Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಾಲಿಗೆಯ ಬಣ್ಣದಿಂದ ನಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು.ನಿಮ್ಮ ನಾಲಿಗೆ ಬೇರೆ ಬಣ್ಣಕ್ಕೆ ಬದಲಾದರೆ ಇದ್ದರೆ ನಿಮ್ಮ ಅರೋಗ್ಯ ಹೇಗಿರುತ್ತೆ ಗೊತ್ತಾ !!!

ನಮ್ಮ ದೇಹದಲ್ಲಿ ಅನಾರೋಗ್ಯ ಸಮಸ್ಯೆ ಕಂಡು ಬಂದಾಗ ಅದನ್ನು ನಾವು ಆಸ್ಪತ್ರೆಗೆ ತೋರಿಸಲು ಹೋದಾಗ ವೈದ್ಯರುಗಳು ಮೊದಲು ಕಣ್ಣನ್ನು ಪರೀಕ್ಷಿಸುತ್ತಾರೆ. ನಂತರ ನಾಲಿಗೆಯನ್ನು ಪರೀಕ್ಷಿಸುತ್ತಾರೆ.

ಹಾಗಾದರೆ ವೈದ್ಯರುಗಳು ಯಾಕೆ ಈ ರೀತಿ ನಾಲಿಗೆ ಕಣ್ಣುಗಳನ್ನು ಪರೀಕ್ಷಿಸುವುದು ಇದರ ಹಿಂದೆ ಏನಿರುತ್ತದೆ ಅರ್ಥ ಎಂಬುದಕ್ಕೆ ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ವಿಚಾರವನ್ನು ತಿಳಿಸಿಕೊಡುತ್ತೇನೆ.

ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಇದೊಂದು ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರವಾಗಿದ್ದು ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಲೈಕ್ ಮಾಡಿ.

ಹೌದು ನಮ್ಮ ದೇಹದೊಳಗೆ ಏನಾದರೂ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ನಾವು ಅದನ್ನು ಕೂಡಲೇ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ನಮ್ಮ ದೇಹದೊಳಗೆ ನಡೆಯುವ ಕ್ರಿಯೆಗಳು ನಮಗೆ ಕೆಲವೊಂದು ಅನಾರೋಗ್ಯಕ್ಕೆ ಸಂಬಂಧಪಟ್ಟ ಸೂಚನೆಗಳನ್ನು ನೀಡುತ್ತಿರುತ್ತದೆ.

ಅದು ಕೆಲವೊಮ್ಮೆ ಕಣ್ಣಿನ ಮುಖಾಂತರ ತಿಳಿದರೆ ಕೆಲವೊಮ್ಮೆ ನಾಲಿಗೆಯ ಬಣ್ಣದ ಮುಖಾಂತರ ತಿಳಿಯುತ್ತದೆ.ಸಂಶೋಧನೆಯೊಂದು ಹೇಳಿರುವ ಹಾಗೆ ನಮ್ಮ ದೇಹದಲ್ಲಿ ಐವತ್ತು ಪರ್ಸೆಂಟ್ ರಷ್ಟು ಬ್ಯಾಕ್ಟೀರಿಯಾ ನಮ್ಮ ನಾಲಿಗೆಯಲ್ಲಿ ಇರುತ್ತದೆ ಎಂದು ತಿಳಿಸಲಾಗಿದೆ.

ಹಾಗಾದರೆ ನಾಲಿಗೆಯ ಬಣ್ಣ ಏನನ್ನು ಸೂಚಿಸುತ್ತಿರುತ್ತದೆ, ನಮ್ಮಲ್ಲಿ ಯಾವ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಬದಲಾವಣೆಗಳಾದರೆ ನಾಲಿಗೆ ಅದನ್ನು ಯಾವ ರೀತಿ ತಿಳಿಸುತ್ತದೆ ಎಂಬುದನ್ನು, ಈ ದಿನದ ಮಾಹಿತಿಯಲ್ಲಿ ತಿಳಿಸುತ್ತೇನೆ, ತಪ್ಪದೇ ಈ ವಿಚಾರವನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ತಿಳಿಸಿಕೊಡಿ.

* ನಾಲಿಗೆಯು ತಿಳಿ ಗುಲಾಬಿ ಬಣ್ಣದಲ್ಲಿ ಇದ್ದರೆ, ಅದು ನಮಗೆ ನಾವು ಆರೋಗ್ಯವಾಗಿದ್ದೇವೆ, ನಮ್ಮಲ್ಲಿ ಯಾವ ಸಮಸ್ಯೆಗಳೂ ಇಲ್ಲ ಎಂಬುದನ್ನು ಸೂಚಿಸುತ್ತಿರುತ್ತದೆ.

* ನಾಲಿಗೆಯೂ ಬಿಳಿ ಬಣ್ಣಕ್ಕೆ ತಿರುಗಿದ್ದರೆ ಅಥವಾ ನಾಲಿಗೆಯ ಮೇಲೆ ಬಿಳಿಯ ಬಣ್ಣ ಇದ್ದರೆ ಅದು ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಕೊರತೆಯಾಗಿದೆ ಎಂಬುದನ್ನು ಸೂಚಿಸುತ್ತಾ ಇರುತ್ತದೆ, ಹಾಗೇ ನಮ್ಮಲ್ಲಿ ಅಜೀರ್ಣತೆಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಿರಬಹುದು ಎಂಬುದನ್ನು ತಿಳಿಸುತ್ತಿರುತ್ತದೆ.

* ನಾಲಗೆಯ ಬಣ್ಣ ಅರಿಶಿನಕ್ಕೆ ತಿರುಗಿದ್ದರೆ ಅದು ನಮ್ಮಲ್ಲಿ ವೈರಲ್ ಇನ್ಫೆಕ್ಷನ್ ಆಗಿದೆ ಅಥವಾ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತಿರುತ್ತದೆ. ಇನ್ನು ನಾಲಿಗೆಯು ಕೆಂಪು ಬಣ್ಣದಲ್ಲಿದ್ದರೆ, ಅದರ ಅರ್ಥವೇನು ಅಂದರೆ, ಜ್ವರ ಬರುವ ಸಾಧ್ಯತೆ ಇರುತ್ತದೆ ಅಥವಾ ಯಾವುದಾದರೂ ಇನ್ಫೆಕ್ಷನ್ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತಿರುತ್ತದೆ.

* ನಾಲಿಗೆಯ ಮೇಲೆ ಗುಳ್ಳೆಗಳಾಗಿ ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು ಮತ್ತು ನಾಲಿಗೆಯ ಬಣ್ಣ ನೀಲಿಯಾಗಿದ್ದರೆ ದೇಹದಲ್ಲಿ ಕೊಬ್ಬಿನ ಅಂಶದ ಪ್ರಮಾಣ ಹೆಚ್ಚಿದೆ ಎಂಬುದನ್ನು ಇದು ಸೂಚಿಸುತ್ತಿರುತ್ತದೆ.

* ನಾಲಿಗೆಯ ಮೇಲೆ ಬಿಳಿ ಬಣ್ಣದ ಕಲೆಗಳಾಗಿದ್ದರೆ ಅದು ನಮ್ಮ ದೇಹವು ಟಾಕ್ಸಿ ಫೈಡ್ ಹಾಕಿದೆ ಎಂಬುದನ್ನು ಸೂಚಿಸುತ್ತಿರುತ್ತದೆ.

* ನಾಲಿಗೆಯ ಮೇಲೆ ಅರಿಶಿನ ಬಣ್ಣ ಆಗಿದ್ದರೆ ಅದು ನಮ್ಮಲ್ಲಿ ನಿದ್ರೆಗೆ ಸಮಸ್ಯೆಯನ್ನು ಸೂಚಿಸುತ್ತಾ ಇರುತ್ತದೆ.

ಈ ರೀತಿ ನಾಲಿಗೆಯ ಬಣ್ಣ ಬದಲಾದರೆ ಬಣ್ಣ ಯಾವುದು ಎನ್ನುವುದರ ಆಧಾರದ ಮೇಲೆ ವೈದ್ಯರುಗಳು ನಮಗೆ ಚಿಕಿತ್ಸೆಯನ್ನು ನೀಡುತ್ತಾರೆ, ಹಾಗೆ ಪ್ರತಿ ದಿನ ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳುವುದು ಒಳ್ಳೆಯದು.

ಈ ಮೊದಲೇ ಹೇಳಿದ ಹಾಗೆ ಐವತ್ತು ಪ್ರತಿ ಶತದಷ್ಟು ಬ್ಯಾಕ್ಟೀರಿಯಾ ನಾಲಿಗೆಯ ಮೇಲೆ ಇರುವ ಕಾರಣ, ದಿನಕ್ಕೊಮ್ಮೆ ನಾಲಿಗೆಯನ್ನು ಸ್ವಚ್ಛ ಪಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಈ ರೀತಿಯಲ್ಲಿಯು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *