ನಾಡಿದ್ದು ಬುಧವಾರದಂದು ಬರುವ ಪದ್ಮ ಏಕಾದಶಿ ದಿನ ನೀವು ಸ್ನಾನ ಮಾಡುವಾಗ ಈ ಎರಡು ವಸ್ತುಗಳನ್ನು ಬೆರೆಸಿಕೊಂಡು ಮಾಡಿದರೆ ನಿಮ್ಮ ಸಕಲ ಸಂಕಷ್ಟಗಳು ದೂರವಾಗಿ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ . ಹಾಗು ನಿಮ್ಮ ಹಣಕಾಸಿನ ತೊಂದರೆ ದೂರವಾಗಿ ಆದಾಯ ಹೆಚ್ಚಳ ವಾಗುತ್ತದೆ

27

ನಮಸ್ಕಾರ ಸ್ನೇಹಿತರೆ, ಕಷ್ಟಗಳು ಯಾರಿಗಿಲ್ಲ ಹೇಳಿ ಸ್ನೇಹಿತರೆ,ಕೆಲವರು ಕಷ್ಟಗಳನ್ನು ಎದುರಿಸುತ್ತಾ ಹೋದರೆ ,ಇನ್ನು ಕೆಲವರು ಆ ಕಷ್ಟಗಳಿಗೆ ಪರಿಹಾರವನ್ನು ಹುಡುಕುತ್ತಿರುತ್ತಾರೆ.

ಕೆಲವರು ಹಲವಾರು ಸಮಸ್ಯೆಗಳಿಂದ ಕಷ್ಟಗಳನ್ನು ಎದುರಿಸುತ್ತಿರುತ್ತಾರೆ.ಅವರಿಗೆ ಎಷ್ಟೇ ಪರಿಹಾರ ಮಾಡಿಕೊಂಡರು ಕೂಡ ಅವರ ಕಷ್ಟಗಳು ಪರಿಹಾರವಾಗುವುದಿಲ್ಲ. ಇಂದು ನಾನು ಹೇಳುವ ಮಾಹಿತಿಯನ್ನು ನೀವು ಪಾಲಿಸಿದ್ದೇ ಆದಲ್ಲಿ ನಿಮಗೆ ಅಂದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು .

ಸ್ನೇಹಿತರೆ. ಹೌದು ಸ್ನೇಹಿತರೆ, ಜುಲೈ ಒಂದರಲ್ಲಿ ಶಕ್ತಿಶಾಲಿ ಪದ್ಮ ಏಕಾದಶಿಯು ಬರುತ್ತದೆ. ನಾಡಿದ್ದು ಬರುವಂತಹ ಬುಧವಾರ ದಿನ ವಿಶೇಷವಾದಂತಹ ಪದ್ಮ ಏಕಾದಶಿಯು ಇದೆ.

ಏಕಾದಶಿಯಂದು ಯಾರು ಈ ಎಲೆಯನ್ನು ಬಳಸಿಕೊಂಡು ಸ್ನಾನವನ್ನು ಮಾಡುತ್ತಾರೆ ಸ್ನಾನದ ನೀರಿಗೆ ಎಲೆಗಳನ್ನು ಹಾಕಿಕೊಂಡು ಸಂಕಲ್ಪವನ್ನು ಯಾರು ಮಾಡುತ್ತಾರೋ ಅಂತವರಿಗೆ ಇರುವಂತಹ ದಾರಿದ್ರ ದೋಷಗಳು ಕಳೆಯುತ್ತವೆ.

ಹಣಕಾಸಿನ ಸಮಸ್ಯೆ ಆಗಲಿ ಅಥವಾ ಆರೋಗ್ಯದ ಸಮಸ್ಯೆ ಅಥವಾ ಮಕ್ಕಳಲ್ಲಿ ಇರುವಂತಹ ಕೆಲವೊಂದು ತೊಂದರೆಗಳು, ಹಾಗೂ ಎಷ್ಟೇ ಸಂಪಾದನೆ ಮಾಡಿದರು ಕೂಡ ಅದು ಕೈಯಲ್ಲಿ ಉಳಿಯುತ್ತಿಲ್ಲ ಎನ್ನುವವರು ಈ ರೀತಿಯಾಗಿ ನಾವು ಹೇಳುವ ಮಾಹಿತಿಯನ್ನು ಸರಿಯಾಗಿ ಮಾಡಿದ್ದೆ ಆದಲ್ಲಿ ನಿಮ್ಮ ಆದಾಯ ಹೆಚ್ಚಳವಾಗುತ್ತದೆ.

ನಾವು ಹೇಳುವಂತಹ ಈ ರೀತಿಯ ಸ್ನಾನವನ್ನು ಜುಲೈ 1 ಏಕಾದಶಿ ದಿನ ಮಾಡಬೇಕಾಗುತ್ತದೆ. ಸ್ನೇಹಿತರೆ ಮಂಗಳವಾರ ದಿನದಂದು ಅಂದರೆ ನಾಳೆ ಅರಳಿಮರದ ಕೆಳಗೆ ಬಿದ್ದಿರುವಂತಹ ಒಂದು ಎಲೆ ಅಥವಾ ಮರದಲ್ಲಿಯೇ ಇರುವಂತಹ ಎಲೆಯನ್ನು ಮನೆಗೆ ತರಬೇಕು.

ನೋಡಿ ಸ್ನೇಹಿತರೆ ಮನೆಯಲ್ಲಿ ನಾಲ್ಕು ಜನ ಇದ್ದರೆ ನಾಲ್ಕು ಎಲೆಗಳನ್ನು ತರಬೇಕು.ನೆನಪಿರಲಿ ಸ್ನೇಹಿತರೇ ಬುಧವಾರ ದಿನ ಯಾವುದೇ ಕಾರಣಕ್ಕೂ ಮರದಿಂದ ಎಲೆಯನ್ನು ಕಿತ್ತು ತರಬಾರದು.

ಸ್ನೇಹಿತರೆ ಬುಧವಾರ ದಿನದಂದು ಅಂದರೆ ಏಕಾದಶಿ ದಿನದಂದು ಸೂರ್ಯ ಹುಟ್ಟುವ ಮೊದಲೇ ಸ್ನಾನ ಮಾಡುವಂತಹ ನೀರಿಗೆ ಅರಳಿ ಮರದ ಎಲೆಯನ್ನು ಹಾಕಿಕೊಂಡು ಮತ್ತು ಅದಕ್ಕೆ ಮೂರು ಚಿಟಿಕೆ ಅರಿಶಿನ ಈ ಎರಡು ವಸ್ತುಗಳನ್ನು ಬೆರೆಸಿಕೊಂಡು ಸ್ನಾನ ಮಾಡುವುದರಿಂದ ನಿಮ್ಮ ಮೇಲೆ ಸಾಕ್ಷಾತ್ ವಿಷ್ಣುವಿನ ಅನುಗ್ರಹವಾಗುತ್ತದೆ.

ಹೀಗೆ ಮನೆಯಲ್ಲಿ ಎಷ್ಟು ಸದಸ್ಯರಿದ್ದರು ಕೂಡ ಅವರೆಲ್ಲರೂ ಒಂದೊಂದು ಎಲೆಯನ್ನು ಹಾಕಿಕೊಂಡು ಸ್ನಾನ ಮಾಡಬೇಕು. ಹೌದು ಸ್ನೇಹಿತರೆ ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳೆಲ್ಲವೂ ಪರಿಹಾರವಾಗಿ ನಿಮಗೆ ಅಖಂಡ ಪುಣ್ಯ ಅನ್ನುವುದು ಸಿಗುತ್ತದೆ.

ಹಾಗೆಯೇ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಇರುವಂತಹ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತವೆ. ಸ್ನೇಹಿತರೆ ಮೂರು ಚಿಟಿಕೆ ಅರಿಶಿನವನ್ನು ಹಾಕುವುದರಿಂದ ಮಹಾಲಕ್ಷ್ಮಿಯ ಅನುಗ್ರಹವಾಗುತ್ತದೆ.

ಗುರುವಿನ ಸಂಕೇತ ಅರಿಶಿನ ಬಣ್ಣ. ಆದ್ದರಿಂದ ಅರಿಶಿಣ ಮತ್ತು ಅರಳಿಯನ್ನು ಹಾಕಿ ಸ್ನಾನವನ್ನು ಮಾಡುವುದರಿಂದ ನಿಮಗೆ ಇರುವಂತಹ ದೃಷ್ಟಿದೋಷಗಳು ಕೂಡಾ ಪರಿಹಾರವಾಗುತ್ತವೆ.

ಈ ರೀತಿಯಾಗಿ ಏಕಾದಶಿಯ ದಿನ ಈ ರೀತಿಯ ಕೆಲಸವನ್ನು ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಈ ಜುಲೈ1 ಬುಧವಾರದಂದು ಬರುವ ಏಕಾದಶಿ ವಿಶೇಷವಾದಂತಹ ಏಕಾದಶಿ.ಏಕಾದಶಿ ದಿನ ನೀವು ನಾವು ಹೇಳಿರುವ ಹಾಗೆ ಮಾಡಿದ್ದೇ ಆದಲ್ಲಿ ನಿಮಗೆ ಸಕಲ ಸಂಕಷ್ಟಗಳು ಕೂಡ ದೂರ ವಾಗುವುದರಲ್ಲಿ ಎರಡು ಮಾತಿಲ್ಲ ಸ್ನೇಹಿತರೆ.

ಸ್ನಾನವಾದ ನಂತರ ದೇವರ ಕೋಣೆಗೆ ಹೋಗಿ ವಿಶೇಷವಾದಂತಹ ನಮಸ್ಕಾರವನ್ನು ಮಾಡಬೇಕು. ನಿಮಗೆ ಇಷ್ಟವಾಗುವಂತಹ ದೇವರನ್ನು ಪ್ರಾರ್ಥನೆ ಮಾಡಬೇಕು.ನಿಮಗೆ ದೈವಬಲ ಬೇಕೆಂದರೆ ವಿಶೇಷವಾಗಿ ಸ್ನಾನದ ನಂತರ ದೇವರ ಕೋಣೆಗೆ ಹೋಗಿ ನಿಮ್ಮಷ್ಟು ದೇವರನ್ನು ಪ್ರಾರ್ಥಿಸಬೇಕು.

ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ದೂರವಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಕಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here