗುವ ಸಾಧ್ಯತೆ ಇದೆ, ಭಾರತೀಯರನ್ನು ಇದು ಸಹಾಯವಾಗುತ್ತದೆ.
ನಾವು ಭಾರತೀಯರು ಎಂದು ಇಡೀ ಪ್ರಪಂಚ ಗುರುತಿಸುವ ಚಿಹ್ನೆಯಾದ ಹಣೆಯ ತಿಲಕ ಅಥವಾ ಕುಂಕುಮದ ಬಗ್ಗೆ ತಿಳಿಸಿಕೊಟ್ಟ ಮಾಹಿತಿಯೂ ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಲು ಒಂದು ವಿಷಯ.