ನವರಾತ್ರಿಯ ಪ್ರತಿ ದಿನ ನೀವು ಈ ಮಂತ್ರ ಹೇಳಿದರೆ ಏಳು ಜನ್ಮಗಳ ಪುಣ್ಯ ಪಡೆಯುತ್ತೀರಿ..!

125

ನವರಾತ್ರಿ ಎಂದರೆ ಒಂಭತ್ತು ದಿನಗಳ ಒಂದು ಮಹಾಹಬ್ಬ ಈ ದಿನಗಳಲ್ಲಿ ವಿಶೇಷವಾಗಿ ದುರ್ಗೆಯ ಒಂಭತ್ತು ಅವತಾರಗಳನ್ನು ನಾವು ಪೂಜೆಸುತ್ತೇವೆ.ನವದುರ್ಗೆಯರ ಪುಣ್ಯ ಪಡೆದರೆ ಏಳು ಜನ್ಮಗಳ ಪಾಪ ಕಳೆದು ಪುಣ್ಯ ಲಭಿಸುತ್ತದೆ ಎಂದು ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ದೇವಿಯ ಬೇರೆ ಬೇರೆ ಅವತಾರಗಳನ್ನು ನೋಡಿದ ನಾವೇ ಪುಣ್ಯವಂತರು.ಒಂಭತ್ತು ದಿನಗಳ ಕಾಲ ದುರ್ಗೆಯು ಅತ್ಯಂತ ಶಕ್ತಿ ಹೊಂದಿರುತ್ತಾಳೆ‌.ಈ ಒಂಭತ್ತು ದಿನಗಳು ನಾವು ದುರ್ಗೆಯನ್ನು ಪೂಜಿಸಿ ಸ್ಮರಣೆ ಮಾಡಿದರೆ ನಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುವುದು ಖಚಿತ.ದುರ್ಗೆಯು ದುಷ್ಟರ ಸಂಹಾರಕ್ಕಾಗಿ ನಾನಾ ಅವತಾರಗಳನ್ನು ಎತ್ತಿ ಬರುತ್ತಾಳೆ.ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸುವ ಮಹಾದೇವಿ ಅವಳು.ನವರಾತ್ರಿಯ ಒಂದೊಂದು ದಿನವು ಒಂದೊಂದು ದೇವಿಗೆ ಅರ್ಪಿಸಲಾಗಿದೆ.

ಆ ಒಂಭತ್ತು ವಿಶೇಷ ದಿನಗಳಲ್ಲಿ ನಾವು ನಿತ್ಯ ಒಂದು ಮಂತ್ರವನ್ನು ಪಠಿಸಿದರೆ ಏಳು‌ ಜನ್ಮಗಳ ಪುಣ್ಯ ಲಭಿಸುತ್ತದೆ.ಬನ್ನಿ ನವರಾತ್ರಿಯ ಒಂದೊಂದು ದಿನವು ದೇವಿಯ ಯಾವ ಅವತಾರಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ ಹಾಗೂ ಯಾವ ದಿನ ಯಾವ ಮಂತ್ರವನ್ನು ಪಠಿಸಿದರೆ ಶುಭಫಲ ತಿಳಿಯೋಣ.ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಅವತಾರವನ್ನು ಪುಜಿಸುತ್ತಾರೆ.

ಶೈಲ ಪುತ್ರಿಯನ್ನು ಭಕ್ತಿಯಿಂದ ನೆನೆದು ಈ ಮಂತ್ರವನ್ನು ಪಠಿಸಬೇಕು.ಓಂ ಹ್ರೀಮ್ ಶ್ರೀಮ್ ಶೈಲಪುತ್ರಿ ದುರ್ಗಾಯೇ ನಮಃ.ಸಾವಿರಾರು ಚಂದ್ರನ ಕಾಂತಿಯಂತೆ ಹೊಳೆಯುವ ದುರ್ಗಾ ದೇವಿಯೆ ನಮ್ಮನ್ನು ಕಾಪಾಡು ಎಂದು ಬೇಡಿಕೊಳ್ಳಬೇಕು.ಎರಡನೆಯ ದಿನ ಬ್ರಹ್ಮಚಾರಿಣಿ ದೇವಿ.ಓಂ ಹ್ರೀಮ್ ಶ್ರೀ ಬ್ರಹ್ಮಚಾರಿಣಿ ದುರ್ಗಾಯೇ ನಮಃ.ನಮ್ಮ ಜೀವನದ ಏನಾದರೂ ದೊಡ್ಡ ಕೋರಿಕೆಗಳು ಇದ್ದರೆ ಎರಡನೆಯ ದಿನ ಕೇಳಿಕೊಂಡರೆ ಈಡೇರುತ್ತದೆ.ಮೂರನೆಯ ದಿನ ವಿಶೇಷವಾಗಿ ಚಂದ್ರಘಂಟ ದೇವಿಯನ್ನು ಪೂಜಿಸುತ್ತಾರೆ.

ಈ ದಿನ ಈ ಮಂತ್ರವನ್ನು ಪಠಿಸಬೇಕು.ಓಂ ಹ್ರೀಮ್ ಶ್ರೀ ಚಂದ್ರಘಂಟ ದುರ್ಗಾಯೇ ನಮಃ.ಜ್ಞಾನಕ್ಕಾಗಿ ಈ ಮೂರನೆಯ ದಿನ ತಾಯಿ ಚಂದ್ರಘಂಟ ದೇವಿಯನ್ನು ಪೂಜಿಸಿದರೆ ಶುಭಫಲ.ನಾಲ್ಕನೆಯ ದಿನ ಕುಶ್ಮಾಂಡ ದೇವಿಯನ್ನು ಪೂಜಿಸುತ್ತಾರೆ. ಸೃಷ್ಟಿಕರ್ತೆ ಹಾಗೂ ಸೂರ್ಯನ ತಾಯಿಯ ಅವತಾರ ಎಂದು ಉಲ್ಲೇಖವಿದೆ. ಈ ಮಂತ್ರವನ್ನು ನಾಲ್ಕನೆಯ ದಿನ ಪಠಿಸಬೇಕು.

ಓಂ ಹ್ರೀಮ್ ಶ್ರೀ ಕೂಶ್ಮಾಂಡ ದುರ್ಗಾಯೇ ನಮಃ.

ನಮ್ಮ ಜಾತಕಗಳಲ್ಲಿ ದೋಷವಿದ್ದರೆ ಈ ದಿನ ಈ‌ ಮಂತ್ರವನ್ನು ಹೇಳಿ ದೇವಿಯಲ್ಲಿ ಪ್ರಾರ್ಥನೆ ಮಾಡಿದರೆ ಎಂತಹ ದೋಷಗಳಿದ್ದರು ದೂರವಾಗುವುದು.ಐದನೆಯ ದಿನ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ.ಓಂ ಹ್ರೀಮ್ ಶ್ರೀಮ್ ಸ್ಕಂದಮಾತಾಯೇ ದುರ್ಗಾಯೇ ನಮಃ.ಈ ಮಂತ್ರವನ್ನು ಪಠಿಸುವುದರಿಂದ ತಾಯಿಯ ಪ್ರೀತಿ ನಮಗೆ ಸಿಗುತ್ತದೆ.ತಾಯಿಯಾಗಿ ನಮ್ಮನ್ನು ಮಕ್ಕಳಂತೆ ಸಲಹುವ ದೇವಿಯನ್ನು ಬೇಡಿಕೊಳ್ಳಬೇಕು.ಆರನೆಯ ದಿ‌ನ ಕಾತ್ಯಾಯಿನಿಯನ್ನು ಸ್ಮರಿಸಬೇಕು.ಕೆಟ್ಟವರನ್ನು ಹಾಗೂ ಕೆಟ್ಟದ್ದನ್ನು ವದಿಸಲು ಈ ದೇವಿ ಅವತಾರ ಎತ್ತುತ್ತಾಳೆ.ಈ ದಿನ ಈ ಮಂತ್ರ ಹೇಳಬೇಕು.

ಓಂ ಹ್ರೀಮ್ ಶ್ರೀ ಕಾತ್ಯಾಯಿನಿ ದುರ್ಗಾಯೇ ನಮಃ.

ನಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಗಳು ಹೋಗಿ ಧನಾತ್ಮಕ ಶಕ್ತಿ ಬರಲು ಆರನೆಯ ದಿನ ಈ ಮಂತ್ರ ಹೇಖಿದರೆ ಶುಭಫಲವನ್ನು ಕಾಣಬಹುದು. ಏಳನೆಯ ದಿನ ದುರ್ಗೆಯ ಅವತಾರವನ್ನು ಪೂಜಿಸುತ್ತಾರೆ. ಈ ದಿನದಂದು ಈ ಮಂತ್ರ ಹೇಳಬೇಕು.

ಓಂ ಹ್ರೀಮ್ ಶ್ರೀ ಕಾಳರಾತ್ರಯೇ ದುರ್ಗಾಯೇ ನಮಃ.

ನಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಏನಾದರು ಇದ್ದರೆ ಈ ದಿನದಂದು ಬೇಡಿಕೊಂಡರೆ ಎಲ್ಲಾ ರೀತಿಯ ಕಷ್ಟಗಳು ದೂರಾಗುವುದು ಖಚಿತ.ಎಂಟನೆ ದಿನ ಮಹಾಗೌರಿ ದುರ್ಗೆಯನ್ನು ಸ್ಮರಿಸುತ್ತಾರೆ.ಈ ದಿನದಂದು ಈ ಮಂತ್ರವನ್ನು ಹೇಳಬೇಕು.

ಓಂ‌ ಹ್ರೀಮ್ ಶ್ರೀ ಮಹಾಗೌರಿ ದುರ್ಗಾಯೇ ನಮಃ.

ಈ ಮಂತ್ರವನ್ನು ಪಠಿಸಿದರೆ ಸುಖಶಾಂತಿಯೂ ನಮ್ಮ ಬಾಳಿನಲ್ಲಿ ನೆಲೆಸುತ್ತದೆ ಎಂಬ ಪ್ರತೀತಿ ಇದೆ.ಒಂಭತ್ತನೆ ದಿನ ಸಿದ್ದಿದಾತ್ರಿ ದೇವಿಯ ಅವತಾರವನ್ನು ಪೂಜಿಸುತ್ತಾರೆ.ಈ ದಿನ ಈ ಮಂತ್ರವನ್ನು ಪಠಿಸಿದರೆ ಶುಭ ಫಲ‌.

ಓಂ ಹ್ರೀಮ್ ಶ್ರೀ ಸಿದ್ದಿದಾತ್ರಿ ದುರ್ಗಾಯೇ ನಮಃ.

ಈ‌ ಮಂತ್ರಗಳನ್ನು ಶ್ರದ್ದೆ ಭಕ್ತಿಯಿಂದ ಒಂಭತ್ತು ದಿನಗಳ ಕಾಲ ಯಾರು ಪಠಿಸುತ್ತಾರೋ ಅವರ ಜೀವನದ ಸಕಲ ಸಂಕಷ್ಟಗಳು ದೂರಾಗುವುದು ಖಚಿತ.

LEAVE A REPLY

Please enter your comment!
Please enter your name here